Lord Shani: ಮನೆಯಲ್ಲಿ ಶನಿದೇವರ ಮೂರ್ತಿ ಏಕೆ ಇರೋದಿಲ್ಲ ಗೊತ್ತಾ?

Suvarna News   | Asianet News
Published : Feb 26, 2022, 03:08 PM ISTUpdated : Feb 26, 2022, 03:28 PM IST
Lord Shani: ಮನೆಯಲ್ಲಿ ಶನಿದೇವರ ಮೂರ್ತಿ ಏಕೆ ಇರೋದಿಲ್ಲ ಗೊತ್ತಾ?

ಸಾರಾಂಶ

ಶನಿ ಎಂದ್ರೆ ಭಯ ಹುಟ್ಟುವುದು ನಿಜ. ಶನಿಯ ಕಣ್ಣಿಗೆ ಬಿದ್ರೆ ಮುಗೀತು. ಶನಿ ದೋಷವಿದೆ ಎಂದ್ರೆ ಜನರು ಆತಂಕಕ್ಕೊಳಗಾಗ್ತಾರೆ. ಆದ್ರೆ ಶನಿಯಲ್ಲೂ ಒಳ್ಳೆಯ ಗುಣವಿದೆ. ಅವನ ಆರಾಧನೆಯನ್ನು ಸರಿಯಾಗಿ ಮಾಡ್ಬೇಕು. ಇಂದು ಶನಿದೇವರ ಬಗ್ಗೆ ಒಂದಿಷ್ಟು ವಿಷಯ ತಿಳಿದುಕೊಳ್ಳೋಣ.  

ಶನಿ(Shani) ದೇವನನ್ನು ಅತ್ಯಂತ ಕ್ರೂರ ದೇವತೆ (God) ಎಂದು ಪರಿಗಣಿಸಲಾಗುತ್ತದೆ. ನ್ಯಾಯ ದೇವರು ಎಂದೂ ಶನಿಯನ್ನು ಕರೆಯಲಾಗುತ್ತದೆ. ಶನಿದೇವರು ಸೂರ್ಯದೇವ (Suryadeva )ಮತ್ತು ಅವರ ಪತ್ನಿ ಛಾಯಾರ ಮಗ. ನಾವು ಮಾಡಿದ ಕೆಲಸಕ್ಕೆ ಅನುಗುಣವಾಗಿ ಶನಿದೇವರು ಫಲವನ್ನು ನೀಡುತ್ತಾನೆ ಎಂದು ನಂಬಲಾಗಿದೆ. ಅಂದ್ರೆ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಫಲ ಸಿಗುತ್ತದೆ ಮತ್ತು ಕೆಟ್ಟ ಕೆಲಸ ಮಾಡಿದವರಿಗೆ ಶಿಕ್ಷೆಯಾಗುತ್ತದೆ.

ಶನಿದೇವನ ಅನುಗ್ರಹ ಪಡೆಯುವುದು ಸುಲಭವಲ್ಲ. ಆದ್ರೆ ಶನಿದೇವರ ಕೃಪೆಗೆ ಪಾತ್ರರಾದ್ರೆ ಬಯಸಿದ ಎಲ್ಲವೂ ಲಭಿಸುತ್ತದೆ. ಶನಿ ದೇವರನ್ನು ಪೂಜಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಶನಿದೇವರ ಭಕ್ತರಿಗೆ ಕೊರತೆಯಿಲ್ಲ. ಶನಿವಾರ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಶನಿ ದೇವಾಲಯಗಳಲ್ಲಿ ಭಕ್ತರ ದಂಡೇ ಇರುತ್ತದೆ. ಹಿಂದೂ ಧರ್ಮದಲ್ಲಿ ದೇವರ ಪೂಜೆಗೆ ಮಹತ್ವದ ಸ್ಥಾನವಿದೆ.

ಪ್ರತಿಯೊಬ್ಬರ ಮನೆಯಲ್ಲೂ ದೇವರ ಕೋಣೆ(Pooja room)ಯಿರುತ್ತದೆ. ದೇವರ ಮನೆಯಲ್ಲಿ ಲಕ್ಷ್ಮಿ, ಗಣಪತಿ, ಈಶ್ವರ, ಕೃಷ್ಣ, ಹನುಮಂತ ಹೀಗೆ ಅನೇಕ ದೇವರ ಮೂರ್ತಿ ಅಥವಾ ಫೋಟೋಗಳನ್ನಿಟ್ಟು ಜನರು ಪೂಜೆ ಮಾಡ್ತಾರೆ. ಆದರೆ ಶನಿದೇವನ ವಿಗ್ರಹ ಅಥವಾ ಫೋಟೋವನ್ನು ಇತರ ದೇವರುಗಳಂತೆ ಮನೆಯಲ್ಲಿ ಇಡುವುದಿಲ್ಲ. ಮನೆಯಲ್ಲಿ ಶನಿದೇವರ ಫೋಟೋಕ್ಕೆ ಪೂಜೆ ನಡೆಯುವುದಿಲ್ಲ. ಮನೆಯಲ್ಲಿ ಏಕೆ  ಶನಿದೇವರ ಮೂರ್ತಿ ಅಥವಾ ಫೋಟೋ ಇಡುವುದಿಲ್ಲ ಎಂದು ಯೋಚಿಸಿದ್ದೀರಾ? ಇಂದು ಏಕೆ ಶನಿದೇವರ ಮೂರ್ತಿಯನ್ನು ಮನೆಯಲ್ಲಿ ಇಡುವುದಿಲ್ಲ ಎಂಬುದನ್ನು ಹೇಳ್ತೇವೆ.

ಶನಿದೇವರ ಮೂರ್ತಿಯನ್ನು ಮನೆಯಲ್ಲಿದಿರಲು ಕಾರಣ :  ಧರ್ಮಗ್ರಂಥಗಳಲ್ಲಿ, ಮನೆಯಲ್ಲಿ ಕೆಲವು ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳನ್ನು ಇಡುವುದನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಶನಿದೇವನ ಮೂರ್ತಿಯೂ ಒಂದು. ಶನಿದೇವ(Lord Shani) ಶಾಪಗ್ರಸ್ತನಾಗಿದ್ದಾನೆ. ಪೌರಾಣಿಕ ನಂಬಿಕೆಯ ಪ್ರಕಾರ, ಶನಿದೇವನು ಯಾರ ಮೇಲೆ ದೃಷ್ಟಿ ಹಾಯಿಸಿದರೂ ಅದು ಅಶುಭವಾಗುತ್ತದೆ ಎಂಬ ಶಾಪವಿದೆ. ಹಾಗಾಗಿ ಶನಿಯ ವಿಗ್ರಹವನ್ನು ಅಥವಾ ಫೋಟೋವನ್ನು ಮನೆಯಲ್ಲಿ ಇಡುವುದಿಲ್ಲ. ಶನಿದೇವರ ದೃಷ್ಟಿಯಿಂದ ದೂರ ಉಳಿಯಬೇಕು ಎಂಬ ಕಾರಣಕ್ಕಾಗಿಯೇ ಜನರು ಶನಿ ದೇವರನ್ನು ದೇವಸ್ಥಾನದಲ್ಲಿ ಮಾತ್ರ ಪೂಜೆ ಮಾಡ್ತಾರೆ.

ಶನಿ ದೇವರ ಪೂಜೆ ವಿಧಾನ : ಇಷ್ಟೇ ಅಲ್ಲ, ಶನಿದೇವರ ಪೂಜೆ ಮಾಡುವಾಗಲೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ದೇವರ ಮುಂದೆ ಕುಳಿತು ಪ್ರಾರ್ಥನೆ ಮಾಡ್ತೇವೆ. ದೇವರ ಕಣ್ಣುಗಳನ್ನು ನೋಡ್ತಾ, ಆಸೆ ಈಡೇರಿಸುವಂತೆ ಬೇಡಿಕೊಳ್ತೇವೆ. ಆದ್ರೆ ಶನಿ ದೇವರನ್ನು ಎಂದಿಗೂ ನೇರವಾಗಿ ನೋಡಬಾರದು. ಶನಿಯನ್ನು ಪೂಜಿಸುವಾಗಲೂ ಕೂಡ ಮೂರ್ತಿಯ ಮುಂದೆ ನೇರವಾಗಿ ನಿಂತು ಶನಿಯನ್ನು ನೋಡಬಾರದು. ಬದಲಿಗೆ, ವಿಗ್ರಹದ ಬಲ(right) ಅಥವಾ ಎಡ(left)ಭಾಗದಲ್ಲಿ ನಿಂತು ಶನಿದೇವನ ದರ್ಶನವನ್ನು ಯಾವಾಗಲೂ ಪಡೆಯಬೇಕು.  

Festive Tips: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!

ಇಂಥಹ ವಿಗ್ರಹವನ್ನು ಪೂಜಿಸಿ : ಮೊದಲೇ ಹೇಳಿದಂತೆ ಶನಿದೇವರ ಮೂರ್ತಿಯನ್ನು ನೇರವಾಗಿ ಪೂಜಿಸಬಾರದು. ಶನಿದೇವನ ದರ್ಶನವಾಗದಿರಲು ಶನಿದೇವನ ವಿಗ್ರಹದ ಬದಲಾಗಿ ಆತನ ಶಿಲಾರೂಪದ ದರ್ಶನ ಪಡೆಯುವುದು ಉತ್ತಮ. ಶನಿಯ ಕಣ್ಣನ್ನು ನೋಡುವ ಬದಲು ಪಾದವನ್ನು ನೋಡಿ ಪೂಜೆ ಮಾಡಿ. ಇದಲ್ಲದೆ ಶನಿಯ ಪ್ರತಿರೂಪಗಳನ್ನು ಪೂಜಿಸಬೇಕು. ಅಂದ್ರೆ ಶನಿ ದೇವರನ್ನು ನೀವು ಪೂಜಿಸಬೇಕೆಂದ್ರೆ ಅಶ್ವತ್ಥ ಮರ(peepal tree)ವನ್ನು ಪೂಜಿಸಬಹುದು. ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಶನಿಯ ಕೃಪೆ ಪಡೆಯಲು ಭಕ್ತರು ದಾನ ಮಾಡುವುದು ಒಳ್ಳೆಯ ಮಾರ್ಗ. ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿದ್ರೆ ಶನಿಯ ಅನುಗ್ರಹವನ್ನು ಸುಲಭವಾಗಿ ಪಡೆಯಬಹುದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.  

Maha Shivratri : ಶಿವರಾತ್ರಿಯಂದು ಪೂಜೆ ಹೀಗೆ ಮಾಡಿದ್ರೆ ನಿಮ್ಮೆಲ್ಲ ಆಸೆಗಳೂ ಈಡೇರುತ್ತವೆ!

ಶನಿವಾರ(Saturday)ವನ್ನು ಶನಿಗೆ ಅರ್ಪಿಸಲಾಗಿದೆ. ಈ ದಿನ ಶನಿದೇವರನ್ನು ಮೆಚ್ಚಿಸಲು ಉಪವಾಸವಿರಬೇಕು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರ ಕಪ್ಪು ಬಟ್ಟೆ, ಬೂಟುಗಳನ್ನು ಹಾಗೂ ಶನಿಗೆ ಇಷ್ಟವಾದ ವಸ್ತುಗಳನ್ನು ದಾನ ಮಾಡಬಹುದು ಇಲ್ಲವೆ ಶನಿದೇವಸ್ಥಾನಕ್ಕೆ ನೀಡಬಹುದು.   

PREV
click me!

Recommended Stories

ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?
ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ