ಅಕ್ಷಯ ತೃತೀಯವು ಈ ಬಾರಿ ಮೇ 3ರಂದು ಬರಲಿದೆ. ಜನರು ಚಿನ್ನ ಖರೀದಿ ಸೇರಿದಂತೆ ಶುಭ ಕಾರ್ಯಗಳನ್ನು ಅಂದು ಕೈಗೊಳ್ಳಲು ಸಜ್ಜಾಗಿದ್ದಾರೆ. ಈ ದಿನದ ಶುಭ ಮುಹೂರ್ತ ಮತ್ತು ಪ್ರಾಮುಖ್ಯತೆ ತಿಳಿದಿದ್ದೀರಾ?
ಅಕ್ಷಯ ತೃತೀಯ(Akshaya Tritiya) ಎಂದರೆ ಮದುವೆ, ಮುಂಜಿ, ಗೃಹಪ್ರವೇಶ ಸೇರಿದಂತೆ ಎಲ್ಲ ಶುಭ ಕಾರ್ಯಗಳಿಗೂ ಅತ್ಯುತ್ತಮ ದಿನ ಎಂಬ ಹೆಗ್ಗಳಿಕೆ ಪಡೆದಿದೆ. ಅಷ್ಟೇ ಅಲ್ಲ, ಚಿನ್ನ, ವಜ್ರ, ಬೆಳ್ಳಿ, ವಾಹನ, ಮನೆ, ನಿವೇಶನ ಇತ್ಯಾದಿ ಖರೀದಿಗೂ ಅಕ್ಷಯ ತೃತೀಯ ಅತ್ಯಂತ ಶುಭ ದಿನವಾಗಿದೆ. ಈ ಬಾರಿ ಅಕ್ಷಯ ತೃತೀಯವು ಮೇ 3ರಂದು ಬರುತ್ತಿದೆ. ಈ ದಿನದ ಶುಭ ಮುಹೂರ್ತವೇನು, ಏಕಾಗಿ ಈ ದಿನಕ್ಕೆ ಇಷ್ಟೊಂದು ಪ್ರಾಮುಖ್ಯತೆ ಇದೆ ನೋಡೋಣ.
ಅಕ್ಷಯ ತೃತೀಯ ಪ್ರಾಮುಖ್ಯತೆ
ಅಕ್ಷಯ ಎಂದರೆ ಎಂದಿಗೂ ಕೊಳೆಯದ್ದು ಎಂದರ್ಥ. ಎಂದಿಗೂ ರೋಗ ಬಾರದ್ದು, ಹಾಳಾಗದ್ದು, ಖಾಲಿಯಾಗದ್ದು ಎಂಬರ್ಥಗಳೂ ಇವೆ. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ, ತೃತೀಯ ತಿಥಿ ಎಂದಿಗೂ ಕ್ಷೀಣಿಸುವುದಿಲ್ಲ. ತೃತೀಯ ತಿಥಿಯ ಅಧಿದೇವತೆ ಪಾರ್ವತಿ ದೇವಿ(Goddess Parvati). ಯಾರಿಗಾದರೂ ಕೆಲಸ ಆರಂಭಿಸಲು ಶುಭ ಮುಹೂರ್ತ ಸಿಗದೆ ಶುರು ಮಾಡಿದಾಗ, ಮಾಡುವ ಕೆಲಸಗಳಲ್ಲಿ ಅಡೆತಡೆಗಳು ಕಾಣಿಸಿಕೊಳ್ಳುತ್ತವೆ, ವ್ಯಾಪಾರ ವ್ಯವಹಾರಗಳು ನಷ್ಟ ಅನುಭವಿಸುತ್ತವೆ.. ಅಂಥ ಸಂದರ್ಭವಿದ್ದಾಗ ಮದುವೆ, ನಿಶ್ಚಿತಾರ್ಥ, ಹೊಸ ಉದ್ಯೋಗ, ಉದ್ಯಮ ಇತ್ಯಾದಿ ಆರಂಭಿಸಲು ಅಕ್ಷಯ ತೃತೀಯದ ದಿನ ಆಯ್ದುಕೊಳ್ಳಬೇಕು. ಇದರಿಂದ ಮಂಗಳಕರ ಫಲಿತಾಂಶ ಕಾಣಬಹುದಾಗಿದೆ. ಈ ದಿನ ಮಾಡಿದ ಶುಭ ಕಾರ್ಯಗಳು ಕೆಟ್ಟ ಫಲಿತಾಂಶ ಬೀರುವುದಿಲ್ಲ. ಈ ದಿನ ಸ್ವಲ್ಪವಾದರೂ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸಬೇಕು. ಇದರಿಂದ ಮನೆಯ ಸಮೃದ್ಧಿ ಅಕ್ಷಯವಾಗುತ್ತಲೇ ಹೋಗುತ್ತದೆ.
Akshaya Tritiyaದಂದು ಇಂಥ ಕೆಲಸ ಮಾಡಿದ್ರೆ ನಿಮ್ಮ ಹಣದ ಖಾತೆ ಖಾಲಿಯಾಗುತ್ತೆ!
ಇಡೀ ದಿನವೂ ಸುಮುಹೂರ್ತವೇ!
ಮೇ 3, 2022 ರಂದು ತೃತೀಯ ತಿಥಿ ಮಂಗಳವಾರ ಬೆಳಿಗ್ಗೆ 5.19 ರಿಂದ ಪ್ರಾರಂಭವಾಗುತ್ತದೆ ಮತ್ತು ಮೇ 4 ರಂದು ಬೆಳಿಗ್ಗೆ 7.33 ರವರೆಗೆ ಮುಂದುವರಿಯುತ್ತದೆ. ಈ ದಿನ ರೋಹಿಣಿ ನಕ್ಷತ್ರವು ಮೇ 4 ರಂದು ಮಧ್ಯರಾತ್ರಿ 12.34 ರಿಂದ 3.18 ರವರೆಗೆ ಇರುತ್ತದೆ. ಇದರೊಂದಿಗೆ ಮಿಥುನ, ಕನ್ಯಾ, ಧನು, ಮೀನ ರಾಶಿಯವರಿಗೆ ಶುಭ ಯೋಗ, ಪಾರಿಜಾತ ಯೋಗ ಇರುತ್ತದೆ.
ಅಕ್ಷಯ ತೃತೀಯ ದಿನವನ್ನು ಮದುವೆಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ದೇವೋತ್ಥಾನ ಏಕಾದಶಿಯಂತೆ ಈ ದಿನವೂ ಅಬುಜ ಮುಹೂರ್ತವಿದೆ. ಹಾಗಾಗಿ, ಈ ದಿನವಿಡೀ ಉತ್ತಮ ಮುಹೂರ್ತವೇ ಇರುತ್ತದೆ. ಅಕ್ಷಯ ತೃತೀಯದ ದಿನ ವಿವಾಹ ನೆರವೇರಿಸಲು ಅಥವಾ ಚಿನ್ನ ಖರೀದಿಸಲು ಇಲ್ಲವೇ ಇನ್ಯಾವುದೇ ಶುಭ ಕೆಲಸಕ್ಕೆ ಇಡೀ ದಿನವೂ ಸುಮುಹೂರ್ತವೇ ಆಗಿರುತ್ತದೆ. ಆದ್ದರಿಂದ ಈ ದಿನ ನಡೆಸುವ ಮಂಗಳ ಕಾರ್ಯಕ್ಕೆ ಮುಹೂರ್ತ ಕೇಳಿಸಬೇಕಾಗಿಲ್ಲ. ವಿಶೇಷವಾಗಿ ತಮ್ಮ ಮಕ್ಕಳ ದಾಂಪತ್ಯ ಜೀವನ ಸುಖ-ಸಮೃದ್ಧಿಯಿಂದ ಕೂಡಿರುತ್ತದೆ ಎಂಬ ನಂಬಿಕೆಯಿಂದ ಪಾಲಕರು ತಮ್ಮ ಮಕ್ಕಳಿಗೆ ಮದುವೆ ಮಾಡಲು ಅಕ್ಷಯ ತೃತೀಯ ದಿನಾಂಕಕ್ಕಾಗಿ ಕಾಯುತ್ತಾರೆ. ಇದಲ್ಲದೇ ಮದುವೆಯ ಸಂದರ್ಭದಲ್ಲಿ ಹೆಣ್ಣು ದಾನ ಮಾಡುವ ಪ್ರಮುಖ ವಿಧಿಯೂ ಇದೆ, ಅಕ್ಷಯ ತೃತೀಯ ದಿನದಂದು ಹೆಣ್ಣು ದಾನ ಮಾಡುವುದರಿಂದ ಅದರ ಪುಣ್ಯ ಬಹುಮಟ್ಟಿಗೆ ಹೆಚ್ಚುತ್ತದೆ.
Akshaya Tritiyaದ ದಿನ ಈ ವಸ್ತುಗಳನ್ನು ದಾನ ಮಾಡಿದ್ರೆ ನಿಮ್ಮ ಸಂಪತ್ತು ಅಕ್ಷಯವಾಗುವುದು..
ಉತ್ತರ ಭಾರತದಲ್ಲಿಂದು ಮದುವೆಗಳ ಸುಗ್ಗಿ
ಅಕ್ಷಯ ತೃತೀಯದ ದಿನ ಉತ್ತರ ಭಾರತದಲ್ಲಿ ಸಾವಿರಾರು ವಿವಾಹಗಳು ಜರುಗುತ್ತವೆ. ಎಲ್ಲ ಛತ್ರಗಳು, ಪಾರ್ಟಿ ಹಾಲ್‌ಗಳು ಬುಕ್ಕಾಗಿ ಬ್ಯುಸಿಯಾಗಿರುತ್ತವೆ. ಯಾರ ಜಾತಕದಲ್ಲಿ ವಿವಾಹ ಯೋಗ ಚೆನ್ನಾಗಿರುವುದಿಲ್ಲವೋ, ಅಂಥವರು ಕೂಡಾ ಅಕ್ಷಯ ತೃತೀಯದಂದು ವಿವಾಹವಾಗುವುದರಿಂದ ಅವರ ಬದುಕಿಗೆ ವಿಷ್ಣು ಹಾಗೂ ಲಕ್ಷ್ಮೀದೇವಿಯ ಕೃಪಾಕಟಾಕ್ಷ ದೊರೆಯುತ್ತದೆ ಎಂಬ ನಂಬಿಕೆ ಇದೆ. ಹೊಸತಾಗಿ ವಿವಾಹವಾದವರು ಈ ದಿನ ದಾನ ಕಾರ್ಯಗಳಲ್ಲಿ ಕೂಡಾ ತೊಡಗುತ್ತಾರೆ.
ಅಕ್ಷಯ ತೃತೀಯದ ದಿನ ಶ್ರೀಷ್ಣನು ಯುಧಿಷ್ಠಿರನಿಗೆ ಈ ದಿನದಂದು ಯಾವುದೇ ಸೃಜನಶೀಲ ಅಥವಾ ಲೌಕಿಕ ಕೆಲಸವನ್ನು ಮಾಡಿದರೂ ಪುಣ್ಯ ಪ್ರಾಪ್ತಿಯಾಗುತ್ತದೆ, ಹೊಸ ಕೆಲಸ ಅಥವಾ ವ್ಯವಹಾರ ಪ್ರಾರಂಭಿಸಿದರೆ ಖ್ಯಾತಿ ಹಾಗೂ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾನೆ.