ನಿಮ್ಮ ಕನಸಿನಲ್ಲಿ ಪದೇ ಪದೇ ಹಾವು ಕಾಣಿಸ್ತಾ ಇದೆಯಾ? ಹಾಗಿದ್ದರೆ ನೀವು ಈ ಬಗ್ಗೆ ಸೀರಿಯಸ್ ಆಗಿ ಯೋಚನೆ ಮಾಡಬೇಕಾದ ಸಮಯ ಬಂದಿದೆ ಅಂತ ಅರ್ಥ.
ನಿಜದಲ್ಲಿ ಮಾತ್ರವಲ್ಲ, ಕನಸಿನಲ್ಲಿ ಹಾವು ಬಂದರೂ ಅಂಜಿಕೆಯಾಗುತ್ತದೆ. ಒಮ್ಮೆ ನಿಮ್ಮ ಕನಸಿನಲ್ಲಿ ಹಾವನ್ನು ನೋಡಿದರೆ ಪರವಾಘಿಲ್ಲ, ಆದರೆ ಆಗಾಗ್ಗೆ ಹಾವುಗಳ ಬಗ್ಗೆ ನೀವು ಕನಸು ಕಾಣುತ್ತಿದ್ದರೆ? ಸಾಮಾನ್ಯವಾಗಿ, ಹಾವುಗಳ ಬಗ್ಗೆ ಮರುಕಳಿಸುವ ಕನಸುಗಳು ನಿಮ್ಮ ಜೀವನದಲ್ಲಿ ನೀವು ನಿರ್ಲಕ್ಷಿಸುತ್ತಿರುವ ಅಂಶಗಳನ್ನು ಸೂಚಿಸುತ್ತಿರುಬಹುದು ಎಂದು ಲಿಂಡಾ ಮಾಸ್ಟ್ರಾಂಜೆಲೊ ಎಂಬ ಮಾನಸಿಕ ಚಿಕಿತ್ಸಕಿ ಹೇಳುತ್ತಾರೆ.
ಹಾವಿನ ಕನಸುಗಳು ಸದಾ ಬೀಳುತ್ತಿದ್ದರೆ ಈ ಕೆಳಗಿನ ಐದು ಅಂಶಗಳ ಬಗ್ಗೆ ನೀವು ಗಮನ ಹರಿಸಬೇಕು.
1. ನಿಮ್ಮ ಜೀವನದಲ್ಲಿನ ವಿಷಕಾರಿ ವ್ಯಕ್ತಿಗಳು
ನಿಮ್ಮ ಜೀವನದಲ್ಲಿ ಯಾರಾದರೂ ವಿಷಕಾರಿಯಾಗಿ ವರ್ತಿಸುತ್ತಿದ್ದಾರೆಯೇ ಎಂದು ನೋಡಿ. ಅವರು ನಿಮ್ಮ ಕನಸಿನಲ್ಲಿ ಹಾವಿನ ರೂಪ ಪಡೆಯುತ್ತಿರಬಹುದು. ನಿಮ್ಮ ಸುಪ್ತ ಪ್ರಜ್ಞೆಯು ಈ ವ್ಯಕ್ತಿಯ ನಡವಳಿಕೆಯನ್ನು ವಿಷಪೂರಿತ ಹಾವಿನ ರೂಪದಲ್ಲಿ ತೋರಿಸುತ್ತಿರಬಹುದು. ಯಾರು ನಿಮಗೆ ಅಹಿತಕಾರಿ ಎಂದು ಪರಿಶೀಲಿಸಿ. ಹಾವು ಯಾರನ್ನು ಪ್ರತಿನಿಧಿಸುತ್ತದೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ಕನಸಿನ ಸುತ್ತಲಿನ ಸನ್ನಿವೇಶವು ನಿಮಗೆ ಸುಳಿವು ನೀಡಬಹುದು. ಹಾವಿನ ತಲೆಯನ್ನು ಕತ್ತರಿಸುವ ಅಥವಾ ಕೊಲ್ಲುವಂತೆ ನೀವು ಕನಸು ಕಂಡರೆ, ನಿಮ್ಮ ಸುಪ್ತಪ್ರಜ್ಞೆಯು ಈ ವ್ಯಕ್ತಿಯನ್ನು ನಿಮ್ಮ ಜೀವನದಿಂದ ಆಚೆಗಿಡಬೇಕೆಂದು ಸೂಚಿಸುತ್ತಿದೆ ಎಂದರ್ಥ. ಅಥವಾ ಅವರಿಂದ ದೂರ ಸರಿಯಿರಿ.
2. ಯಾವುದರ ಬಗೆಗೋ ಭಯ
ನಿಮ್ಮ ಕನಸಿನಲ್ಲಿ ಬರುವ ಹಾವುಗಳು ನಿಮ್ಮ ಅಮೂರ್ತ ಭಯವನ್ನು ಪ್ರತಿನಿಧಿಸಬಹುದು. ಹಾವುಗಳ ಬಗ್ಗೆ ಮಾನವರಲ್ಲಿ ಆನುವಂಶಿಕ ಫೋಬಿಯಾ (Genetic Phobia) ಇರುತ್ತೆ. ನಿಮ್ಮ ಪೂರ್ವಜರಿಂದ ನೀವು ಈ ಭಯವನ್ನು ಆನುವಂಶಿಕವಾಗಿ ಪಡೆದಿರಬಹುದು. ಏಕೆಂದರೆ ಆದಿಮಾನವರ ಕಾಲದಲ್ಲಿ ಹಾವುಗಳು ಮಾನವರಿಗೆ ಹೆಚ್ಚಿನ ಅಪಾಯಕಾರಿಗಳಾಗಿದ್ದವು. ಆ ಪ್ರಾಥಮಿಕ ಭಯವು ಇನ್ನೂ ನಿಮ್ಮೊಳಗೆ ಇರಬಹುದು. ದೈನಂದಿನ ಧ್ಯಾನ ಅಭ್ಯಾಸ, ಸಾವಧಾನತೆ, ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ, ಪ್ರತಿ ದಿನ ನೀವು ಕೃತಜ್ಞರಾಗಿರುವ ಮೂರು ವಿಷಯಗಳನ್ನು ಬರೆಯುವುದು, ಸ್ನೇಹಿತರನ್ನು ಮಾತನಾಡಿವುದು, ಕೌನ್ಸೆಲಿಂಗ್ (Counselling) ಇತ್ಯಾದಿಗಳು ಈ ಭಯವನ್ನು ಮೀರಲು ನೆರವಾಗುತ್ತದೆ.
3. ನೀವು ಹೊಸದನ್ನು ಕಲಿಯಬೇಕಿದೆ (Learn Something New)
ಕನಸಿನಲ್ಲಿ ಬರುವ ಹಾವುಗಳು ಯಾವಾಗಲೂ ನಕಾರಾತ್ಮಕ ಸಂಕೇತಗಳಲ್ಲ (Negative Symbol). ಕೆಲವು ಕನಸುಗಳು ಒಳ್ಳೆಯ ಶಕುನಗಳೂ ಆಗಿರಬಹುದು. ಮನೋವಿಶ್ಲೇಷಣೆಯ ಪ್ರವರ್ತಕರಲ್ಲಿ ಒಬ್ಬರಾದ ಕಾರ್ಲ್ ಜಂಗ್, ಹಾವುಗಳನ್ನು ಅತೀಂದ್ರಿಯತೆಯ ಸಂಕೇತವಾಗಿ ನೋಡುತ್ತಾರೆ. ಆಧ್ಯಾತ್ಮಿಕ ಪ್ರಗತಿಯಂತಹ ನಿಮ್ಮ ಸಾಮಾನ್ಯ ಮಿತಿಗಳನ್ನು ಮೀರಿದ ಅನುಭವವೂ ಆಗಿರಬಹುದು. ಉದಾಹರಣೆಗೆ, ತನ್ನದೇ ಆದ ಬಾಲವನ್ನು ತಿನ್ನುವ ಹಾವಿನ ಸಂಕೇತವು- ರೂಪಾಂತರ ಮತ್ತು ಪುನರ್ಜನ್ಮದ ಚಕ್ರವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದು ನಿಮ್ಮ ಸ್ವಂತ ಜೀವನದಲ್ಲಿ ವೈಯಕ್ತಿಕ ರೂಪಾಂತರ ಅಥವಾ ಹೊಸತನವನ್ನು ಸೂಚಿಸುತ್ತದೆ. ಆದ್ದರಿಂದ ಮುಕ್ತವಾಗಿ, ತಮಾಷೆಯಾಗಿ ಮತ್ತು ಕುತೂಹಲದಿಂದ ಇರಿ.
ಈ ಜನರನ್ನು ಎಂದಿಗೂ ಮನೆಯಿಂದ ಖಾಲಿ ಕೈಯಲ್ಲಿ ಕಳುಹಿಸಬಾರದು!
4. ನಿಮ್ಮ ಜೀವನ ಬದಲಾಗುತ್ತಿದೆ
ಹಾವುಗಳ ಬಗ್ಗೆ ಕನಸು ಕಾಣುವುದು ನಿಮ್ಮ ಜೀವನದಲ್ಲಿ ಆಗಲಿರುವ ದೊಡ್ಡ ಬದಲಾವಣೆಗೆ ಸಂಬಂಧಿಸಿರಬಹುದು. ಹೊಸ ಕೆಲಸ ಅಥವಾ ಹೊಸ ಸಂಬಂಧದಂತಹ ಬದಲಾವಣೆ ಇರಬಹುದು. ಹೊಸ ನಗರಕ್ಕೆ ಸ್ಥಳಾಂತರಗೊಳ್ಳಬಹುದು. ನಿಮ್ಮ ಹಾವಿನ ಕನಸುಗಳು ಜೀವನದ ಬದಲಾವಣೆಯ ಆತಂಕದಿಂದ ಹುಟ್ಟಿಕೊಂಡಿವೆ ಎಂದು ನೀವು ಭಾವಿಸಿದರೆ, ನಿಮ್ಮ ಆತಂಕದ ಆಲೋಚನೆಗಳನ್ನು ಬರೆಯುವುದು ಅಥವಾ ವಿಶ್ವಾಸಾರ್ಹ ಸ್ನೇಹಿತರೊಂದಿಗೆ ಚಾಟ್ ಮಾಡುವುದು ಮಾಡಿ. ಈ ಬದಲಾವಣೆಗಳ ಬಗ್ಗೆ ನೀವು ಹೆಚ್ಚು ಜಾಗೃತರಾಗಿರುವಿರಿ. ಆಗ ನೀವು ಅವುಗಳನ್ನು ಎಚ್ಚರಿಕೆಯಿಂದ ನಿರ್ವಹಿಸಬಹುದು.
5. ನಿಮ್ಮ ಆರೋಗ್ಯ (Health) ನಿಮ್ಮ ಮನಸ್ಸಿನಲ್ಲಿದೆ (Mind)
ನೀವು ಯಾವುದಾದರೂ ದೈಹಿಕ ಕಾಯಿಲೆ ಹೊಂದಿದ್ದರೆ ಕೂಡ ನಿಮ್ಮ ಕನಸಿನ ದೃಶ್ಯದಲ್ಲಿ ಹಾವುಗಳು ಬರುವುದನ್ನು ನೀವು ಕಾಣಬಹುದು. ವಿಶೇಷವಾಗಿ ಹಾವುಗಳು ಮತ್ತು ಚಿಕಿತ್ಸೆ ಪ್ರಾಚೀನ ಕಾಲದಿಂದಲೂ ಸಮಾನಾರ್ಥಕವಾಗಿವೆ. ಪ್ರಪಂಚದಾದ್ಯಂತದ ವೈದ್ಯಕೀಯ ಸಂಘಗಳು ಹಾವಿನ ಚಿಹ್ನೆಯನ್ನು ಅಳವಡಿಸಿಕೊಂಡಿವೆ. ಆಸ್ಪತ್ರೆಗಳು, ಆಂಬ್ಯುಲೆನ್ಸ್‌ಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಧ್ವಜಗಳಲ್ಲಿ ನೀವು ಅದನ್ನು ಕಾಣಬಹುದು. ಹಾವಿನ ಕನಸುಗಳು, ನಿಮ್ಮ ದೇಹವು ಗುಣವಾಗಬೇಕು ಅಥವಾ ಈಗಾಗಲೇ ಗುಣವಾಗುವ ಪ್ರಕ್ರಿಯೆಯಲ್ಲಿದೆ ಎಂದು ಸೂಚಿಸುತ್ತದೆ. ಹೀಗಿದ್ದಾಗ, ನಿಮ್ಮ ಜೀವನದಲ್ಲಿ ನಿಮ್ಮ ದೈಹಿಕ ಅಥವಾ ಮಾನಸಿಕ ಆರೋಗ್ಯವನ್ನು ಹದಗೆಡಿಸುವ ಯಾವುದನ್ನೇ ಆದರೂ ಪರಿಗಣಿಸಿ. ಜೀವನದ ತೊಂದರೆಗಳಿಂದ ಉಂಟಾಗುವ ನಕಾರಾತ್ಮಕ ಆಲೋಚನೆಗಳು ಅಥವಾ ಭಾವನೆಗಳು ಕೆಲವೊಮ್ಮೆ ನಿಮ್ಮ ದೇಹದ ಹಾರ್ಮೋನ್ ಅಸಮತೋಲನಗೊಳಿಸಬಹುದು. ಇದು ನಿಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ಹೀಗಿರುವಾಗ ನಿಮ್ಮ ಸ್ವಯಂ- ಆರೈಕೆಯನ್ನು ಹೆಚ್ಚಿಸಿ. ವಿಶ್ರಾಂತಿಗಾಗಿ ಹೆಚ್ಚಿನ ಸಮಯ ನೀಡಿ.
ಈ ರಾಶಿಯವರು ತಾಳ್ಮೆ ಮತ್ತು ಸೌಮ್ಯತೆಯನ್ನು ಕಾಪಾಡಿಕೊಳ್ಳಿ