2020ರಲ್ಲಿ ಸಂಗಾತಿ ಸಿಗೋ ಲಕ್‌ ನಿಮಗಿದ್ಯಾ? ಅದೃಷ್ಟ ರಾಶಿಗಳ ಪಟ್ಟಿ ಇಲ್ಲಿದೆ!

By Suvarna News  |  First Published Dec 29, 2019, 10:43 AM IST

ಪ್ರೀತಿಯಲ್ಲಿ ಸಕ್ಸಸ್ ಸಿಗುವುದು, ಪ್ರೀತಿಯಾಗುವುದು ಎಲ್ಲರ ಕನಸು. ಹೀಗೆ ಪ್ರೀತಿಗಾಗಿ ಕಾದು ಕುಳಿತ ಆತ್ಮಗಳಿಗಾಗಿ ಇಲ್ಲಿದೆ ನೋಡಿ ಲವ್ ಹೋರೋಸ್ಕೋಪ್.
 


ವರ್ಷಗಳಿಂದ ಬಾಯಾರಿ ಕಾದು ಕುಳಿತಿರುವ ಪ್ರೀತಿ 2019ರಲ್ಲಿ ಆಗಲಿಲ್ಲ. 2020ರಲ್ಲಾದರೂ ಆಗುತ್ತಾ ಎಂದು ಕನವರಿಸುತ್ತಿರುವವರ ಭವಿಷ್ಯದಲ್ಲಿ ಏನಿದೆ? ಈ ಬಗ್ಗೆ ನಿಮ್ಮ ಜಾತಕಫಲ ಏನು ಹೇಳುತ್ತದೆ ಎಂಬ ಕುತೂಹಲವಿದ್ದರೆ ಮುಂದೆ ಓದಿ...

1. ಮೇಷ

Tap to resize

Latest Videos

undefined

ಜೀವನ ಪೂರ್ತಿ ಏಳು ಬೀಳುಗಳಿಂದ ತುಂಬಿದೆ. ನಿಮ್ಮ ಲವ್ ಲೈಫ್ ಕೂಡಾ ಇದಕ್ಕೆ ಹೊರತಲ್ಲ. ಪ್ರೀತಿಯ ವಿಷಯಕ್ಕೆ ಬಂದರೆ 2020 ಬಹಳ ಸುಂದರವಾಗಿಯೂ, ಎಕ್ಸೈಟಿಂಗ್ ಆಗಿಯೂ ಇರಲಿದೆ. ಇನ್ನೂ ಪಾರ್ಟ್ನರ್ ಸಿಕ್ಕಿಲ್ಲದವರಿಗೆ ಕ್ಲೋಸ್ ಫ್ರೆಂಡ್ ಅಥವಾ ಕುಟುಂಬ ಸದಸ್ಯರ ಮೂಲಕ ಈ ವಿಶೇಷ ವ್ಯಕ್ತಿಯ ಪರಿಚಯವಾಗಲಿದೆ. ಜೂನ್‌ ಸ್ವಲ್ಪ ಸಂಕೀರ್ಣವಾಗಿದ್ದರೂ ಕೂಡಾ ವರ್ಷ ಕಳೆದಂತೆಲ್ಲ ನಿಮ್ಮ ಲವ್ ಲೈಫ್‌ನಲ್ಲಿ ಹೆಚ್ಚಿನ ನೆಮ್ಮದಿ, ಹೊಂದಾಣಿಕೆ ಕಾಣಿಸಲಿದೆ.

ಈ ರಾಶಿಯವರು ಈ ಒಂದು ಕೆಟ್ಟ ಚಟ ಬಿಟ್ರೆ ಒಳ್ಳೇದು!

2. ವೃಷಭ

ನೀವು ಪ್ರೀತಿಗಾಗಿ ಎದುರು ನೋಡುತ್ತಿದ್ದರೆ, 2020 ನಿಮಗೆ ಅಂಥದೊಂದು ಲವ್ ಸ್ಟೋರಿ ಬರೆಯಲು ಅವಕಾಶ ಒದಗಿಸುತ್ತದೆ. ನೀವು ಸ್ವಲ್ಪ ಟೆನ್ಷನ್ ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲ್ಯ ಉಳ್ಳವರಾದ್ದರಿಂದ ಲವ್ ಲೈಫ್‌ನಲ್ಲಿ ಕಾಣಿಸಿಕೊಳ್ಳುವ ಪ್ರತಿಕೂಲ ಹವಾಮಾನಗಳನ್ನೂ ನಿಭಾಯಿಸಲು ಶಕ್ತರಿದ್ದೀರಿ. ನಿಮ್ಮ ಭಾವನೆಗಳನ್ನು ಸರಿಯಾಗಿ ಕಮ್ಯುನಿಕೇಟ್ ಮಾಡಿದಿರಾದರೆ ನಿಮ್ಮ ಹೃದಯ ಬಯಸಿದ್ದನ್ನು ಪಡೆಯಲು ಯಾರೂ ಕೂಡಾ ನಿಮಗೆ ತಡೆಯಾಗುವುದಿಲ್ಲ. 

3. ಮಿಥುನ

ಲವ್ ಲೈಫ್‌ನಲ್ಲಿ ಬರುವ ವರ್ಷದಲ್ಲಿ ಏನೇ ಸಮಯ ಬಂದರೂ 'ಆಲ್ ಈಸ್ ವೆಲ್' ಹೇಳಿಕೊಳ್ಳುತ್ತಿರಿ. ಗ್ರಹಗತಿಗಳು ನಿಮ್ಮ ಪ್ರೀತಿಯ ಸ್ವರ್ಗಕ್ಕೆ ಸಣ್ಣಪುಟ್ಟ ಭೂಕಂಪನ ತರುತ್ತವೆ. ಎಲ್ಲ ಕೈ ಜಾರುತ್ತಿದೆ ಎಂದು ನಿಮಗನಿಸಬಹುದು. ಆದರೆ, ಸುರಂಗದ ತುದಿಗೆ ಬೆಳಕಿರುತ್ತದೆ ಎಂಬುದನ್ನು ನಂಬಿ ಶಾಂತಿಯಿಂದ, ತಾಳ್ಮೆಯಿಂದ ವರ್ತಿಸಿ. ಈಗಾಗಲೇ ಪ್ರೀತಿಯಲ್ಲಿ ಬಿದ್ದಿರುವವರಿಗೆ ವಿವಾಹ ಯೋಗವಿದೆ.

4. ಕಟಕ

11ನೇ ಮನೆ ಆಳುತ್ತಿರುವ ಗುರುವಿಗೆ ಥ್ಯಾಂಕ್ಸ್ ಹೇಳಿ. ಏಕೆಂದರೆ ಆತ ನಿಮ್ಮ ಪ್ರೇಮಾಕಾಂಕ್ಷೆಯನ್ನು ಈಡೇರಿಸಲೆಂದೇ ಅಲ್ಲಿ ಕುಳಿತಿದ್ದಾನೆ. ಪ್ರೀತಿ ಹಾಗೂ ಬದುಕಿನಲ್ಲಿ ಒಳ್ಳೆಯ ಸಾಮರಸ್ಯ ಇರಲಿದೆ. ಮೇ ಮಧ್ಯ ಕಾಲ ಒಂಟಿಯಾಗಿರುವವರ ಬಾಳಲ್ಲಿ ಪ್ರೇಮಕತೆಯೊಂದು ಆರಂಭವಾಗಬಹುದು. ಈಗಾಗಲೇ ಪ್ರೇಮದಲ್ಲಿ ಬಿದ್ದಿರುವವರಿಗೆ ವಿವಾಹಯೋಗವಿದೆ. ಮಾತನಾಡುವ ಮುಂಚೆ ಎರಡು ಬಾರಿ ಯೋಚನೆ ಮಾಡಿ. ಮಾತಿನ ತಪ್ಪಿನಿಂದಾಗಿ ಪ್ರೀತಿಯ ಅರಮನೆ ಕೆಡವಿಕೊಳ್ಳಬೇಡಿ.

5. ಸಿಂಹ

ಈ ವರ್ಷ ಲವ್ ವಿಷಯದಲ್ಲಿ ನೀವು ಬಹಳ ಲಕ್ಕಿ. ನೀವು ಪ್ರೀತಿಯಲ್ಲಿ ಬೀಳುವ ಸಂಭವ ಹೆಚ್ಚಿದೆ. ಆದರೆ, ನೀವು ಪ್ರೀತಿಸುವವರು ನಿಮ್ಮೊಂದಿಗೆ ಪ್ರೀತಿಯಲ್ಲಿ ಬೀಳಬೇಕೆಂದರೆ ಹೆಚ್ಚಿನ ಪ್ರಯತ್ನ ಹಾಕುವ ಅಗತ್ಯವಿದೆ. ನಿಮ್ಮನ್ನು ಆಕರ್ಷಣೆಯ ಕೇಂದ್ರಬಿಂದು ಮಾಡಿಕೊಳ್ಳುವುದಕ್ಕಿಂತ ನೀವು ಪ್ರೀತಿಸುವವರು ಆಕರ್ಷಣೆಯ ಕೇಂದ್ರಬಿಂದುವಾಗುವಂತೆ ನೋಡಿಕೊಳ್ಳಿ. 

ಜ್ಯೋತಿಷ್ಯ: ಬೆಂಕಿಯಂಥ ಕುಜನ ವಕ್ರದೃಷ್ಟಿ ಬಿದ್ದರೆ, ಮನುಷ್ಯ ಥರ ಥರ...!

6. ಕನ್ಯಾ

ಈ ವರ್ಷ ಅರ್ಥಬದ್ಧ ಸಂಬಂಧಗಳು ಏರ್ಪಡಲಿವೆ. ನಿಮ್ಮ ಪಾರ್ಟ್ನರ್‌ನಿಂದಾಗಿ ನೀವು ಇನ್ನೂ ಉತ್ತಮ ವ್ಯಕ್ತಿತ್ವ ರೂಡಿಸಿಕೊಳ್ಳಲಿದ್ದೀರಿ. ನಿಮ್ಮ ಪ್ರೀತಿಯ ಪಯಣಕ್ಕೆ ಬರುವ ಅಡ್ಡಿ ಆತಂಕಗಳನ್ನು ಬಹಳ ಆತ್ಮವಿಶ್ವಾಸದಿಂದ ಎದುರಿಸುವಿರಿ. 

7. ತುಲಾ

ನಿಮಗೆ ಯಾರ ಮೇಲೆಯೋ ಕ್ರಶ್ ಆಗಿದೆ ಎಂದರೆ ಧೈರ್ಯ ಒಗ್ಗೂಡಿಸಿಕೊಂಡು ಹೇಳಿಕೊಳ್ಳಲು ಇದು ಸರಿಯಾದ ಸಮಯ. ಏಕೆಂದರೆ ಏಪ್ರಿಲ್ ನಂತರದಲ್ಲಿ ನಿಮ್ಮ ಲವ್ ಲೈಫ್‌ಗೆ ಸರಿಯಾಗಿ ಗ್ರಹಗತಿಗಳು ಇರಲಿವೆ. ಈಗಾಗಲೇ ಪ್ರೀತಿಗೆ ಬಿದ್ದಿದ್ದರೆ, ನಿಮ್ಮ ಸಂಗಾತಿಗೆ ಭವಿಷ್ಯದ ಕುರಿತು ಮಾತು ಕೊಟ್ಟು ಮತ್ತಷ್ಟು ಪ್ರೀತಿ ದಕ್ಕಿಸಿಕೊಳ್ಳುವಿರಿ. 

8. ವೃಶ್ಚಿಕ

2020ರಲ್ಲಿ ಪ್ರೀತಿ ಅರಳುವ ಅವಕಾಶಗಳು ಹೆಚ್ಚಿವೆ. ಮಾರ್ಚ್ ಅಂತ್ಯದಿಂದ ಮೇ ಮಧ್ಯದವರೆಗಿನ ಸಮಯ ಜೀವನಕ್ಕೆ ಅರ್ಥ ಕೊಡುವಂಥ ಸಂಬಂಧಗಳನ್ನು ಹುಡುಕಿ ತರುತ್ತದೆ. ಲವ್‌ಲೈಫ್‌ನಲ್ಲಿ ಕೆಲ ಪ್ರಮುಖ ಬೆಳವಣಿಗೆಗಳನ್ನು ಕಾಣಬಹುದು. 

9. ಧನು

ಧನು ರಾಶಿಯವರಿಗೆ ಬರುವ ವರ್ಷ ಹರ್ಷ ತರಲಿದೆ. ಲವ್ ಲೈಫ್‌ಗೆ ಬಂದರೆ ನಿಧಾನವಾಗಿ  ಶುರುವಾಗುತ್ತದೆ.  ಮಧ್ಯದಲ್ಲಿ ಯಾವುದೂ ಬದಲಾಗುತ್ತಿಲ್ಲವಲ್ಲ ಎಂದು ಸ್ವಲ್ಪ ಬೇಸರ ಕಾಣಿಸಿಕೊಳ್ಳಬಹುದು. ಆದರೆ ಏಪ್ರಿಲ್‌ನಿಂದ ಮೇ ಮಧ್ಯದವರೆಗೆ ಬದಲಾವಣೆ ಇರಲಿದೆ. ಆದರೆ, ಈ ಬದಲಾವಣೆ ಒಳ್ಳೆಯದೋ, ಕೆಟ್ಟದ್ದೋ ಎಂದು  ಹೇಳುವುದು ಕಷ್ಟ.  

10. ಮಕರ

ಬಹಳ ಕಾಲದಿಂದ ಆಳವಾದ  ಹಾಗೂ ಅರ್ಥಪೂರ್ಣ ಸಂಬಂಧವೊಂದಕ್ಕಾಗಿ ಹಂಬಲಿಸುತ್ತಿದ್ದೀರಾ? ಈಗ ಅದಕ್ಕೆ ಸಮಯ ಬಂದಿದೆ. ವರ್ಷಾಂತ್ಯದಲ್ಲಿ ನಿಮ್ಮ ಲವ್ ಲೈಫ್‌ನ ಬೆಳವಣಿಗೆಗಳು ವೇಗ ಪಡೆದುಕೊಳ್ಳಲಿವೆ. ಪಾರ್ಟ್ನರ್ ಜೊತೆ ಜಗಳವಾದಾಗ ಏಕಾಏಕಿ ಯಾವ ನಿರ್ಧಾರಕ್ಕೂ  ಬರದೆ ತಾಳ್ಮೆ ವಹಿಸಿ. 

11.ಕುಂಭ

ಕುಂಭ ರಾಶಿಯವರಿಗೆ 2020 ಖುಷಿ ಹಾಗೂ ನಿರಾಸೆಗಳ ಸಮಾಗಮ. ವರ್ಷಾರಂಭದಲ್ಲಿ ನಿಮ್ಮ ಜೀವನದಲ್ಲಿ ಪ್ರೀತಿಯನ್ನು ಪ್ರಶ್ನಿಸುವಂತಾಗಬಹುದು. ಆದರೆ, ವರ್ಷ ಕಳೆದಂತೆಲ್ಲ ಲವ್ ಲೈಫ್ ಕುರಿತ ಪಾಸಿಟಿವಿಟಿ ಹೆಚ್ಚುತ್ತದೆ. ಮೇ ಮಧ್ಯಭಾಗದಿಂದ ಜೂನ್ ಅಂತ್ಯದವರೆಗೆ ಕೆಲ ಸವಾಲುಗಳು ಕಾಡಬಹುದು. ಆದರೆ, ನಿಮ್ಮ ಸಂತೋಷದ ಜಗತ್ತನ್ನು ಅಲುಗಿಸುವ ತಾಕತ್ತು ಯಾವುದಕ್ಕೂ ಇಲ್ಲ. 

12. ಮೀನ

ಹಿಂದೆ ನಿಮಗೊಬ್ಬರು ಕ್ರಶ್ ಇದ್ದು ಈಗಲೂ ಆಗಾಗ ನೆನಪಾಗುತ್ತಾರಾದರೆ, ಅವರು ನಿಮ್ಮ ಬದುಕಿಗೆ ಬರುವ ಸಂಭವಗಳು ಹೆಚ್ಚಿವೆ. ಒಂಟಿಯಾಗಿರುವವರಿಗೆ ಈ ವರ್ಷ ಹಲವು ಖುಷಿಯ ಸರ್ಪ್ರೈಸ್‌ಗಳು ಸಿಗಲಿವೆ. 

click me!