ಅಪಘಾತದಲ್ಲಿ ಮೃತಪಟ್ಟ ಬಾಯ್‌ಫ್ರೆಂಡ್ ಭೂತದ ಜೊತೆ ಮದುವೆ: ಗೆಳತಿ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!

Published : Jul 26, 2024, 02:54 PM IST
ಅಪಘಾತದಲ್ಲಿ ಮೃತಪಟ್ಟ ಬಾಯ್‌ಫ್ರೆಂಡ್ ಭೂತದ ಜೊತೆ ಮದುವೆ: ಗೆಳತಿ ನಿರ್ಧಾರಕ್ಕೆ ಭಾರಿ ಮೆಚ್ಚುಗೆ!

ಸಾರಾಂಶ

ಭೀಕರ ಕಾರು ಅಪಘಾತದಲ್ಲಿ ಬಾಯ್‌ಫ್ರೆಂಡ್ ಮೃತಪಟ್ಟಿದ್ದಾನೆ. ಇದೀಗ ಚೇತರಿಸಿಕೊಂಡಿರುವ ಆತನ ಗೆಳತಿ ನಿರ್ಧಾರ ಎಲ್ಲರಿಗೆ ಅಚ್ಚರಿ ಜೊತೆಗೆ ಹೆಮ್ಮೆಯಾಗಿದೆ. ಬಾಯ್‌ಫ್ರೆಂಡ್ ಪ್ರೇತಾತ್ಮದ ಜೊತೆ ಮದುವೆಗೆ ನಿರ್ಧರಿಸಿದ್ದಾಳೆ. ಇದರ ಹಿಂದೆ ಒಂದು ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ.  

ತೈವಾನ್(ಜು.26) ಅತ್ಯಾಪ್ತರನ್ನು ಕಳೆದುಕೊಂಡ ನೋವು ಮಾಸುವುದಿಲ್ಲ. ಈ ನೋವಿನಿಂದ ಹೊರಬರಲು ಸಾಧ್ಯವಾಗದೇ ಹಲವರ ಬದುಕು ದುಸ್ತರವಾದ ಉದಾಹರಣೆಗಳಿವೆ. ತಮ್ಮ ಆಪ್ತರ ನೆನಪಿಗೆ ತಾಜ್‌ಮಹಲ್ ಸೇರಿದಂತೆ ಪ್ರೀತಿ ಸೌಧಗಳನ್ನು, ದೇವಸ್ಥಾನ ಕಟ್ಟಿರುವ ಹಲವು ಘಟನೆಗಳಿವೆ. ಇದೀಗ ಇಲ್ಲೊಬ್ಬ ಯುವತಿ ಅಪಘಾತದಲ್ಲಿ ಮೃತಪಟ್ಟ ಬಾಯ್‌ಫ್ರೆಂಡ್ ನೆನಪಿಗೆ, ಕಳೆದುಕೊಂಡ ನೋವಿನಿಂದ ಹೊರಬರಲು ಸಾಧ್ಯವಾಗದೆ ಆತನ ಪ್ರೇತಾತ್ಮದ ಜೊತೆ ಮದುವೆಯಾಗಲು ನಿರ್ಧರಿಸಿದ್ದಾಳೆ. ಮೃತಪಟ್ಟ ಬಾಯ್‌ಫ್ರೆಂಡ್ ಭೂತದ ಜೊತೆ ಮದುಗೆ ತಯಾರಿ ಮಾಡಿದ ಘಟನೆ ತೈವಾನ್‌ನಲ್ಲಿ ನಡೆದಿದೆ.

ಬಾಯ್‌ಫ್ರೆಂಡ್, ಆತನ ಸಂಬಂಧಿಕರ ಜೊತೆ ಯೂ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಭೀಕರ ಅಪಘಾತ ಸಂಭವಿಸಿತ್ತು. ಜುಲೈ 15ರಂದು ಸಂಭವಿಸಿದ ಈ ಅಪಘಾತದ ತೀವ್ರತಗೆ ಕಾರು ನಜ್ಜು ಗುಜ್ಜಾಗಿತ್ತು. ಯೂ ಹಾಗೂ ಆಕೆಯ ಬಾಯ್‌ಫ್ರೆಂಡ್ ಜೊತೆಗೆ ಸಂಬಂಧಿಕರು ಈ ಕಾರಿನಲ್ಲಿದ್ದರು. ಯೂ ಸಣ್ಣ ಪುಟ್ಟ ಗಾಯಗಳಿಂದ ಬದುಕುಳಿದರೆ, ಬಾಯ್‌ಫ್ರೆಂಡ್ ಬದುಕುಳಿಯಲಿಲ್ಲ. ಜೊತೆಗೆ ಇಬ್ಬರು ಸಂಬಂಧಿಕರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಈ ದೇಶದಲ್ಲಿ ಸತ್ತ ವ್ಯಕ್ತಿಯೊಂದಿಗೆ ಜೀವಂತ ವ್ಯಕ್ತಿಯ ಮದುವೆ ನಡೆಯುತ್ತೆ! ಎಲ್ಲಿರೋದು ಈ ಸಂಪ್ರದಾಯ?

ತನ್ನ ಬಾಯ್‌ಪ್ರೆಂಡ್ ಹಾಗೂ ಆಕೆಯ ಸಂಬಂಧಿಕರ ಪ್ರಾಣ ಉಳಿಸಲು ಈಕೆ ಇನ್ನಿಲ್ಲದ ಪ್ರಯತ್ನ ಮಾಡಿದ್ದಳು. ಆದರೆ ಪ್ರಯೋಜನವಾಗಿರಲಿಲ್ಲ. ಬಾಯ್‌ಫ್ರೆಂಡ್ ಇನ್ನಿಲ್ಲ ಅನ್ನೋದನ್ನು ಯೂಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗಾಯಗಳಿಂದ ಚೇತರಿಸಿಕೊಂಡಿರುವ ಯುವತಿ ಇದೀಗ ಗೆಳೆಯನ ಭೂತದ ಜೊತೆ ಮದುವೆಯಾಗಲು ನಿರ್ಧರಿಸಿದ್ದಾಳೆ. ಗೆಳತಿ ನಿರ್ಧಾರವನ್ನು ಆಪ್ತರು, ಕುಟುಂಬಸ್ಥರು ಪ್ರಶ್ನಿಸಿದ್ದಾರೆ. ಆದರೆ ಯೂ ಮಾತ್ರ ಗೆಳೆಯನ ಪ್ರೇತಾತ್ಮದ ಜೊತೆ ಮದುವೆಯಾಗಲು ಗಟ್ಟಿ ನಿರ್ಧಾರ ಮಾಡಿದ್ದಾಳೆ.

ತಾನು ಈ ರೀತಿ ಮದುವೆಯಾಗುವ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದಾಳೆ. ಬಾಯ್‌ಫ್ರೆಂಡ್ ಹಾಗೂ ಆತನ ಆಪ್ತ ಸಹೋದರ ಸಂಬಂಧಿಗಳು ಮೃತಪಟ್ಟಿದ್ದಾರೆ. ಇದೀಗ ಬಾಯ್‌ಫ್ರೆಂಡ್‌ನ ವಯಸ್ಸಾಗಿರುವ ತಾಯಿ ಏಕಾಂಗಿಯಾಗಿದ್ದಾರೆ. ಬಾಯ್‌ಫ್ರೆಂಡ್ ಭೂತದ ಜೊತೆ ಮದುವೆಯಾಗಿ ಆತನ ಮನೆಗೆ ತೆರಳುತ್ತೇನೆ. ಬಳಿಕ ಬಾಯ್‌ಫ್ರೆಂಡ್ ತಾಯಿಯನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾಳೆ. ಶ್ರೀಮಂತಿಕೆಯಲ್ಲಿ ಯೂ ತನ್ನ ಬಾಯ್‌ಫ್ರೆಂಡ್‌ಗಿಂತ ಉತ್ತಮವಾಗಿದ್ದಾರೆ.  ಯೂ ನಿರ್ಧಾರ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಭೂತದ ಜೊತೆ ಮದುವೆಗೆ ತಯಾರಿಗಳು ನಡೆಯುತ್ತಿದೆ. 

ಇಲ್ಲಿ ನಡೆಯುತ್ತೆ ಭೂತದ ಮದುವೆ, ಹೆಣ್ಣು ಶವಕ್ಕಿರುತ್ತೆ ಭಾರೀ ಬೇಡಿಕೆ, ಮಗಳ ಕಳೇಬರವನ್ನೇ ಮಾರಿದ ಅಪ್ಪ!

ತನ್ನ ಕಣ್ಣೆದುರೇ ಗೆಳೆಯ ಮೃತಪಟ್ಟಿದ್ದಾನೆ. ಈ ವರ್ಷ ಮದುವೆಯಾಗುವುದಾಗಿ ಗೆಳೆಯ ಹೇಳಿದ್ದ. ಇದೀಗ ನನ್ನ ಭವಿಷ್ಯವನ್ನೇ ರೂಪಿಸಿದ್ದ ಗೆಳೆಯ ಇಹಲೋಕ ತ್ಯಜಿಸಿದ್ದಾನೆ ಅನ್ನೋದು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಜೂ ಹೇಳಿದ್ದಾಳೆ. 
 

PREV
Read more Articles on
click me!

Recommended Stories

2026ರ ಭವಿಷ್ಯವಾಣಿ: ವರ್ಷದ ಮೊದಲ ಶುಭ ಯೋಗ 2026ರ ಮೊದಲ ದಿನ, ಈ 4 ರಾಶಿಗೆ ಸಂತೋಷ, ಅದೃಷ್ಟ
ಇಂದು ಬುಧವಾರ ಈ ರಾಶಿಗೆ ಶುಭ, ಅದೃಷ್ಟ