Astrology Tips: ಫ್ಯಾಷನ್ ಅಂತ ಬಣ್ಣ ಬಣ್ಣದ ಚಪ್ಪಲಿ ಹಾಕ್ಗೊಳ್ಬೇಡಿ

By Suvarna NewsFirst Published Aug 23, 2022, 12:25 PM IST
Highlights

ಚಪ್ಪಲಿಯಲ್ಲಿ ಎಷ್ಟು ವೆರೈಟಿ ಇದೆ ಅಂತಾ ಕೇಳಿದ್ರೆ ಹೋಳೋದು ಅಸಾಧ್ಯ. ಮಾರುಕಟ್ಟೆಗೆ  ಬಣ್ಣ ಬಣ್ಣದ ಚಪ್ಪಲಿಗಳು ಲಗ್ಗೆ ಇಡ್ತಿರುತ್ತವೆ. ಫ್ಯಾಷನ್ ಚೇಂಜ್ ಆದಂತೆ, ಡ್ರೆಸ್ ಬದಲಾದಂತೆ ಜನರು ಚಪ್ಪಲಿ ಬದಲಿಸ್ತಾರೆ. ಆದ್ರೆ ಬಣ್ಣದ ಚಪ್ಪಲಿ ಧರಿಸೋದು ಜ್ಯೋತಿಷ್ಯದ ಪ್ರಕಾರ ಸೂಕ್ತವಲ್ಲ. 
 

ಈಗಿನ ಕಾಲದಲ್ಲಿ ಫ್ಯಾಷನ್ ಬಹಳ ಇಂಪಾರ್ಟೆಂಟ್. ಫ್ಯಾಷನ್ ಬದಲಾಗ್ತಿರುತ್ತದೆ. ಜನರು ಕೂಡ ಹೊಸ ಟ್ರೆಂಡ್ ಗೆ ಹೊಂದಿಕೊಳ್ತಾರೆ. ಕೂದಲ ತುದಿಯಿಂದ ಕಾಲಿನವರೆಗೆ ನಾವು ಧರಿಸುವ ಎಲ್ಲವೂ ಗಮನ ಸೆಳೆಯಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಜಗತ್ತಿಗೆ ತಕ್ಕಂತೆ ನಾವು ಬದಲಾಗುವುದು ಅನಿವಾರ್ಯ ನಿಜ. ಆದ್ರೆ ಫ್ಯಾಷನ್ ಹೆಸರಿನಲ್ಲಿ ಕೆಲವೊಂದು ವಿಷ್ಯಗಳಲ್ಲಿ ತಪ್ಪು ಮಾಡಿದ್ರೆ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಚಪ್ಪಲಿಗಳಿವೆ. ಜನರು ತಮಗೆ ಇಷ್ಟವಾದ ಚಪ್ಪಲಿಯನ್ನು ಖರೀದಿ ಮಾಡ್ತಾರೆ. ಆಯಾ ಸಂದರ್ಭಕ್ಕೆ ತಕ್ಕಂತೆ ಚಪ್ಪಲಿ, ಶೂ ಧರಿಸ್ತಾರೆ. ಡ್ರೆಸ್ ಗೆ ಮ್ಯಾಚ್ ಆಗುವಂತೆ ಬಣ್ಣ ಬಣ್ಣದ ಚಪ್ಪಲಿ ಕೂಡ ಧರಿಸ್ತಾರೆ. ಆದ್ರೆ ಈ ಬಣ್ಣದ ಶೂ ಹಾಗೂ ಚಪ್ಪಲಿಗಳು ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ. ಜೀವನದಲ್ಲಿ ಒಳ್ಳೆಯ ಅಥವಾ ಕೆಟ್ಟ ಘಟನೆಗಳು ಗ್ರಹಗಳಿಗೆ ಸಂಬಂಧಿಸಿವೆ. ಜ್ಯೋತಿಷ್ಯದಲ್ಲಿ ಈ ವಿಷಯದ ಬಗ್ಗೆ ವಿವರವಾದ ವಿವರಣೆಯನ್ನು ನೀಡಲಾಗಿದೆ. ಗ್ರಹಗಳಿಗೆ ಅನುಗುಣವಾಗಿ ಚಪ್ಪಲಿ ಧರಿಸಬೇಕು. ಕೆಲವೊಂದು ಬಣ್ಣದ ಚಪ್ಪಲಿಗಳು ಗ್ರಹ ದೋಷಕ್ಕೆ ಕಾರಣವಾಗುತ್ತವೆ. ಇದ್ರಿಂದ ಸಾಕಷ್ಟು ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ. ಯಾವ ಬಣ್ಣದ ಚಪ್ಪಲಿ ಧರಿಸಬಾರದು ಎಂಬುದನ್ನು ನಾವಿಂದು ಹೇಳ್ತೇವೆ.

 ಬಣ್ಣ (Color) ಬಣ್ಣದ ಶೂ (Shoe) – ಚಪ್ಪಲಿ (Slippers) ಒಳ್ಳೆಯದಲ್ಲ : ಇಂದಿನ ಫ್ಯಾಶನ್ ಯುಗದಲ್ಲಿ, ಜನರು ವಿವಿಧ ಬಣ್ಣಬಣ್ಣದ ಶೂಗಳು ಮತ್ತು ಚಪ್ಪಲಿಗಳನ್ನು ಬಳಸುತ್ತಾರೆ. ಆದರೆ ಹಿಂದೆ  ಪ್ರಪಂಚದಾದ್ಯಂತ ಜನರು ಕಪ್ಪು (Black), ಕಂದು ಅಥವಾ ನೀಲಿ (Blue) ಬೂಟುಗಳನ್ನು ಮಾತ್ರ ಬಳಸುತ್ತಿದ್ದರು. ಇಂದು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಶೂ ಮತ್ತು ಚಪ್ಪಲಿಗಳು ಲಭ್ಯವಿವೆ. ಈ ಪಾದರಕ್ಷೆಗಳನ್ನು ಬಳಸುವುದರಿಂದ ಅನೇಕ ರೀತಿಯ ತೊಂದರೆ ಎದುರಾಗುತ್ತದೆ. 

Latest Videos

ಶನಿ ಅಮವಾಸ್ಯೆಯಂದು ಮಾಡಿ ಈ ಕೆಲಸ, ಗಳಿಸಿರಿ ಯಶಸ್ಸು

ಗ್ರಹಗಳ (Planets) ಪರಿಣಾಮ : ವಿವಿಧ ಬಣ್ಣದ ಶೂಗಳು ಮತ್ತು ಚಪ್ಪಲಿಗಳು ವಿವಿಧ ಗ್ರಹಗಳಿಗೆ ಸಂಬಂಧಿಸಿವ. 

ಜಾತಕ (Horoscope) ದಲ್ಲಿ ಚಂದ್ರ (Moon) ನು ಕೆಟ್ಟ ಸ್ಥಾನದಲ್ಲಿದ್ದರೆ, ಅಂತಹ ವ್ಯಕ್ತಿಗಳು ಬಿಳಿ ಬಣ್ಣದ ಬೂಟುಗಳನ್ನು ಧರಿಸುವುದನ್ನು ತಪ್ಪಿಸಬೇಕು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಇದಲ್ಲದೆ ಹಳದಿ (Yellow) ಬಣ್ಣವು ಗುರು ಗ್ರಹಕ್ಕೆ ಸಂಬಂಧಿಸಿದೆ. ಆದ್ದರಿಂದ ಹಳದಿ ಬಣ್ಣದ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸುವುದು ತೊಂದರೆಗಳನ್ನು ಆಹ್ವಾನಿಸಿದಂತೆ. ಹಳದಿ ಬಣ್ಣವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಅದಕ್ಕಾಗಿಯೇ ಅದನ್ನು ಪಾದರಕ್ಷೆಗಳ ರೂಪದಲ್ಲಿ ಧರಿಸುವುದನ್ನು ನಿಷೇಧಿಸಲಾಗಿದೆ.
 
ಹಳದಿ ಬಣ್ಣದ ಬೂಟುಗಳು, ಚಪ್ಪಲಿಗಳು ಅಥವಾ ಚಿನ್ನದ ಆಭರಣಗಳನ್ನು ಪಾದಗಳಿಗೆ ಧರಿಸುವುದು ಬಡತನ ಮತ್ತು ಜೀವನದಲ್ಲಿ ಅಡೆತಡೆಗಳಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ.
  
ಯಾವ ಬಣ್ಣದ ಬೂಟುಗಳನ್ನು ಧರಿಸಬೇಕು : ಶನಿಯು ವ್ಯಕ್ತಿಯ ಪಾದದಲ್ಲಿ ನೆಲೆಸಿದ್ದಾನೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.  ಶೂಗಳು ಮತ್ತು ಚಪ್ಪಲಿಗಳು ಶನಿ ಮತ್ತು ರಾಹು ಎರಡೂ ಗ್ರಹಗಳಿಗೆ ಸಂಬಂಧಿಸಿವೆ. ಯಾರ ರಾಶಿಯಲ್ಲಿ ಶನಿ ಮತ್ತು ರಾಹು ಉತ್ಕೃಷ್ಟರಾಗಿದ್ದಾರೆ, ಅಂತಹ ಜನರು ಪಾದರಕ್ಷೆ ಮತ್ತು ಚಪ್ಪಲಿ ವ್ಯಾಪಾರದಲ್ಲಿ ಪ್ರಗತಿಯನ್ನು ಪಡೆಯುತ್ತಾರೆ.

ಪತಿ- ಪತ್ನಿ ಸರಸ ಹೆಚ್ಚಾಗೋಕೆ ಬೆಡ್‌ರೂಮಿನಲ್ಲಿ ಈ ಕಲರ್‌ ಇರಲಿ!

ಹಾಗೆಯೇ ನಿಮ್ಮ ಜಾತಕದಲ್ಲಿ ಶನಿ ಅಥವಾ ರಾಹು ಉನ್ನತ ಸ್ಥಾನಮಾನವನ್ನು ಹೊಂದಿದ್ದರೆ ಆಗ ನೀವು  ಕಪ್ಪು ಪಾದಕ್ಷಯೆನ್ನು ಧರಿಸಬೇಕೆಂದು ಹೇಳಲಾಗಿದೆ.  ಇದಲ್ಲದೆ ಇಂಥ ವ್ಯಕ್ತಿಗಳು  ಕಂದು ಬಣ್ಣ ಮತ್ತು ನೀಲಿ ಬಣ್ಣದ ಶೂ ಅಥವಾ ಚಪ್ಪಲಿ ಮಾತ್ರ ಧರಿಸಬೇಕು. ಬೇರೆ ಬಣ್ಣದ ಚಪ್ಪಲಿಗಳನ್ನು ಇವರು ಧರಿಸಬಾರದು. ಇದ್ರಿಂದ ಸಂತೋಷಮಯ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ.   
 

click me!