ಯುಎಸ್‌ನಿಂದ ಪ್ಯಾರಿಸ್‌ವರೆಗೆ ರಾಮ ರಾಮ ಎನ್ನುತ್ತ ಹಬ್ಬದ ಸಂಭ್ರಮದಲ್ಲಿ ಹಿಂದೂಗಳು

By Suvarna News  |  First Published Jan 16, 2024, 5:16 PM IST

ಅಮೆರಿಕದಿಂದ ಆಸ್ಟ್ರೇಲಿಯಾವರೆಗೆ, ಪ್ಯಾರಿಸ್‌ನಿಂದ ಕೆನಡಾವರೆಗೆ ರಾಮಮಂದಿರದ ಉದ್ಘಾಟನೆ ಸಮಾರಂಭಕ್ಕೆ ಜಗತ್ತಿನಗಲದಲ್ಲೂ ಹಿಂದೂಗಳಿಂದ ವಿವಿಧ ಆಚರಣೆಗಳು ನಡೆಯುತ್ತಿವೆ. 


ವಾಷಿಂಗ್ಟನ್ ಡಿಸಿಯಿಂದ ಪ್ಯಾರಿಸ್‌ನಿಂದ ಸಿಡ್ನಿಯವರೆಗೆ, ಫ್ರಾನ್ಸ್‌ನಿಂದ ಕೆನಡಾವರೆಗೆ ಹಿಂದೂಗಳು ಹಬ್ಬದ ವಾತಾವರಣದಲ್ಲಿ ಮಿಂದೇಳುತ್ತಿದ್ದಾರೆ. ಹೌದು, ಜ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಂಭ್ರಮ 60ಕ್ಕೂ ಹೆಚ್ಚು ದೇಶಗಳ ಹಿಂದೂಗಳ ಮನಸ್ಸಲ್ಲಿ ಮನೆ ಮಾಡಿದೆ. ಜಗದಾದ್ಯಂತ ಇರುವ ಸಮುದಾಯ ಭವನಗಳು, ದೇವಾಲಯಗಳು ಮತ್ತು ಕೇಂದ್ರಗಳಲ್ಲಿ ರಾಮ ನಾಮ ಧ್ಯಾನ, ಭಜನೆ, ರ್ಯಾಲಿ, ಉತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ. 

ಈ ಕಾರ್ಯಕ್ರಮಗಳನ್ನು ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಆಯೋಜಿಸುತ್ತಿದ್ದು, ಹಿಂದೂ ವಲಸಿಗರು ಇದರಲ್ಲಿ ಅಪಾರ ಸಂಖ್ಯೆಯಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದಾರೆ. 

Tap to resize

Latest Videos

ಸಂಘಟನೆಯ ಅಂತರಾಷ್ಟ್ರೀಯ ವ್ಯವಹಾರಗಳನ್ನು ನಿರ್ವಹಿಸುವ ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ್ ಮಾತನಾಡಿ, ವಿಎಚ್‌ಪಿಯು 60ಕ್ಕೂ ಹೆಚ್ಚು ದೇಶಗಳಲ್ಲಿ ನೇರ ಸಂಪರ್ಕವನ್ನು ಹೊಂದಿದೆ ಮತ್ತು ಅಲ್ಲಿನ ಹಿಂದೂ ಸಮುದಾಯದ ಸಂಘಟನೆಗಳೊಂದಿಗೆ ಕಾರ್ಯಕ್ರಮಗಳನ್ನು ಯೋಜಿಸಿದೆ ಎಂದು ಹೇಳಿದ್ದಾರೆ. 

ಕಾರ್ಯಕ್ರಮಗಳು ಕಾರ್ ರ್ಯಾಲಿಗಳು, ರಥಯಾತ್ರೆಗಳು ಅಥವಾ ಭಜನೆಗಳನ್ನು ಹಾಡುವ ಮೆರವಣಿಗೆಗಳನ್ನು ಒಳಗೊಂಡಿದೆ. ಪ್ರತಿಷ್ಠಾಪನೆಯ ಸಮಾರಂಭವನ್ನು ವಿವಿಧ ದೇಶಗಳ ದೇವಾಲಯಗಳಲ್ಲಿ ನೇರಪ್ರಸಾರ ಮಾಡಲಾಗುತ್ತದೆ.

ಪ್ಯಾರಿಸ್‌ನಲ್ಲಿ ರಥಯಾತ್ರೆ
ಪ್ಯಾರಿಸ್‌ನಲ್ಲಿ, ನಗರದ ಉತ್ತರ ಭಾಗದಲ್ಲಿರುವ ಪ್ಲೇಸ್ ಡೆ ಲಾ ಕ್ಯಾಪೆಲ್ಲೆ ಎಂಬ ಅಖಾಡದಿಂದ ಐಫೆಲ್ ಟವರ್‌ವರೆಗೆ ರಾಮ ರಥ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದೆ. ಇದರ ಭಾಗವಾಗಿ, ಐಫೆಲ್ ಟವರ್‌ನಲ್ಲಿ 'ಶ್ರೀ ರಾಮ್ ಧುನ್ ಪಠಣ, ಭಕ್ತಿಗೀತೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರಸಾದ ವಿತರಣೆ' ಸಹ ಇರುತ್ತದೆ. ಆ ರಥಯಾತ್ರೆಯು ಪೂಜೆ ಮತ್ತು ವಿಶ್ವಕಲ್ಯಾಣ ಯಜ್ಞದ ನಂತರ ಪ್ರಾರಂಭವಾಗುತ್ತದೆ ಮತ್ತು ಲೆ ರಿಪಬ್ಲಿಕ್, ಮ್ಯೂಸಿ ಡಿ ಲೌವರ್ ಮತ್ತು ಆರ್ಕ್ ಡಿ ಟ್ರಯೋಂಫ್‌ನಂತಹ ಗಮನಾರ್ಹ ಪ್ಯಾರಿಸ್ ಹೆಗ್ಗುರುತುಗಳ ಮೂಲಕ ಹಾದುಹೋಗುತ್ತದೆ.

ವಾಷಿಂಗ್ಟನ್‌ನಲ್ಲಿ ರ್ಯಾಲಿ
ನ್ಯೂಯಾರ್ಕ್‌ನಲ್ಲಿರುವ ಭಕ್ತರು ಜನವರಿ 22ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ ಸೇರುತ್ತಾರೆ. ವಾಷಿಂಗ್ಟನ್ ಡಿಸಿಯಲ್ಲಿ, ಜನವರಿ 20ರಂದು ಶ್ರೀ ಭಕ್ತ ಆಂಜನೇಯ ದೇವಸ್ಥಾನದಲ್ಲಿ ವಿಎಚ್‌ಪಿ ಕಾರು ಮತ್ತು ಬೈಕ್ ರ್ಯಾಲಿಯನ್ನು ಆಯೋಜಿಸಿದೆ. ಇದರಲ್ಲಿ 1000ಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳಲಿದ್ದಾರೆ. ಜನವರಿ 22ರ ನಂತರ, ಬೋಸ್ಟನ್‌ನಿಂದ ಪ್ರಾರಂಭಿಸಿ ಅಮೆರಿಕದಾದ್ಯಂತ ದೇವಾಲಯಗಳಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ.

ಅಯೋಧ್ಯೆಯಲ್ಲಿ ವಿರಾಜಮಾನನಾಗಲಿದ್ದಾನೆ ಕರುನಾಡ ರಾಮ! ರಾಮದಾಸರ ನೆಲದಲ್ಲಿ ಸಿಕ್ಕಿದ ಶಿಲೆ ಅಯೋಧ್ಯೆ ತಲುಪಿದ್ದು ಹೀಗೆ..

ಆಸ್ಟ್ರೇಲಿಯಾದಲ್ಲಿ ವಿವಿಧ ಕಾರ್ಯಕ್ರಮ
ಆಸ್ಟ್ರೇಲಿಯಾದಲ್ಲಿ, ವೆಸ್ಟರ್ನ್ ಸಿಡ್ನಿಯ ಪಾರ್ಮಟ್ಟಾ ಪಾರ್ಕ್ ಮತ್ತು ಮೆಲ್ಬೋರ್ನ್‌ನ ಕಿಂಗ್ಸ್ಲಿ ಪಾರ್ಕ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಬ್ರಿಸ್ಬೇನ್, ಪರ್ತ್, ಅಡಿಲೇಡ್ ಮತ್ತು ನ್ಯೂ ಸೌತ್ ವೇಲ್ಸ್ ಸೇರಿದಂತೆ ಆಸ್ಟ್ರೇಲಿಯಾದ ಇತರ ನಗರಗಳಲ್ಲಿ VHP ಹಿಂದೂ ಸಮುದಾಯಗಳೊಂದಿಗೆ ಕಾರ್ಯಕ್ರಮಗಳನ್ನು ನಡೆಸುತ್ತದೆ.

ಆಫ್ರಿಕಾದಲ್ಲೂ ರಾಮಧ್ಯಾನ
ಆಫ್ರಿಕಾದಲ್ಲಿ, ಕೀನ್ಯಾ, ತಾಂಜಾನಿಯಾ, ಉಗಾಂಡಾ, ಮಾರಿಷಸ್, ಘಾನಾ, ನೈಜೀರಿಯಾ ಮತ್ತು ಮೊಜಾಂಬಿಕ್‌ನಲ್ಲಿ ವಿಎಚ್‌ಪಿ ಕಾರ್ ರ್ಯಾಲಿ ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಬಕಿಂಗ್ಹ್ಯಾಮ್, ಬ್ಯಾಂಕಾಕ್, ಸಿಂಗಾಪುರ, ಕೌಲಾಲಂಪುರ್, ಜಕಾರ್ತಾ ಮತ್ತು ಬಾಲಿಯಲ್ಲಿ ಇದೇ ರೀತಿಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ.

click me!