ಈ ತಾರೀಖಿನಲ್ಲಿ ಜನಿಸಿದವರು ಬಹಳ ಬುದ್ಧಿವಂತರು, ಬುಧನ ಪ್ರಭಾವ ಇದಕ್ಕೆ ಕಾರಣ..!

By Suvarna News  |  First Published May 29, 2021, 3:27 PM IST

ಸಂಖ್ಯಾಶಾಸ್ತ್ರದ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು. ನೀವು ಹುಟ್ಟಿದ ದಿನದ ಆಧಾರದ ಮೇಲೆ ಬರುವ ಪಾದಾಂಕದಿಂದ ಆ ವ್ಯಕ್ತಿಯ ಸ್ವಭಾವ, ಭವಿಷ್ಯ, ಆರ್ಥಿಕತೆ ಸೇರಿದಂತೆ ಇನ್ನಿತರ ವಿಷಯಗಳನ್ನು ತಿಳಿದುಕೊಳ್ಳಬಹುದು. 5, 14, 23 ನೇ ತಾರೀಖಿನಂದು ಜನಿಸಿದವರ ಪಾದಾಂಕ ಯಾವುದು..? ಅವರ ಗುಣ-ಸ್ವಭಾವ ಹೇಗಿದೆ ನೋಡೋಣ ಬನ್ನಿ…


ಕೆಲವರಿಗೆ ಬುದ್ಧಿವಂತಿಕೆ ಎಂಬುದು ಅನುವಂಶೀಯವಾಗಿ ಬಂದರೆ, ಮತ್ತೆ ಕೆಲವರಿಗೆ ಹುಟ್ಟಿನಿಂದ ಬರಲಿದೆ. ಹುಟ್ಟಿನಿಂದ ಬರಲು ಆ ವ್ಯಕ್ತಿಯ ಜಾತಕ ಅಂದರೆ, ಹುಟ್ಟಿದ ದಿನ, ಘಳಿಗೆ, ರಾಶಿ, ನಕ್ಷತ್ರ ಹೀಗೆ ಎಲ್ಲ ಅಂಶಗಳೂ ಪರಿಗಣನೆಗೆ ಬರುತ್ತವೆ. ಇಲ್ಲಿ ನಿಮ್ಮ ಗುಣಾವಗುಣಗಳನ್ನು ಸಂಖ್ಯಾಶಾಸ್ತ್ರದ ಮೂಲಕವೂ ಕಂಡುಕೊಳ್ಳಬಹುದಾಗಿದೆ.

ಆ ವ್ಯಕ್ತಿ ಹುಟ್ಟಿದ ದಿನಾಂಕ, ಘಳಿಗೆ ಹೀಗೆ ಕೆಲವು ಸಂಖ್ಯೆಗಳ ಆಧಾರದ ಮೇಲೆ ಅವರ ಗುಣ, ವ್ಯಕ್ತಿತ್ವ, ಸ್ವಭಾವ, ಅದೃಷ್ಟ ಹೀಗೆ ಜೀವನದ ಹತ್ತು ಹಲವು ವಿಷಯಗಳನ್ನು ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಬುದ್ಧಿವಂತಿಕೆ ಸಹ ಹೊರತಾಗಿಲ್ಲ. ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸಹ ಕಂಡುಕೊಳ್ಳಬಹುದಾಗಿದೆ. 5, 14, 23 ನೇ ತಾರೀಖಿನಂದು ಜನಿಸಿದವರ ಪಾದಾಂಕವು ಸಂಖ್ಯಾಶಾಸ್ತ್ರದ ಪ್ರಕಾರ 5 ಸಂಖ್ಯೆಯಾಗುತ್ತದೆ. ಇದು ಬುಧ ಗ್ರಹಕ್ಕೆ ಸಂಬಂಧಪಟ್ಟಿರುವ ಅಂಕೆ. ಹಾಗಾಗಿ ಈ ತಾರೀಖಿನಂದು ಜನಿಸಿದವರ ಮೇಲೆ ಬುಧ ಗ್ರಹದ ಪ್ರಭಾವ ಇರುತ್ತದೆ. ಹುಟ್ಟಿನಿಂದಲೇ ಬುದ್ಧಿವಂತರು, ಸಾಹಸಿಗಳು ಮತ್ತು ಕ್ರಿಯಾಶೀಲರಾಗಿರುತ್ತಾರೆ. 

ಹೀಗಾಗಿ 5, 14, 23 ನೇ ತಾರೀಖಿನಂದು ಜನಿಸಿದವರ ಗುಣ ಸ್ವಭಾವಗಳೇನು, ಅವರಿಗೆ ಒಲಿಯುವ ಅದೃಷ್ಟ ಏನು? ಅವರು ಬುದ್ಧಿವಂತರೇ..? ಎಂಬಿತ್ಯಾದಿ ಅಂಶಗಳ ಬಗ್ಗೆ ತಿಳಿಯೋಣ…

ಇದನ್ನು ಓದಿ:  ಈ ನಾಲ್ಕು ರಾಶಿಯವರದ್ದು ಆಕರ್ಷಕ ವ್ಯಕ್ತಿತ್ವ.... ನಿಮ್ಮ-ನಿಮ್ಮವರ ರಾಶಿ ಇದರಲ್ಲಿದೆಯಾ? 

ಯಾರ ಸ್ನೇಹವಾದರೂ ಸಲೀಸು
ಈ ದಿನಾಂಕದಲ್ಲಿ ಜನಿಸಿದವರು ಕ್ಷಣ ಮಾತ್ರದಲ್ಲೇ ಇತರರನ್ನು ಸೆಳೆದುಕೊಳ್ಳುವಂತಹ ಆಕರ್ಷಕ ಗುಣವನ್ನು ಹೊಂದಿರುತ್ತಾರೆ. ಅಲ್ಲದೆ, ಯಾರ ಸ್ನೇಹವನ್ನಾದರೂ ಇವರು ಸುಲಭವಾಗಿ ಸಂಪಾದಿಸಿಬಿಡಬಲ್ಲವರಾಗಿರುತ್ತಾರೆ. ಜೊತೆಗೆ ಬೇರೆಯವರಿಂದ ಹೇಗೆ, ಯಾವ ರೀತಿಯ ಕೆಲಸಗಳನ್ನು ಪಡೆದುಕೊಳ್ಳಬಹುದು, ಮಾಡಿಸಿಕೊಳ್ಳಬಹುದು ಎಂಬುದನ್ನು ಬಹಳ ಚೆನ್ನಾಗಿ ಅರಿತವರಾಗಿರುತ್ತಾರೆ. 

ಇನ್ನೊಬ್ಬರ ಚಿಂತನೆ ಅರಿಯುವ ಶಕ್ತಿ
ಪಾದಾಂಕ 5 ರ ವಿಶೇಷ ಗುಣವೇನೆಂದರೆ ಇನ್ನೊಬ್ಬರ ಮನಸ್ಸಿನಲ್ಲಿರುವುದನ್ನು ಬಹುಬೇಗ ಅರಿತುಕೊಳ್ಳುವುದು. ಎದುರಿನ ವ್ಯಕ್ತಿಯ ಮನಸ್ಸಿನಲ್ಲಿ ಯಾವ ರೀತಿಯ ಚಿಂತನೆಗಳು ಇವೆ ಎಂಬುದು ಇವರ ಅಂತರಂಗಕ್ಕೆ ತಿಳಿದುಬಿಡುವ ವಿಶೇಷ ಶಕ್ತಿಯನ್ನು ಇವರು ಹೊಂದಿದ್ದಾರೆ. ಹಲವಾರು ವಿಷಯಗಳ ಜ್ಞಾನ ಸಹ ಇವರಿಗೆ ಇರುತ್ತದೆ. 

ಇದನ್ನು ಓದಿ:

ಬುದ್ಧಿವಂತಿಕೆಯಿಂದ ಎಲ್ಲವನ್ನೂ ಪಡೆವವರು
ಇವರಿಗೆ ಬುದ್ಧಿವಂತಿಕೆಯೇ ಮೂಲ ಆಧಾರ. ಹೀಗಾಗಿ ತಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಶಕ್ತಿಯನ್ನು ಇವರು ಹೊಂದಿರುತ್ತಾರೆ. ಇವರ ಬುದ್ಧಿವಂತಿಕೆ ಮೇಲೆ ಜೀವನದಲ್ಲಿ ಏನನ್ನು ಬೇಕಾದರೂ ಪಡೆದುಕೊಳ್ಳುವ ದಕ್ಷತೆಯನ್ನು ಸಹ ಹೊಂದಿರುತ್ತಾರೆ. 

ಆರ್ಥಿಕ ಸ್ಥಿತಿಯಲ್ಲಿಯೂ ಉತ್ತಮ
ಇವರ ಆರ್ಥಿಕ ಸ್ಥಿತಿ ಸಹ ಯಾವಾಗಲೂ ಉತ್ತಮವಾಗಿರಲಿದ್ದು, ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಹೊಸ ಹೊಸ ವಿಚಾರಗಳು ಇವರ ತಲೆಯಲ್ಲಿ ಸದಾ ಓಡುತ್ತಿರುತ್ತದೆ. ಹೀಗಾಗಿ ಹೊಸತನ್ನು ಪ್ರಾರಂಭಿಸಿ ಅದರಿಂದ ಉತ್ತಮ ಲಾಭವನ್ನು ಪಡೆದುಕೊಳ್ಳುವ ಚಾಕಚಕ್ಯತೆ, ಚಾಣಾಕ್ಷತೆ ಇವರಲ್ಲಿರುತ್ತದೆ. ಹೀಗಾಗಿ ಸದಾ ಧನಲಾಭ ಇವರಿಗಾಗುತ್ತಿರುತ್ತದೆ. ಆದ್ದರಿಂದ ಇವರಿಗೆ ಯಾವಾಗಲೂ ದುಡ್ಡಿನ ಕೊರತೆ ಎಂಬುದು ಕಾಡುವುದೂ ಇಲ್ಲ.

ಇದನ್ನು ಓದಿ: ಬುಧನ ರಾಶಿ ಪರಿವರ್ತನೆಯಿಂದ ಈ ರಾಶಿಯವರಿಗೆ ಶುಭ ಯೋಗ, ನಿಮ್ಮ ರಾಶಿ ಇದೆಯಾ..? 

ಬಾಂಧವ್ಯ ಹೊಂದುತ್ತಾರೆ, ಸ್ನೇಹ ಮರೆಯುತ್ತಾರೆ..!
ಈ ಪಾದಾಂಕವನ್ನು ಹೊಂದಿರುವವರು ಬಾಂಧವ್ಯವನ್ನು ಹೊಂದುವಲ್ಲಿ, ಅದನ್ನು ಕಾಪಾಡಿಕೊಳ್ಳುವಲ್ಲಿ ನಿಸ್ಸೀಮರು. ಹೀಗಾಗಿ ಎಲ್ಲರ ಜೊತೆಗೆ ಸಹ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ. ಬೇಗ ಸ್ನೇಹಿತರನ್ನು ಮಾಡಿಕೊಳ್ಳುವ ಗುಣ ಇವರದ್ದಾಗಿರುತ್ತದೆ. ಆದರೆ, ಎಷ್ಟು ಬೇಗ ಸ್ನೇಹವನ್ನು ಸಂಪಾದಿಸುತ್ತಾರೋ, ಅಷ್ಟೇ ಬೇಗ ಕೆಲವರ ಸ್ನೇಹವನ್ನು ಮರೆತುಬಿಡುವ ಗುಣವೂ ಇವರಲ್ಲಿರುತ್ತದೆ. ಇದರ ಜೊತೆ ಜೊತೆಗೆ ಸ್ನೇಹಿತರಿಂದ ಬಹಳ ಲಾಭವನ್ನು ಸಹ ಇವರು ಪಡೆದುಕೊಳ್ಳುತ್ತಾರೆ. 

ಪ್ರೇಮಕ್ಕಿಲ್ಲ ಗ್ಯಾರಂಟಿ..!
ಇನ್ನು ಪ್ರೇಮ ವಿಚಾರಕ್ಕೆ ಬಂದರೆ ಇವರು ದುಂಬಿಯ ಸ್ವಭಾವ. ಒಬ್ಬರನ್ನೇ ಪ್ರೀತಿಸುವ, ಅವರ ಜೊತೆಗೇ ಬಾಳಬೇಕೆನ್ನುವ ಮನೋಭಾವ ಇವರದ್ದಲ್ಲ. ಬಹುತೇಕರು ಪ್ರೇಮ ಸಂಬಂಧದಲ್ಲಿ ಸ್ಥಿತರಾಗಿರುವ ಗುಣವನ್ನು ಹೊಂದದೆ, ಒಬ್ಬರಾದ ಮೇಲೆ ಒಬ್ಬರು ಎಂಬಂತೆ ಬದಲಾವಣೆಯನ್ನು ಬಯಸುತ್ತಿರುತ್ತಾರೆ. ಹೀಗಾಗಿ ಇವರ ಮನಸ್ಥಿತಿ ಚಂಚಲವಾಗಿದ್ದು, ಬೇರೆ ಹುಡುಕಾಟದಲ್ಲಿ ನಿರತವಾಗಿರುತ್ತದೆ. 

Tap to resize

Latest Videos

click me!