ಮಾತು ಮಾತಿಗೂ ಆಣೆ ಪ್ರಮಾಣ ಮಾಡುವವರ ಬಗ್ಗೆ ಇಲ್ಲಿದೆ ಮಾಹಿತಿ. ಸುಳ್ಳು ಪ್ರಮಾಣ ಮಾಡಿದರೆ, ತಾಯಿ ಮೇಲೋ ಮಕ್ಕಳ ಮೇಲೋ ಪ್ರಮಾಣ ಮಾಡಿದರೆ ಏನಾಗುತ್ತದೆ? ಇಲ್ಲಿದೆ ವಿವರ, ಓದಿ ತಿಳಿಯಿರಿ.
ಕೆಲವರಿಗೆ ಮಾತು ಮಾತಿಗೂ ಆಣೆ ಪ್ರಮಾಣ ಮಾಡುವುದೊಂದು ಅಭ್ಯಾಸ. ʼನಮ್ಮ ತಾಯಾಣೆʼ ʼದೇವ್ರಾಣೆʼ ಎಂದೆಲ್ಲಾ ಹೇಳುತ್ತಿರುತ್ತಾರೆ. ಆದರೆ ಅದಾದ ಮರುಕ್ಷಣವೇ ಸುಳ್ಳು ಹೇಳುತ್ತಾರೆ. ಹೆಚ್ಚಾಗಿ ಕುಡುಕರು, ಸಾಲಗಾರರು ಹೀಗೆ ಮಾಡುವುದು ವಾಡಿಕೆ. ತಾವಡುವ ಮಾತಿನ ಶಕ್ತಿಯೇ ಇವರಿಗೆ ಗೊತ್ತಿರುವುದಿಲ್ಲ. ನಾವೂ ಐ ಪ್ರಾಮಿಸ್ ಅಂತೀವಲ್ಲ- ಹಾಗೆಂದರೆ ನನ್ನಾಣೆ ಎಂದರ್ಥ. ಇದೂ ಸುಲಭದಲ್ಲಿ ಜೀರ್ಣವಾಗುವ ಮಾತಲ್ಲ. ಆಣೆ ಪ್ರಮಾಣ ಮಾಡಿಸುವ ಪದ್ಧತಿ ಇಂದಿನಿಂದ ಮಾತ್ರವಲ್ಲ, ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸುಳ್ಳು ಆಣೆ ಮಾಡಿದರೆ, ಸುಳ್ಳು ಪ್ರಮಾಣ ನೀಡಿದರೆ ಏನಾಗುತ್ತದೆ? ತಿಳಿಯೋಣ ಬನ್ನಿ.
ಪ್ರಮಾಣವನ್ನು ಯಾವಾಗಲೂ ಕೆಲವು ದೇವರ, ಪವಿತ್ರ ವಸ್ತು ಅಥವಾ ನಮ್ಮ ಪ್ರೀತಿ ಪಾತ್ರರ ಹೆಸರಿನ ಮೇಲೆ ಮಾಡಲಾಗುತ್ತದೆ. ಪ್ರಮಾಣವನ್ನು ಸ್ವೀಕರಿಸುವ ವ್ಯಕ್ತಿಯು ಸತ್ಯವನ್ನು ಹೇಳುತ್ತಿದ್ದಾನೆ ಮತ್ತು ಅವನು ನೀಡಿದ ಭರವಸೆಯನ್ನು ಉಳಿಸಿಕೊಳ್ಳುತ್ತಾನೆ ಎಂದು ಖಚಿತಪಡಿಸಿಕೊಳ್ಳುವುದು ಪ್ರಮಾಣ ಮಾಡುವುದರ ಉದ್ದೇಶ. ಕೋರ್ಟ್‌ನಲ್ಲಿ ಸಾಕ್ಷಿ ಹೇಳುವಾಗ ಧಾರ್ಮಿಕ ಗ್ರಂಥದ ಮೇಲೆ ಪ್ರಮಾಣ ಮಾಡಿಸಲಾಗುತ್ತದೆ.
ನಾವು ಸುಳ್ಳು ಪ್ರಮಾಣ ಮಾಡಿದರೆ ಏನಾಗುತ್ತೆ? ಸುಳ್ಳು ಪ್ರಮಾಣ ಮಾಡುವುದನ್ನು ಧಾರ್ಮಿಕವಾಗಿ ಮತ್ತು ನೈತಿಕವಾಗಿ ತಪ್ಪು ಎಂದು ಪರಿಗಣಿಸಲಾಗುತ್ತದೆ. ಇದು ವ್ಯಕ್ತಿಯ ವ್ಯಕ್ತಿತ್ವ ಮತ್ತು ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ, ಸುಳ್ಳು ಅಥವಾ ತಪ್ಪು ಪ್ರಮಾಣ ಮಾಡುವುದು ಪಾಪಕ್ಕೆ ಸಮಾನ. ಇದು ದೇವರ ಕಣ್ಣಿನಲ್ಲಿ ಶಿಕ್ಷೆಗೆ ಕಾರಣವಾಗುವ ಸಂಗತಿ. ಆ ವ್ಯಕ್ತಿ ವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಜನರು ಅವನನ್ನು ನಂಬುವುದನ್ನು ನಿಲ್ಲಿಸುತ್ತಾರೆ.
ವಿಷ್ಣು ಪುರಾಣದ ಪ್ರಕಾರ, ಸುಳ್ಳು ಪ್ರಮಾಣ ಮಾಡುವುದರಿಂದ ಅಥವಾ ಪ್ರತಿಜ್ಞೆ ಮಾಡುವುದರಿಂದ, ಪ್ರಮಾಣ ಮಾಡಿದವರು ಮತ್ತು ಪ್ರಮಾಣ ಮಾಡಿಸಿಕೊಂಡವರಿಬ್ಬರೂ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸುಳ್ಳು ಪ್ರಮಾಣ ಮಾಡಿದ ವ್ಯಕ್ತಿಗೆ ಆರೋಗ್ಯ ಸಂಬಂಧಿತ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಅವನು ತುಂಬಾ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ದೇವರ ಮೇಲೆ ಸುಳ್ಳು ಪ್ರಮಾಣ ಮಾಡುವ ಮೂಲಕ ದೇವರು ಮತ್ತು ದೇವತೆಗಳ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹಣದ ನಷ್ಟವನ್ನು ಅನುಭವಿಸುತ್ತೀರಿ. ಜೀವನದಲ್ಲಿ ಅಶಾಂತಿ ತುಂಬಿಕೊಳ್ಳುತ್ತದೆ. ಜೀವನದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ಜೀವಹಾನಿಯನ್ನೂ ಉಂಟುಮಾಡಬಹುದು.
ಇನ್ನು ಕೆಲವರು ಹೆತ್ತ ತಾಯಿ ಮೇಲೆ, ತಂದೆ ಮೇಲೆ ಅಥವಾ ಎದುರಿಗೆ ಇರುವವರ ತಾಯಿ ಮೇಲೆ ಆಣೆ ಪ್ರಮಾಣ ಮಾಡುತ್ತಾರೆ. ಇದಂತೂ ಅಸಭ್ಯ ರೂಢಿ. ಅವರ ಮೇಲೆ ಯಾಕೆ ಪ್ರಮಾಣ ಮಾಡಬೇಕು? ಇದರಿಂದ ಆಣೆ ಯಾರ ಹೆಸರಿಗೆ ಮಾಡಿದ್ದಾರೋ ಅವರಿಗೆ ಏನೂ ಸಂಭವಿಸದು. ಯಾಕೆಂದರೆ ಇದು ಅವರಿಗೆ ಅರಿವಿಲ್ಲದೇ ಆದ ಘಟನೆ. ಆದರೆ ಆಣೆ ಮಾಡಿದವನಿಗಂತೂ ದೋಷ ತಟ್ಟುತ್ತದೆ. ಸತ್ಯವನ್ನೇ ಹೇಳುವುದಾದರೂ ಇಂಥ ಆಣೆ ಮಾಡುವುದನ್ನು ನಿಲ್ಲಿಸಬೇಕು. ಇನ್ನು ಪುಟ್ಟ ಮಕ್ಕಳ ಮೇಲೆ ಆಣೆ ಪ್ರಮಾಣ ಮಾಡುವುದಂತೂ ಅಪರಾಧವೇ ಸರಿ. ಹಾಗೆ ಆಣೆ ಮಾಡುವವನಿಗೆ ಹಲವು ಜನ್ಮಗಳಲ್ಲಿ ರಾಶಿ ಪುಣ್ಯಕಾರ್ಯ ಮಾಡಿದರೂ ಮುಗಿದುಹೋಗದಂಥ ಪಾಪ ಕಟ್ಟಿಕೊಳ್ಳುತ್ತದೆ. ಹೊರತಾಗಿ ಆ ಮಗುವಿಗೆ ಏನೂ ಆಗದು.
ಈ ದಿನಾಂಕದಲ್ಲಿ ಹುಟ್ಟಿದವರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ!
ಪ್ರತಿಜ್ಞೆ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚನೆ ಮಾಡಿ ನಂತರ ಪ್ರಮಾಣ ಮಾಡಬೇಕು. ನೀವು ಯಾವ ವಿಚಾರಕ್ಕೆ ಪ್ರಮಾಣ ಮಾಡಬೇಕಾಗುತ್ತದೆಯೋ ಅದು ನಿಮ್ಮ ಬಳಿ ಪೂರ್ಣಗೊಳಿಸಲು ಸಾಧ್ಯವೇ ಎಂಬುದನ್ನು ಯೋಚಿಸಿ ನಂತರ ಪ್ರಮಾಣ ತೆಗೆದುಕೊಳ್ಳಿ. ನೀವು ಕೊಟ್ಟ ಪ್ರಮಾಣವನ್ನು ಪೂರ್ಣಗೊಳಿಸಲು ಸಾಧ್ಯವಿದ್ದರೆ ಮಾತ್ರ ಈ ಕೆಲಸ ಮಾಡಿ. ನೀವು ದೇವರ ಹಸರಿನ ಮೇಲೆ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದರೆ ದೇವರನ್ನು ಗೌರವಿಸಬೇಕು ಮತ್ತು ಸತ್ಯವನ್ನು ಹೇಳಬೇಕು.
ಮರಣದ ನಂತರ ಭೂಮಿಯಲ್ಲಿ ಮರುಜನ್ಮ ಪಡೆಯಲು ಎಷ್ಟು ದಿನ ಬೇಕಾಗುತ್ತೆ ಗೊತ್ತಾ?