ಮಕರ ಸಂಕ್ರಾಂತಿ ಸ್ಪರ್ಧೆಯಲ್ಲಿ ಮಹೀಂದ್ರ ಥಾರ್, ಎನ್‌ಫೀಲ್ಡ್ ಬೈಕ್ ಗೆಲ್ಲುವ ಅವಕಾಶ

By Chethan Kumar  |  First Published Jan 14, 2025, 3:28 PM IST

ಮಹೀಂದ್ರ ಥಾರ್, ರಾಯಲ್ ಎನ್‌ಫೀಲ್ಡ್ ಗೆಲ್ಲಲು ಸುವರ್ಣ ಅವಕಾಶವಿದೆ. ಈ ಬಾರಿಯ ಮಕರ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಸ್ಪರ್ಧೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ಥಾರ್, ಎನ್‌ಫೀಲ್ಡ್ ಸೇರಿದಂತೆ ಹಲವು ಅತ್ಯಾಕರ್ಷಕ ಬಹುಮಾನ ಇಡಲಾಗಿದೆ.


ಕಾಕಿನಾಡ(ಜ.14) ದೇಶಾದ್ಯಂತ ಮಕರ ಸಂಕ್ರಾತಿ, ಲೊಹ್ರಿ, ಪೊಂಗಲ್ ಹಬ್ಬ ಆಚರಿಸಲಾಗುತ್ತಿದೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಇತ್ತ ಅಯ್ಯಪ್ಪ ಸ್ವಾಮಿ ಭಕ್ತರು ಸನ್ನಿಧಾನದಲ್ಲಿ ದರ್ಶನ ಪಡೆಯುತ್ತಿದ್ದಾರೆ. ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಕಳೆ ಗಟ್ಟಿದೆ. ಹಬ್ಬದ ಸಂಬ್ರಮ ಇಮ್ಮಡಿಗೊಳಿಸಲು ಈ ಬಾರಿ ಹಲವು ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇಷ್ಟೇ ಅಲ್ಲ ಹಲವು ವಿಶೇಷತೆಗಳೂ ಇವೆ. ಈ ಬಾರಿ ಮಕರ ಸಂಕ್ರಾಂತಿ ಹಬ್ಬಕ್ಕೆ ನಿಮಗೆ ಮಹೀಂದ್ರ ಥಾರ್, ರಾಯಲ್ ಎನ್‌ಫೀಲ್ಡ್ ಬೈಕ್ ಗೆಲ್ಲುವ ಅವಕಾಶವಿದೆ. ನೀವು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆದ್ದರೆ ನಿಮಗೆ ಅತ್ಯಾಕರ್ಷಕ ಬಹುಮಾನ ಸಿಗಲಿದೆ.

ಮಕರ ಸಂಕ್ರಾಂತಿ ಹಿನ್ನಲೆಯಲ್ಲಿ ಕೋಳಿ ಅಂಕ ಸ್ಪರ್ಧೆ ಆಯೋಜಿಸಲಾಗಿದೆ. ಆಂಧ್ರ ಪ್ರದೇಶದ ಹಲವು ಜಿಲ್ಲೆ, ಗ್ರಾಮಗಳಲ್ಲಿ ಕೋಳಿ ಅಂಕ ಸ್ಪರ್ಧೆ ಆಯೋಜಿಯಲಾಗಿದೆ. ಈ ಪೈಕಿ ಕಾಕಿನಾಡ ಜಿಲ್ಲೆ, ಕೃಷ್ಣ ಜಿಲ್ಲೆ ಸೇರಿದಂತೆ ಕೆಲ ಜಿಲ್ಲೆಗಳ ಕೋಳಿ ಅಂಕ ಸ್ಪರ್ದೆಯಲ್ಲಿ ದುಬಾರಿ ಮೌಲ್ಯದ ಬಹುಮಾನ ಇಡಲಾಗಿದೆ. ಕಾಕಿನಾಡ ಪೆನುಗುಡುರು ಗ್ರಾಮದಲ್ಲಿ ಈ ಕೋಳಿ ಅಂಕ ಸ್ಪರ್ಧೆ ಆಯೋಜಿಸಲಾಗಿದೆ. ಕಾಕಿನಾಡ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಕೋಳಿ ಅಂಕ ಸ್ಪರ್ಧೆ ಸಂಪ್ರದಾಯವಾಗಿದೆ. ಸಂಕ್ರಾಂತಿ ಹಬ್ಬದ ದಿನ ಇಡೀ ಗ್ರಾಮಸ್ಥರು ಇಲ್ಲಿ ಕೋಳಿ ಅಂಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ. ಈ ಮೂಲಕ ಪ್ರತಿ ವರ್ಷ ತಮ್ಮ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದಾರೆ.

Tap to resize

Latest Videos

ಸಂಕ್ರಾಂತಿ ಹಬ್ಬಕ್ಕೆ ಎಳ್ಳು ಬೀರುವುದೇಕೆ?

ಕಳೆದ ಕೆಲ ವರ್ಷಗಳಿಂದ ಸಂಕ್ರಾಂತಿ ಹಬ್ಬದ ಕೋಳಿ ಅಂಕ ಸ್ಪರ್ಧೆಯಲ್ಲಿ ಬಹುಮಾನಗಳನ್ನು ಆರಂಭಗೊಂಡಿದೆ. ಸಣ್ಣ ಪುಟ್ಟ ಬಹುಮಾನಗಳು , ನಗದು ಬಹುಮಾನಗಳ ಪದ್ಧತಿ ಆರಂಭಗೊಂಡಿತ್ತು. ಇದೀಗ ಅದ್ಧೂರಿ ಮಟ್ಟಕ್ಕ ತಲುಪಿದೆ. ಈ ಬಾರಿ ಮಹೀಂದ್ರ ಥಾರ್ ಕಾರು ಹಾಗೂ ರಾಯಲ್ ಎನ್‌ಫೀಲ್ಡ್ ಬೈಕ್ ಪ್ರಮುಖ ಬಹುಮಾನವಾಗಿ ಘೋಷಿಸಿದೆ. ಕಾಕಿನಾಡದಲ್ಲಿ ಮಹೀಂದ್ರ ಥಾರ್ ಬಹುಮಾನವಾಗಿ ನೀಡಲಾಗುತ್ತಿದೆ. ಇನ್ನು ಕೃಷ್ಣ ಜಿಲ್ಲೆಯ ಕೆಲ ಗ್ರಾಮದಲ್ಲಿ ಕೋಳಿ ಅಂಕ ಆಯೋಜಿಸಲಾಗಿದೆ. ಇಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್ ಬಹಮಾನವಾಗಿ ಇಡಲಾಗಿದೆ. ಇಲ್ಲಿ ಮತ್ತೊಂದು ವಿಶೇಷತೆ ಇದೆ. ಗನ್ನಾವರಮ, ಪೆನಮಾಲೂರು, ಮಚಲಿಪಟ್ಟಣಂ ಗ್ರಾಮಗಳಲ್ಲಿ 3 ದಿನ ಕೋಳಿ ಅಂಕ ಸ್ಪರ್ಧೆ ಆಯೋಜಿಸಲಾಗಿದೆ. ಪ್ರತಿ ದಿನ ಫೈನಲ್ ಗೆದ್ದವರಿಗೆ ರಾಯಲ್ ಎನ್‌ಫೀಲ್ಡ್ ನೀಡಲಾಗುತ್ತದೆ. ಇಲ್ಲಿ ಮೂರು ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನವಾಗಿ ನೀಡಲಾಗುತ್ತಿದೆ.

ವಿಶೇಷ ಅಂದರೆ ಹೈದರಾಬಾದ್, ಚೆನ್ನೈ, ಬೆಂಗಳೂರು ಸೇರಿದಂತೆ ದೂರದ ನಗರಗಳಿಂದಲೂ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಹಲವರು ಆಗಮಿಸಿದ್ದಾರೆ. ಸಂಪ್ರದಾಯದ ಜೊತೆಗೆ ಬಹುಮಾನ ಇದೆ ಎಂದು ಕೇಳಿದಾಗ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲೇಬೇಕು ಎಂದು ಇಲ್ಲಿಗೆ ಬಂದಿದ್ದೇವೆ ಎಂದು ಹಲವು ಸ್ಪರ್ಧಿಗಳು ಹೇಳಿದ್ದಾರೆ. ಸ್ಪರ್ಧೆಯಲ್ಲಿ ಬಿಟೆಕ್ ವಿದ್ಯಾರ್ಥಿ ವಸಂತ್ ರಾಮ್ ಕೂಡ ಪಾಲ್ಗೊಂಡಿದ್ದಾನೆ. ಪಾಕೆಟ್ ಮನಿಯಲ್ಲಿ ಕೋಳಿ ಖರೀದಿಸಿದ್ದೇನೆ. ರಾಯಲ್ ಎನ್‌ಫೀಲ್ಡ್ ಬೈಕ್ ನನ್ನ ಕನಸಿನ ಬೈಕ್ ಆಗಿದೆ. ಇದುವರೆಗೆ ಖರೀದಿಸಲು ಸಾಧ್ಯವಾಗಿಲ್ಲ. ಈ ಬಾರಿ ಕೋಳಿ ಅಂಕದಲ್ಲಿ ನನ್ನ ಕೋಳಿ ಗೆಲ್ಲುವ ವಿಶ್ವಾಸವಿದೆ. ಈ ಮೂಲಕ ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನದ ರೂಪದಲ್ಲಿ ಪಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾನೆ.

ಸ್ಥಳೀಯರು ಈ ಸ್ಪರ್ಧೆಗೆ ಅಂಪೈರ್‌ಗಳನ್ನು ನೇಮಸಿದ್ದಾರೆ. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದಿದ್ದಾರೆ. ಮಕರ ಸಂಕ್ರಾಂತಿ ಹಬ್ಬದ ಕೋಳಿ ಅಂಕ ಸ್ಪರ್ಧೆ. ಹೀಗಾಗಿ ಇಲ್ಲಿ ಯಾವುದೇ ವಾಗ್ವಾದಕ್ಕೆ ಅವಕಾಶವಿಲ್ಲ. ಸಂಪ್ರದಾಯಕ್ಕೆ ಬಹುಮಾನದ ಟಚ್ ಕೊಟ್ಟಿದ್ದೇವೆ. ಹೀಗಾಗಿ ಎಲ್ಲರು ಶಾಂತಿಯುತವಾಗಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಕುಟುಂಬದ ಜೊತೆ ಸಂಕ್ರಾಂತಿ ಆಚರಿಸಿದ ಎಚ್‌.ಡಿ.ಕುಮಾರಸ್ವಾಮಿ: ದೇವೇಗೌಡ್ರ ಆಶಿರ್ವಾದ ಪಡೆದ ನಿಖಿಲ್ ಮಗ ಅವ್ಯಾನ್!
 

click me!