ನಿಮ್ಮ ಹೆಸರು ಅಪರ್ಣಾ ನಾ? ಪಾರ್ವತಿಗೆ ಈ ಹೆಸರು ಬಂದಿದ್ದೇ ಆ ಏಲೆಗಳನ್ನು ತ್ಯಜಿಸಿದ್ದಕೆ!

By Vaishnavi Chandrashekar  |  First Published Jul 5, 2024, 10:47 AM IST

ಅಪರ್ಣಾ ಅಂದ್ರೆ ಪಾರ್ವತಿ ಎಂದು ಹೇಳಿ ಸುಮ್ಮನಾಗುವ ಜನರಿಗೆ ಹೆಸರಿನ ಅರ್ಥ ಹಾಗೂ ಅದರ ಹಿಂದಿನ ಕಥೆಯನ್ನು ತಿಳಿಸಿದ ಆರ್‌ಜೆ ಹಂಸಾ.
 


ಭಾರತೀಯ ಹೆಣ್ಣು ಮಕ್ಕಳ ಹೆಸರು ಒಂದಲ್ಲ ಒಂದು ರೀತಿಯಲ್ಲಿ ದೇವಿಯ ಹೆಸರಿಗೆ ಸಂಬಂಧಿಸಿರುತ್ತದೆ. ವೈಷ್ಣವಿ ಅಂದ್ರೆ ಯಾರು? ಲಕ್ಷ್ಮಿ ಅಂದ್ರೆ ಯಾರು? ಸರಸ್ವತಿ ಅಂದ್ರೆ ಯಾರು? ಅಪರ್ಣ ಅಂದ್ರೆ  ಯಾರು? ಈ ರೀತಿ ಪ್ರಶ್ನೆ ಬಂದರೆ ಮೊದಲು ಹೇಳುವುದೇ ದೇವಿಯ ಹೆಸರು ಎಂದು. ಆದರೆ ಆ ಹೆಸರು ಬರಲು ಒಂದು ಕಾರಣವಿರುತ್ತದೆ. 

ಅಪರ್ಣಾ ಅಂದ್ರೆ ಪಾರ್ವತಿ. ಆದರೆ ಪಾರ್ವತಿ ಅಂತ ಹೆಸರಿದ್ದರೂ ಅಕೆಯ ಅಪರ್ಣಾ ಅನ್ನೋ ಹೆಸರು ಹೇಗೆ ಬಂತು? ಆಕೆಗೆ ಮತ್ತೊಂದು ಹೆಸರು ಕೊಟ್ಟವರು ಯಾರು? ಇಲ್ಲಿದೆ ನೋಡಿ ಆ ಸಣ್ಣ ಕಥೆ...

Latest Videos

undefined

ಪರ್ಸಲ್ಲಿ ದುಡ್ಡು ಜಾಸ್ತಿ ಆಗ್ಬೇಕಾ? ಕೆಟ್ಟ ದೃ‍ಷ್ಠಿ ದೂರ ಅಗ್ಬೇಕಾ?; ಮಿಸ್‌ ಮಾಡದೆ ಈ ಒಂದು ವಸ್ತುನ ಮೊದಲು ಖರೀದಿಸಿ

ದಕ್ಷನ ಯಜ್ಞದಲ್ಲಿ ಸತಿ ದೇವಿ ಸುಟ್ಟು ಭಸ್ಮ ಆದ ಮೇಲೆ ಹಿಮವಂತನ ಮಗಳು ಪಾರ್ವತಿ ದೇವಿಯಾಗಿ ಆಕೆ ಹುಟ್ಟಿ ಬರುತ್ತಾಳೆ. ಅವರ ಜೀವನದ ಮುಖ್ಯ ಉದ್ದೇಶ ಇದ್ದಿದ್ದೇ ಈಶ್ವರನನ್ನು ಮದುವೆ ಮಾಡಿಕೊಳ್ಳಬೇಕು ಎಂದು ಆದರೆ ಶಿವ ಘೋರವಾದ ತಪಸ್ಸಿನಲ್ಲಿ ಮುಳಗಿರುತ್ತಾರೆ. ಶಿವನನ್ನು ಆ ತಪಸ್ಸಿನಿಂದ ಎಚ್ಚರಿಸಿ ಒಲಿಸಿಕೊಳ್ಳುವುದು ಅಷ್ಟು ಸುಲಭವಾದ ಮಾತಾಗಿರಲಿಲ್ಲ. ಆಗಾಗ ಪಾರ್ವತಿ ಕೂಡ ಘೋರವಾಗಿರುವ ತಪಸ್ಸನ್ನು ಆಚರಿಸಬೇಕಾಗುತ್ತದೆ. ತಾನೇ ಆತನ ಸತಿ ಎಂದು ಮನವರಿಕೆ ಮಾಡಿಕೊಬೇಕಿರುತ್ತದೆ. ಪಾರ್ವತಿ ರಾಜಕುಮಾರಿ ಆಗಿದ್ದರೂ ಸಹ ಅರಮನೆಯ ಸುಖ ಸೌಲಭ್ಯಗಳನ್ನು ತೊರೆದು ಕಾಡಿಗೆ ಬರುತ್ತಾರೆ. ಮೊದಲಿಗೆ ಅನ್ನ ಆಹಾರ ಇದನ್ನೆಲ್ಲಾ ತ್ಯಜಿಸಿ ತಪಸ್ಸನ್ನು ಶುರು ಮಾಡುತ್ತಾರೆ ಆಗ ಅಲ್ಲಿದ್ದ ಗೆಡ್ಡೆ ಹಣ್ಣುಗಳನ್ನು ಮಾತ್ರ ಸೇವಿಸುತ್ತಿರುತ್ತಾರೆ. ಮುಂದೆ ಆ ಎಲೆಗಳನ್ನು ತ್ಯಜಿಸಿ ತಪಸ್ಸನ್ನು ಆಚರಿಸುತ್ತಾರೆ. ಪರ್ಣಾ ಅಂದ್ರೆ ಎಲೆ ಅಂತ. ಅಪರ್ಣಾ ಅಂದ್ರೆ ಅ ಎಲೆಗಳನ್ನು ಕೂಡ ತ್ಯಜಿಸಿದವಳು ಎಂದು ಅರ್ಥ. ಇದನ್ನು ನೋಡಿದಂತ ಋಷಿಗಳು ಶಿವನನ್ನು ಒಲಿಸಿಕೊಳ್ಳು ಆಕೆ ಎಲೆಗಳನ್ನು ತ್ಯಜಿಸಿರುವ ಕಾರಣ ಅಪರ್ಣಾ ಎಂದು ಕರೆಯುತ್ತಾರೆ.

 

click me!