Astrology Tips : ಬಲಗೈಯಲ್ಲೇ ಏಕೆ ಊಟ ಮಾಡೋದು?

By Suvarna NewsFirst Published Apr 4, 2023, 2:23 PM IST
Highlights

ಎಡಗೈನಲ್ಲಿ ಮಕ್ಕಳು ಅಪ್ಪಿತಪ್ಪಿ ಆಹಾರ ತಿಂದ್ರೂ, ಛೀ ಅಂತಾ ಮುಖ ಹಿಂಡುವ ನಾವು ಅದನ್ನು ವಿರೋಧಿಸುತ್ತೇವೆ. ಇದು ಕೊಳಕನ್ನು ಸ್ವಚ್ಛಗೊಳಿಸುವ ಕೈ ಎನ್ನುವ ಕಾರಣಕ್ಕೆ ನಾವು ಎಡಗೈ ದೂರವಿಡ್ತೇವೆ. ಆದ್ರೆ ಇದಕ್ಕೆ ಇನ್ನೂ ಕೆಲ ಕಾರಣವಿದೆ.  
 

ಹಿಂದೂ ಧರ್ಮದಲ್ಲಿ ಆಹಾರ ಸೇವನೆಗೂ ಮಹತ್ವವಿದೆ. ಎಲ್ಲೆಂದ್ರಲ್ಲಿ ಕುಳಿತು, ಹೇಗೆಂದ್ರೆ ಹಾಗೆ ಆಹಾರ ಸೇವನೆ ಮಾಡುವಂತಿಲ್ಲ. ಪದ್ಧತಿಯಂತೆ ನೆಲಕ್ಕೆ ಕುಳಿತು, ಕೈನಿಂದ ಆಹಾರ ಸೇವನೆ ಮಾಡ್ಬೇಕು. ಇದು ಕೇವಲ ಪದ್ಧತಿ ಮಾತ್ರವಲ್ಲ. ಇದ್ರಿಂದ ಸಾಕಷ್ಟು ಪ್ರಯೋಜನವಿದೆ. 

ಸ್ಪೂನ್ ಬದಲು ಕೈ (Hand) ನಿಂದ ಆಹಾರ ಸೇವನೆ ಮಾಡಿದಾಗ ಎಲ್ಲಾ ಶಕ್ತಿಗಳು ದೇಹದೊಳಗೆ ಕೈಗಳ ಮೂಲಕ ದೇಹ (Body)  ಸೇರುತ್ತವೆ ಎಂದು  ನಂಬಲಾಗಿದೆ. ಕೈ ಮೂಲಕ ನೀವು ಆಹಾರ ಸೇವನೆ ಮಾಡಿದ್ರೆ ಅದು ಬೇಗ ಜೀರ್ಣವಾಗುತ್ತದೆ. ನಮ್ಮ ದೇಹ ಆರೋಗ್ಯ (Health) ಕರವಾಗಿರುತ್ತದೆ. 

Latest Videos

BAD TIME ಬರುವ ಮೊದಲು ಈ ಕನಸುಗಳು ಬರುತ್ತವೆ!

ಕೈಯಿಂದ ಆಹಾರ ಸೇವನೆ ಮಾಡ್ಬೇಕು ನಿಜ. ಆದ್ರೆ ಯಾವ ಕೈ ಎಂಬ ಪ್ರಶ್ನೆ ಮಕ್ಕಳನ್ನು ಕಾಡುತ್ತದೆ. ಎಡಗೈನಲ್ಲಿ ಆಹಾರ ಸೇವನೆ ಮಾಡ್ಬೇಕೋ ಇಲ್ಲ ಬಲಗೈನಲ್ಲಿ ಸೇವನೆ ಮಾಡ್ಬೇಕೋ ಎಂದು ಮಕ್ಕಳು ಕೇಳ್ತಿರುತ್ತಾರೆ. ಆಗ ದೊಡ್ಡವರಾದ ನಾವು ಬಲಗೈಯಿಂದ ಮಾತ್ರ ಆಹಾರ ಸೇವನೆ ಮಾಡ್ಬೇಕು ಎಂದು ಸೂಚನೆ ನೀಡ್ತೇವೆ. ಎಡಗೈನಲ್ಲಿ ಎಂದಿಗೂ ಆಹಾರ ತಿನ್ನಬೇಡಿ ಎನ್ನುತ್ತೇವೆ. ಆದ್ರೆ ಬಲಗೈನಲ್ಲಿ ಮಾತ್ರ ಯಾಕೆ ಆಹಾರ ಸೇವನೆ ಮಾಡ್ಬೇಕು ಎಂಬ ಪ್ರಶ್ನೆಗೆ ಅನೇಕರಿಗೆ ಸರಿಯಾದ ಉತ್ತರ ತಿಳಿದಿಲ್ಲ.  ಹಿಂದೂ ಧರ್ಮಗ್ರಂಥಗಳಲ್ಲಿಯೂ ಯಾವ ಕೈನಲ್ಲಿ ಆಹಾರ ಸೇವನೆ ಮಾಡ್ಬೇಕು ಎನ್ನುವ ಬಗ್ಗೆ ಉಲ್ಲೇಖಿಸಲಾಗಿದೆ. ಹಿಂದೂಗಳಲ್ಲಿ ಮಾತ್ರವಲ್ಲದೆ ಇತರ ಧರ್ಮಗಳಲ್ಲಿಯೂ ಸಹ ಬಲಗೈಯಿಂದ ಆಹಾರವನ್ನು ತಿನ್ನಲು ಹೇಳಲಾಗುತ್ತದೆ. ನಾವಿಂದು ಯಾಕೆ ಬಲಗೈನಲ್ಲಿ ಆಹಾರ ಸೇವನೆ ಮಾಡ್ಬೇಕು ಎಂಬುದನ್ನು ನಿಮಗೆ ಹೇಳ್ತೇವೆ.  

ಬಲಗೈನಲ್ಲಿ ಏಕೆ ಆಹಾರ ತಿನ್ನಬೇಕು? : ಬಲಗೈಯನ್ನು ಸೂರ್ಯ ಎಂದು ನಂಬಲಾಗಿದೆ. ಯಾವುದೇ ಶಕ್ತಿಯುತ ಕೆಲಸ ಮಾಡುವಾಗ ಬಲಗೈ ಬಳಕೆ ಮಾಡಲು ಇದೇ ಕಾರಣ. ಮೂಗಿನ ಬಲಹೊಳ್ಳೆಯನ್ನು ಸೂರ್ಯನಾಡಿ ಎಂದೇ ಕರೆಯಲಾಗುತ್ತದೆ. ಹಾಗೆಯೇ ಬಲಗೈನಲ್ಲೂ ಸೂರ್ಯನ ಶಕ್ತಿಯಿರುತ್ತದೆ.  ಎಡಗೈ ಚಂದ್ರನ ಸಂಕೇತವಾಗಿದೆ ಎಂದು ನಂಬಲಾಗಿದೆ.  ಇದರಲ್ಲಿ ಕಡಿಮೆ ಶಕ್ತಿ  ಇರುತ್ತದೆ. ಹಾಗಾಗಿಯೇ ಕಡಿಮೆ ಶಕ್ತಿಯ ಕೆಲಸಗಳನ್ನು ಮಾಡುವಾಗ ಜನರು ಎಡಗೈ ಬಳಕೆ ಮಾಡ್ತಾರೆ.  

Zodiac Sign: ಎಲ್ಲೇ ಹೋಗಲಿ ಅದ್ಭುತವಾಗಿ ಚೌಕಾಸಿ ಮಾಡ್ತಾರೆ ಈ ಜನ!

ಶುಭ ಕಾರ್ಯಗಳಲ್ಲೂ ಬಲಗೈಗೆ ಅಗ್ರಸ್ಥಾನ : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಎಲ್ಲಾ ಶುಭ ಕಾರ್ಯಗಳನ್ನು ಯಾವಾಗಲೂ ಬಲಗೈಯಿಂದ ಮಾಡಬೇಕು ಎಂದು ಹೇಳಲಾಗುತ್ತದೆ.  ಆಹಾರವನ್ನು ತಿನ್ನುವುದು  ಅತ್ಯಂತ ಮಂಗಳಕರ ಕೆಲಸಗಳಲ್ಲಿ ಒಂದಾಗಿದೆ. ಈ ಕಾರಣದಿಂದಾಗಿ ಯಾವಾಗಲೂ ಬಲಗೈಯಿಂದ ಆಹಾರವನ್ನು ತಿನ್ನಬೇಕು ಎಂದು ಸಲಹೆ ನೀಡಲಾಗುತ್ತದೆ. ಬಲಗೈನಲ್ಲಿ ಆಹಾರ ಸೇವನೆ ಮಾಡಿದಾಗ ಧನಾತ್ಮಕ ಶಕ್ತಿ ನಮ್ಮ ದೇಹದಲ್ಲಿ ಹರಿಯುತ್ತದೆ.  

ಎಡಗೈನಲ್ಲಿ ಆಹಾರ ಸೇವನೆ ಮಾಡಿದ್ರೆ ಏನಾಗುತ್ತೆ? :  ನಮ್ಮ ಹೃದಯ ನಮ್ಮ ದೇಹದ ಎಡ ಭಾಗದಲ್ಲಿದೆ. ಹಾಗಾಗಿ ಜನರು ಎಡಗೈಯಿಂದ ಯಾವುದೇ ಕಠಿಣ ಕೆಲಸವನ್ನು ಮಾಡುವುದಿಲ್ಲ.  ಶಕ್ತಿಯನ್ನು ವ್ಯಯಿಸುವ ಯಾವುದೇ ಕೆಲಸವನ್ನು ಎಡಗೈನಲ್ಲಿ ಮಾಡಬಾರದು. ಇದರಿಂದ ಹೃದಯ ಒತ್ತಡಕ್ಕೆ ಒಳಗಾಗುತ್ತದೆ. ಯಾವುದಾದ್ರೂ ಸಮಸ್ಯೆ ಕಾಡುವ ಸಾಧ್ಯತೆಯಿರುತ್ತದೆ. ಅದೇ ಬಲಗೈನಲ್ಲಿ ಶಕ್ತಿಯುತ ಕೆಲಸ ಮಾಡಿದ್ರೆ ಅದ್ರಿಂದ ಹೃದಯಕ್ಕೆ ಯಾವುದೇ ಒತ್ತಡ ಬೀಳುವುದಿಲ್ಲ ಎಂದು ನಂಬಲಾಗಿದೆ. 

ಇದಕ್ಕೆ ಬಳಕೆಯಾಗುತ್ತೆ ಎಡಗೈ ? :  ಈಗ ಮೇಲೆ ಹೇಳಿದ ಜ್ಯೋತಿಷ್ಯದ ಕಾರಣವನ್ನು ನೀವು ನಂಬದೆ ಇರಬಹುದು, ಆದ್ರೆ ಎಲ್ಲರೂ ಎಡಗೈಯನ್ನು ಮಲವಿಸರ್ಜನೆ ವೇಳೆ ಗುದದ್ವಾರದ ಸ್ವಚ್ಛತೆಗೆ ಬಳಸ್ತಾರೆ. ಬರಿ ಗುದದ್ವಾರ ಮಾತ್ರವಲ್ಲ ಇತರ ಸ್ಥಳಗಳ ಕೊಳೆಯನ್ನು ಸ್ವಚ್ಛಗೊಳಿಸಲು ಕೂಡ ಎಡಗೈಯನ್ನು ಬಳಸುತ್ತಾರೆ.  ಕೊಳಕನ್ನು ಸ್ವಚ್ಛಗೊಳಿಸಿದ ಕೈಗೆ ಎಷ್ಟೇ ಸೋಪ್ ಹಾಕಿ ಕ್ಲೀನ್ ಮಾಡಿದ್ರೂ ಅದೇ ಕೈನಲ್ಲಿ ಊಟ ಮಾಡಲು ಮನಸ್ಸಾಗೋದಿಲ್ಲ. 
 

click me!