ಈ Zodiac sign ಅವರು ಮದುವೆ ಬಳಿಕ ಸಂಗಾತಿಗೆ ಮೋಸ ಮಾಡಬಹುದು!

Published : May 27, 2022, 10:36 AM IST
ಈ Zodiac sign ಅವರು ಮದುವೆ ಬಳಿಕ ಸಂಗಾತಿಗೆ ಮೋಸ ಮಾಡಬಹುದು!

ಸಾರಾಂಶ

ಮದುವೆಯಾದ ಬಳಿಕ  ಈ ಜನರು ತಮ್ಮ ಸಂಗಾತಿಗೆ ತಿಳಿಯದೇ ಇರುವ ಹಾಗೆ ಬೇರೆ ಸಂಬಂಧವನ್ನು ಹೊಂದಿರುವ ಸಾಧ್ಯತೆ ಇದೆ. ಅದು ಇವರಿಗೆ ರಾಶಿಯಿಂದ ಬಂದಿರುವ ಲಕ್ಷಣವಾಗಿರುತ್ತದೆ ಅಂತಹ ಕೆಲವು ರಾಶಿಯನ್ನು ನೋಡೋಣ..

ಮದುವೆ ಎಂಬುದು ಹೊಸ ಬಾಂಧವ್ಯವನ್ನು ಕಟ್ಟಿಕೊಡುತ್ತದೆ. ಅಂತಹ ಸಂದರ್ಭದಲ್ಲಿ ಗಂಡ (Husband) ಹಾಗೂ ಹೆಂಡತಿಯ (Wife) ನಡುವೆ ಪ್ರೀತಿ ಎಷ್ಟು ಮುಖ್ಯವೋ ನಂಬಿಕೆ ಕೂಡಾ ಅಷ್ಟೇ ಅಗತ್ಯ. ಮದುವೆಯ ಪ್ರಾರಂಭದಲ್ಲಿ ಯಾರೊಬ್ಬರೂ ಕೂಡ ತಮಗೆ ಮೋಸ (Cheat) ಆಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಕೆಲವು ಜನರು ಬಾಲ್ಯದಿಂದಲೇ ಅಭದ್ರತೆಯನ್ನು ಬೆಳೆಸಿಕೊಂಡರೆ ಅದನ್ನು ಹೊರಗಿನ ಪ್ರಪಂಚದ ಜನರಿಗೆ ಮೋಸ ಮಾಡುವ ಮೂಲಕ ಸಮಾಧಾನ ಕಂಡುಕೊಳ್ಳುತ್ತಾರೆ. ಇತರರು ತಮ್ಮ ಸಂಗಾತಿಯಿಂದ ದೂರವಾಗಿದ್ದಾರೆ ಎಂಬ ಭಾವನೆಯಿಂದ ಇದನ್ನು ಮಾಡುತ್ತಾರೆ. ಆದ್ದರಿಂದ, ಇಂದು ನಾವು ಮದುವೆಯ ನಂತರ ರಹಸ್ಯ ಪ್ರೇಮ ಸಂಬಂಧಗಳನ್ನು (Relationship) ಹೊಂದಿರುವ  ರಾಶಿಚಕ್ರ ಚಿಹ್ನೆಗಳನ್ನು ನೋಡೋಣ.

ಕನ್ಯಾರಾಶಿ (Virgo)

ಕನ್ಯಾರಾಶಿಯು ಬಹಳ ಸ್ವಾಭಿಮಾನವನ್ನು (Self Esteem) ಹೊಂದಿರುವ ಜನಗಿರಾರುತ್ತಾರೆ. ಆದ್ದರಿಂದ, ಅವರು ತಮ್ಮ ಸಂಗಾತಿ ತಮಗೆ ಮೋಸ ಮಾಡಿದ್ದಾರೆ ಎಂದೇನಾದರು ತಿಳಿದುಬಂದರೆ. ಅದನ್ನು ಅವರು ಎಂದಿಗೂ ಕ್ಷಮಿಸುವುದಿಲ್ಲ ಹಾಗೆ ಮೋಸ ಮಾಡಿದ ತಮ್ಮ ಸಂಗಾತಿಯನ್ನು ಇನ್ನೆಂದೂ ತಮ್ಮ ಜೀವನಕ್ಕೆ (Life) ಮತ್ತೆ ಕಾಲಿಡದಂತೆ ದೂರ ಇಟ್ಟುಬಿಡುತ್ತಾರೆ. ಆದರೆ, ತಮ್ಮ ರಹಸ್ಯ ಜೀವನವನ್ನು ಬೇರೆ ಯಾರಿಗೂ ತಿಳಿಯದೆ ಇರುವಂತೆ ಬಹಳ ಜಾಗರೂಕರಾಗಿ (Careful) ನಿಭಾಯಿಸುತ್ತಾರೆ. ಅವರೇನಾದರೂ ಮದುವೆಯ ಬಳಿಕವೂ ಇತರರೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾರೆ ಇದನ್ನು ಇತರರಿಗೆ ಎಂದೂ ತಿಳಿಯದೆ ಇರುವಹಾಗೆ ಗೌಪ್ಯವಾಗಿ  (Secret)ಇರಿಸುತ್ತಾರೆ.

Read this: ಈ 5 ರಾಶಿಯವರಿಗೆ ಮದುವೆ ಬಗ್ಗೆ ಆಸಕ್ತಿ ಅಷ್ಟಕ್ಕಷ್ಟೇ!

ಕುಂಭ ರಾಶಿ (Aquarius)

ಕುಂಭ ರಾಶಿಯ ಜನರು ಸಾಮಾನ್ಯವಾಗಿ ನಿಷ್ಠಾವಂತರಾಗಿರುತ್ತಾರೆ. ಆದರೆ, ಅವರಿಗೆ ಯಾವಾಗಲೂ ತಾವು ತಮ್ಮ ವೃತ್ತಿ ಜೀವನದಲ್ಲಿ ಮುಂಚೂಣಿಯಲ್ಲಿ ಇರಬೇಕು ಎಂಬ ಹಠ ಇರುತ್ತದೆ. ಆದರೆ, ಇದರ ಬದಲಾಗಿ ತಾವು ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದೀವಿ (Lost) ಎಂದೇನಾದರೂ ಅನಿಸಿದರೆ ಆಗ ಅದು ಅವರಲ್ಲಿ ಅಭದ್ರತೆಯ (Insecurity) ಭಾವನೆಗಳನ್ನು ಹುಟ್ಟುಹಾಕುತ್ತದೆ. ಅದು ಅವರನ್ನು ಪ್ರೇಮಿಗಳಿಂದ ಮೌಲ್ಯೀಕರಿಸುವಂತೆ ಮಾಡುತ್ತದೆ ಮತ್ತು ಅವರನ್ನು ಮೋಸಗೊಳಿಸಲು ಕಾರಣವಾಗುತ್ತದೆ. ಅವರ ಈ ವರ್ತನೆಗೆ ಅವರೇ ನಾಚಿಕೆಪಡುತ್ತಾರೆ  (Ashamed), ಅದಕ್ಕಾಗಿಯೇ ಅವರು ಸಂಬಂಧವನ್ನು ಮುಚ್ಚಿಡಲು ಪ್ರಯತ್ನಿಸಬಹುದು.

ವೃಶ್ಚಿಕ ರಾಶಿ (Scorpio)

ಇಬ್ಬರು ಪ್ರೇಮಿಗಳಾಗಿದ್ದಾಗ ಒಬ್ಬರನ್ನು ಇನ್ನೊಬ್ಬರು ಸಂಪೂರ್ಣವಾಗಿ ಅರ್ಥೈಸಿಕೊಂಡಿದ್ದಾರೆ ಇಡೀ ಜೀವನ ಪರ್ಯಂತ ಈ ನಂಬಿಕೆ ಹೀಗೆ ಉಳಿದಿರುತ್ತದೆ ಎಂದು ಭಾವಿಸಿರುತ್ತಾರೆ. ಆದರೆ, ಮುಂದೆ ವೃಶ್ಚಿಕ ರಾಶಿಯವರನ್ನು ಮದುವೆಯಾದ ಬಳಿಕ ತಮ್ಮ ಸಂಗಾತಿಯ (Partner) ಬಗ್ಗೆ ತಮಗೆ ನಿಜಕ್ಕೂ ಯಾವ ವಿಷಯವೂ ತಿಳಿದಿಲ್ಲ ಎಂದು ಅನಿಸಲು ಶುರುವಾಗುತ್ತದೆ. ಈ ರಾಶಿಚಕ್ರದ ಚಿಹ್ನೆಯು ತಮ್ಮ ನಾಲಿಗೆಯ ಮೂಲಕ ಸುಳ್ಳು (Lie) ಮತ್ತು ಅದರಲ್ಲಿ ಬಹಳ ಮನವೊಪ್ಪಿಸುವ ಸಾಮರ್ಥ್ಯವನ್ನು ಹೊಂದಿರುತ್ತರೆ. ಅದಕ್ಕಾಗಿಯೇ ಅವರು ಹೆಚ್ಚಾಗಿ ತಾವು ಮಾಡಿದ ದ್ರೋಹದಿಂದ ಇತರರಿಗೆ ತಿಳಿಯದೆ ಇರುವ ಹಾಗೆ ತಪ್ಪಿಸಿಕೊಂಡು ಬಿಡುತ್ತಾರೆ.

Read this: ಈ ರಾಶಿಯವರಿಗೆ ಕೆಲಸ ಮೊದಲು ಪ್ರೀತಿ-ಗೀತಿ ಎಲ್ಲಾ ಆಮೇಲೆ

ಸಿಂಹರಾಶಿ (Leo)

ಸಿಂಹ ರಾಶಿಯವರು ಎಂತಹದೇ ಕಠಿಣ ಸನ್ನಿವೇಶದಲ್ಲಿ ತಾವು ಮಾಡಿದ ಮೋಸದಿಂದ ಇತರರ ಎದುರಿಗೆ ಸಿಕ್ಕಿ ಹಾಕಿಕೊಂಡರು ಕೂಡಾ ಅಂತಹ ಮೋಸದ ಒತ್ತಡದಿಂದ ಸಲೀಸಾಗಿ ತಪ್ಪಿಸಿಕೊಳ್ಳುವಲ್ಲಿ (Escape) ಸ್ವತಃ ಅವರ ಬಗ್ಗೆ ಅವರೇ ಹೆಮ್ಮೆಪಡುತ್ತಾರೆ. ಅವರಿಗೆ ತಮ್ಮ ದಾಂಪತ್ಯದಲ್ಲಿ ಪರಿಪೂರ್ಣತೆ (Fulfilled) ಅನುಭವವಾದಾಗ ಮಾತ್ರ ಅವರು ತಮ್ಮ ಸಂಗಾತಿಗೆ ದ್ರೋಹ ಬಗೆಯುವ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಕೆಲವೊಮ್ಮೆ ಸಂಬಂಧದಲ್ಲಿ ಏರುಪೇರುಗಳು ಉಂಟಾಗುವುದು ಸಾಮಾನ್ಯ ಇಂತಹ ಸಂದರ್ಭದಲ್ಲಿ ಇವರು ತಮ್ಮ ಸಂಗಾತಿಗೆ ತಿಳಿಯದೇ ಇರುವ ಹಾಗೆ ಮೋಸ ಮಾಡಬಹುದು. 

PREV
Read more Articles on
click me!

Recommended Stories

ಜನವರಿ 9 ರಿಂದ ಮಿಥುನ ಸೇರಿದಂತೆ 3 ರಾಶಿಗೆ ಅದೃಷ್ಟ, ಸೂರ್ಯ-ಗುರುಗಳು ಭಾರಿ ಆರ್ಥಿಕ ಲಾಭ
2025 ಅಬ್ಬರದಿಂದ ಕೊನೆಗೊಳ್ಳುತ್ತದೆ, ಈ 3 ರಾಶಿಗೆ 2026 ರವರೆಗೆ ಅಚಲ ಅದೃಷ್ಟ