ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ

By Suvarna News  |  First Published Jan 16, 2024, 4:29 PM IST

ದೇವಾಲಯಗಳನ್ನ ಶುಚಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ‌ ಇತಿಹಾಸ ಪ್ರಸಿದ್ದ ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ ನಡೆಯಿತು.


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜ.16): ದೇವಾಲಯಗಳನ್ನ ಶುಚಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ‌ ಇತಿಹಾಸ ಪ್ರಸಿದ್ದ ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ ನಡೆಯಿತು. ಮಾಜಿ ಶಾಸಕ ಸಿ.ಟಿ.ರವಿ ಹಾಗೂ ಬಿಜೆಪಿ ಕಾರ್ಯಕರ್ತರಿಂದ ದೇವಾಲಯದ  ಶುಚಿ ಕಾರ್ಯ ನಡೆಯಿತು.

Tap to resize

Latest Videos

ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ‌ ದೇವಸ್ಥಾನವೂ ಸೀತೆ ರಾಮನ ಬಲಭಾಗದಲ್ಲಿರುವ ಅಪರೂಪದ ದೇವಾಲಯವಾಗಿದ್ದು ದೇಶದಲ್ಲಿ ಈ ರೀತಿ ದೇಗುಲಗಳಿರೋದು ಕೇವಲ ಮೂರೇ ಮೂರು ದೇವಸ್ಥಾನವಾಗಿದೆ. ದೇಶದಾದ್ಯಂತ ಇರುವ ಮೂರು ದೇವಾಯಲದಲ್ಲಿ ಹಿರೇಮಗಳೂರಿನದ್ದು ಒಂದು ದೇವಾಲಯವಾಗಿದೆ. ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಟಿ ರವಿ ಶ್ರೀ ರಾಮಮಂದಿರ ಉದ್ಘಾಟನೆ ಹಿನ್ನಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆ ಮೇರೆಗೆ ದೇವಾಲಯಗಳ ಸ್ವಚ್ಛತ ಕಾರ್ಯ ನಡೆಸುತ್ತಿದ್ದು ಮಂಗಳವಾರ ಹಿರೇಮಗಳೂರು  ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನ ದಲ್ಲಿ ಸ್ವಚ್ಛತೆ ಕಾರ್ಯ ಕೈಗೊಂಡರು. ಪ್ರಧಾನಿಯವರ ಆಶಯದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.

17ನೇ ವಯಸ್ಸಿನಲ್ಲಿ ವಿವಾಹವಾಗಿ ವಿಚ್ಚೇದನ ಪಡೆದ ನಟಿ ಹಿಟ್‌ ಸಿನೆಮಾಕ್ಕಾಗಿ 33 ವರ್ಷಗಳೇ ಕಾಯಬೇಕಾಯ್ತು!

ಅನಂತ್ ಕುಮಾರ್ ಹೆಗ್ಡೆ ಹೇಳಿಕೆ‌ಗೆ ಸಿ.ಟಿ‌ರವಿ ಕಿಡಿ : 
ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಟಿ ರವಿ ಹಿರಿಯರು ಮತ್ತು ಸ್ಥಾನಕ್ಕೆ ಯಾವ ಗೌರವ ಕೊಡಬೇಕು. ಆ ಗೌರವವನ್ನು ಕೊಡಲೇಬೇಕೆಂದರು. ಅನಂತ್ ಕುಮಾರ್ ಹೆಗ್ಡೆ ಕಾರ್ಯಶೈಲಿ ಭಿನ್ನವಿದೆ ಹಾಗೆಂದ ಮಾತ್ರಕ್ಕೆ ಇನ್ನೋಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು ಎಂದರು ಇಂತಹ ಹೇಳಿಕೆಗಳನ್ನು ನಾವು ಸಮರ್ಥಿಸುವುದಿಲ್ಲ. ರಾಮ ಎಲ್ಲರನ್ನೂ ಜೊಡಿಸಿ ಕೊಂಡು ಹೋಗುವವನು ಅನಂತ್ ಕುಮಾರ್ ಹೆಡ್ಗೆ ಮುಖ್ಯಮಂತ್ರಿಗಳನ್ನು ಏಕ ವಚನದಲ್ಲಿ ಹೇಳಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಅನಂತ್  ಕುಮಾರ್ ಹೆಡ್ಗೆ ಅವರ ಭಾವನೆ ಇರಬಹುದು ನಿಜ, 42 ಸಾವಿರ ದೇವಾಲ ಯಗಳನ್ನು ಘಜನಿ, ಘೋರಿ, ಖಿಲ್ಜಿ, ಅವರಂಗಜೇಜ್ ಮೊಗಲ್ ಕಾಲಘಟ್ಟದಲ್ಲಿ, ದಕ್ಷಿಣದಲ್ಲಿ ಮಲ್ಲಿಖಾಫರ್ ದಾಳಿ ಸಂದರ್ಭದಲ್ಲಿ, ಆದಿಲ್ ಷಾಹಿ  ಕಾಲಘಟ್ಟದಲ್ಲಿ ನಿಜಾಮರು, ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲಿ, ದೇವಾಲಯ ಗಳುನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಿರುವುದು ನಿಜ, ವಾಸ್ತವ ಸತ್ಯ. ಭಾರತೀಯ ಮುಸ್ಲೀಮರು ದಾಳಿಕೋರರ ಜತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳು ವುದಿಲ್ಲ. ಭಾರತೀಯತೇ ಸನಾತನ ಪರಂಪರೆಯ ಮೇಲೆ ವಿಶ್ವಾಸವಿಟ್ಟು ಇಲ್ಲಿ ಉಳಿದು ಕೊಂಡಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅವರಿಗೂ ಮನ ಪರಿವರ್ತನೆ ದಿನ ಬರಬಹುದು ಎಂದರು.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ ಬ್ರೇಕಪ್‌ ಬಳಿಕ ಗೆಳತಿಯ ಗಂಡನನ್ನೇ ಮದುವೆಯಾದ ನಟಿ!

ಮಂದಿರದಲ್ಲಿ ನಮಾಜ್ ಮಾಡಿದರೇ ಅದು ಹರಮ್ : 
ಆಕ್ರಮಣ ಮಾಡಿ ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡಿ ಕಟ್ಟಿದ ಮಂದಿರದಲ್ಲಿ ನಮಾಜ್ ಮಾಡಿದರೇ ಅದು ಹರಮ್ ಆಗುತ್ತದೆ ಎಂದು ಅನಿಸಬಹುದು. ಅಂದು ಅವರು ಉದಾರತೇಯನ್ನು ಪ್ರದರ್ಶನ ಮಾಡಬಹುದು ಎಂದರು. ಇಲ್ಲಿ ಘಜನಿ, ಘೋರಿ ಮೊಗಲ್ ಜತೆ ಗುರುತಿಸಿಕೊಳ್ಳುವ ಮಾನಸಿಕತೆ ಅಪಾಯಕಾರಿ ಅದನ್ನು ನಾವು ಸಹಿಸಿಕೊಳ್ಳು ವುದಿಲ್ಲ. ಅದರ ವಿರುದ್ದ ನಮ್ಮ ಭಾವನೆಗಳು ಇವೆ. ಎಲ್ಲಾ ಮುಸ್ಲಿಮರ ನ್ನು ಒಂದೇ ತಕಡಿಯಲ್ಲಿಟ್ಟು ತೂಗುವುದಿಲ್ಲ. ಮುಸ್ಲಿಮರು ಘಜನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಗೆ ಬರಬೇಕು. ಅವರಿಗೆ ಶಿಶುನಾಳ ಶರೀಪರು, ಎಪಿಜೆ ಅಬ್ದುಲ್ ಕಲಾಂ ಅಂತವರು ಆದರ್ಶ ಆಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತದೆ ಎಂದರು.

ಯಾರಿಗೆ ಆಗಲಿ ಏಕವಚನದಲ್ಲಿ ಮಾತನಾಡುವುದನ್ನು, ಅಗೌರವ ತರುವುದನ್ನು ಒಪ್ಪಿಕೊಳ್ಳುವುದಿಲ್ಲ. ಅನಂತ್ ಕುಮಾರ್ ಹೆಡ್ಗೆ ಅವರು ಹೀಗೆ ಹೇಳಿದರು ಎಂದೇಳಿ ಅವರನ್ನು ಟೀಕೆ ಮಾಡುವ ಭರದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ನಾಯಿಗೆ ಹೋಲಿಸಿರು ವುದು ಅದು ಕೂಡ ತಪ್ಪೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ಅವರನ್ನು ಏಕ ವಚನದಲ್ಲಿ ಮಾತನಾಡುವುದು, ಸರ್ಜಿಕಲ್ ಸ್ಟ್ರೈಕ್ ಹೀಯಾಳಿದ್ದಾರೆ ಅದು ಕೂಡ ತಪ್ಪೇ. ಹಿರಿಯರಾಗಿ ಗೌರವ ನೀಡಬೇಕು ಆಗ ಉಳಿದವರಿಗೆ ಮಾದರಿಯಾ ಗುತ್ತದೆ ಎಂದರು. 

click me!