ಸನ್ಯಾಸಿ ಆಗಬೇಕು ಅನಿಸ್ತಿದೆಯಾ? ಹಾಗಾದರೆ ನಿಮಗೀಗ ಈ ಮಹಾದೆಸೆ!

By Bhavani Bhat  |  First Published Jan 4, 2025, 8:47 PM IST

ಕೆಲವೊಮ್ಮೆ ಯಾವುದೂ ಬೇಡ, ಎಲ್ಲವನ್ನೂ ಬಿಟ್ಟು ಸನ್ಯಾಸಿ ಆಗಿಬಿಡೋಣ ಅನಿಸಬಹುದು. ಇದು ಒಂದು ಕ್ಷಣವಲ್ಲ, ಒಂದು ದಿನವಲ್ಲ, ಬಹಳಷ್ಟು ದಿನಗಳ ನಿಮ್ಮನ್ನು ಈ ರೀತಿಯ ಮನೋಭಾವ ಕಾಡ್ತಿದೆ ಅಂತಾದ್ರೆ ಅದಕ್ಕೆ ಸಹಜ ವೈರಾಗ್ಯದ ಜೊತೆಗೆ ಜ್ಯೋತಿಷ್ಯದ ಒಂದು ಕಾರಣವೂ ಇರಬಹುದು. 
 


ಕೇತು ಮಹಾದೆಸೆ ಇರುವಾಗ ಮನಸ್ಸು ವೈರಾಗ್ಯದತ್ತ ವಾಲುತ್ತದೆ. ಜ್ಯೋತಿಷ್ಯದಲ್ಲಿ, ಕೇತು ಗ್ರಹವು ನಮ್ಮ ಹಿಂದಿನ ಜನ್ಮ ಕರ್ಮವನ್ನು ಪ್ರತಿನಿಧಿಸುತ್ತಾನೆ. ಅದು ಒಳ್ಳೆಯದಾಗಿರಲಿ ಅಥವಾ ಕೆಟ್ಟದಾಗಿರಲಿ. ಇದು ಆಧ್ಯಾತ್ಮಿಕತೆ ಮತ್ತು ನಿಗೂಢ ಪ್ರಭಾವಗಳನ್ನು ಪ್ರತಿನಿಧಿಸುತ್ತದೆ. ಕೇತು ಒಬ್ಬ ವ್ಯಕ್ತಿಯನ್ನು ಭೌತಿಕ ನಷ್ಟಕ್ಕೆ ಒಳಗಾಗುವಂತೆ ಮಾಡಿದರೂ ಇದರಿಂದ ಅವರು ದೃಷ್ಟಿಕೋನದಲ್ಲಿ ಹೆಚ್ಚು ಆಧ್ಯಾತ್ಮಿಕರಾಗುತ್ತಾರೆ. ಕೇತು ಬುದ್ಧಿವಂತಿಕೆ, ಫ್ಯಾಂಟಸಿ, ಬಾಂಧವ್ಯದಲ್ಲಿ ಅನಾಸಕ್ತಿ, ಆಳವಾದ ಒಳನೋಟ, ಅತೀಂದ್ರಿಯ ಸಾಮರ್ಥ್ಯಗಳನ್ನು ಸೂಚಿಸುತ್ತದೆ. ಕೇತುವು ಸಮೃದ್ಧಿಯನ್ನು ದಯಪಾಲಿಸುತ್ತದೆ, ಹಾವು ಕಡಿತ ಮತ್ತು ವಿಷಕಾರಿ ಪದಾರ್ಥಗಳಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸುತ್ತದೆ. ತನ್ನನ್ನು ಪೂಜಿಸುವವರಿಗೆ ಆರೋಗ್ಯ, ಸಂಪತ್ತು, ಪಶುಗಳನ್ನು ಕೊಡುತ್ತಾನೆ. ಕೇತು ಮೂರು ನಕ್ಷತ್ರಗಳನ್ನು ಆಳುತ್ತಾನೆ. ಅವೆಂದರೆ ಅಶ್ವಿನಿ, ಮಾಘ ಮತ್ತು ಮೂಲ.

ಜ್ಯೋತಿಷ್ಯದ ಪ್ರಕಾರ ಕೇತು ಗ್ರಹ ಆಧ್ಯಾತ್ಮಿಕ, ವೈರಾಗ್ಯ, ಮೌನ, ​​ಮೋಕ್ಷದ ಅಧಿಪತಿ. ವ್ಯಕ್ತಿಯ ಜಾತಕದಲ್ಲಿ ಕೇತು ತೃತೀಯ, ಪಂಚಮ, 6 , 9, 12ನೇ ಸ್ಥಾನದಲ್ಲಿದ್ದರೆ ಆ ವ್ಯಕ್ತಿಗೆ ಉತ್ತಮ ಫಲ ದೊರೆಯುತ್ತದೆ. ಹಾಗೇ ಕೇತುವು ಗುರುವಿನೊಂದಿಗೆ ಸೇರಿಕೊಂಡರೆ, ಜಾತಕದಲ್ಲಿ ರಾಜಯೋಗ ರೂಪುಗೊಳ್ಳುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತುವನ್ನು ಛಾಯಾ ಗ್ರಹ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ಜನರು, ಕೇತು ತೊಂದರೆ ನೀಡುವ ಗ್ರಹ ಎಂದು ತಪ್ಪು ತಿಳಿದಿದ್ದಾರೆ. ಆದರೆ ಕೇತು ಕೆಟ್ಟ ಗ್ರಹ ಅಲ್ಲ. ಕುಂಡಲಿಯಲ್ಲಿ ಕೇತುವು ಶುಭ ಸ್ಥಾನದಲ್ಲಿದ್ದರೆ ಆ ರಾಶಿಯವರ ಜೀವನದಲ್ಲಿ ಕೇತುವು ಅನೇಕ ಉತ್ತಮ ಫಲಗಳನ್ನು ನೀಡುತ್ತಾನೆ.

Tap to resize

Latest Videos

ಹಾಗೆ ಕೇತುವು ಮನುಷ್ಯನನ್ನು ವೈರಾಗ್ಯ, ಆಧ್ಯಾತ್ಮಿಕತೆಯ ಕಡೆಗೆ ಕರೆದೊಯ್ಯುತ್ತಾನೆ. ಇದರೊಂದಿಗೆ ಕೇತುವು 10ನೇ ಮನೆಯಲ್ಲಿದ್ದರೆ ವ್ಯಕ್ತಿಯು ಜ್ಯೋತಿಷ್ಯದಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾನೆ. ಹಾಗಾಗಿ ಯಾವುದೇ ವ್ಯಕ್ತಿಯ ಜಾತಕದಲ್ಲಿ ಕೇತು ಮಹಾದೆಸೆ ನಡೆಯುತ್ತಿದ್ದರೆ ಆ ವ್ಯಕ್ತಿ ಜೀವನದಲ್ಲಿ ಸಕಲ ಸಂತೋಷ ಪಡೆಯುತ್ತಿದ್ದಾನೆ ಎಂದೇ ಅರ್ಥ. ಸಾಮಾನ್ಯವಾಗಿ ಕೇತು ಮಹಾದೆಸೆ 7 ವರ್ಷಗಳವರೆಗೆ ಇರುತ್ತದೆ.

ಒಂದು ವೇಳೆ ನಿಮ್ಮ ಜಾತಕದಲ್ಲಿ ಕೇತುವು ಅಶುಭ ಸ್ಥಾನದಲ್ಲಿದ್ದರೆ ಆಯಾ ರಾಶಿಯವರು ಅಶುಭ ಫಲಗಳನ್ನು ಎದುರಿಸಬೇಕಾಗುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟಪಟ್ಟರೂ ಒಳ್ಳೆ ಫಲಿತಾಂಶ ಇರುವುದಿಲ್ಲ. ವ್ಯಾಪಾರದಲ್ಲಿ ನಷ್ಟ ಉಂಟಾಗಲಿದೆ, ಜೀವನದಲ್ಲಿ ಹಠಾತ್‌ ಸಮಸ್ಯೆ ಉದ್ಭವಿಸುತ್ತದೆ. ಅಲ್ಲದೆ ನಿಮ್ಮ ಜಾತಕದಲ್ಲಿ ಕಾಳಸರ್ಪ ದೋಷ ಉಂಟಾಗುವ ಸಾಧ್ಯತೆ ಕೂಡಾ ಇದೆ. ಅಪಘಾತ, ದಾಂಪತ್ಯದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ.

ಬ್ರೇಕ್ ಅಪ್: ಈ ರಾಶಿಯವರು ಸೋಷಿಯಲ್ ಮೀಡಿಯಾದಲ್ಲಿ ಮಾನ ಹರಾಜು ಮಾಡ್ಬಹುದು?

ಕೇತುವನ್ನು ಜ್ಯೋತಿಷಿಗಳು ಮೋಕ್ಷ, ಜ್ಞಾನ, ಸನ್ಯಾಸ ಮತ್ತು ಆತ್ಮಸಾಕ್ಷಾತ್ಕಾರಕ್ಕೆ ಕಾರಣವೆಂದು ಪರಿಗಣಿಸುತ್ತಾರೆ. ಇದು ಒಬ್ಬನಿಗೆ ಚಂಚಲ ಮನಸ್ಸು ಮತ್ತು ಚಂಚಲತೆಯನ್ನು ನೀಡುತ್ತದೆ. ಕೇತುವಿನ ಪ್ರಭಾವಕ್ಕೆ ಒಳಗಾದವರು ಆಧ್ಯಾತ್ಮಿಕ ನೆಲೆಯಲ್ಲಿದ್ದರೂ ಹೆಚ್ಚಿನ ಎತ್ತರವನ್ನು ಸಾಧಿಸಬಹುದು. ರಾಹು ಗ್ರಹಗಳ ನಕಾರಾತ್ಮಕ ಗುಣಗಳನ್ನು ತೆಗೆದುಹಾಕಿದರೆ, ಕೇತುವು ಗ್ರಹಗಳ ಸಕಾರಾತ್ಮಕ ಗುಣಗಳನ್ನು ಬಲಪಡಿಸುತ್ತದೆ.

ಜಾತಕದಲ್ಲಿ ಕೇತುವು ಅಶುಭ ಸ್ಥಾನದಲ್ಲಿದ್ದರೆ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಲು ಕೆಲವೊಂದು ಪರಿಹಾರಗಳಿವೆ- ಕಪ್ಪು ಹಸುವನ್ನು ದಾನ ಮಾಡಬೇಕು. ಧಾನ್ಯ, ಹಣ, ಹಾಲು ಹೀಗೆ ಬಡವರಿಗೆ ಅಗತ್ಯವಾದ ವಸ್ತುಗಳನ್ನು ದಾನ ಮಾಡಬೇಕು. ಓಂ ಸ್ರಾಂ ಸ್ರೀಂ ಸ್ರೌಂ ಸಃ ಕೇತವೇ ನಮಃ ಎಂಬ ಬೀಜಮಂತ್ರವನ್ನು ಜಪಿಸಬೇಕು. ಗಣೇಶ, ಮತ್ಸ್ಯ ದೇವರನ್ನು ಪೂಜಿಸಬೇಕು. ಎಣ್ಣೆ ಹಚ್ಚಿದ ರೊಟ್ಟಿ ಅಥವಾ ಚಪಾತಿಯನ್ನು ನಾಯಿಗಳಿಗೆ ನೀಡಿದರೆ ಕೇತುದೋಷದಿಂದ ಮುಕ್ತರಾಗಬಹುದು. ಬೆಕ್ಕಿನ ಕಣ್ಣನ್ನು ಹೋಲುವ ರತ್ನವನ್ನು ಧರಿಸಿದರೆ ಕೂಡಾ ನೀವು ಕೇತುವಿನ ಸಮಸ್ಯೆಯಿಂದ ಪಾರಾಗಬಹುದು. 

ಗರುಡ ಪುರಾಣದ ಪ್ರಕಾರ ಹೀಗೆ ಮಾಡಿದರೆ ಆಯುಷ್ಯ ಜಾಸ್ತಿ ಆಗುತ್ತೆ
 

click me!