ಸಾವಿನ ಮನೆಯಲ್ಲಿ ಸೂತಕ ಸರಿ… ಮಗು ಹುಟ್ಟಿದಾಗಲೂ ಸೂತಕ ಯಾಕೆ? ಇದರ ಹಿಂದಿನ ಅಸಲಿ ಕಾರಣವೇನು?

Published : Nov 25, 2026, 01:09 PM IST
Sutak Meaning

ಸಾರಾಂಶ

ಮನೆಯಲ್ಲೊಂದು ಮಗು ಜನಿಸಿದಾಗಲೂ, ಕುಟುಂಬದಲ್ಲಿ ಸಾವು ಸಂಭವಿಸಿದಾಗಲೂ 13 ದಿನಗಳ ಕಾಲ ಸೂತಕ ಆಚರಿಸುವ ಸಂಪ್ರದಾಯವಿದೆ. ಅಷ್ಟಕ್ಕೂ ಜನನ ಮತ್ತು ಮರಣ ಎರಡಕ್ಕೂ ಸೂತಕ ಯಾಕೆ? ಸೂತಕ ಎಂದರೆ ನಿಜಕ್ಕೂ ಅಶುದ್ಧತೆಯೇ? ಇದರ ಹಿಂದಿರುವ ಧಾರ್ಮಿಕ ನಂಬಿಕೆ, ಸಾಮಾಜಿಕ ಹಿನ್ನೆಲೆ ಮತ್ತು ಆರೋಗ್ಯದ ದೃಷ್ಟಿಕೋನವನ್ನು ಈ ಲೇಖನದಲ್ಲಿ ತಿಳಿಯೋಣ.

ಹುಟ್ಟಿಗೂ ಸೂತಕ, ಸಾವಿಗೂ ಸೂತಕ

ಸಾಮಾನ್ಯವಾಗಿ ಹಿಂದೂ ಧರ್ಮದ ಆಚರಣೆಗಳಲ್ಲಿ ಒಂದು ಮಗು ಹುಟ್ಟಿದಾಗ ಅಥವಾ ಮನೆಯಲ್ಲಿ ಒಂದು ಸಾವು ಆದಾಗ ಆ ಸಂದರ್ಭದಲ್ಲಿ 13 ದಿನಗಳ ಕಾಲ ಸೂತಕವನ್ನು ಆಚರಿಸಲಾಗುತ್ತದೆ. ಆ ಮನೆಗೆ ಯಾರೂ ಹೋಗಬಾರದು, ಅಲ್ಲಿ ಊಟ ತಿಂಡಿ ಮಾಡುವಂತಿಲ್ಲ, ಆ ಮನೆಯವರು ಸಹ ಬೇರೆ ಕಾರ್ಯಕ್ರಮಗಳಿಗೆ, ಬೇರೆಯವರ ಮನೆಗಳಿಗೆ ಹೋಗುವಂತಿಲ್ಲ ಎನ್ನುವ ಸಂಪ್ರದಾಯ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಅಷ್ಟಕ್ಕೂ ಈ ಆಚರಣೆ ಯಾಕೆ ಬಂತು? ಸಾವಿನ ಮನೆ, ಮಗು ಹುಟ್ಟಿದ ಮನೆ ನಿಜಕ್ಕೂ ಅಶುದ್ಧವೇ? ಏನಿದು ಆಚರಣೆ? ಇಲ್ಲಿದೆ ಆ ಕುರಿತು ಸಂಪೂರ್ಣ ವಿವರಣೆ.

ಸೂತಕ ಅಂದ್ರೆ ಅಶುದ್ಧ ಅಲ್ಲ… ಇದೊಂದು ಆರೋಗ್ಯಕರ ಪದ್ಧತಿ

ಕೊರೋನಾ ಬಂದಾಗ ರೋಗಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡಬಾರದು ಎಂದು ಹೇಗೆ ಕ್ವಾರಂಟೈನ್ ಮಾಡಲಾಗಿತ್ತೋ, ಅದೇ ರೀತಿ ಸಾವಿರಾರು ವರ್ಷಗಳ ಹಿಂದೆ ನಮ್ಮ ಹಿರಿಯರು ಸಹ ಆರಂಭಿಸಿದ ಪದ್ದತಿಯೇ ಈ ಸೂತಕ.

ಜನನದ ಸೂತಕ ಯಾಕೆ?

ಆಗಷ್ಟೇ ಹುಟ್ಟಿದ ಮಗುವಿಗೆ ಇಮ್ಯೂನಿಟಿ ಪವರ್ ತುಂಬಾನೆ ಕಡಿಮೆ ಇರುತ್ತಿತ್ತು. ಮೊದಲಿನ ಕಾಲದಲ್ಲಿ ಯಾವುದಕ್ಕೂ ಸರಿಯಾದ ಔಷಧಿಯೂ ಇರಲಿಲ್ಲ. ಹಾಗಾಗಿ ಮಗು ತುಂಬಾ ಜನರಿರುವ ಪ್ರದೇಶಕ್ಕೆ ಹೋದರೆ , ಅಥವಾ ಮಗು ಇರುವ ಮನೆಗೆ ತುಂಬಾ ಜನ ಬಂದರೆ ಮಗುವಿಗೆ ಇನ್’ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚಿತ್ತು. ಜೊತೆಗೆ ಆಗಷ್ಟೇ ತಾಯಿಯಾದ ಮಹಿಳೆಗೂ ಸಾಕಷ್ಟು ವಿಶ್ರಾಂತಿಯ ಅಗತ್ಯ ಇತ್ತು, ಹಾಗಾಗಿ ಸೂತಕದ ಹೆಸರಿನ ಮೂಲಕ 13 ದಿನ ಜನರಿಂದ ದೂರ ಇರಲಾಗುತ್ತಿತ್ತು.

ಸಾವಿನ ಮನೆಯಲ್ಲಿ ಸೂತಕ ಯಾಕೆ?

ಸಾವಿನ ಮನೆಯಲ್ಲಿ ಸೂತಕ ಅನ್ನೋದು ನೋವಿನ ವಿಚಾರವೇ ಸರಿ. ಮೊದಲನೇಯದಾಗಿ ಹಿಂದಿನ ಕಾಲದಲ್ಲಿ ಜನರು ವಿವಿಧ ರೋಗಗಳಿಗೆ, ಸೋಂಕುಗಳಿಗೆ ಒಳಗಾಗಿ ಸಾವನ್ನಪ್ಪುತ್ತಿದ್ದರು. ಆ ಸಂದರ್ಭದಲ್ಲಿ ಯಾರಿಗೆ ಯಾವ ಸೋಂಕು ತಗುಲಿದೆ ಎನ್ನುವುದು ಗೊತ್ತಿರಲಿಲ್ಲ. ಹಾಗಾಗಿ 13 ದಿನ ಸಾವನ್ನಪ್ಪಿದ ಮನೆಯ ಸದಸ್ಯರು ಸೂತಕ ಆಚರಿಸುವ ಮೂಲಕ, ಇತರ ಜನರಿಂದ ತಮ್ಮನ್ನು ದೂರ ಇಡುತ್ತಿದ್ದರು. ಸೋಂಕು ಹರಡುವುದಾದರೆ 13 ದಿನಗಳಲ್ಲೇ ಹರಡುತ್ತದೆ. ಹಾಗಾಗಿ ಇದೊಂದು ಸಾಮಾಜಿಕ ಆರೋಗ್ಯವನ್ನು ಕಾಪಾಡುವ ಪದ್ದತಿಯೂ ಆಗಿದೆ. ಇನ್ನು ಸಾವಿನ ಮನೆಯಲ್ಲಿ ಎಲ್ಲರ ಮನಸ್ಸಿನಲ್ಲಿಯೂ ದುಃಖ ತುಂಬಿರುತ್ತದೆ. ಅವರಿಗೆ ಯಾರ ಬಳಿಯೂ ಮಾತನಾಡುವ ಮನಸು ಇರೋದಿಲ್ಲ. ಹಾಗಾಗಿ ತಮ್ಮ ದುಃಖವನ್ನು ಹಗುರ ಮಾಡಲು 13 ದಿನ ತಮ್ಮನ್ನು ತಾವು ಎಲ್ಲರಿಂದ ದೂರ ಇಡುವುದೇ ಸೂತಕ. ಇಷ್ಟೇ… ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಸೂತಕ ಅಂದ್ರೆ, ಅಶುದ್ಧ ಎನ್ನುತ್ತಾ, ಅವರನ್ನು ದೂರ ಇಡುತ್ತಾ ಬಂದಿದ್ದಾರೆ ಜನ.

PREV
Read more Articles on
click me!

Recommended Stories

Astrology: ಮಂಗಳ-ಕೇತು ಒಗ್ಗೂಡಿಕೆಯಿಂದ 6 ರಾಶಿಗೆ ಬಂದಾಯ್ತು ರಾಜಯೋಗ, ಧನಯೋಗ ಸಮಯ
ಚಂದ್ರ-ಯುರೇನಸ್ ಸಂಯೋಗದಿಂದ ಮುಂದಿನ ಅಂಬಾನಿ ನೀವೇ! ಕೋಟಿ ಕೋಟಿ ಲಾಭ, 6 ರಾಶಿಗೆ ಅದೃಷ್ಟ