ಕೆಲವರಿಗೆ ಅದೇಕೆ ಎಂದೇ ತಿಳಿಯುವುದಿಲ್ಲ, ಆದರೆ, ಸಂಬಂಧಗಳಲ್ಲಿ ಬ್ರೇಕಪ್ ಬೇಗ ಆಗುತ್ತಿರುತ್ತದೆ. ಪ್ರೀತಿಯಾದಷ್ಟೇ ವೇಗವಾಗಿ ಬ್ರೇಕಪ್ ಕೂಡಾ ಆಗುತ್ತದೆ. ಹೀಗೆ ಬೇಗ ಬ್ರೇಕಪ್ ಅನುಭವಿಸುವವರು ಯಾವ ರಾಶಿಗೆ ಸೇರಿರುತ್ತಾರೆ ಗೊತ್ತಾ?
ಪ್ರತಿಯೊಂದು ರಾಶಿಚಕ್ರ ಚಿಹ್ನೆಯು ಆ ವ್ಯಕ್ತಿಯ ಸ್ವಭಾವ ಮತ್ತು ಹಣೆಬರಹವನ್ನು ಹೇಳುತ್ತದೆ. ಈ ಸಂಗತಿಗಳು ನಮಗೆ ಏಕೆ ಸಂಭವಿಸುತ್ತವೆ ಎಂಬುದು ಮೂಲತಃ ಇಲ್ಲಿ ರಾಶಿಚಕ್ರದ ಚಿಹ್ನೆಗಳ ಪ್ರಭಾವ ಎಂದು ನಾವು ಸಾಮಾನ್ಯವಾಗಿ ಭಾವಿಸುತ್ತೇವೆ. ನಮ್ಮ ಕೆಲಸಗಳು ಜಾತಕದಲ್ಲಿ ಹೇಳಿದಂತೆ ನಡೆಯುತ್ತವೆ.
ಸಾಮಾನ್ಯವಾಗಿ ಕೆಲವರು ಸಂಬಂಧಗಳಲ್ಲಿ ಪದೇ ಪದೇ ಬ್ರೇಕ್ ಅಪ್ ಗಳನ್ನು ಎದುರಿಸಬೇಕಾಗುತ್ತದೆ. ಅವರ ಜೀವನದಲ್ಲಿ ಯಾವುದೇ ಸಂಬಂಧವು ಹೆಚ್ಚು ಕಾಲ ಉಳಿಯುವುದಿಲ್ಲ. ಇಂದು ನಾವು ಆ ರಾಶಿ ಚಕ್ರದ ಚಿಹ್ನೆಗಳು ಯಾವುವು ಎಂದು ತಿಳಿಯೋಣ.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯ ಜನರು ತುಂಬಾ ಸೂಕ್ಷ್ಮವಾಗಿರುತ್ತಾರೆ. ಅವರು ಯಾವಾಗಲೂ ನಿಜವಾದ ಪ್ರೀತಿಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಎಲ್ಲದರಲ್ಲೂ ಪರಿಪೂರ್ಣತೆ ಬಯಸುವವರು ಅವರು. ಹಾಗಾಗಿ, ಪ್ರೀತಿಯಲ್ಲೂ ಪರಿಪೂರ್ಣತೆ ಬಯಸುತ್ತಾರೆ. ಸಾಮಾನ್ಯವಾಗಿ ಪ್ರೀತಿಯ ಆರಂಭ ಎಲ್ಲರಿಗೂ ಎಲ್ಲವೂ ಪರ್ಫೆಕ್ಟ್ ಎನಿಸುತ್ತದೆ. ದಿನಗಳೆದಂತೆ ವ್ಯಕ್ತಿಯ ಕುಂದುಕೊರತೆಗಳು ತಿಳಿಯುತ್ತಾ ಹೋಗುತ್ತದೆ. ಅದನ್ನು ಒಪ್ಪಿಕೊಳ್ಳುವುದು ಆಗಬೇಕಾಗಿರುವುದು. ಆದರೆ, ಕನ್ಯಾ ರಾಶಿಯವರಿಗೆ ವ್ಯಕ್ತಿಯ ಕುಂದುಕೊರತೆ ಒಪ್ಪಿಕೊಳ್ಳುವುದು ಸುಲಭವಲ್ಲ. ಹಾಗಾಗಿ, ಪರಿಪೂರ್ಣ ಸಂಗಾತಿಯನ್ನು ಹುಡುಕುವಲ್ಲಿ ಅವರು ವಿಫಲರಾಗುತ್ತಾರೆ. ಆದ್ದರಿಂದ ಅವರ ಪ್ರೀತಿಯ ಜೀವನವು ಎಂದಿಗೂ ಸ್ಥಿರವಾಗಿರುವುದಿಲ್ಲ. ಪದೇ ಪದೇ ಲವ್ ಆದರೂ, ಮತ್ತೆ ಮತ್ತೆ ಬ್ರೇಕಪ್ ಮಾಡಿಕೊಳ್ಳುತ್ತಾರೆ.
ಸೂರ್ಯ ಗ್ರಹಣ ಮುಗಿದ 15 ದಿನದೊಳಗೆ ಬರುತ್ತಿದೆ Chandra Grahan
ಮಿಥುನ ರಾಶಿ (Gemini)
ಮಿಥುನ ರಾಶಿಯವರ ಜೀವನದಲ್ಲಿ ಪ್ರೀತಿ ಹೆಚ್ಚು ಕಾಲ ಉಳಿಯುವುದಿಲ್ಲ. ಅವರ ಸ್ವಭಾವ, ಅತಿಯಾದ ಸಲುಗೆಯ ಪ್ರಯೋಜನ ಪಡೆಯುವವರೇ ಹೆಚ್ಚು. ಮೊದ ಮೊದಲು ಇದನ್ನೆಲ್ಲ ಕ್ಷಮಿಸುತ್ತಾ ಬರುವ ಮಿಥುನ ರಾಶಿಯವರು, ಕಡೆಗೆ ತಾವು ಮೋಸ ಹೋಗುತ್ತಿದ್ದೇವೆಂದು ಭಾವಿಸಿ ಬ್ರೇಕಪ್ ಮೊರೆ ಹೋಗುತ್ತಾರೆ. ಅಲ್ಲದೆ, ಅವರು ಕೆಲಸದಲ್ಲಿ ಮುಳುಗಿದಾಗ ತಮ್ಮ ಸಂಬಂಧಕ್ಕೆ ಸರಿಯಾದ ಸಮಯವನ್ನು ನೀಡುವುದಿಲ್ಲ. ಇದು ತಪ್ಪು ತಿಳುವಳಿಕೆ ಮತ್ತು ಮುರಿದ ಸಂಬಂಧಗಳಿಗೆ ಕಾರಣವಾಗುತ್ತದೆ.
ಧನು ರಾಶಿ (Sagittarius)
ಧನು ರಾಶಿಯವರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ, ಅದು ಅವರನ್ನು ಸಾರ್ವಕಾಲಿಕ ಏಕಾಂಗಿತನ ಆನಂದಿಸುವಂತೆ ಮಾಡುತ್ತದೆ. ಅವರಿಗೆ ಪ್ರೀತಿಯಲ್ಲಿ ಕೂಡಾ ಅಪಾರ ಸ್ವಾತಂತ್ರ್ಯ ಬೇಕು. ತಾವು ಮಾಡಿದ್ದನ್ನೆಲ್ಲ ಪ್ರಶ್ನಿಸುವವರು, ತಮ್ಮನ್ನು ಮನೆಗೆ ಸೀಮಿತಗೊಳಿಸಿ ಕಟ್ಟಿ ಹಾಕುವವರ ಸಂಗದಲ್ಲಿ ಅವರು ಉಸಿರುಗಟ್ಟುವಂಥ ವಾತಾವರಣ ಅನುಭವಿಸುತ್ತಾರೆ. ಇಂಥ ಸ್ಥಿತಿಯಲ್ಲಿ ಅವರು ಹೆಚ್ಚು ಕಾಲ ಇರಲಾರರು. ಅವರು ತಮ್ಮ ಸಂಗಾತಿಯಿಂದ ತಮಗೆ ಕೊಂಚ ಏಕಾಂತದ ಸಮಯ ಹಾಗೂ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಇದು ಸಂಬಂಧದಲ್ಲಿ ಸಿಗುವುದು ಕಠಿಣ ಎನಿಸಿದಾಗ ಬ್ರೇಕಪ್ ಮೊರೆ ಹೋಗುತ್ತಾರೆ.
Guru Uday 2023: ಈ 3 ರಾಶಿಗಳಿಗೆ ಅಪಾಯದ ಅಪಶೃತಿ ತರುವ ಗುರು
ಕುಂಭ ರಾಶಿ (Aquarius)
ಕುಂಭ ರಾಶಿಯವರು ತಮ್ಮದೇ ಮನಸ್ಸಿನ ಯಜಮಾನರು. ಅವರು ತಮ್ಮ ಇಷ್ಟದಂತೆ ಇರಲು ಇಷ್ಟ ಪಡುತ್ತಾರೆ. ಆ ಸಂದರ್ಭದಲ್ಲಿ, ಅವರು ಸಂಗಾತಿಯ ಬಗ್ಗೆ ಯೋಚಿಸುವುದಿಲ್ಲ. ಆಗಾಗ್ಗೆ ಅವರು ತಮ್ಮದೇ ಆದ ಜಗತ್ತಿನಲ್ಲಿ ಮುಳುಗಿರುತ್ತಾರೆ. ತಮ್ಮ ಸಂಗಾತಿಗೆ ಆಗಾಗ್ಗೆ ನೋವುಂಟು ಮಾಡುತ್ತಾರೆ. ಆದರೆ, ಅದರ ಬಗ್ಗೆ ಅವರಿಗೆ ತಿಳಿಯುವುದೇ ಇಲ್ಲ. ಬಹಳ ಸೃಜನಾತ್ಮಕ ಮನಸ್ಸನ್ನು ಹೊಂದಿದ ಅವರಿಗೆ ಸಂಬಂಧದಲ್ಲಿ ನಿರೀಕ್ಷೆಗಳೂ ಹೆಚ್ಚು. ತಾವು ಓದಿದ, ನೋಡಿದಂಥ ಪ್ರೇಮ ಸಂಬಂಧವನ್ನು ಅವರು ಜೀವನದಲ್ಲಿ ಬಯಸುತ್ತಾರೆ. ಆ ಯಾವುದೇ ನಿರೀಕ್ಷೆಗಳು ಪ್ರೀತಿಯಲ್ಲಿ ದೊರೆಯದಾದಾಗ ಅವರು ಸಾಕಷ್ಟು ನೋವು ಅನುಭವಿಸುತ್ತಾರೆ. ತನ್ನ ಆಯ್ಕೆ ತಪ್ಪಾಗಿರಬಹುದು ಎಂಬ ಗೊಂದಲದಲ್ಲಿ ಬಿದ್ದು ಕಡೆಗೊಂದು ದಿನ ಬ್ರೇಕಪ್ ಮಾಡಿಕೊಳ್ಳುತ್ತಾರೆ. ನಂತರ ಈ ಬಗ್ಗೆ ಸಾಕಷ್ಟು ಕೊರಗುತ್ತಾರೆ. ಆದರೆ, ಏನೂ ಬದಲಾಯಿಸಲಾಗದ ಹಂತಕ್ಕೆ ಹೋಗಿರುತ್ತಾರೆ.