ಜೀವ ಬಿಡ್ತೀನಿ ಆದ್ರೆ ಸೆಕ್ಸ್ ಬಿಡಲ್ಲ ಅಂತಾರೆ; ಕಾಮವೇ ಇವರಿಗೆ ಪ್ರಾಣ..!

By Sushma HegdeFirst Published Jul 31, 2023, 12:51 PM IST
Highlights

ಮನುಷ್ಯರ ಜೀವನದಲ್ಲಿ ಲೈಂಗಿಕತೆಗೂ ಕೂಡ ಬಹಳ ಪ್ರಾಮುಖ್ಯತೆ ಇದೆ. ಸೆಕ್ಸ್ ವಿಚಾರದಲ್ಲಿ ಕೆಲವರು ಸದಾ ಮುಂದು ಇರುತ್ತಾರೆ. ಅವರಿಗೆ ಲೈಂಗಿಕತೆಯು ಜನ್ಮಕ್ಕಂಟಿಕೊಂಡೇ ಬಂದಂತೆ ಇರುತ್ತದೆ. ಕೆಲವರಿಗೆ ಸೆಕ್ಸ್ ಮೇಲೆ ಬಹಳ ಇಂಟ್ರೆಸ್ಟ್ ಇರುತ್ತದೆ. ಹಾಗಿದ್ದರೆ ಯಾವ ರಾಶಿಗೆ ಸೆಕ್ಸ್ ತುಂಬಾ ಮುಖ್ಯವಾಗಿದೆ ಎಂಬ ಡಿಟೇಲ್ಸ್ ಇಲ್ಲಿದೆ.

ಮನುಷ್ಯರ ಜೀವನದಲ್ಲಿ ಲೈಂಗಿಕತೆಗೂ ಕೂಡ ಬಹಳ ಪ್ರಾಮುಖ್ಯತೆ ಇದೆ. ಸೆಕ್ಸ್ ವಿಚಾರದಲ್ಲಿ ಕೆಲವರು ಸದಾ ಮುಂದು ಇರುತ್ತಾರೆ. ಅವರಿಗೆ ಲೈಂಗಿಕತೆಯು ಜನ್ಮಕ್ಕಂಟಿಕೊಂಡೇ ಬಂದಂತೆ ಇರುತ್ತದೆ. ಕೆಲವರಿಗೆ ಸೆಕ್ಸ್ ಮೇಲೆ ಬಹಳ ಇಂಟ್ರೆಸ್ಟ್ ಇರುತ್ತದೆ. ಹಾಗಿದ್ದರೆ ಯಾವ ರಾಶಿಗೆ ಸೆಕ್ಸ್ ತುಂಬಾ ಮುಖ್ಯವಾಗಿದೆ ಎಂಬ ಡಿಟೇಲ್ಸ್ ಇಲ್ಲಿದೆ.

ಸೆಕ್ಸ್ ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸಕಾರಾತ್ಮಕ ಮತ್ತು ಪ್ರೀತಿಯ ಭಾವನೆಗಳನ್ನು ಉತ್ತೇಜಿಸುತ್ತದೆ. ಲೈಂಗಿಕತೆಯು ದಂಪತಿ ಎಲ್ಲಾ ಸಮಸ್ಯೆಯನ್ನು ಮರೆತು ಒಬ್ಬರಿಗೊಬ್ಬರು ಆಳವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಕೆಲವು ಜನ್ಮರಾಶಿಯವರು ಸಾಕಷ್ಟು ಜೀವನಾಸಕ್ತಿ ಇಟ್ಟುಕೊಂಡು ಲೈಂಗಿಕ ಜೀವನವನ್ನು ಚೆನ್ನಾಗಿ ನಡೆಸುತ್ತಿರುವುದನ್ನು ನೀವು ನೋಡಬಹುದು. ನಿಮ್ಮ ಜನ್ಮರಾಶಿ ಹಾಗೂ ಗ್ರಹಗತಿಗಳೂ ನಿಮ್ಮ ಲೈಂಗಿಕ ಶಕ್ತಿ, ಆಸಕ್ತಿಗಳನ್ನು ತೀರ್ಮಾನ ಮಾಡುತ್ತೆ. ಹಾಗಿದ್ರೆ ಯಾವ್ಯಾವ ರಾಶಿಯವರಿಗೆ ಕಾಮ ಬಹಳ ಮುಖ್ಯ ಎಂದು ನೋಡೋಣ.

Latest Videos

ಮಿಥುನ ರಾಶಿ (Gemini)

ಮಿಥುನ ರಾಶಿಯವರಿಗೆ ಹುಣಸೆ ಮುಪ್ಪಾದರೂ ಹುಳಿ ಮುಪ್ಪಲ್ಲ ಎಂಬ ಗಾದೆ ಮಾತು ಇವರಿಗೆ ಚೆನ್ನಾಗಿ ಹೊಂದುತ್ತದೆ. ಇವರಿಗೆ ಸೆಕ್ಸ್ ಬಗ್ಗೆ ತುಂಬಾ ಆಸಕ್ತಿಯೂ ಇರುತ್ತೆ ಹಾಗೂ ಶಕ್ತಿಯೂ ಸಾಕಷ್ಟು ಇರುತ್ತದೆ ಎನ್ನಲಾಗಿದೆ. ಇವರು ಲೈಂಗಿಕ ಸುಖವನ್ನು ಊಟದಂತೆ, ನಿದ್ರೆಯಂತೆ ಹಾಗೂ ಪಾನೀಯದಂತೆ ದೇಹದ ಒಂದು ಪ್ರಮುಖ ಅವಶ್ಯಕತೆಯಾಗಿ ಪರಿಗಣಿಸುತ್ತಾರೆ. ಐವತ್ತು ವರ್ಷ ಪ್ರಾಯದ ನಂತರ ಇವರ ಮಾತುಗಳು ಹೆಚ್ಚು ಹೆಚ್ಚು ಸೆಕ್ಸ್ ಸಂಬಂಧಿ ಆಗುವುದನ್ನು ಗಮನಿಸಬಹುದು. ಮಾತು ಮಾತಿಗೂ ನಾಟಿ ಜೋಕ್‌ಗಳನ್ನು ಸಿಡಿಸಬಹುದು. ಮಹಿಳೆಯರೂ ಇದರಲ್ಲಿ ಕಮ್ಮಿ ಏನಿಲ್ಲ.  ಇವರು ಹೊಸ ಹೊಸ ಸ್ಥಳಗಳಲ್ಲಿ, ಹೊಸ ವಿಧಾನಗಳಲ್ಲಿ ಲೈಂಗಿಕ ಸುಖ ಹೊಂದಲು ಬಯಸುತ್ತಾರೆ. 

ಬುಧ ಹಿಮ್ಮೆಟ್ಟುವಿಕೆ; ಈ ಮೂರು ರಾಶಿಗಳಿಗೆ ಹೊಡೆಯುತ್ತೆ ಜಾಕ್‌ಪಾಟ್..!

 

ಸಿಂಹ ರಾಶಿ (Leo)

ಸಿಂಹ ರಾಶಿಯವರಿಗೆ ಸೆಕ್ಸ್ ಕ್ರಿಯೆ ತುಂಬಾ ಇಷ್ಟ. ಇವರು ಸಂಗಾತಿಗಳ ಜತೆ ಸದಾ ಒಂದಿಲ್ಲ ಒಂದು ಸಾಂಗತ್ಯವನ್ನು ಹೊಂದಿರಲು ಬಯಸುತ್ತಾರೆ. ತಾರುಣ್ಯದಲ್ಲಿ ಸಾಕಷ್ಟು ಮೋಜು ಮಜಾ ಮಸ್ತಿ ಅನುಭವಿಸಿರುತ್ತಾರೆ. ಅದರ ನೆನಪು ಇಳಿವಯಸ್ಸಿನಲ್ಲೂ ಅವರನ್ನು ಲೈಂಗಿಕ ಸಾಹಸಗಳನ್ನು ಮಾಡುವಂತೆ ಪ್ರಚೋದಿಸುತ್ತಾ ಇರುತ್ತೆ. ಹೀಗಾಗಿ ಸಂಗಾತಿಯ ಮೂಲಕವೂ, ಸಂಗಾತಿಯನ್ನು ಹೊರತುಪಡಿಸಿಯೂ ಸೆಕ್ಸ್ ಅಡ್ವೆಂಚರ್‌ಗಳನ್ನು ಕೈಗೊಳ್ಳಲು ಮುಂದಾಗುತ್ತಾರೆ. ಹೆಚ್ಚಿನ ವೇಳೆಯಲ್ಲಿ ಯಶಸ್ವಿಯೂ ಆಗುತ್ತಾರೆ. ಇವರ ಆರೋಗ್ಯವೂ ಅದಕ್ಕೆ ಪೂರಕವಾಗಿಯೇ ಇರುತ್ತದೆ.

ಕುಂಭ ರಾಶಿ (Aquarius)

ಕುಂಭ ರಾಶಿಯವರು ತಮ್ಮ ಇಳಿಪ್ರಾಯದಲ್ಲೂ ಸಂಗಾತಿಗಳನ್ನು ಉಂಟುಮಾಡಿಕೊಳ್ಳಬಲ್ಲ ಜಾಣರು. ಇವರ ಸೆಕ್ಸ್ ಅಂಗಗಳು ಚಟುವಟಿಕೆ ಕಳೆದುಕೊಂಡರೂ, ಆ ಕೊರತೆಯನ್ನು ಮಾತಿನ ಮೂಲಕ ತುಂಬಿಕೊಳ್ಳಲು ನೋಡುತ್ತಾರೆ. ಮಾತಿನ ಮೂಲಕ ಪರರನ್ನು ಉದ್ರೇಕಿಸುವ, ಚಕಿತಗೊಳಿಸುವ, ಟೆಂಪ್ಟ್ ಮಾಡುವ ಕಲೆ ಇವರಿಗೆ ಒಲಿದಿದೆ. ಪಾರ್ಟಿಗಳಲ್ಲಿ ಇವರು ತಮ್ಮ ಹಳೆಯ ಸೆಕ್ಸ್ ಅನುಭವಗಳನ್ನು ಶೇರ್ ಮಾಡಿಕೊಳ್ಳುತ್ತ ಮಿಂಚುತ್ತಾರೆ. ಹೊಸ ಸಂಗಾತಿಗಳನ್ನು ಸೃಷ್ಟಿಸಿಕೊಳ್ಳಲೂ ಹಾತೊರೆಯಬಹುದು. 

ಧನು ರಾಶಿ (Sagittarius)

ಇವರಿಗೆ ಸೆಕ್ಸ್ ಎಂದರೆ ತುಂಬಾ ಆಸಕ್ತಿ. ಅದು ಸಂಗಾತಿಯೇ ಆಗಿದ್ದರೂ ಆಯಿತು, ಬೇರೆಯವರಾದರೂ ಆಯಿತು ಎಂಬಂತೆ ಇವರಿಗೆ ಸೆಕ್ಸ್ ಇಷ್ಟ. ಇವರದು ಅನುಭವ ಆಧಾರಿತವಾದ ಸೆಕ್ಸ್ ಶಕ್ತಿ. ಅನುಭವವೇ ಇವರಿಗೆ ಮುಖ್ಯ. ಸಂಗಾತಿ ಅಮುಖ್ಯ. ತಾರುಣ್ಯದಲ್ಲಿ ಸಾಕಷ್ಟು ಸೆಕ್ಸ್ ಪಡೆಯದ ಇವರು ಅದೇ ಹಸಿವಿನಿಂದಲೇ ವೃದ್ಧಾಪ್ಯದಲ್ಲಿ ಅದನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ.

chanakya niti: ಜೀವನದಲ್ಲಿ ಯಾವ ಕೆಲಸಗಳು ಆಗುತ್ತಿಲ್ಲವೇ?.. ಈ ಟಿಪ್ಸ್ ನಿಮ್ಮ ಜೀವನ ಬದಲಿಸುತ್ತೆ..!

click me!