ಕೆಲವು ರಾಶಿಯವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ. ಅದರೆ ಇನ್ನೊಬ್ರನ್ನ ನಂಬಲ್ಲ. ಇನ್ನು ಕೆಲವರ ಜೊತೆಗೆ ನಂಬಿ ಆರಾಮಾಗಿರಬಹುದು, ಜನ್ಮರಾಶಿಗೂ ಅವರವರ ಸ್ವಭಾವಕ್ಕೂ ತುಂಬ ನಂಟು ಇದೆ.
ಕಟಕ
ಇದು ಜಲರಾಶಿ. ಇವರು ಭಾವುಕರಾಗೋದು ಹೆಚ್ಚು. ಹಾಗಂತ ಮೋಸ ಮಾಡಿದ್ರೆ ಈ ರಾಶಿಯವ್ರಿಗೆ ನಿದ್ದೆ ಬರಲ್ಲ. ತಮ್ಮ ನೆಮ್ಮದಿಗಾಗಿ ಇವರು ಯಾರಿಗೂ ಮೋಸ ಮಾಡೋದಕ್ಕೆ ಹೋಗಲ್ಲ. ಮಗುವಿನಂಥಾ ಮುಗ್ಧ ಮನಸ್ಸು ಇವರದು. ಹೆಚ್ಚು ಬುದ್ಧಿವಂತರಲ್ಲ. ಆದರೆ ಹೃದಯವಂತರು. ತಿನ್ನೋ ವಿಷಯದಲ್ಲಿ, ಪ್ರಯಾಣದ ವಿಷಯದಲ್ಲಿ ತುಸು ಸ್ವಾರ್ಥಿಗಳೇನೋ ಹೌದು. ಆದರೆ ಇವರ ಈ ಬುದ್ಧಿಯಿಂದ ಅನ್ಯರಿಗೆ ಹಾನಿಯಿಲ್ಲ. ಹೆಚ್ಚೆಚ್ಚು ಜನರು ಇವರ ಜೊತೆಗೆ ವ್ಯವಹಾರಕ್ಕಿಳಿಯಲು ಮುಂದಾಗುತ್ತಾರೆ. ತಮ್ಮ ಸಾಮರ್ಥ್ಯದ ಬಗ್ಗೆ ಸಣ್ಣದೊಂದು ಕೀಳರಿಮೆ ಈ ರಾಶಿಯವರಿಗೆ ಇದೆ. ಹಾಗಾಗಿ ಎಷ್ಟೋ ಸಲ ಡೆಡಿಕೇಟೆಟ್ ಆಗಿ ಕೆಲಸ ಮಾಡಿದರೂ, ಸಾಕಷ್ಟು ಪ್ರತಿಭೆ ಇದ್ದರೂ ಮೇಲೆ ಹೋಗೋದು ಸಾಧ್ಯವಾಗಲ್ಲ. ಇವರಿಗಿಂತ ಕಡಿಮೆ ಪ್ರತಿಭೆ ಇರುವವರ ಕೈಯಿಂದಲೇ ಪಾಠ ಹೇಳಿಸಿಕೊಳ್ಳಬೇಕಾಗುವಂಥ ಪರಿಸ್ಥಿತಿ ಇವರದು. ನೀರು ಕಂಡರೆ ಬಹಳ ಇಷ್ಟ ಪಡುತ್ತಾರೆ. ಪ್ರಕೃತಿ ಪ್ರಿಯರು. ಪ್ರಾಣಿದಯೆ ಇವರ ಹುಟ್ಟುಗುಣ. ಆದರೆ ಸಿಟ್ಟು, ಮುಂಗೋಪ, ಅಹಂ ಇವರೆದುರು ನಡೆಯಲ್ಲ. ಪ್ರೀತಿಯಿಂದ ಹೇಳಿದರೆ ವಿಷ ಕುಡಿಯಲೂ ಹಿಂದೆ ಮುಂದೆ ನೋಡದವರು.
ರೋಗ ಗುಣಪಡಿಸೋ ತುಮಕೂರಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ
ವೃಶ್ಚಿಕ
ಸಣ್ಣ ಮೊಂಡುತನ ಇವರ ಸ್ವಭಾವದಲ್ಲಿದೆ. ಕೆಲಸದಲ್ಲಿ ಬಹಳ ಪ್ರಾಮಾಣಿಕರು. ಸ್ವಾರ್ಥ ಬುದ್ಧಿ ಕಡಿಮೆ. ತನ್ನ ಕೆಲಸ, ಇನ್ನೊಬ್ಬರ ಕೆಲಸ ಅಂತೆಲ್ಲ ಭೇದ ಮಾಡಲ್ಲ. ಎಲ್ಲ ಕೆಲಸವನ್ನೂ ಸಮಾನ ಆಸಕ್ತಿಯಿಂದ ಮಾಡುತ್ತಾರೆ. ಇತರರ ಒಳ್ಳೆಯ ಸ್ವಭಾವವನ್ನು ಹೊಗಳುತ್ತಾರೆ. ಅವರು ಶತ್ರುಗಳಾದರೂ ಸರಿ, ಇವರ ಸಿಟ್ಟು ಹೆಚ್ಚು ದಿನ ಉಳಿಯಲ್ಲ. ಹಾಗಾಗಿ ಇವರಿಗೆ ನೆಮ್ಮದಿ ಹೆಚ್ಚು. ಇವರ ಜೊತೆಗೆ ಕೆಲಸ ಮಾಡೋದಕ್ಕೆ ಕೆಲಸಗಾರರು ಹೆಚ್ಚು ಇಷ್ಟಪಡುತ್ತಾರೆ. ಕೂಲ್ ನೆಸ್ ಇವರ ಸ್ವಭಾವದ ವಿಶೇಷತೆ. ಹಾಗಂತ ದಡ್ಡರಲ್ಲ. ಇವರಿಗೆ ಮೋಸ ಮಾಡೋದು ಅಷ್ಟು ಸುಲಭವಲ್ಲ. ವಿವೇಕಿಗಳು, ಹೆಚ್ಚು ಭಾವುಕರಲ್ಲ. ಪ್ರಾಕ್ಟಿಕಲ್ ಆಗಿ ಯೋಚಿಸುವವರು. ಒಂದು ವೇಳೆ ಲೀಡರ್ ಗಳಾದರೆ ಬಹಳ ಬೇಗ ಮುನ್ನೆಲೆಗೆ ಬರುತ್ತಾರೆ. ಇವರಿಗೆ ಈಗ ಸಾಡೇಸಾತ್ ಮುಗಿದಿದೆ. ಒಳ್ಳೆಯ ದಿನಗಳು ಮುಂದಿವೆ. ಹಾಗಾಗಿ ಈ ರಾಶಿಯವರ ಜೊತೆಗೆ ವ್ಯವಹಾರ ಮಾಡೋದಕ್ಕೆ ಹೆಚ್ಚು ಯೋಚಿಸೋದು ಬೇಡ. ಜನರಿಂದ ಇವರು ದೂರ. ಏಕಾಂತವನ್ನು ಹೆಚ್ಚು ಇಷ್ಟ ಪಡುತ್ತಾರೆ. ನೋಡೋದಕ್ಕೆ ಸ್ವಲ್ಪ ಸೈಲೆಂಟೇ. ಆದರೆ ಪ್ರೇಮದಂಥಾ ವಿಷಯದಲ್ಲಿ ಧೈರ್ಯವಾಗಿ ಮುಂದಡಿ ಇಡಬಲ್ಲರು.
ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!
ಸಿಂಹ
ಸಿಂಹ ರಾಶಿಯವರಲ್ಲಿ ದಯಾ ಗುಣ ಕಡಿಮೆಯೇ. ಅಸಾಧ್ಯವಾಗಿ ಕೆಲಸ ಮಾಡುವ ಗುಣ ಇವರದು. ಇತರರಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ. ತನ್ನ ಕೆಲಸಗಾರರು ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡದಿದ್ದರೆ ಅವರ ಮರ್ಯಾದೆ ಮೂರಾ ಬಟ್ಟೆ ಮಾಡೋದರಲ್ಲಿ ಎತ್ತಿದ ಕೈ. ಆದರೆ ಮೋಸ ಮಾಡೋದು ಇವರಿಗೆ ಗೊತ್ತಿಲ್ಲ. ಕದ್ದು ನೋಡೋ ಬುದ್ದಿ ಇದೆ. ಆದರೆ ಇದರಿಂದ ಇತರರಿಗೆ ಹಾನಿ ಇಲ್ಲ. ಇನ್ನೊಬ್ಬರ ಬಗ್ಗೆ ಕುತೂಹಲ ಹೆಚ್ಚು. ಆದರೆ ಹೆಚ್ಚು ಸ್ವಾರ್ಥಿಗಳಲ್ಲ. ಪರಿಶ್ರಮವನ್ನು ಬಹಳ ಇಷ್ಟಪಡುತ್ತಾರೆ. ಇವರ ಸಿಟ್ಟಿಗೆ ಬಲಿಯಾಗಿ ಇವರ ಮೇಲೆ ಸೇಡು ತೀರಿಸಿಕೊಳ್ಳಲು ಹೆಚ್ಚಿನವರು ಹಂಬಲಿಸುತ್ತಿರುತ್ತಾರೆ. ಆದರೆ ಇವರ ಆತ್ಮವಿಶ್ವಾಸದ ಮುಂದೆ ಯಾರ ಆಟವೂ ನಡೆಯಲ್ಲ. ಸ್ನೇಹಕ್ಕೆ ಸದಾ ಮುಂದೆ. ತಾವೇ ಶ್ರೇಷ್ಠ ಎಂಬ ಭಾವ ಒಳಗೊಳಗೇ ಬಹಳ ಇದೆ. ಇವರ ಕೆಲಸವನ್ನು ಇತರರು ಹೊಗಳಿದರೆ ಬಹಳ ಖುಷಿ ಪಡುತ್ತಾರೆ. ಅದನ್ನು ಮತ್ತೆ ಮತ್ತೆ ಕೇಳಲು ತವಕಿಸುತ್ತಾರೆ. ಹಾಗಂತ ಹೊಗಳಿಗೆ ಬಲಿಬೀಳುವ ಆಸಾಮಿಗಳಲ್ಲ. ಜಸ್ಟ್ ಅದನ್ನು ಎನ್ ಜಾಯ್ ಮಾಡುತ್ತಾರಷ್ಟೇ.
ತುಲಾ
ಈ ರಾಶಿಯವರೂ ಮೋಸಗಾರರಲ್ಲ. ಕೆಲವೊಂದು ಸಣ್ಣತನಗಳು, ಅಹಂಕಾರ ಎಲ್ಲ ಇವೆ. ಉಳಿದ ವಿಷಯದಲ್ಲಿ ತುಸು ಲಂಪಟರಾಗಿರಬಹುದು. ಆದರೆ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾರೆ ಮಾತ್ರವಲ್ಲ ಆ ವಿಷಯವನ್ನು ಎಷ್ಟು ಚೆನ್ನಾಗಿ ಮಾಡಿ ಮುಗಿಸಬಹುದೋ ಅಷ್ಟು ಚೆನ್ನಾಗಿ ಮಾಡಿ ಮುಗಿಸುತ್ತಾರೆ. ಹೊಸ ಕಾಲದ ನೀತಿ ನಿಯಮಗಳು ಇವರಿಗೆ ಕರತಲಾಮಲಕ. ಹೊಸ ಹೊಸ ವಿಷಯಗಳತ್ತ ಆಸಕ್ತರು. ಹಾಗಾಗಿ ಇವರಿಂದ ಕೆಲಸದಲ್ಲಿ ಹೊಸತನ ನಿರೀಕ್ಷಿಸಬಹುದು. ಇತರರ ಭಾವನೆಗಳಿಗೆ ಬೆಲೆ ಕೊಡೋದಿಲ್ಲ. ತಮಗೆ ಸರಿ ಅನಿಸಿದ್ದನ್ನು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ. ಅದು ನೇರವಂತಿಕೆ ಅಂತ ಅಂದುಕೊಳ್ಳುತ್ತಾರೆ. ಆದರೆ ಮತ್ತೊಬ್ಬರು ಇದೇ ನೇರವಂತಿಕೆಯಿಂದ ಇವರ ಬಗ್ಗೆ ಕಮೆಂಟ್ ಮಾಡಿದರೆ ಸಿಟ್ಟು ತೋರಿಸುತ್ತಾರೆ. ನಡು ನೀರಲ್ಲಿ ಕೈ ಬಿಡುವ ಜಾತಿಯವರಂತೂ ಖಂಡಿತಾ ಅಲ್ಲ. ಯಾವುದೇ ವಿಷಯವಾದರೂ ಶ್ರದ್ಧೆ ಹೆಚ್ಚು. ಕೆಲಸದ ಬಗ್ಗೆ ಅಭಿಮಾನ ಹೆಚ್ಚು. ಹೊಸತನವನ್ನು ಹೆಚ್ಚು ಇಷ್ಟ ಪಡುವವರಾದ ಕಾರಣ ಇವರಿಗೆ ಸಾಮಾನ್ಯ ವಿಷಯಗಳ್ಯಾವುವೂ ರುಚಿಸಲ್ಲ. ಇಂಥವರ ಜೊತೆ ವ್ಯವಹಾರ ಮಾಡಿದರೆ ಖಂಡಿತಾ ಲಾಸ್ ಇಲ್ಲ.