ಚಿನ್ನ ಧರಿಸೋದು ತರುತ್ತಾ ಲಕ್? ಕೆಲ ರಾಶಿಯವರಿಗಿದು ಅಶುಭ!

By Suvarna News  |  First Published Jan 21, 2022, 1:57 PM IST

ಬಂಗಾರ ಯಾರಿಗೆ ಇಷ್ಟವಿಲ್ಲ..? ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಂಗಾರದ ಆಭರಣ ಧರಿಸಲು ಬಯಸ್ತಾರೆ. ಅದರಲ್ಲಿ ಮಹಿಳೆಯರು ಎತ್ತಿದ ಕೈ. ಆದ್ರೆ ಈ ಬಂಗಾರದ ಆಭರಣ ಧರಿಸಿದ್ರೆ ಕೆಲವರಿಗೆ ಲಾಭದ ಬದಲು ನಷ್ಟವಾಗುತ್ತೆ. ಧರಿಸುವ ಮೊದಲು ಇದನ್ನೋದಿ.
 


 ಚಿನ್ನ (Gold)ವು ಅದೃಷ್ಟ (Good luck)ದ ಲೋಹ. ಸಂತೋಷ (Happiness) ಮತ್ತು ಸಮೃದ್ಧಿಯೊಂದಿಗೆ ಇದನ್ನು ಹೋಲಿಕೆ ಮಾಡಲಾಗುತ್ತದೆ. ಅದಕ್ಕಾಗಿಯೇ ಇದನ್ನು ಅಮೂಲ್ಯವಾದ ಲೋಹವೆಂದು ಹೇಳಲಾಗುತ್ತದೆ. ಚಿನ್ನದಲ್ಲಿ ಅನೇಕ ಅಂಶಗಳಿದ್ದು,ಅವರು ಆರೋಗ್ಯಕ್ಕೆ ಒಳ್ಳೆಯದೆಂದು ವಿಜ್ಞಾನಿಗಳು ನಂಬುತ್ತಾರೆ. ಚಿನ್ನದ ಹೊಳಪು ಎಲ್ಲರನ್ನೂ ಆಕರ್ಷಿಸುತ್ತದೆ. ಶಾಸ್ತ್ರಗಳಲ್ಲಿ ಚಿನ್ನದ ಮಹತ್ವದ ಬಗ್ಗೆ ವಿವರಣೆ ಇದೆ. ಚಿನ್ನವನ್ನು ಧರಿಸುವುದರಿಂದ ಅದೃಷ್ಟ ಬರುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಿನ್ನವನ್ನು ಧರಿಸುವುದರಿಂದ ಗ್ರಹಗಳ ಅಶುಭವೂ ದೂರವಾಗುತ್ತದೆ. ಚಿನ್ನವನ್ನು ಧರಿಸುವುದರಿಂದ ವ್ಯಕ್ತಿಯ ಏಕಾಗ್ರತೆ ಹೆಚ್ಚುತ್ತದೆ. ಚಿನ್ನವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಹೃದ್ರೋಗದಲ್ಲಿ ಚಿನ್ನವನ್ನು ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸ್ವರ್ಣ ಭಸ್ಮವನ್ನು ಔಷಧೀಯ ಲೋಹ ಎಂದೂ ಕರೆಯುತ್ತಾರೆ. ಇದು ಚಿನ್ನದಿಂದ ಮಾಡಲ್ಪಟ್ಟಿದೆ. ಚಿನ್ನವನ್ನು ಧರಿಸುವುದ್ರಿಂದ ಎಲ್ಲರಿಗೂ ಲಾಭವಿಲ್ಲ. ಕೆಲವರಿಗೆ ಚಿನ್ನ ಧಾರಣೆ ನಷ್ಟವನ್ನುಂಟು ಮಾಡುತ್ತದೆ. ಚಿನ್ನವನ್ನು ಧರಿಸುವಾಗ ಅನೇಕ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಇಂದು ಚಿನ್ನವನ್ನು ಯಾರು ಧರಿಸಬೇಕು? ಯಾರು ಧರಿಸಬಾರದು? ಚಿನ್ನವನ್ನು ಎಂದು ಧರಿಸಬೇಕು ಹಾಗೆ ಚಿನ್ನವನ್ನು ಹೇಗೆ ಧರಿಸಿದ್ರೆ ಲಾಭ ಎನ್ನುವ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೆವೆ.

ಬಂಗಾರವನ್ನು ಎಂದು ಧರಿಸಬೇಕು ?: ಚಿನ್ನ ಧರಿಸುವಾಗ ಜ್ಯೋತಿಷ್ಯ(Astrology)ನೋಡುವವರ ಸಂಖ್ಯೆ ಕಡಿಮೆ. ಚಿನ್ನಧಾರಣೆ ಅನೇಕರಿಗೆ ಖುಷಿ ನೀಡುತ್ತದೆ. ಶ್ರೀಮಂತಿಕೆಯ ಸಂಕೇತವೂ ಆಗಿದೆ. ಹಾಗಾಗಿ ಜನರು,ಮನಸ್ಸಿಗೆ ಬಂದ ದಿನ ಚಿನ್ನಧಾರಣೆ ಮಾಡ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ತಪ್ಪು. ಮಂಗಳಕರ ದಿನ ಮತ್ತು ಶುಭ ಮುಹೂರ್ತದಲ್ಲಿ ಚಿನ್ನವನ್ನು ಧರಿಸುವುದರಿಂದ ಅದರ ಗುಣಗಳು ಅನೇಕ ಪಟ್ಟು ಹೆಚ್ಚಾಗುತ್ತವೆ ಎಂಬ ನಂಬಿಕೆಯಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಭಾನುವಾರ, ಬುಧವಾರ, ಗುರುವಾರ, ಶುಕ್ರವಾರದಂದು ಚಿನ್ನವನ್ನು ಧರಿಸಬೇಕು. ಮಂಗಳಕರ ಸಮಯದಲ್ಲಿಯೇ ಚಿನ್ನವನ್ನು ಧರಿಸಬೇಕು.

Vastu Tips: ಈ ವಿಗ್ರಹಗಳನ್ನು ಮನೆಯಲ್ಲಿಟ್ಟರೆ ಅದೃಷ್ಟ ಕುಲಾಯಿಸಲಿದೆ..

Latest Videos

undefined

ಚಿನ್ನ ಧರಿಸುವುದ್ರಿಂದಾಗುವ ಲಾಭಗಳು :

1. ಜ್ಯೋತಿಷ್ಯದ ಪ್ರಕಾರ, ತೋರು ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಏಕಾಗ್ರತೆ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. 
2. ಚಿನ್ನಾಭರಣಗಳು ರಾಜಯೋಗ ಪ್ರಾಪ್ತಿಗೆ ಸಹಕಾರಿ ಎಂದು ಪರಿಗಣಿಸಲಾಗಿದೆ.
3. ಮನೆಯಲ್ಲಿ ಚಿನ್ನವನ್ನು ಉತ್ತರದಲ್ಲಿ ಇಡಬೇಕು.ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಗೌರವಾನ್ವಿತ ಅಥವಾ  ಅಧಿಕಾರಿಗಳಿಂದ ಬೆಂಬಲ  ಪಡೆಯಲು ಬಯಸಿದರೆ  ಚಿನ್ನ ಧರಿಸಬೇಕು.

Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!

4. ವೈವಾಹಿಕ ಜೀವನದಲ್ಲಿ ಸಂತೋಷ ಬಯಸುವವರು ಕುತ್ತಿಗೆಗೆ ಚಿನ್ನದ ಸರವನ್ನು ಧರಿಸಬೇಕು. 
5. ಚಿನ್ನವು ಶಕ್ತಿ ಮತ್ತು ಶಾಖ ಎರಡನ್ನೂ ಉತ್ಪಾದಿಸುತ್ತದೆ. ಇದು ವಿಷದ ಪರಿಣಾಮವನ್ನು ತೆಗೆದುಹಾಕುತ್ತದೆ.
6. ಶೀತ ಅಥವಾ ಉಸಿರಾಟದ ಕಾಯಿಲೆ ಇದ್ದರೆ, ಉಂಗುರದ ಬೆರಳಿಗೆ ಚಿನ್ನವನ್ನು ಧರಿಸುವುದು ಪ್ರಯೋಜನಕಾರಿ. 
7. ಮಗ, ಮಗಳು ದಾರಿ ತಪ್ಪುತ್ತಿದ್ದಾರೆ ಎಂಬ ಭಾವನೆ ಬಂದರೆ ಅವರಿಗೆ ಚಿನ್ನ ಧರಿಸುವಂತೆ ಸಲಹೆ ನೀಡಿ.
8. ಸಂತಾನ ಪ್ರಾಪ್ತಿ ಬಯಸುವವರು ಉಂಗುರದ ಬೆರಳಿಗೆ ಚಿನ್ನದ ಉಂಗುರವನ್ನು ಧಾರಣೆ ಮಾಡಬೇಕೆಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.

ಬಂಗಾರದ ಆಭರಣವನ್ನು ಯಾರು ಧರಿಸಬಾರದು? :
ಮೊದಲೇ ಹೇಳಿದಂತೆ ಬಂಗಾರ ಎಲ್ಲರಿಗೂ ಆಗಿ ಬರುವುದಿಲ್ಲ. ಹಾಗಾಗಿ ಸರಿಯಾಗಿ ತಿಳಿದು ಬಂಗಾರದ ಆಭರಣವನ್ನು ಧರಿಸಬೇಕಾಗುತ್ತದೆ.

1. ತೂಕ ಹೆಚ್ಚಳದಿಂದ ಬಳಲುತ್ತಿರುವ ವ್ಯಕ್ತಿ ಅಥವಾ ದೊಡ್ಡ ಹೊಟ್ಟೆ ಹೊಂದಿರುವ ವ್ಯಕ್ತಿ ಬಂಗಾರದ ಆಭರಣ ಧರಿಸಬಾರದು.
2. ಅತಿ ಕೋಪ,ವಾಚಾಳಿಯಾಗಿರುವ ವ್ಯಕ್ತಿಗಳು ಕೂಡ ಬಂಗಾರದಿಂದ ದೂರವಿರಬೇಕು.
3. ಬಂಗಾರದ ಬಣ್ಣ ಹಳದಿಯಾಗಿರುತ್ತದೆ. ಅದನ್ನು ಗುರು ಗ್ರಹಕ್ಕೆ ಹೋಲಿಕೆ ಮಾಡಲಾಗುತ್ತದೆ. ಯಾವ ವ್ಯಕ್ತಿ ಜಾತಕದಲ್ಲಿ ಗುರು ಗ್ರಹ ದೋಷವಿದೆಯೋ ಆ ವ್ಯಕ್ತಿ ಬಂಗಾರ ಧರಿಸಬಾರದು.
4. ವೃಷಭ, ಮಿಥುನ, ಕನ್ಯಾ ಮತ್ತು ಕುಂಭ ರಾಶಿಯವರು ಕೂಡ ಬಂಗಾರದ ಆಭರಣ ಧರಿಸುವುದು ಒಳ್ಳೆಯದಲ್ಲ. ತುಲಾ ಹಾಗೂ ಮಕರ ರಾಶಿಯವರು ಅತಿ ಕಡಿಮೆ ಪ್ರಮಾಣದಲ್ಲಿ ಚಿನ್ನ ಧರಿಸಬೇಕು.
5. ಗರ್ಭಿಣಿಯರು ಹಾಗೂ ವೃದ್ಧ ಮಹಿಳೆಯರು ಬಂಗಾರವನ್ನು ಕಡಿಮೆ ಪ್ರಮಾಣದಲ್ಲಿ ಧರಿಸಬೇಕು.
6. ಕಾಲಿಗೆ ಎಂದೂ ಬಂಗಾರದ ಆಭರಣ ಹಾಕಬಾರದು.
7. ಸೊಂಟಕ್ಕೆ ಬಂಗಾರವನ್ನು ಹಾಕಬೇಡಿ. ಇದು ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. 
8. ಬಂಗಾರ ಧರಿಸಿದ್ದವರು ಎಂದೂ ಮದ್ಯಪಾನ,ಧೂಮಪಾನ ಮಾಡಬೇಡಿ.
9. ಮಲಗುವ ವೇಳೆ ಆಭರಣ ತೆಗೆದು ತಲೆ ಬಳಿ ಇಟ್ಟು ನಿದ್ರೆ ಮಾಡಬೇಡಿ.ನಿದ್ರೆ ಸಮಸ್ಯೆಗೆ ಇದು ಕಾರಣವಾಗುತ್ತದೆ. 

click me!