ಇದು ಸೃಷ್ಟಿಯ ಅವಧಿ: ಬ್ರಹ್ಮ ಮುಹೂರ್ತದ ಚಮತ್ಕಾರ ಏನು ಗೊತ್ತಾ?

Published : Jun 15, 2023, 05:59 PM IST
ಇದು ಸೃಷ್ಟಿಯ ಅವಧಿ: ಬ್ರಹ್ಮ ಮುಹೂರ್ತದ ಚಮತ್ಕಾರ ಏನು ಗೊತ್ತಾ?

ಸಾರಾಂಶ

ಬ್ರಹ್ಮ ಮುಹೂರ್ತವನ್ನು ದೇವತೆಗಳ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ಬಹಳ ಮಹತ್ವವಿದೆ. ಈ ಕುರಿತು ಇಲ್ಲಿದೆ ಮಾಹಿತಿ...

ಬ್ರಹ್ಮ ಮುಹೂರ್ತ (Brahma Muhurta) ವನ್ನು ದೇವತೆಗಳ ಮುಹೂರ್ತವೆಂದು ಪರಿಗಣಿಸಲಾಗುತ್ತದೆ. ನಮ್ಮಲ್ಲಿ ಬ್ರಾಹ್ಮಿ ಮುಹೂರ್ತಕ್ಕೆ ಬಹಳ ಮಹತ್ವ (Significance) ವಿದೆ. ಈ ಕುರಿತು ಇಲ್ಲಿದೆ ಮಾಹಿತಿ...

ಇಂದಿನ ಜಂಜಾಟದ ಬದುಕಿನಲ್ಲಿ ಜನರು ರಾತ್ರಿ  (night) ತಡವಾಗಿ ಮಲಗುವುದು ಮತ್ತು ಬೆಳಿಗ್ಗೆ (morning) ತಡವಾಗಿ ಏಳುವುದು ಅಭ್ಯಾಸವಾಗಿದೆ. ಆದರೆ ಕೆಲವರು ಬೆಳಗ್ಗೆ ಬೇಗ ಏಳುತ್ತಾರೆ. ಕೆಲವರು ತುಂಬಾ ಬೇಗ ಏಳುತ್ತಾರೆ ಅಂದರೆ ಮುಂಜಾನೆ  (early morning) 3 ರಿಂದ 4 ಗಂಟೆಯೊಳಗೆ ಏಳುತ್ತಾರೆ. ಅದರ ನಂತರ ಅವರು ಮಲಗುವ ಅಗತ್ಯವಿಲ್ಲ. ಬೇಗ ಏಳುವುದರ ಹಿಂದೆ ಆಳವಾದ ರಹಸ್ಯ (secret) ವಿದೆ. ಇದೇ ಬ್ರಹ್ಮ ಮುಹೂರ್ತದ ಗುಟ್ಟು.

ಬ್ರಹ್ಮ ಮುಹೂರ್ತ ಸಮಯ

ಬ್ರಹ್ಮ ಮುಹೂರ್ತದಂದು ಏಳುವುದು ಅತ್ಯುತ್ತಮ (best) ವೆಂದು ಪರಿಗಣಿಸಲಾಗಿದೆ. ನೀವು ಈ ಬಗ್ಗೆ ಸಾಕಷ್ಟು ಜನರಿಂದ ಕೇಳಿರಬಹುದು. ಅನೇಕರಿಗೆ ಇದರ ಬಗ್ಗೆ ಹೆಚ್ಚು ತಿಳಿದಿಲ್ಲ. ಮುಂಜಾನೆ 3 ರಿಂದ 4:30 ರವರೆಗೆ ಬ್ರಹ್ಮ ಮುಹೂರ್ತದ ಸಮಯ. ಇದನ್ನು ದೇವರು (god) ಗಳ ಉದಯದ ಸಮಯ ಎಂದೂ ಕರೆಯುತ್ತಾರೆ.

ಅತ್ಯಂತ ಪರಿಶುದ್ಧ ಪ್ರೀತಿ, ಚಂಚಲ ಮನಸ್ಸು: ಇದು ಕರ್ಕಾಟಕ ರಾಶಿ ಭವಿಷ್ಯ

 

ಬ್ರಹ್ಮ ಮುಹೂರ್ತದ ಮಹತ್ವ

ಬ್ರಹ್ಮ ಮುಹೂರ್ತದಂದು ಏಳುವುದನ್ನು ಮಂಗಳಕರ (auspicious) ವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಏಳುವುದು ಉತ್ತಮ ಆರೋಗ್ಯ (good health) ವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಸಮಯದಲ್ಲಿ ಎದ್ದೇಳುವುದು ಎಂದರೆ ದೇವರನ್ನು ಪೂಜಿಸುವುದು. ಈ ಸಮಯದಲ್ಲಿ ಪೂಜಿಸುವುದು (worship)  ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸುವುದು ಉತ್ತಮ. ಇದರಿಂದ ಮನುಷ್ಯನ ಆಸೆಗಳು ಕ್ರಮೇಣ ಈಡೇರಲು ಪ್ರಾರಂಭಿಸುತ್ತವೆ.

ಆಧ್ಯಾತ್ಮಿಕ ಶಕ್ತಿ ಹೆಚ್ಚಳ

ಬ್ರಹ್ಮ ಮುಹೂರ್ತದಲ್ಲಿ ಏಳುವ ಅಭ್ಯಾಸ ಇರುವ ವ್ಯಕ್ತಿಯು ಆಧ್ಯಾತ್ಮಿಕ ಶಕ್ತಿ (Spiritual power) ಯನ್ನು ಪಡೆಯುತ್ತಾನೆ. ಇದರಿಂದ  ದೇಹ (body) ದಲ್ಲಿ ದೈಹಿಕ ಶಕ್ತಿ ಮತ್ತು ತ್ರಾಣ ಹೆಚ್ಚಾಗುತ್ತದೆ. ಇದು ದೇಹವನ್ನು ಮತ್ತಷ್ಟು ಶಕ್ತಿ (strength) ಯುತವಾಗಿ ಮಾಡುತ್ತದೆ. ಮತ್ತು ಜೀವನದಲ್ಲಿ ಯಾವಾಗಲೂ ಸಂತೋಷ (happiness) ವನ್ನು ಹೊಂದುತ್ತಾನೆ. ಹಾಗೂ ಈ ವೇಳೆ ಮಾಡುವ ಧ್ಯಾನ (meditation) ವು ತುಂಬಾ ಉತ್ತಮ.

3 ಪಾಪಗ್ರಹಗಳ ಹಿಮ್ಮುಖ ಚಲನೆ; 4 ರಾಶಿಗಳ ಹಣ, ಆರೋಗ್ಯಕ್ಕೆ ಕುತ್ತು

 

ಬ್ರಹ್ಮ ಮುಹೂರ್ತದ ಪ್ರಯೋಜನಗಳು

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ದೇವರು ಬೇಗನೇ ನಮ್ಮ ಮನಸ್ಸಿ (mind) ನ ಮಾತುಗಳನ್ನು ಕೇಳುತ್ತಾನೆ. ಅಲ್ಲದೆ ನಮ್ಮೆಲ್ಲಾ ಆಸೆಗಳು ಈಡೇರುತ್ತವೆ.  ಹಿಂದೂ ಧರ್ಮಗ್ರಂಥ (scripture) ಗಳಲ್ಲಿ ಬ್ರಹ್ಮ ಮುಹೂರ್ತವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಅವಧಿಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಬ್ರಹ್ಮ ಮುಹೂರ್ತದಂದು ಎಚ್ಚರಗೊಳ್ಳುವುದರಿಂದ ಮನುಷ್ಯನಿಗೆ ಶಕ್ತಿ, ಜ್ಞಾನ (knowledge) , ಸೌಂದರ್ಯ ಮತ್ತು ಬುದ್ಧಿವಂತಿಕೆ (wisdom) ಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಬ್ರಹ್ಮ ಮುಹೂರ್ತದ ಸಮಯದಲ್ಲಿ ನಮ್ಮ ದಿನಚರಿ (routine) ಪ್ರಾರಂಭಿಸುವುದು ಧನಾತ್ಮಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಈ ಸಮಯದಲ್ಲಿ ಮಾಡಿದ ಎಲ್ಲಾ ಕೆಲಸ ಯಶಸ್ವಿ (Successful) ಯಾಗುತ್ತದೆ...

PREV
Read more Articles on
click me!

Recommended Stories

Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು