ಅಕ್ಷಯ ತೃತೀಯದ ದಿನ ವಿಶೇಷವೆನಿಸಿಕೊಂಡಿರುವುದಕ್ಕೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅವೇನೇನು ನೋಡಿ..
12,96,000 ವರ್ಷಗಳ ಹಿಂದೆ ತ್ರೇತಾಯುಗ ಆರಂಭವಾಗಿದ್ದು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಂದು. ಅಂದರೆ ಅಕ್ಷಯ ತೃತೀಯ(Akshaya Tritiya)ದಂದು. ಇದೇ ತ್ರೇತಾಯುಗದಲ್ಲಿ ಮಹಾವಿಷ್ಣು(Lord Vishnu)ವು ಮರ್ಯಾದಾ ಪುರುಷೋತ್ತಮನೆನಿಸಿಕೊಂಡ ಶ್ರೀ ರಾಮ(Lord Ram)ನಾಗಿ ಅವತಾರ ತಾಳಿದ್ದು. ಇನ್ನು ವಿಷ್ಣುವು ವಾಮನನಾಗಿ ಅವತಾರ ತಾಳಿದ್ದು ಕೂಡಾ ಅಕ್ಷಯ ತೃತೀಯದ ದಿನವೇ. ಅದೂ ಕೂಡಾ ತ್ರೇತಾಯುಗದಲ್ಲಿ. ಪರಶುರಾಮ ಕೂಡಾ ತ್ರೇತಾಯುಗ ಸಂಜಾತನೇ.
ಇನ್ನು ದ್ವಾಪರ ಯುಗಕ್ಕೆ ಬರೋಣ. ಮಹಾಭಾರತ(mahabharath) ಕಾಲದಲ್ಲಿ ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ಸಂದರ್ಭದಲ್ಲಿ ಕೃಷ್ಣನ ಕೃಪೆಯಿಂದ ದ್ರೌಪದಿಯ ಸೀರೆಯು ಸೆಳೆದಷ್ಟೂ ಬರುತ್ತಲೇ ಇತ್ತು. ಅಂದರೆ ಅದು ಅಕ್ಷಯವಾಗಿತ್ತು. ಈ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ನಡೆದಿದ್ದು ಅಕ್ಷಯ ತೃತೀಯದ ದಿನ.
ಪಾಂಡವರ ವನವಾಸ ಕಾಲದಲ್ಲಿ ಕೃಷ್ಣನು ದ್ರೌಪದಿಯನ್ನು ದುರ್ವಾಸ ಮುನಿಗಳ ಕೋಪದಿಂದ ಬಚಾವ್ ಮಾಡಲು ಎಷ್ಟೇ ತೆಗೆದರೂ ಮುಗಿಯದ ಆಹಾರ ಪದಾರ್ಥ ತುಂಬುವ ಅಕ್ಷಯ ಪಾತ್ರೆ(Akshaya vessel) ಕೊಟ್ಟಿದ್ದು ಅಕ್ಷಯ ತೃತೀಯದ ದಿನ. ಅಷ್ಟೇ ಏಕೆ, ಮಹಾಭಾರತ ಯುದ್ಧ ಮುಗಿದ ದಿನ ಕೂಡಾ ಅಕ್ಷಯ ತೃತೀಯವೇ!
ಅಕ್ಷಯ ತೃತೀಯದ ವಿಶೇಷತೆ ಇಷ್ಟಕ್ಕೆ ಅರ್ಧವೂ ಮುಗಿಯಲಿಲ್ಲ.
ಅಕ್ಷಯ ತೃತೀಯದ ಶುಭ ಮುಹೂರ್ತವೇನು?
ಕೃಷ್ಣ ಸುಧಾಮ(Sudham)ರ ಕತೆ ಕೇಳಿರುತ್ತೀರಿ. ಸುಧಾಮನು ಕೃಷ್ಣನಲ್ಲಿ ಸಹಾಯ ಕೇಳಲೆಂದು ಕೃಷ್ಣನ ಬಳಿ ಬರುತ್ತಾನೆ. ಈ ಸಂದರ್ಭದಲ್ಲಿ ಕೃಷ್ಣನಿಗೆ ಅವಲಕ್ಕಿ ನೀಡುತ್ತಾನೆ. ಆದರೆ, ಸಹಾಯ ಕೇಳಲು ನಾಲಿಗೆ ಬಾರದೆ ಹಾಗೆಯೇ ಹಿಂದಿರುಗುತ್ತಾನೆ. ಆದರೆ, ಸುಧಾಮನ ಕಷ್ಟದ ಪರಿಸ್ಥಿತಿ, ಆತ ಬಂದ ಕಾರಣ ಎಲ್ಲವೂ ಕೃಷ್ಣನಿಗೆ ತನ್ನ ವಿಶೇಷ ಶಕ್ತಿಗಳ ಮೂಲಕವೇ ತಿಳಿಯುತ್ತದೆ. ಹೀಗಾಗಿ ಸುಧಾಮ ಮನೆಗೆ ಹಿಂದಿರುಗುವಷ್ಟರಲ್ಲಿ ಆತನಿಗೆ ಬೇಕಾದುದೆಲ್ಲವೂ ಅಲ್ಲಿರುತ್ತದೆ. ಈ ವಿಶೇಷ ಘಟನೆ ಜರುಗಿದ್ದು ಅಕ್ಷಯ ತೃತೀಯದ ದಿನ.
ಇನ್ನು ಶ್ರೀಷ್ಣನು ಯುಧಿಷ್ಠಿರನಿಗೆ ಅಕ್ಷಯ ತೃತೀಯ ದಿನದಂದು ಯಾವುದೇ ಸೃಜನಶೀಲ ಅಥವಾ ಲೌಕಿಕ ಕೆಲಸವನ್ನು ಮಾಡಿದರೂ ಪುಣ್ಯ ಪ್ರಾಪ್ತಿಯಾಗುತ್ತದೆ, ಹೊಸ ಕೆಲಸ ಅಥವಾ ವ್ಯವಹಾರ ಪ್ರಾರಂಭಿಸಿದರೆ ಖ್ಯಾತಿ ಹಾಗೂ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದ್ದು ಕೂಡಾ ಮಹಾಭಾರತ ಕತೆಯಲ್ಲಿ ಉಲ್ಲೇಖವಾಗಿದೆ.
ಮಹಾಭಾರತದಲ್ಲಿ ಇಷ್ಟೆಲ್ಲ ವಿಶೇಷ ಘಟನೆಗಳನ್ನು ತೋರಿಸಿಕೊಟ್ಟ ಅಕ್ಷಯ ತೃತೀಯ ದಿನವೇ ಗಣೇಶ(Lord Ganesh)ನು ವೇದವ್ಯಾಸರೊಂದಿಗೆ ಕುಳಿತು ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದ್ದು ಎಂಬುದು ಈ ದಿನದ ಮತ್ತೊಂದು ಮಹಾ ವೈಶಿಷ್ಠ್ಯ. ಹೀಗಾಗಿ, ಈ ದಿನ ಗೀತಪಠಣಕ್ಕೆ ಮಹತ್ವವಿದೆ. ಗೀತೆಯ 18 ಅಧ್ಯಾಯ ಪಠಿಸುವುದು ಮಂಗಳಕರವೆನಿಸಿದೆ.
Akshaya Tritiyaದಂದು ಇಂಥ ಕೆಲಸ ಮಾಡಿದ್ರೆ ನಿಮ್ಮ ಹಣದ ಖಾತೆ ಖಾಲಿಯಾಗುತ್ತೆ!
ದ್ವಾಪರ ಯುಗ ಅಂತ್ಯ ಕಂಡಿದ್ದು ಕೂಡಾ ಅಕ್ಷಯ ತೃತೀಯದಂದೇ. ಅಕ್ಷಯ ತೃತೀಯದ ದಿನದಂದು ಶ್ರೀಕೃಷ್ಣನಿಗೆ ಶ್ರೀಗಂಧವನ್ನು ಲೇಪಿಸುವ ಅಭ್ಯಾಸವಿದೆ.
ಅಕ್ಷಯ ತೃತೀಯ ದಿನದ ವಿಶೇಷತೆ ಕೇವಲ ತ್ರೇತಾಯುಗ, ದ್ವಾಪರ ಯುಗಕ್ಕೆ ಸೀಮಿತವಲ್ಲ..
ಬ್ರಹ್ಮದೇವನ ಮಗ ಅಕ್ಷಯ ಕುಮಾರ ಜನಿಸಿದ್ದು ಇದೇ ಸುದಿನದಂದು. ಅಷ್ಟೇ ಏಕೆ, ಶಿವನ ಅನುಗ್ರಹದಿಂದ ಕುಬೇರ(Kuber)ನು ಅಗಣ್ಯ ಐಶ್ವರ್ಯ ಪಡೆದು ದೇವಾನುದೇವತೆಗಳ ಕೋಶಾಧಿಕಾರಿಯಾಗಿದ್ದು ಕೂಡಾ ಅಕ್ಷಯ ತೃತೀಯದ ದಿನವೇ.
ಲಕ್ಷಾಂತರ ಜನರ ಜೀವಪೋಷಣೆಯನ್ನು ಸರ್ವಕಾಲಕ್ಕೂ ಮಾಡಿಕೊಂಡು ಬರುತ್ತಿರುವ, ಪವಿತ್ರದಲ್ಲಿ ಪವಿತ್ರ ನದಿ ಎನಿಸಿಕೊಂಡ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದು ಬಂದ ದಿನ ಕೂಡಾ ಇದೇ ಅಕ್ಷಯ ತೃತೀಯವಾಗಿತ್ತು.
ಇನ್ನು ಸಕಲ ಜೀವರಾಶಿಗೆ ಅನ್ನ, ಆಹಾರ ಕರುಣಿಸುವ ಅನ್ನಪೂರ್ಣಾ ದೇವಿ ಜನಿಸಿದ ಪುಣ್ಯ ದಿನ ಅಕ್ಷಯ ತೃತೀಯ.
ಇಷ್ಟೆಲ್ಲ ವಿಶೇಷಗಳಿಗೆ ಕಾರಣವಾಗಿರುವ ಅಕ್ಷಯ ತೃತೀಯದಂದು ಮಹಾವಿಷ್ಣು ಹಾಗೂ ಲಕ್ಷ್ಮೀದೇವಿಯನ್ನು ಆರಾಧಿಸುವುದರಿಂದ ನಮ್ಮ ಬದುಕಿನಲ್ಲೂ ಶುಭಪ್ರದ ಫಲ ದೊರೆಯುವುದರಲ್ಲಿ ಅನುಮಾನವಿಲ್ಲ.