ಮಂಗಳವಾರ ಆಂಜನೇಯನನ್ನು ಹೀಗೆ ಪೂಜಿಸಿದ್ರೆ ನಿಮ್ಮೆಲ್ಲ ಸಮಸ್ಯೆಗಳಿಂದ ಮುಕ್ತಿ

By Suvarna NewsFirst Published Aug 23, 2022, 1:23 PM IST
Highlights

ಆಂಜನೇಯನಿಗೆ ಸಂಕಟಮೋಚನ ಎನ್ನುವುದು ಸುಮ್ಮನೆಯಲ್ಲ. ನಂಬಿ ಬಂದವರ ಸಂಕಟಗಳನ್ನು ತೊಡೆದು ಹಾಕುವ ಆತ ಭಕ್ತರ ಪ್ರೀತಿಗೆ ಬೇಗ ಕರಗುತ್ತಾನೆ. ಆಂಜನೇಯನನ್ನು ಮೆಚ್ಚಿಸಲು ಮಂಗಳವಾರ ಹೀಗೆ ಮಾಡಿ..

ಸಂಕಟಮೋಚನ ಹನುಮನನ್ನು ಕಲಿಯುಗದ ರಾಜ ಎಂದು ಕರೆಯುತ್ತಾರೆ. ಹಿಂದೂ ಧರ್ಮದಲ್ಲಿ, ಪ್ರತಿ ದೇವತೆಯ ಪೂಜೆಗೆ ನಿಗದಿತ ದಿನವಿದೆ. ಅದೇ ರೀತಿ ಹನುಮಂತನನ್ನು ಪೂಜಿಸಲು ಮಂಗಳಕರ ದಿನ ಈ ಮಂಗಳವಾರ. ಇದೇನು ಅತಿಶಯೋಕ್ತಿಯಲ್ಲ, ಯಾರು ಹನುಮಂತನನ್ನು ಮನಃಪೂರ್ವಕವಾಗಿ ಪೂಜಿಸುತ್ತಾರೋ ಅವರ ದಾರಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ.

ಹನುಮನನ್ನು ಯಾವುದೇ ಸಮಯದಲ್ಲಿ ಪೂಜಿಸಬಹುದು, ಅವರ ಕೃಪೆ ಯಾವಾಗಲೂ ನಮ್ಮ ಮೇಲೆ ಇರುತ್ತದೆ. ಹಿಂದೂ ಧರ್ಮದಲ್ಲಿ, ಆಂಜನೇಯನನ್ನು ಶಿವನ ಅವತಾರವೆಂದು ಪರಿಗಣಿಸಲಾಗುತ್ತದೆ. ಮಂಗಳವಾರ ಅಷ್ಟಸಿದ್ಧಿ ಮತ್ತು ನವನಿಧಿಯನ್ನು ಕೊಡುವ ಹನುಮಂತನ ಜೊತೆಗೆ ಮಂಗಳ ಪುತ್ರನ ಆಶೀರ್ವಾದವೂ ಸುರಿಯುತ್ತದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಮಂಗಳವಾರ ಮತ್ತು ಶನಿವಾರವನ್ನು ಬಜರಂಗಬಲಿಯ ದಿನವೆಂದು ಪರಿಗಣಿಸಲಾಗುತ್ತದೆ. ಮಂಗಳವಾರದಂದು ಭಗವಾನ್ ಹನುಮಾನ್ ಮತ್ತು ಕುಜ ಗ್ರಹದ ಆಶೀರ್ವಾದವನ್ನು ಪಡೆಯಲು ಅವರನ್ನು ಪೂಜಿಸುವ ಸರಳ ಮತ್ತು ಪರಿಣಾಮಕಾರಿ ವಿಧಾನದ ಬಗ್ಗೆ ವಿವರವಾಗಿ ತಿಳಿಯೋಣ.

ಮಂಗಳವಾರದ ಪೂಜೆ
ಹನುಮಂತನಿಗೆ ಸಿಂಧೂರ ಎಂದರೆ ತುಂಬಾ ಇಷ್ಟ. ಅವನ ಆಶೀರ್ವಾದ ಪಡೆಯಲು, ದೇವಸ್ಥಾನಕ್ಕೆ ಹೋಗಿ ಮತ್ತು ಹನುಮಾನ್ ಜಿಗೆ ಹಳದಿ ಸಿಂಧೂರದ ಹಾಳೆಯನ್ನು ಹಾಕಿ. ಹೀಗೆ ಮಾಡುವುದರಿಂದ ಶ್ರೀರಾಮ ಭಕ್ತ ಹನುಮಂತನಿಗೆ ತುಂಬಾ ಸಂತೋಷವಾಗುತ್ತದೆ. ಸಿಂಧೂರವನ್ನು ಅರ್ಪಿಸುವುದರಿಂದ ಎಲ್ಲ ದುಃಖಗಳಿಂದ ಮುಕ್ತಿ ಸಿಗುತ್ತದೆ ಮತ್ತು ಜೀವನದ ಭಯ ದೂರವಾಗುತ್ತದೆ.

ಭಾದ್ರಪದ ಮಾಸ ಯಾವಾಗ ಆರಂಭ, ಹಬ್ಬಹರಿದಿನಗಳೇನು, ಮಹತ್ವವೇನು?

ಸಂಪತ್ತು ಹೆಚ್ಚಳಕ್ಕಾಗಿ
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಹಣದ ಕೊರತೆ ಇರಬಾರದು ಎಂದು ಬಯಸುತ್ತಾನೆ. ಸಂಪತ್ತಿನ ಈಡೇರಿಕೆಗಾಗಿ ಶ್ರಮಿಸುತ್ತಾನೆ. ಮಂಗಳವಾರ ಬೆಳಗ್ಗೆ ಆಲದ ಮರದ ಎಲೆಯನ್ನು ಕಿತ್ತು ಗಂಗಾಜಲದಿಂದ ತೊಳೆದು ಹನುಮಂತನಿಗೆ ಅರ್ಪಿಸಿದರೆ ಸಂಪತ್ತು ಸಿಗುತ್ತದೆ. ಹೀಗೆ ಮಾಡುವುದರಿಂದ ಹನುಮಂತನ ಕೃಪೆಯೊಂದಿಗೆ ತಾಯಿ ಲಕ್ಷ್ಮಿಯ ಕೃಪೆಯೂ ಉಳಿಯುತ್ತದೆ.

ಮಂಗಳವಾರದ ಕ್ರಮ
ಆಂಜನೇಯನ ಆರಾಧನೆಯಲ್ಲಿ ಬ್ರಹ್ಮಚರ್ಯವನ್ನು ಅನುಸರಿಸಿ. ಈ ದಿನ ನೀವು ಯಾರನ್ನೂ ನೋಯಿಸಬಾರದು. ಈ ದಿನದಂದು ನೀವು ಹನುಮಾನ್ ಚಾಲೀಸಾವನ್ನು ಭಕ್ತಿ ಮತ್ತು ನಂಬಿಕೆಯಿಂದ ಏಳು ಬಾರಿ ಪಠಿಸಬೇಕು. ಇದನ್ನು ಮಾಡುವ ವ್ಯಕ್ತಿಯ ಮೇಲೆ ಭಜರಂಗಿಯ ವಿಶೇಷ ಆಶೀರ್ವಾದಗಳು ಸುರಿಯುತ್ತವೆ ಮತ್ತು ಅವನ ಜೀವನದಲ್ಲಿ ಯಾವುದೇ ಭಯ ಅಥವಾ ದುಃಖವಿರುವುದಿಲ್ಲ. ಅವನ ಜೀವನದಲ್ಲಿ ಸಾಕಷ್ಟು ಸಂತೋಷವಿರುತ್ತದೆ.

ಭಗವಾನ್ ರಾಮನ ಸೇವೆಯಲ್ಲಿ ಮಗ್ನವಾಗಿರುವ ಆಂಜನೇಯನನ್ನು ಆರಾಧಿಸುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಉಜ್ವಲ ಭವಿಷ್ಯ ಮತ್ತು ಕುಟುಂಬಕ್ಕೆ ಸಂಪೂರ್ಣವಾಗಿ ಸಮರ್ಪಿತನಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಮತ್ತು ಸಂತೋಷವನ್ನು ಪಡೆಯುತ್ತಾನೆ. ಎಲ್ಲೆಲ್ಲೂ ಪ್ರಗತಿ ಖಚಿತವಾಗುತ್ತದೆ. ಮಂಗಳವಾರದಂದು ಆಂಜನೇಯನ ಆರಾಧನೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಸುಂದರಕಾಂಡ ಪಠಣ
ಮಂಗಳವಾರದಂದು ಸುಂದರಕಾಂಡವನ್ನು ಓದುವುದು ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ ಶ್ರೀ ರಾಮಚರಿತ ಮಾನಸದ ಸುಂದರಕಾಂಡವನ್ನು ಪಠಿಸುವುದರಿಂದ ಭಗವಾನ್ ಹನುಮಾನ್ ಮಾತ್ರವಲ್ಲದೆ ಶ್ರೀರಾಮನ ಆಶೀರ್ವಾದವೂ ದೊರೆಯುತ್ತದೆ ಎಂದು ನಂಬಲಾಗಿದೆ.

ಗಣೇಶ ಚತುರ್ಥಿ 2022: ಮೂರ್ತಿ ಪ್ರತಿಷ್ಠಾಪನೆ ಸಮಯ ಈ ತಪ್ಪು ಖಂಡಿತಾ ಮಾಡ್ಬೇಡಿ!

ಭಗವಾನ್ ಹನುಮಂತನನ್ನು ಹಲವು ರೂಪಗಳಲ್ಲಿ ಪೂಜಿಸಲಾಗುತ್ತದೆ. ಈಗಿನ ಕಾಲವನ್ನು ನೋಡಿದರೆ ಮನಸ್ಸು ಶಾಂತವಾಗಿರಲು ಧ್ಯಾನ ಭಂಗಿಯಲ್ಲಿರುವ ಹನುಮಂತನ ಚಿತ್ರವನ್ನು ಪೂಜಿಸಬೇಕು. ಈ ರೀತಿ ಮಾಡುವುದರಿಂದ ವ್ಯಕ್ತಿಯು ಶಕ್ತಿ ಮತ್ತು ಮನಸ್ಸಿನ ಶಾಂತಿಯನ್ನು ಪಡೆಯುತ್ತಾನೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!