Raksha Bandhan 2023: ನಮ್ಮನ್ನು ರಕ್ಷಿಸುವ ಸ್ತ್ರೀಶಕ್ತಿಯ ಉತ್ಸವ, ಶ್ರೀ ಶ್ರೀ ರವಿಶಂಕರ್‌

By Kannadaprabha News  |  First Published Aug 30, 2023, 10:59 AM IST

ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸುತ್ತೇವೆ. ನಮ್ಮನ್ನು ರಕ್ಷಿಸುವ ಬಂಧನವನ್ನು ಸನ್ಮಾನಿಸಿ, ಸಂಭ್ರಮಿಸುವ ಹಬ್ಬವೇ ರಕ್ಷಾಬಂಧನ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಯಾವುದೇ ಭೇದವಿಲ್ಲದೆ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಹೀಗೆ ಎಲ್ಲರೂ ರಕ್ಷಾಬಂಧನದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.


ಬೆಂಗಳೂರು(ಆ.30):  ಹಿಂದಿನ ದಿನಗಳಲ್ಲಿ ಈ ಹಬ್ಬವು ಒಂದು ಸಂಬಂಧಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಕ್ಷಣಾರ್ಥಕ ಚಿಹ್ನೆಯಾಗಿ ರಾಖಿಯನ್ನು ಪತ್ನಿ, ಮಗಳು ಅಥವಾ ತಾಯಿಯೂ ಸಹ ಕಟ್ಟುತ್ತಿದ್ದಳು. ತಮ್ಮ ಆಶೀರ್ವಾದವನ್ನು ಕೋರಿ ಬರುವ ಭಕ್ತರಿಗೆ ಪ್ರಾಚೀನ ಋುಷಿಗಳು ರಕ್ಷಾದಾರವನ್ನು ಕಟ್ಟುತ್ತಿದ್ದರು.

ಇಂದು ರಕ್ಷಾ ಬಂಧನ

Tap to resize

Latest Videos

ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾಬಂಧನವನ್ನು ಆಚರಿಸುತ್ತೇವೆ. ನಮ್ಮನ್ನು ರಕ್ಷಿಸುವ ಬಂಧನವನ್ನು ಸನ್ಮಾನಿಸಿ, ಸಂಭ್ರಮಿಸುವ ಹಬ್ಬವೇ ರಕ್ಷಾಬಂಧನ. ಈ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ಯಾವುದೇ ಭೇದವಿಲ್ಲದೆ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಹೀಗೆ ಎಲ್ಲರೂ ರಕ್ಷಾಬಂಧನದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

Raksha Bandhan 2023: ಭದ್ರಕಾಲದ ಕರಿನೆರಳಿನಲ್ಲಿ ರಕ್ಷಾಬಂಧನ; ಯಾವಾಗ ರಾಖಿ ಕಟ್ಟಿದರೆ ಉತ್ತಮ..?

ಇಂದಿನ ದಿನಗಳಲ್ಲಿ ಇದು ಸಹೋದರ- ಸಹೋದರಿಯರ ಸಂಬಂಧವನ್ನು ಸಂಭ್ರಮಿಸುವ ಹಬ್ಬವಾಗಿದ್ದರೂ ಸಹ, ಹಿಂದಿನ ದಿನಗಳಲ್ಲಿ ಈ ಹಬ್ಬವು ಒಂದು ಸಂಬಂಧಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಕ್ಷಣಾರ್ಥಕ ಚಿಹ್ನೆಯಾಗಿ ರಾಖಿಯನ್ನು ಪತ್ನಿ, ಮಗಳು ಅಥವಾ ತಾಯಿಯೂ ಸಹ ಕಟ್ಟುತ್ತಿದ್ದಳು. ತಮ್ಮ ಆಶೀರ್ವಾದವನ್ನು ಕೋರಿ ಬರುವ ಭಕ್ತರಿಗೆ ಪ್ರಾಚೀನ ಋುಷಿಗಳು ರಕ್ಷಾದಾರವನ್ನು ಕಟ್ಟುತ್ತಿದ್ದರು. ದುಷ್ಟತನದಿಂದ ರಕ್ಷಿಸಿಕೊಳ್ಳುವ ಸಲುವಾಗಿ ತಮಗೆ ತಾವೇ ಈ ರಕ್ಷಾದಾರವನ್ನು ಕಟ್ಟಿಕೊಳ್ಳುತ್ತಿದ್ದರು. ಇಂದಿನ ದಿನಗಳಲ್ಲಿ ತಮ್ಮ ಸಹೋದರನ ಸುರಕ್ಷತೆಗಾಗಿ ಪವಿತ್ರವಾದ ರಾಖಿಯನ್ನು ಕಟ್ಟಿ, ಸಹೋದರನ ಅಭಿವೃದ್ಧಿಗಾಗಿ ಸಹೋದರಿಯು ಪ್ರಾರ್ಥಿಸುತ್ತಾಳೆ.

ಮಹಿಳೆಯರು ಶಕ್ತಿಯ ಪ್ರತಿರೂಪ

ಸ್ತ್ರೀಯರು ಯಾವುದೇ ಸಮಾಜದ ಬೆನ್ನೆಲುಬು. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ, ಅದು ಆರೋಗ್ಯದ ಕ್ಷೇತ್ರವಾಗಿರಲಿ, ವಿಜ್ಞಾನದ ಕ್ಷೇತ್ರವಾಗಿರಲಿ, ರಾಜಕೀಯದಲ್ಲಾಗಿರಲಿ, ಜ್ಞಾನದ ಕ್ಷೇತ್ರದಲ್ಲಾಗಿರಲಿ, ಇಂದು ಮಹಿಳೆಯರು ನೀಡುತ್ತಿರುವ ಕೊಡುಗೆ ಅಪಾರ. ಒಂದು ಸಮಾಜವು ಬಲಿಷ್ಠವಾಗಿದೆ ಮತ್ತು ಸಾಮರಸ್ಯದಿಂದ ಕೂಡಿದೆ ಎಂದು ನಿರ್ಧರಿಸಲು ಆ ಸಮಾಜದ ಮಹಿಳೆಯರ ಯೋಗಕ್ಷೇಮ ಮತ್ತು ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಕೇವಲ ಪುರುಷರು ಮಾತ್ರ ಶಕ್ತಿಶಾಲಿಗಳು, ಮಹಿಳೆಯರು ದುರ್ಬಲರು, ಅಸಹಾಯಕರು, ಬಲವಿಹೀನರು ಎಂಬುದು ಸಾಮಾನ್ಯವಾದ ಪರಿಕಲ್ಪನೆ. ಈ ತಪ್ಪಾದ ಪರಿಕಲ್ಪನೆಯನ್ನು ದೂರ ಮಾಡಲೇಬೇಕು. ಸೂಕ್ಷ್ಮವಾಗಿ ಗಮನಿಸಿದರೆ, ಮಹಿಳೆಯರು ಶಕ್ತಿಯ ಸಾಕಾರ. ಮಹಿಳೆಯರೂ ರಕ್ಷಿಸಬಲ್ಲರು. ತಮ್ಮ ದೈಹಿಕ ಬಲದಿಂದ ರಕ್ಷಿಸುವವರು ಕೇವಲ ಪುರುಷರು ಮಾತ್ರವೇ ಅಲ್ಲ. ಮಹಿಳೆಯರು ತಮ್ಮ ಆತ್ಮಬಲ, ದಿಟ್ಟತನ, ದೃಢ ಸಂಕಲ್ಪ, ದೈಹಿಕ ಬಲ, ಹೃದಯ ಶ್ರೀಮಂತಿಕೆ ಮತ್ತು ಅದಮ್ಯ ಮನೋಬಲದಿಂದ ರಕ್ಷಣೆಯನ್ನು ನೀಡಬಲ್ಲರು. ಭಾರತೀಯ ಶಾಸ್ತ್ರಗಳು ಮಹಿಳೆಯರಲ್ಲಿ ಅಪಾರ ಬಲವಿದೆ ಎಂದು ಒಪ್ಪಿಕೊಂಡಿವೆ. ವಾಸ್ತವವಾಗಿ, ಬ್ರಹ್ಮಾಂಡದ ಮೂಲ ಶಕ್ತಿ, ಇಡೀ ಬ್ರಹ್ಮಾಂಡದ ಅಸ್ತಿತ್ವವಾಗಿರುವ ಜೀವಶಕ್ತಿಯು ಸ್ತ್ರೀಶಕ್ತಿ. ಹೀಗೆ, ಮಹಿಳೆಯರು ದೈವತ್ವದ ಅತ್ಯುನ್ನತ ಹಾಗೂ ವೈಭವಯುತವಾದ ಸ್ವರೂಪ.

LPG Gas Price: ರಕ್ಷಾಬಂಧನಕ್ಕೆ ಕೇಂದ್ರದ ಬಂಪರ್ ಗಿಫ್ಟ್, ಗ್ಯಾಸ್ ಸಿಲಿಂಡರ್ ಬೆಲೆ 200 ರೂ ಇಳಿಕೆ!

ತಮ್ಮ ದೃಢ ಸಂಕಲ್ಪದಿಂದ ತಮ್ಮ ಸಹೋದರರನ್ನು, ಸಹೋದರಿಯರನ್ನು, ಹಿರಿಯರನ್ನು, ಪುರುಷರನ್ನು ರಕ್ಷಿಸುತ್ತಾರೆ ಎಂಬುದರ ಪ್ರತೀಕವಾಗಿ ಮಹಿಳೆಯರು ರಕ್ಷಾಬಂಧನದ ದಿನದಂದು ರಾಖಿಯನ್ನು ಕಟ್ಟಿ, ತಮ್ಮ ರಕ್ಷೆಯನ್ನು, ಆಶೀರ್ವಾದವನ್ನು ನೀಡುತ್ತಾರೆ. ಇದು ಸುರಕ್ಷತೆಯ ಬಂಧ. ಮಹಿಳೆಯರು ದೈವೀ ಶಕ್ತಿಯನ್ನು ಹೊಂದಿರುವುದರಿಂದ, ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ತಾವು ಬಲಹೀನರು ಎಂದು ಮಹಿಳೆಯರು ಭಾವಿಸಲೇಬಾರದು.

ಸುರಕ್ಷಿತ ವಾತಾವರಣದ ಭರವಸೆ

ಅನೇಕ ಏರಿಳಿತಗಳಿಂದ ಕೂಡಿದ ಸಮಾಜದಲ್ಲಿ, ಜಗತ್ತಿನಲ್ಲಿ ನಾವು ಜೀವಿಸುತ್ತಿದ್ದೇವೆ. ಏನೋ ಒಂದು ವಾದವಿವಾದ, ಅಪಾರ್ಥಗಳು, ಭಿನ್ನಾಭಿಪ್ರಾಯಗಳು ಸದಾ ಇರುತ್ತವೆ. ಇದರಿಂದ ಒತ್ತಡ, ಅಸುರಕ್ಷತೆ, ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಕುಟುಂಬದ ಸದಸ್ಯರೇ ಒಬ್ಬರನ್ನೊಬ್ಬರು ಕಂಡು ಭಯಪಡುತ್ತಿದ್ದರೆ ಶಾಂತಿ ನೆಲೆಸಲು ಹೇಗೆ ತಾನೆ ಸಾಧ್ಯ? ಅದೇ ರೀತಿಯಾಗಿ ಒಂದು ಸಮಾಜವು ಅಪನಂಬಿಕೆಯಲ್ಲಿ, ಭಯದಲ್ಲಿ ಜೀವಿಸುತ್ತಿದ್ದಾಗ, ಅದರಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕಾಣುವುದು ಕಷ್ಟಸಾಧ್ಯ. ಒಬ್ಬರಿಗೊಬ್ಬರು ತಮ್ಮ ಬದ್ಧತೆಯನ್ನು, ಆತ್ಮೀಯತೆಯನ್ನು ಬೆಳೆಸಿಕೊಂಡಾಗ, ಕುಟುಂಬಗಳು ಮತ್ತು ಸಮಾಜಗಳು ಉದ್ಧಾರವಾಗುತ್ತವೆ. ಅಪನಂಬಿಕೆಯನ್ನು ಹೋಗಲಾಡಿಸಿ, ಒಬ್ಬರಿಗೊಬ್ಬರು ಅಂತರವನ್ನು ದೂರ ಮಾಡಿ, ನೋಡು, ನಾನು ನಿನ್ನೊಡನಿದ್ದೇನೆ ಎಂಬ ಆಶ್ವಾಸನೆಯನ್ನು ನೀಡುವ ಒಂದು ಮಧುರವಾದ ಸಂದರ್ಭವೇ ರಕ್ಷಾಬಂಧನ ಎಂದು ಆರ್ಟ್‌ ಆಫ್‌ ಲಿವಿಂಗ್‌ ಶ್ರೀ ಶ್ರೀ ರವಿಶಂಕರ್‌ ತಿಳಿಸಿದ್ದಾರೆ. 

click me!