ಹಸ್ತ ಸಾಮುದ್ರಿಕಾ ಶಾಸ್ತ್ರದಿಂದ ಆರಾಧಿಸುವ ದೇವರ ಬಗ್ಗೆ ತಿಳಿಯಬಹುದು. ಹಸ್ತ ರೇಖೆಗಳಿಂದ ಇಷ್ಟ ದೇವರ ಬಗ್ಗೆ ತಿಳಿದುಕೊಳ್ಳಬಹುದು. ಆ ದೇವರನ್ನು ಆರಾಧಿಸುವುದರಿಂದ ಜೀವನದಲ್ಲಿ ಸುಖ - ಸಮೃದ್ಧಿಯನ್ನು ಕಾಣಬಹುದಾಗಿದೆ. ಹಾಗಾದರೆ ಹಸ್ತರೇಖೆಯಿಂದ ಯಾವ ದೇವರನ್ನು ಆರಾಧಿಸಬೇಕು ಎಂಬುದರ ಬಗ್ಗೆ ತಿಳಿಯೋಣ.
ಹಸ್ತ ಸಾಮುದ್ರಿಕಾ ಶಾಸ್ತ್ರವು (Palmistry) ಜ್ಯೋತಿಷ್ಯ ಶಾಸ್ತ್ರದ (Astrology) ಒಂದು ಭಾಗವಾಗಿದೆ. ಇದರ ಮೂಲಕ ವ್ಯಕ್ತಿಯ ಭವಿಷ್ಯದ (Future) ಬಗ್ಗೆ ಹಲವು ವಿಚಾರಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು (Horoscope) ನೋಡುವಾಗ ಗ್ರಹಗಳ (Planet) ಸ್ಥಾನ, ಸ್ಥಿತಿ, ಪ್ರಭಾವಗಳ ಬಗ್ಗೆ ಸರಿಯಾಗಿ ಪರಿಶೀಲಿಸಬೇಕು. ಯಾವುದೇ ವ್ಯಕ್ತಿಯ ಭವಿಷ್ಯದಲ್ಲಿ ನಡೆಯಬಹುದಾದ ವಿಷಯ, ಯೋಗ, ಅದೃಷ್ಟಗಳ (Luck) ಬಗ್ಗೆ ಇದರಿಂದ ತಿಳಿಯಬಹುದಾಗಿದೆ. ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ವ್ಯಕ್ತಿ ಶರೀರದಲ್ಲಿನ ಚಿಹ್ನೆ, ರೇಖೆ, ಮಚ್ಚೆಗಳಿಂದ (Mole) ಭವಿಷ್ಯವನ್ನು ತಿಳಿಯಬಹುದು.
ಯಾವುದೇ ವ್ಯಕ್ತಿಗಾಗಿರಲಿ ಭವಿಷ್ಯಗಳು ಒಬ್ಬರಿಗಿಂತ ಇನ್ನೊಬ್ಬರಿಗೆ ಭಿನ್ನವಾಗಿಯೇ ಇರುತ್ತದೆ. ಇದಕ್ಕೆ ಬಹುಮುಖ್ಯವಾಗಿ ಗ್ರಹಗತಿಗಳು, ರಾಶಿಚಕ್ರಗಳು ಕಾರಣವಾಗಲಿದ್ದು, ಇದರನ್ವಯ ಅದೃಷ್ಟ, ದುರಾದೃಷ್ಟಗಳು ಬರುತ್ತವೆ. ಗ್ರಹಗತಿಗಳಿಗೆ ತಕ್ಕಂತೆ ಪೂಜಿಸಬೇಕಾದ, ಆರಾಧಿಸಬೇಕಾದ ದೇವತೆಗಳು ಸಹ ಬೇರೆ ಬೇರೆ ಆಗಿರುತ್ತದೆ. ಹೀಗಾಗಿ ಜಾತಕ ನೋಡಿ ಯಾವ ಗ್ರಹಗಳ ಉಪಾಸನೆ ಮಾಡುವುದರಿಂದ ಮತ್ತು ಗ್ರಹಗಳ ಅಧಿಪತಿ ದೇವತೆಗಳ ಆರಾಧನೆ ಮಾಡುವುದರಿಂದ ಒಳಿತಾಗುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿದುಕೊಳ್ಳಬಹುದಾಗಿದೆ.
ಹಸ್ತ ಸಾಮುದ್ರಿಕ ಶಾಸ್ತ್ರ ಅನುಸಾರ ವ್ಯಕ್ತಿಯ ಹಸ್ತದಲ್ಲಿರುವ ರೇಖೆಗಳನ್ನು ನೋಡಿ ಯಾವ ದೇವರನ್ನು ಪೂಜಿಸಿದರೆ ಯಶಸ್ಸು, ಸಂತಸ, ನೆಮ್ಮದಿ ಲಭಿಸುತ್ತದೆ ಎಂಬುದನ್ನು ತಿಳಿಯಬಹುದಾಗಿದೆ. ಕೆಲವರಿಗೆ ಇಷ್ಟದೇವತೆಗಳು ಇರುತ್ತಾರೆ. ಹಲವರು ಗಣಪತಿಯನ್ನು ಪೂಜಿಸಿದರ, ಮತ್ತೆ ಕೆಲವರು ಶಿವ, ಕೃಷ್ಣ, ರಾಮ (Lord Rama), ಆಂಜನೇಯ... ಹೀಗೆ ಹಲವು ದೇವರನ್ನು ಪೂಜೆ ಮಾಡುತ್ತಾರೆ. ಆರಾಧನೆ ಮಾಡುತ್ತಾರೆ. ಹೀಗೆ ತಮ್ಮ ಇಷ್ಟದೇವರನ್ನು ಪೂಜಿಸುವುದರ ಜೊತೆಗೆ ಅವರವರ ಹಸ್ತರೇಖೆಗೆ ಅನುಸಾರವಾಗಿ ಪೂಜಿಸಬೇಕು. ಶಿವನನ್ನು ಪೂಜಿಸಿದರೆ ಭಾಗ್ಯವಿರುತ್ತದೆ. ಆದರೆ, ಅವರು ಗಣಪತಿ ದೇವರನ್ನು (Lord Ganesha) ಮಾತ್ರ ಪೂಜಿಸುತ್ತಿರುತ್ತಾರೆ, ಇದರಿಂದ ಅವರಿಗೆ ಗಣಪತಿ ಕೃಪೆ ಪ್ರಾಪ್ತವಾಗುತ್ತಿದ್ದರೂ, ಶಿವನಿಂದ ದೊರೆಯ ಕೃಪಾಶೀರ್ವಾದ ಸಿಗದೆ ಏರುಗತಿಯನ್ನು ಕಾಣುವುದಿಲ್ಲ. ಹೀಗಾಗಿ ಅವರವರ ಅದೃಷ್ಟಕ್ಕೆ ಅಥವಾ ಭಾಗ್ಯವನ್ನು ತಂದು ಕೊಡುವ ದೇವರು ಯಾರು ಎಂಬುದನ್ನು ತಿಳಿದು ಪೂಜಿಸಿದರೆ ಒಳ್ಳೆಯದಾಗುತ್ತದೆ.
ಹಸ್ತಸಾಮುದ್ರಿಕಾ ಶಾಸ್ತ್ರದಲ್ಲಿ ಹಸ್ತರೇಖೆಯನ್ನು ನೋಡಿ ಯಾವ ದೇವರನ್ನು ಯಾರು ಪೂಜಿಸಿದರೆ ಒಳಿತಾಗುತ್ತದೆ ಎಂದು ತಿಳಿಯಬಹುದಾಗಿದ್ದು, ಅದರ ಬಗ್ಗೆ ತಿಳಿಯೋಣ..
ನಿಮಗೆ ಎಷ್ಟು ಮದುವೆಯಾಗೋ ಯೋಗವಿದೆ? ಜಾತಕ ಹೇಳುತ್ತೆ ಕೇಳಿ
ಹಸ್ತದ ರೇಖೆ ಬಗ್ಗೆ ಅರಿಯೋಣ
• ಜೀವನ ರೇಖೆ: ಹೆಬ್ಬೆರಳು - ತೋರು ಬೆರಳ ಮಧ್ಯದಿಂದ ಆರಂಭವಾಗಿ ಮಣಿಕಟ್ಟಿನ ವರೆಗೆ ಹೋಗಿರುವ ರೇಖೆಯನ್ನು ಜೀವನ ರೇಖೆ ಎನ್ನಲಾಗುತ್ತದೆ.
• ಮಸ್ತಿಷ್ಕ ರೇಖೆ: ಜೀವನ ರೇಖೆಯ ಮೇಲಿರುವ ರೇಖೆಯೇ ಮಸ್ತಿಷ್ಕ ರೇಖೆ ಎಂದು ಕರೆಯಲಾಗುವುದು.
• ಹೃದಯ ರೇಖೆ: ಕಿರುಬೆರಳ ಕೆಳಗಿನಿಂದ ಆರಂಭವಾಗಿ ತೋರು ಬೆರಳ ಕಡೆಗೆ ಹಾದುಹೋಗಿರುವ ರೇಖೆಯನ್ನು ಹೃದಯ ರೇಖೆ ಎನ್ನುತ್ತೇವೆ.
• ಭಾಗ್ಯ ರೇಖೆ: ಹಸ್ತದ ಮಧ್ಯ ಭಾಗದಲ್ಲಿರುವ ಅಂದರೆ ಮಣಿಕಟ್ಟಿನಿಂದ ಆರಂಭವಾಗಿ ಮಧ್ಯದ ಬೆರಳಿನ ಕಡೆಗೆ ಹಾದುಹೋಗಿರುವ ರೇಖೆಯನ್ನು ಭಾಗ್ಯ ರೇಖೆ ಎನ್ನಲಾಗುತ್ತದೆ.
ತ್ರಿಶೂಲದ ಚಿಹ್ನೆ ಇದ್ದರೆ
ಹಸ್ತಸಾಮುದ್ರಿಕಾ ಶಾಸ್ತ್ರದ ಪ್ರಕಾರ ಹಸ್ತದಲ್ಲಿ ಹೃದಯ ರೇಖೆಯಲ್ಲಿ ತ್ರಿಶೂಲದಂತಹ (Trident) ಚಿಹ್ನೆಯಿದ್ದರೆ, ಅಂಥವರು ಶಿವನನ್ನು (Lord Shiva) ಆರಾಧನೆ ಮಾಡಬೇಕು. ಹೀಗೆ ಮಾಡುವುದರಿಂದ ಜೀವನದಲ್ಲಿ (Life) ಕಷ್ಟಗಳಿಂದ ಮುಕ್ತಿ ಪಡೆಯಬಹುದು. ಹೃದಯ ರೇಖೆಯ ಕೊನೆಯಲ್ಲಿ ಒಂದು ರೇಖೆಯು ಗುರು ಪರ್ವತದ ಕಡೆಗೆ ಹಾದುಹೋದರೆ ಅಂಥವರು ಹನುಮಂತನನ್ನು ಪೂಜೆ ಮಾಡಬೇಕು. ಇದರಿಂದ ಮುಂಬರುವ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದಾಗಿದೆ.
ಸೂರ್ಯಗ್ರಹದ ಚಿಹ್ನೆ
ಹಸ್ತದಲ್ಲಿ ಸೂರ್ಯ ಗ್ರಹದ (Sun Planet) ಚಿಹ್ನೆ ಇದೆ ಎಂದಾದರೆ ಅಂಥವರು ಸೂರ್ಯನ ಆರಾಧನೆ ಮಾಡಬೇಕು. ಜೊತೆಗೆ ಭಾಗ್ಯ ರೇಖೆಯು ತುಂಡಾಗಿ, ಅದರಲ್ಲಿ ದೋಷ ಇದ್ದರೆ ಅಥವರು ಲಕ್ಷ್ಮೀ ದೇವಿಯನ್ನು (Goddess Laxmi) ಪೂಜೆ ಮಾಡಬೇಕು. ಲಕ್ಷ್ಮೀ ಮಂತ್ರವನ್ನು ಪಠಣೆ ಮಾಡುವುದರಿಂದ ಶುಭಫಲ ದೊರೆಯುತ್ತದೆ. ಜೀವನ ರೇಖೆ ಮತ್ತು ಭಾಗ್ಯ ರೇಖೆಯನ್ನು ಬೇರೆ ಯಾವುದೇ ದಪ್ಪಗಿನ ರೇಖೆಯು ತುಂಡರಿಸುವಂತೆ ಮಾಡಿದ್ದರೆ ಅಂಥಹ ವ್ಯಕ್ತಿಗಳು ಸಹ ಲಕ್ಷ್ಮೀದೇವಿಯನ್ನು ಪೂಜಿಸಿದರೆ ಒಳಿತಾಗತ್ತದೆ.
ವೃಶ್ಚಿಕ ರಾಶಿಯ ಮಕ್ಕಳು ಆತ್ಮವಿಶ್ವಾಸಿಗಳು, ನಿರ್ಭೀತರು, ಶತ್ರುಗಳಿಗೆ ಸಿಂಹಸ್ವಪ್ನ!
ಹೃದಯ ರೇಖೆ - ಮಸ್ತಿಷ್ಕ ರೇಖೆ
ಹೃದಯ ರೇಖೆ ಮತ್ತು ಮಸ್ತಿಷ್ಕ ರೇಖೆ ಒಂದುಗೂಡಿದ್ದರೆ ಇಲ್ಲವೇ ಮಸ್ತಿಷ್ಕ ರೇಖೆ ಮಂಗಳ ಕ್ಷೇತ್ರದವರೆಗೆ ಹಾದುಹೋಗಿದ್ದರೆ ಅಂಥ ವ್ಯಕ್ತಿಗಳು ಕೃಷ್ಣನನ್ನು ಆರಾಧನೆ ಮಾಡಬೇಕು ಎನ್ನುತ್ತದೆ ಹಸ್ತಸಾಮುದ್ರಿಕಾ ಶಾಸ್ತ್ರ. ಹೃ(Lord Krishna) ದಯ ರೇಖೆ ತುಂಡಾಗಿದ್ದರೆ ಇಲ್ಲವೇ ಅದರಿಂದ ಹಲವು ರೇಖೆಗಳು ಕವಲೊಡೆದು ಮಸ್ತಿಷ್ಕ ರೇಖೆಯೆಡೆಗೆ ಹಾದುಹೋಗಿದ್ದರೆ ಅಂಥವರು ಭಗವತಿ ದೇವಿಯನ್ನು (Bhagavati Devi) ಆರಾಧನೆ ಮಾಡಬೇಕು. ಹೀಗೆ ಮಾಡಿದರೆ ದೇವರ ಅನುಗ್ರಹ ಪ್ರಾಪ್ತವಾಗುತ್ತದೆ.