ಇಂದು ಕಾರ್ತಿಕ ಪೂರ್ಣಿಮೆ: ಈ 6 ವಸ್ತುಗಳನ್ನು ದಾನ ಮಾಡಿದರೆ ಸಿಗಲಿದೆ ದುಪ್ಪಟ್ಟು ಪುಣ್ಯ!

Published : Nov 24, 2026, 03:38 PM IST
Kartik Purnima

ಸಾರಾಂಶ

Kartik Purnima 2026: ಕಾರ್ತಿಕ ಪೂರ್ಣಿಮೆಯಂದು ದಾನ ಮಾಡುವುದಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ. ಈ ದಿನ ಅಕ್ಕಿ, ಬೇಳೆ, ಎಳ್ಳು, ತುಪ್ಪ, ಬೆಚ್ಚಗಿನ ಬಟ್ಟೆ, ಕಂಬಳಿ ಸೇರಿದಂತೆ 6 ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯಫಲ ಸಿಗುತ್ತದೆ ಎಂಬ ನಂಬಿಕೆಯಿದೆ. ಕಾರ್ತಿಕ ಪೂರ್ಣಿಮೆಯಂದು ಯಾವೆಲ್ಲಾ ವಸ್ತುಗಳನ್ನು ದಾನ ಮಾಡಬೇಕು ನೋಡೋಣ.

ಕಾರ್ತಿಕ ಹುಣ್ಣಿಮೆಯಂದು ದಾನದ ಮಹತ್ವ

ಇಂದು ನವೆಂಬರ್ 24ರಂದು ಪವಿತ್ರ ಕಾರ್ತಿಕ ಪೂರ್ಣಿಮೆ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ದಿನ ಭಗವಾನ್ ವಿಷ್ಣು, ಶಿವ ಮತ್ತು ತಾಯಿ ಲಕ್ಷ್ಮಿಯನ್ನು ಆರಾಧಿಸುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಮುಂಜಾನೆ ಬೇಗ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ, ಸಂಜೆ ದೀಪ ಬೆಳಗಿಸಿ, ಅಗತ್ಯವಿರುವವರಿಗೆ ಸಹಾಯ ಮಾಡಿದರೆ ಒಳ್ಳೆಯದು. ಈ ದಿನ ದಾನ ಮಾಡುವುದಕ್ಕೂ ಹೆಚ್ಚಿನ ಮಹತ್ವವಿದೆ. ಸಹಾಯಕ್ಕಾಗಿ ಬಂದ ವ್ಯಕ್ತಿಯನ್ನು ಬರಿಗೈಯಲ್ಲಿ ವಾಪಸ್ ಕಳುಹಿಸದೆ ಅವರಿಗೆ ನೆರವಾಗುವುದು ಅತ್ಯಂತ ದೊಡ್ಡ ಸೇವೆ. ಹಾಗಾದರೆ ಕಾರ್ತಿಕ ಪೂರ್ಣಿಮೆಯಂದು ಯಾವೆಲ್ಲಾ ವಸ್ತುಗಳನ್ನು ದಾನ ಮಾಡುವುದು ಶುಭಕರ ಎಂದು ತಿಳಿಯೋಣ.

ಕಾರ್ತಿಕ ಪೂರ್ಣಿಮೆಯಂದು ಏನೆಲ್ಲಾ ದಾನ ಮಾಡಬೇಕು?

ಸಂಪೂರ್ಣ ಕಾರ್ತಿಕ ಮಾಸವೇ ವಿಷ್ಣುವಿನ ಕೃಪೆಗೆ ಪಾತ್ರರಾಗಲು ವಿಶೇಷವಾದದ್ದು. ಅದರಲ್ಲೂ ಹುಣ್ಣಿಮೆಯ ದಿನ ಮಾಡುವ ದಾನವು ಹಲವು ಪಟ್ಟು ಪುಣ್ಯ ಫಲವನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಸರಿಯಾದ ಉದ್ದೇಶದಿಂದ ನೀಡುವ ಅಲ್ಪ ಪ್ರಮಾಣದ ದಾನವೂ ಜೀವನದ ಅನೇಕ ಕಷ್ಟಗಳನ್ನು ದೂರ ಮಾಡುತ್ತದೆ ಎಂದು ಹಿರಿಯರು ಹೇಳುತ್ತಾರೆ.

ಆಹಾರ ಧಾನ್ಯಗಳು ಮತ್ತು ದಿನಸಿ ಸಾಮಗ್ರಿಗಳು:

ಬಡ ಅಥವಾ ಅಗತ್ಯವಿರುವ ಕುಟುಂಬಗಳಿಗೆ ಅಕ್ಕಿ, ಗೋಧಿ ಹಿಟ್ಟು ಅಥವಾ ಬೇಳೆಯನ್ನು ನೀಡುವುದು ಉತ್ತಮ. ಹಸಿದವರಿಗೆ ಹೊಟ್ಟೆ ತುಂಬಿಸುವುದಕ್ಕಿಂತ ದೊಡ್ಡ ಪುಣ್ಯ ಮತ್ತೊಂದಿಲ್ಲ.

ಎಳ್ಳು ದಾನ:

ಚಳಿಗಾಲದ ಆರಂಭದ ಸಮಯದಲ್ಲಿ ಎಳ್ಳನ್ನು ದಾನ ಮಾಡುವುದು ಆರೋಗ್ಯ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ವಿಶೇಷ ಮಹತ್ವವನ್ನು ಹೊಂದಿದೆ.

ತುಪ್ಪ ಮತ್ತು ಎಣ್ಣೆ:

ಪೂಜೆ ಅಥವಾ ಅಡುಗೆಗೆ ಬಳಸುವ ಶುದ್ಧ ತುಪ್ಪ ಅಥವಾ ಅಡುಗೆ ಎಣ್ಣೆಯನ್ನು ದಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.

ಬೆಚ್ಚಗಿನ ಬಟ್ಟೆಗಳು ಮತ್ತು ಕಂಬಳಿ:

ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಲು ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಬೀದಿಬದಿಯಲ್ಲಿ ಅಥವಾ ತೆರೆದ ಸ್ಥಳಗಳಲ್ಲಿ ವಾಸಿಸುವವರಿಗೆ ಕಂಬಳಿ, ಶಾಲು ಅಥವಾ ಉಣ್ಣೆಯ ಬಟ್ಟೆಗಳನ್ನು ನೀಡುವುದು ಅವರ ಅಗತ್ಯವನ್ನು ಪೂರೈಸಿದಂತಾಗುತ್ತದೆ.

ಹೊಸ ಬಟ್ಟೆಗಳು:

ನಿಮಗೆ ಇಷ್ಟವಿದ್ದರೆ ಹೊಸ ಬಟ್ಟೆಗಳನ್ನು ಕೂಡ ದಾನ ಮಾಡಬಹುದು. ನೀವು ಬಳಸಿದ ಹಳೆಯ ಬಟ್ಟೆಗಳನ್ನು ದಾನ ಮಾಡಬೇಡಿ.

ಆರ್ಥಿಕ ನೆರವು:

ನಿಮಗೆ ವಸ್ತುಗಳನ್ನು ಖರೀದಿಸಿ ದಾನ ಮಾಡಲು ಸಾಧ್ಯವಾಗದಿದ್ದರೆ, ನಂಬಿಕಸ್ಥ ಸಂಸ್ಥೆಗಳಿಗೆ ಅಥವಾ ಅಗತ್ಯವಿರುವವರಿಗೆ ನೇರವಾಗಿ ಸ್ವಲ್ಪ ಹಣವನ್ನು ನೀಡುವ ಮೂಲಕವೂ ಸಹಾಯ ಮಾಡಬಹುದು.

PREV
Read more Articles on
click me!

Recommended Stories

2026ರ ಕೊನೆಯ ತಿಂಗಳು ಈ 5 ರಾಶಿಯವರಿಗೆ ಬಂಪರ್ ಅದೃಷ್ಟ! ಹಣದ ಹರಿವು, ಉದ್ಯೋಗದಲ್ಲಿ ಬಡ್ತಿ
ಅಡುಗೆ ಮನೆಯ ಈ 2 ಪದಾರ್ಥ ಖಾಲಿಯಾದ್ರೆ ದಾರಿದ್ರ್ಯ ಬರುತ್ತೆ! ಸಮೃದ್ಧಿಗಾಗಿ ಈ ಸಂಗತಿ ಮರೆಯಬೇಡಿ