ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ?: ಅಶ್ವತ್ಥ ವೃಕ್ಷವನ್ನು ನಿತ್ಯ ಪೂಜಿಸಿ ಸುಖ ಸಂಸಾರ ನಡೆಸಿ...

By Sushma Hegde  |  First Published Jun 2, 2023, 12:32 PM IST

 ಹಿಂದೂ ಧರ್ಮದಲ್ಲಿ ಗಿಡ-ಮರಗಳಿಗೂ ದೇವರ ಸ್ಥಾನ ನೀಡಲಾಗಿದೆ. ಅನೇಕ ಮರಗಳನ್ನು ನಾವು ಪೂಜೆ ಮಾಡುತ್ತೇವೆ. ಅಂತಹ ಮರಗಳಲ್ಲಿ ಒಂದು ಪವಿತ್ರವಾದ ಮರ ಎಂದರೆ ಅಶ್ವತ್ಥ ಮರ. ನೀವು ಮದುವೆಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ ಈ ಅಶ್ವತ್ಥ  ಮರದಿಂದ ತೊಂದರೆ ದೂರಾಗಲಿದೆ. 
 


ನಮ್ಮ ಹಿಂದೂ ಧರ್ಮದಲ್ಲಿ ಗಿಡ-ಮರಗಳಿಗೂ ದೇವರ ಸ್ಥಾನ ನೀಡಲಾಗಿದೆ. ಅನೇಕ ಮರಗಳನ್ನು ನಾವು ಪೂಜೆ ಮಾಡುತ್ತೇವೆ. ಅಂತಹ ಮರಗಳಲ್ಲಿ ಒಂದು ಪವಿತ್ರವಾದ ಮರ ಎಂದರೆ ಅಶ್ವತ್ಥ ಮರ (Peepul Tree). ಈ ಮರದಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಿಕೆಯಿದ್ದು, ಇದರಲ್ಲಿ ಹಲವಾರು ಔಷಧೀಯ ಗುಣ (Medicinal quality)ಗಳಿವೆ. ಈ ಮರದ ಆದಿ ಕಾಲದಲಲ್ಲಿ ಕೆಳಗೆ ಋಷಿಗಳು ತಪಸ್ಸು ಮಾಡಿ ಜ್ಞಾನಾರ್ಜನೆ ಪಡೆಯುತ್ತಿದ್ದರು. ಇಂತಹ ಶಕ್ತಿ ಹೊಂದಿರುವ ಈ ಮರವನ್ನು ಪೂಜಿಸಿದರೆ ಸಾಕಷ್ಟು ಅನುಕೂಲಗಳು ಆಗಲಿದ್ದು, ಸಮಸ್ಯೆಗಳು ದೂರಾಗಲಿವೆ.

ಪುರಾಣ ಕಾಲದಿಂದಲೂ ಅಶ್ವತ್ಥ ಮರ ಮರಕ್ಕೆ ವಿಶಿಷ್ಟ ಪ್ರಾಮುಖ್ಯತೆ (Importance)ಇದೆ. ಹಿಂದೂ ಧರ್ಮಗ್ರಂಥಗಳಲ್ಲಿ ಅಶ್ವತ್ಥ ಮರವನ್ನು ದೇವರ ಮರ ಎಂದು ಕರೆಯಲಾಗುತ್ತದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು  ಅಶ್ವತ್ಥ  ಮರದ ಮೇಲೆ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಬ್ರಹ್ಮ ಪುರಾಣ (Brahma Purana)ದ ಒಂದರಲ್ಲಿ ಹೇಳಿದಂತೆ, ಶನಿವಾರದಂದು ನಿಯಮಿತವಾಗಿ  ಅಶ್ವತ್ಥ ಮರವನ್ನು ಪೂಜಿಸುವವರಿಗೆ ಯಶಸ್ಸು ಸಿಗುತ್ತದೆ ಮತ್ತು ಅವರ ಕಷ್ಟಗಳು ದೂರವಾಗುತ್ತವೆ ಎಂದು ಸ್ವತಃ ಶನಿ ದೇವರು ಹೇಳುತ್ತಾನೆ. ಆದರೆ ನೀವು ಮದುವೆ (marriage)ಯಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅಶ್ವತ್ಥ  ಮರದಿಂದ ತೊಂದರೆ ದೂರಾಗಲಿದೆ. 

Tap to resize

Latest Videos

ಶನಿವಾರ (Saturday)ದಂದು  ಅಶ್ವತ್ಥ ಮರಕ್ಕೆ ಹಾಲು ಮತ್ತು ಸ್ವಲ್ಪ ಎಳ್ಳನ್ನು ಕಲಶದಲ್ಲಿ ಅರ್ಪಿಸಿ ಓಂ ನಮೋ ಭಗತ್ವೇ ವಾಸುದೇವೇ ನಮಃ ಎಂದು ಜಪಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ (Prosperity)ಉಂಟಾಗುತ್ತದೆ ಮತ್ತು ದಾಂಪತ್ಯದಲ್ಲಿನ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ .

ಪ್ರತಿ ಶನಿವಾರದಂದು ಸ್ನಾನದ ನಂತರ,  ಅಶ್ವತ್ಥ  ಮರಕ್ಕೆ ನೀರನ್ನು ಅರ್ಪಿಸಬೇಕು. ಇದರೊಂದಿಗೆ ಸಾಸಿವೆ ಎಣ್ಣೆ (Mustard oil)ಯಿಂದ ದೀಪವನ್ನು ಹಚ್ಚಬೇಕು ಮತ್ತು  ಅಶ್ವತ್ಥ ಮರದ ಸುತ್ತ ಐದು ಸುತ್ತು ಪ್ರದಕ್ಷಿಣೆಗಳನ್ನು ಮಾಡಬೇಕು. ಇದರಿಂದ ಶನಿದೋಷ (Shani Dosha) ದೂರವಾಗಿ ವಿವಾಹ ಯೋಗಗಳು ಮೇಳೈಸುತ್ತವೆ. ಶನಿವಾರದಂದು ಅಶ್ವತ್ಥ  ಮರಕ್ಕೆ ಬೆಲ್ಲ ಮತ್ತು ಹಾಲನ್ನು ಒಟ್ಟಿಗೆ ಅರ್ಪಿಸಿ, ಇದು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತದೆ ಮತ್ತು ನಂತರ ಅಶ್ವತ್ಥ ಮರವನ್ನು ಮುಟ್ಟಿ ನಮಸ್ಕಾರ ಮಾಡಿ.

ಶನಿವಾರದಂದು,  ಅಶ್ವತ್ಥ ಮರವನ್ನು ಎರಡೂ ಕೈಗಳಿಂದ ಮುಟ್ಟಿ ನಮಸ್ಕರಿಸಿ ಮತ್ತು 108 ಬಾರಿ 'ಓಂ ನಮ್: ಶಿವಾಯ' ಮಂತ್ರವನ್ನು ಜಪಿಸಿ. ಈ ಮೂಲಕ ಜಾತಕ (Horoscope)ದಲ್ಲಿರುವ ಗ್ರಹದೋಷಗಳು ನಿವಾರಣೆಯಾಗಿ ವಿವಾಹ ಯೋಗ ಹೊಂದಾಣಿಕೆಯಾಗುತ್ತದೆ.

ತುಲಾ ರಾಶಿಯವರಿಗೆ ಯಾರು ಉತ್ತಮ ಸಂಗಾತಿ...?

 

ಅಶ್ವತ್ಥ ಮರವನ್ನು ಹೇಗೆ ಪೂಜಿಸಬೇಕು?

ಅಶ್ವತ್ಥ ಮರವನ್ನು ಪೂಜಿಸಲು ಸೂರ್ಯೋದಯ (sunrise)ಕ್ಕೆ ಮುಂಚೆ ಎದ್ದು ಸ್ನಾನ ಮಾಡಬೇಕು. ಪೂಜೆಯ ಪ್ರಾರಂಭದಲ್ಲಿ  ಅಶ್ವತ್ಥ ಮರಕ್ಕೆ ಹಸುವಿನ ಹಾಲು, ಎಳ್ಳು ಮತ್ತು ಶ್ರೀಗಂಧವನ್ನು ಬೆರೆಸಿದ ನೀರನ್ನು ಅರ್ಪಿಸಿ. ನೀರನ್ನು ಅರ್ಪಿಸಿದ ನಂತರ, ಹೂವುಗಳು, ನೈವೇದ್ಯಗಳು ಮತ್ತು ಇತರ ಪೂಜಾ ಸಾಮಗ್ರಿಗಳನ್ನು ಅರ್ಪಿಸಿ. ಆ ನಂತರ ಧೂಪ-ದೀಪವನ್ನು ತೋರಿಸಿ ದೀಪವನ್ನು ಬೆಳಗಿಸುವುದು ಅತ್ಯಂತ ಪ್ರಮುಖ ಕಾರ್ಯವಾಗಿದೆ. ಕುಳಿತಾಗ ಅಥವಾ ನಿಂತಿರುವಾಗ ಮಂತ್ರ (Mantra)ವನ್ನು ಪಠಿಸಿ.

ಶಾಸ್ತ್ರದ ಪ್ರಕಾರ  ಅಶ್ವತ್ಥ  ಪೂಜೆಯನ್ನು ಯಾವಾಗಲೂ ಸೂರ್ಯೋದಯದ ನಂತರ ಮಾಡಬೇಕು.ಅಶ್ವತ್ಥ  ಮರ (Peepul Tree)ವನ್ನು ಪೂಜಿಸುವ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಶತ್ರು (enemy)ಗಳೂ ನಾಶವಾಗುತ್ತಾರೆ. ಅಶ್ವತ್ಥ ಮರ ಆರಾಧಿಸುವುದರಿಂದ ಗ್ರಹದೋಷಗಳು, ಅಡೆತಡೆಗಳು, ಕಾಲ ಸರ್ಪದೋಷಗಳು, ಪಿತೃದೋಷಗಳು ಸಹ ಶಾಂತವಾಗುತ್ತವೆ.
 

click me!