ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!

Suvarna News   | Asianet News
Published : Mar 11, 2020, 02:25 PM ISTUpdated : Mar 11, 2020, 03:55 PM IST
ಈ ರಾಶಿಯವರಿಗೆ ಕೊರೋನಾ ಭಾರಿ ಡೇಂಜರು!

ಸಾರಾಂಶ

ಕೊರೋವೈರಸ್‌ ಹರಡುವುದು ಗಾಳಿಯಲ್ಲಿ- ಸೀನುವುದರಿಂದ, ಕೆಮ್ಮುವುದರಿಂದ, ಆಕಳಿಸುವುದರಿಂದ ಒಬ್ಬ ವ್ಯಕ್ತಿಯ ಬಾಯಿ ಮೂಗಿನ ಮೂಲಕ ಹೊರಬರುವ ಕ್ರಿಮಿಗಳು ಗಾಳಿಯಲ್ಲಿ ಇನ್ನೊಬ್ಬನ ದೇಹವನ್ನು ಸೇರುತ್ತವೆ. ನೀವು ಹೊರಗೆ ಓಡಾಡುವಾಗ ಮೂಗಿಗೆ ಮಾಸ್ಕ್‌ ಧರಿಸಿಕೊಳ್ಳುವುದು ಸುರಕ್ಷಿತ.

ಕೆಲವೊಮ್ಮೆ ನಮ್ಮ ಜನ್ಮರಾಶಿಗೂ ನಮಗೆ ಬರುವ ಕಾಯಿಲೆಗಳಿಗೂ ತೀರಾ ಹತ್ತಿರದ ಸಂಬಂಧ ಇರುವುದುಂಟು, ಹಾಗಿದ್ರೆ, ಕೊರೋನಾ ವೈರಸ್‌ನಿಂಧ ನಮ್ಮ ಜನ್ಮರಾಶಿಗೆ ಆಪತ್ತು ಇದೆಯಾ, ತಿಳಿದುಕೊಂಡು ಸೇಫಾಗಿ ಇರೋಣ ಅಲ್ಲವೇ?

ಸಿಂಹ, ವೃಷಭ, ಮಕರ

ಈ ಮೂರು ರಾಶಿಯವರು ಈ ಸಂದರ್ಭದಲ್ಲಿ ತುಂಬಾ ಕೇರ್‌ಫುಲ್ಲಾಗಿರಬೇಕು. ಇವರಿಗೆ ಗಾಳಿಯಲ್ಲಿ ಹರಡುವ ರೋಗಗಳಿಂದ ಅಪಾಯ ಇದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹೀಗಾಗಿ ಇವರಿಗೆ ಸಾಮಾನ್ಯವಾಗಿ ಶೀತಜ್ವರ ಮುಂತಾದ ಆರೋಗ್ಯದ ಕೋಟಲೆಗಳು ಹೆಚ್ಚಾಗಿ ಕಾಡುತ್ತವೆ. ಇವರಿಗೆ ಇನ್‌ಫ್ಲುಯೆಂಜಾ ಮೊದಲಾದವೂ ಆಗಾಗಾ ಕಾಡುತ್ತವೆ. ಕೊರೊನಾ ವೈರಸ್‌ ಹರಡುವುದು ಗಾಳಿಯಲ್ಲಿ- ಸೀನುವುದರಿಂದ, ಕೆಮ್ಮುವುದರಿಂದ, ಆಕಳಿಸುವುದರಿಂದ ಒಬ್ಬ ವ್ಯಕ್ತಿಯ ಬಾಯಿ ಮೂಗಿನ ಮೂಲಕ ಹೊರಬರುವ ಕ್ರಿಮಿಗಳು ಗಾಳಿಯಲ್ಲಿ ಇನ್ನೊಬ್ಬನ ದೇಹವನ್ನು ಸೇರುತ್ತವೆ. ನೀವು ಹೊರಗೆ ಓಡಾಡುವಾಗ ಮೂಗಿಗೆ ಮಾಸ್ಕ್‌ ಧರಿಸಿಕೊಳ್ಳುವುದು ಸುರಕ್ಷಿತ. ಮಾಲ್‌ಗಳಿಗೆ, ಬಸ್ಸು ನಿಲ್ದಾಣಗಳಿಗೆ, ಮೆಟ್ರೋಗಳಲ್ಲಿ ಪ್ರಯಾಣಿಸುವಾಗ ಹುಷಾರಾಗಿರಬೇಕು. ಸಾರ್ವಜನಿಕ ಸಭೆ ಸಮಾರಂಭಗಳಿಗೆ ಹೋಗುವುದನ್ನು ಸದ್ಯ ಅವಾಯ್ಡ್‌ ಮಾಡುವುದು ಕ್ಷೇಮಕರ.

 

ಈ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿದ ಎಣ್ಣೆಯಿಂದ ಸಂಧಿವಾತ ಗುಣವಾಗುತ್ತದೆ

 

ತುಲಾ, ಮಿಥುನ, ಮೇಷ

ಈ ಮೂರು ರಾಶಿಗಳವರು ಕೂಡ ಕೆಲವು ವಿಚಾರದಲ್ಲಿ ಹುಷಾರಾಗಿರಬೇಕು. ಇವರಿಗೆ ಇನ್ನೊಬ್ಬರ ಸ್ಪರ್ಶದಿಂದ ರೋಗಗಳು ಹರಡುವ ಸಂಭವ ಹೆಚ್ಚು. ಹೀಗಾಗಿ ಕೊರೊನಾ ವೈರಸ್‌ ಪೀಡಿತ ರೋಗಿಗಳ ಬಳಿ ಹೋಗಬೇಕಿದ್ದರೆ ಸ್ವಲ್ಪ ಎಚ್ಚರದಿಂದಿರಿ. ರೋಗಿಗಳ ಆರೈಕೆ ಮಾಡುವವರಾಗಿದ್ದರೆ ನಿಮ್ಮ ಸ್ವಚ್ಛತೆ ಕಾಪಾಡಿಕೊಳ್ಳಿ. ಅಪರಿಚಿತ ವ್ಯಕ್ತಿಗಳು ಮುಟ್ಟಿದ ವಸ್ತುವನ್ನು ಮುಟ್ಟಬೇಡಿ, ಅವರು ಸೇವಿಸಿ ಬಿಟ್ಟ ಲೋಟದಿಂದ ನೀರು ಕುಡಿಯಬೇಡಿ. ಇನ್ನೊಬ್ಬರ ಉಸಿರಾಟದ ತೀರಾ ಹತ್ತಿರಕ್ಕೆ ಹೋಗಬೇಡಿ. ಇನ್ನೊಬ್ಬರ ಕೈಕುಲುಕುವುದು ಅನಿವಾರ್ಯ ಆಗಿದ್ದರೆ ಮಾತ್ರ ಹಾಗೆ ಮಾಡಿ. ಇಲ್ಲವಾದರೆ ನಮಸ್ಕಾರ ಮಾಡುವುದು ಒಳ್ಳೆಯದು. ಉದ್ಯೋಗದ ಸ್ಥಳಗಳಲ್ಲಿ ಇನ್ನೊಬ್ಬರ ವಸ್ತುವನ್ನು ಮುಟ್ಟಬೇಕಾದೀತು. ಅಂಥ ಕಡೆ ಎಚ್ಚರವಾಗಿರಬೇಕು. ಇದಕ್ಕೆ ಟಿಶ್ಯೂ ಪೇಪರ್‌ ಬಳಸಬಹುದು. ಮನೆಯಿಂದಲೇ ಕೆಲಸ ಮಾಡುವವರಿಗೆ ಈ ಅಪಾಯಗಳು ಕಡಿಮೆ ಇದ್ದೀತು.

 

ಸೆಲೆಬ್ರಿಟಿಗಳೇಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಬಲಿ ಮಾಡಿಸ್ತಾರೆ

 

ಧನು, ಕುಂಭ, ಮೀನ

ಈ ರಾಶಿಯವರಿಗೆ ಕೊರೋನಾವೈರಸ್‌ನ ತೀರಾ ಭಯವೇನೂ ಇಲ್ಲ. ಆದರೆ ಆಹಾರದಿಂದ ಕೆಲವು ಸಮಸ್ಯೆಗಳು ಬರುವ ಸಂಭವ ಇದೆ. ಆಹಾರದಿಂದ ಕೊರೋನಾ ಬರುವ ಸಂಭವ ತೀರ ಕಡಿಮೆ. ಆದರೆ, ಕೊರೊನಾಪೀಡಿತ ವ್ಯಕ್ತಿ ಮುಟ್ಟಿದ ಅಥವಾ ರುಚಿ ನೋಡಿದ ಆಹಾರವನ್ನೇ ನೀವೂ ಸೇವಿಸಿದ್ದರೆ, ಆ ವೈರಸ್‌ಗಳು ನಿಮ್ಮ ರಕ್ತ ಸೇರಿದರೆ ಆಗ ಕೊರೋನಾದ ಅಪಾಯ ಇದೆ. ಹೋಟಲ್ಗಳಲ್ಲಿ ಹೆಚ್ಚಾಗಿ ತಿಂಡಿ ಊಟ ಮಾಡುವುದನ್ನು ಸದ್ಯ ಬಿಡುವುದು ಒಳ್ಳೆಯದು. ಆಗಾಗ ಬಿಸಿ ಬಿಸಿ ನೀರು ಕುಡಿಯುತ್ತಿರಿ.

ಆಹಾರವನ್ನೂ ಬಿಸಿ ಬಿಸಿಯಾಗಿಯೇ ಸೇವಿಸಿ, ತಂಗಳೂಟ ಮಾಡಬೇಡಿ. ಕೋಲ್ಡ್‌ ಡ್ರಿಂಕ್ಸ್‌ ಕುಡಿಯುವುದು ಹಾನಿಕರ. ಇದು ಮೊದಲೇ ಹಾನಿಕರ, ಕೊರೋನಾವೈರಸ್‌ ಶೀತ ವಾತಾವರಣದಲ್ಲಿ ಹೆಚ್ಚು ಕಾಲ ಉಳಿಯುವುದರಿಂದ, ಇನ್ನೂ ಹಾನಿಕರ. ಅಪರಿಚಿತರು ನೀಡಿದ ಆಹಾರ ಸೇವಿಸಬೇಡಿ. ರೆಡಿಮೇಡ್‌ ಫುಡ್‌ ಸೇವಿಸಬೇಡಿ.

 

ಕನ್ಯಾ, ಕಟಕ, ವೃಶ್ಚಿಕ

ಈ ಮೂರು ರಾಶಿಗಳಿಗೆ ತೀರಾ ಅಪಾಯವಿಲ್ಲವಾದರೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಎಚ್ಚರದಲ್ಲಿರಬೇಕು. ಮುಖ್ಯವಾಗಿ ವಿದೇಶಗಳಿಗೆ ಹೋಗುವುದಿದ್ದರೆ ತುಂಬಾ ಎಚ್ಚರದಿಂದಿರಬೇಕು. ವಿದೇಶ ಪ್ರಯಾಣ ಅವಾಯ್ಡ್‌ ಮಾಡುವುದೂ ಒಳ್ಳೆಯದೇ. ಹಾಗೆಯೇ ಬಸ್ಸು ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲೂ ಹುಷಾರಾಗಿರಬೇಕು. ನಿಮ್ಮ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ಅದರಿಂದ ಅನೇಕ ಬಗೆಯ ರೋಗಗಳು ಬರುತ್ತವೆ. ಮನೆ ಸುತ್ತಮುತ್ತ ಸ್ವಚ್ಛತೆ ಇರಲಿ. ಓವರ್‌ಹೆಡ್‌ ಟ್ಯಾಂಕನ್ನು ಮುಚ್ಚಿಡಿ. ನೀವು ಸೇವಿಸುವ ಶುದ್ಧ ನೀರಿಗೆ ಎಲ್ಲೂ ಕಲುಷಿತ ನೀರು ಮಿಕ್ಸ್ ಆಗದಂತೆ ನೋಡಿಕೊಳ್ಳಿ. ಕರೆನ್ಸಿ ನೋಟುಗಳು ವಿನಿಮಯ ಮಾಡಿಕೊಳ್ಳುವಾಗ ಜಾಗ್ರತೆ.

PREV
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ