Sex and Zodiac Sign: ಯಾವ ವಾರ, ಯಾವ ಜನ್ಮರಾಶಿಯವರಿಗೆ ಸೆಕ್ಸ್ ಸುಖ ಹೆಚ್ಚು?

By Suvarna NewsFirst Published Jul 1, 2023, 3:05 PM IST
Highlights

ಜ್ಯೋತಿಷ್ಯ ಪ್ರಕಾರ ಹೇಗೆ ದೇವಿ ಪೂಜೆಗೆ ಶುಕ್ರವಾರ ಸೂಕ್ತ ದಿನವೋ, ಅದೇ ರೀತಿ ಒಬ್ಬೊಬ್ಬರಿಗೂ ಅವರು ಜನಿಸಿದ ರಾಶಿ (Zodiac) ನಕ್ಷತ್ರಕ್ಕನುಗುಣವಾಗಿ ಮಿಲನದ ಸುಖ (Sex) ನೀಡುವ ವಾರಗಳಿವೆ. ಅವೀಗ ಯಾವುದಂತ ತಿಳಿದುಕೊಳ್ಳೋಣ.

ಇಂದು ಸೆಕ್ಸ್ ಎಂಬ ಆನಂದದಾಯಕ ಬೆಡ್‌ರೂಂ ಚಟುವಟಿಕೆ ಬರಿಯ ಭಾನುವಾರಕ್ಕೆ ಬಂದು ನಿಂತಿದೆ, ಅದಕ್ಕೆ ಕಾರಣ ವಾರದ ಉಳಿದ ಆರೂ ದಿನಗಳೂ ಅಥವಾ ಐದು ದಿನಗಳೂ ಹೆವೀ ವರ್ಕ್ ಶೆಡ್ಯೂಲ್. ದಿನಕ್ಕೆ ಹತ್ತನ್ನೆರಡು ಗಂಟೆ ದುಡಿದು ಬಂದ ದೇಹಕ್ಕೆ ಸೆಕ್ಸ್‌ಗಿಂತಲೂ ನಿದ್ರೆ ಲೇಸು ಅನಿಸಿಬಿಟ್ಟಿರುತ್ತದೆ. ಎರಡೂ ದಣಿದ ದೇಹಗಳೂ ನಿದ್ರೆಯ ಮೊರೆ ಹೋಗುತ್ತವೆ. ಶನಿವಾರ ಎಲ್ಲಿಗೋ ಹೋಗುವುದಿರುತ್ತದೆ. ಭಾನುವಾರ ಬಡ್ಡಿ ತೋರಿಸಿಕೊಳ್ಳುವವರಂತೆ ಒಂದು ರೊಮ್ಯಾಂಟಿಕ್ ಸಿನಿಮಾ ನೋಡಿ ಬಂದು ಮಿಲನ ಮಹೋತ್ಸವ. ಇನ್ನು ಉಳಿದ ವಾರಗಳಂದು ಸೆಕ್ಸ್ ಮಾಡುವ ಚಿಂತನೆಯೇ ಸಾಧ್ಯವಿಲ್ಲ ಅನಿಸಿಬಿಡುತ್ತದಲ್ಲವೇ?  

ಆದರೆ ಜ್ಯೋತಿಷ್ಯ ಪ್ರಕಾರ ಹಾಗಿಲ್ಲ. ಹೇಗೆ ದೇವಿ ಪೂಜೆಗೆ ಶುಕ್ರವಾರ ಸೂಕ್ತ ದಿನವೋ, ಅದೇ ರೀತಿ ಒಬ್ಬೊಬ್ಬರಿಗೂ ಅವರು ಜನಿಸಿದ ರಾಶಿ ನಕ್ಷತ್ರಕ್ಕನುಗುಣವಾಗಿ ಮಿಲನದ ಸುಖ ನೀಡುವ ವಾರಗಳಿವೆ. ಅವೀಗ ಯಾವುದಂತ ತಿಳಿದುಕೊಳ್ಳೋಣ.   

Latest Videos

ಸೋಮವಾರ 
ಮೇಷ (Aeries) ಹಾಗೂ ಮಿಥುನ (Gemini) ರಾಶಿಯವರು ಈ ವಾರದಲ್ಲಿ ಹೆಚ್ಚು ಸುಖ ಪಡೆಯಬಲ್ಲರು. ಇವರು ಸೂರ್ಯ ಗ್ರಹದಿಂದ ಶಕ್ತಿ ಪಡೆಯುತ್ತಾರೆ. ಇವರು ತುಂಬಾ ಉತ್ಸಾಹಿಗಳು ಹಾಗೂ ಆಕರ್ಷಕ ಮತ್ತು ಆಕ್ಟಿವ್ ಆಗಿರುತ್ತಾರೆ. ಇವರು ವಾರದ ಆರಂಭವನ್ನು ಒಳ್ಳೆಯ ಸಂಗತಿಗಳೊಂದಿಗೆ ಆರಂಭಿಸಲು ಇಷ್ಟಪಡುತ್ತಾರೆ. ಹಾಗೆ ಇವರಿಗೆ ಸೋಮವಾರ ರಾತ್ರಿಯೇ ಆಗಬೇಕೆಂದೇನಿಲ್ಲ. ಹಗಲೂ ಆಗುತ್ತದೆ. ಮನೆಯೇ ಆಗಬೇಕೆಂದಿಲ್ಲ. ತಾವು ವಿಸಿಟ್ ಮಾಡಿದ ಜಾಗಗಳೂ ಆಗುತ್ತವೆ. 

ಮಂಗಳವಾರ 
ಕಟಕ ಮತ್ತು ಸಿಂಹ ರಾಶಿಯವರು ಈ ವಾರದಂದು ಸೆಕ್ಸ್ ಸುಖ ಹೆಚ್ಚು ಪಡೆಯಬಲ್ಲರು. ಯಾಕೆಂದರೆ ಇವರು ಮಂಗಳ ಗ್ರಹದಿಂದ ಶಕ್ತಿ ಪಡೆಯುತ್ತಾರೆ. ಮಂಗಳನ ಚಲನಶೀಲತೆ ಇವರಿಗೆ ಎನರ್ಜಿಯನ್ನು ಕೊಡುತ್ತದೆ. ಬೇರೆ ಗ್ರಹಗಳ ಸಾಂಗತ್ಯದಿಂದ ಉಂಟಾಗುವ ಮಂಗಳನ ಎನರ್ಜಿ ಕ್ರಿಯೇಶನ್ ಇವರ ಲೈಂಗಿಕ ಭಾಗಗಳಲ್ಲಿ ಶಕ್ತಿಯನ್ನು ಮಂಗಳವಾರ ಸಂಚಯಿಸುತ್ತದೆ. ಹೀಗಾಗಿ ಮಂಗಳವಾರದ ಸೆಕ್ಸ್ ಅನ್ನು ಎಂಜಾಯ್ ಮಾಡುತ್ತಾರೆ. 
 
ಬುಧವಾರ 
ವೃಷಭ (Taurus) ರಾಶಿಯವರು ಬುಧವಾರದಂದು ಆನಂದದಾಯಕವಾದ ಶೃಂಗಾರವನ್ನು ಅನುಭವಿಸಬಲ್ಲವರು. ಬುಧ ಗ್ರಹದಿಂದ ಇವರು ಸಾಕಷ್ಟು ಸಂಗೋಪನೆಯನ್ನು ಹೊಂದುತ್ತಾರೆ. ಬುಧ ಗ್ರಹವು ತುಂಬಾ ಶಕ್ತಿಶಾಲಿ ಗ್ರಹವಲ್ಲ. ಹಾಗೆಯೇ ಇವರಿಗೆ ಸೆಕ್ಸ್ ಬಗ್ಗೆ ಅಂಥಾ ಆಸಕ್ತಿಯೇನೂ ಇರುವುದಿಲ್ಲ. ಹೀಗಾಗಿ ವಾರದ ಮಧ್ಯದಲ್ಲಿ ಇವರು ಪಡೆಯುವ ಲೈಂಗಿಕ ಅನುಭವ, ವಾರವಿಡೀ ಇವರನ್ನು ಚುರುಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. 
  
ಗುರುವಾರ 
ವೃಶ್ಚಿಕ (Scorpio) ಮತ್ತು ಧನು (Sagittarius) ರಾಶಿಯವರು ಗುರುಬಲ ಹೊಂದಿದವರು.ಸೋಮವಾರದಿಂದ ಗುರುವಾರದವರೆಗಿನ ಕೆಲಸದ ದಣಿವನ್ನು ಗುರುವಾರ ರಾತ್ರಿಯ ಸೆಕ್ಸ್‌ನ ಆನಂದವಾಗಿ ಪರಿವರ್ತಿಸಿಕೊಳ್ಳಲು ಇವರು ಇಷ್ಟಪಡುತ್ತಾರೆ. ಹಾಗೆಯೇ ಗುರು ಗ್ರಹವು ಜ್ಞಾನಕ್ಕೆ ಸಂಬಂಧಿಸಿದ ಗ್ರಹವಾಗಿದ್ದು, ಸೆಕ್ಸ್ ಬಗ್ಗೆ ಹೊಸ ಹೊಸ ಪ್ರಯೋಗ, ತಿಳುವಳಿಕೆ ಹೊಂದಲು ಇವರು ಇಷ್ಟಪಡುತ್ತಾರೆ. ಅದಕ್ಕೆಲ್ಲ ಗುರುವೇ ಮೂಲವಾಗಿರುತ್ತದೆ. 

Zodiac Compatibility: ನಿಮ್ಮ ರಾಶಿಗೆ ಯಾವ ಬಗೆಯ ರೊಮ್ಯಾನ್ಸ್ ಇಷ್ಟವಾಗುತ್ತೆ?
 

ಶುಕ್ರವಾರ
ತುಲಾ (Libra) ರಾಶಿಯವರಿಗೆ ಶುಕ್ರನು ಲೈಂಗಿಕ ಜೀವನದ ವಿಚಾರದಲ್ಲಿ ಆರಾಧ್ಯನಾಗಿರುತ್ತಾನೆ. ಜಾತಕದ ಆನಂದದ ಮನೆಯಲ್ಲಿರುವ ಶುಕ್ರ ಗ್ರಹವು ಇವರಿಗೆ ಶುಕ್ರವಾರದ ಸುಖದ ಸೌಭಾಗ್ಯವನ್ನು ದಯಪಾಲಿಸುತ್ತಾನೆ. ಶುಕ್ರವಾರದ ರಾತ್ರಿ ಪ್ರಯಾಣ ಮಾಡುತ್ತಿದ್ದರೂ ಇವರು ಶೃಂಗಾರದಲ್ಲಿ ಸಂತೃಪ್ತಿಯನ್ನು ಹೊಂದುವಂಥವರು. ಶನಿವಾರ ಭಾನುವಾರಗಳೂ ಇವರಿಗೆ ಪ್ರಿಯವಾಗಿರುತ್ತದೆ. ಆದರೆ ಶುಕ್ರವಾರದಷ್ಟಲ್ಲ. 
  
ಶನಿವಾರ 
ಕುಂಭ (Aquarius) ಹಾಗೂ ಕನ್ಯಾ (Virgo) ರಾಶಿಯವರು ಶನಿ ಗ್ರಹಕ್ಕೆ ಅಂಜುತ್ತಾರೆ. ಆದರೆ ಕಷ್ಟಗಳನ್ನು ನೀಡುವ ಶನಿಯೇ ಇವರಿಗೆ ಸಕಲ ಸುಖಗಳನ್ನೂ ನೀಡುವವನು ಎಂಬುದು ಇವರಿಗೆ ಗೊತ್ತಿಲ್ಲ. ಈ ರಾಶಿಯವರು ತುಂಬಾ ಪ್ರ್ಯಾಕ್ಟಿಕಲ್ ಆಗಿ ಯೋಚಿಸುತ್ತಾರೆ. ಶನಿವಾರದಂದು ಡ್ಯೂಟಿ ಇಲ್ಲದೆ ಆರಾಮಾಗಿ ಇರುವುದರಿಂದ ಸೆಕ್ಸ್‌ಗೆ ಸೂಕ್ತವಾಗಿರುತ್ತದೆ. ಶನಿವಾರದ ಸೆಕ್ಸ್‌ನಿಂದಾಗಿ ಭಾನುವಾರ ಚುರುಕಾಗಿ ಉಲ್ಲಾಸಪೂರ್ಣವಾಗಿ ಇರುತ್ತಾರೆ.  

ಭಾನುವಾರ 
ಭಾನುವಾರ ಹೆಚ್ಚಾಗಿ ಎಲ್ಲ ರಾಶಿಗಳೂ ಸೆಕ್ಸ್ ಹೊಂದುತ್ತಾರೆ ಎನ್ನಬಹುದು. ಯಾಕೆಂದರೆ ಕಚೇರಿ ಕೆಲಸಗಳು ಇಲ್ಲದಿರುವುದರಿಂದ ಫ್ರೀಯಾಗಿ ಇರುತ್ತಾರೆ. ಆದರೆ, ಮಕರ (Capricorn) ರಾಶಿ ಹಾಗೂ ಮೀನ (pisces) ರಾಶಿಯವರು ಮಾತ್ರ ಅಂದು ಹೆಚ್ಚಿನ ಆನಂದವನ್ನು ಹೊಂದಬಲ್ಲರು. ಅಂದು ರಾತ್ರಿಯ ಸೆಕ್ಸ್‌ನ ನಿರೀಕ್ಷೆಯಿಂದಾಗಿಯೇ ಇವರು ದಿನವಿಡೀ ಉಲ್ಲಾಸದಿಂದ, ಆನಂದದಿಂದ ಇರುತ್ತಾರೆ. ಭಾನುವಾರದ ಸೆಕ್ಸ್‌ನಿಂದ ಮತ್ತಷ್ಟು ಹುರುಪು ತುಂಬಿಕೊಂಡು ಸೋಮವಾರದಿಂದ ಡ್ಯೂಟಿ ಆರಂಭಿಸುತ್ತಾರೆ. 

ರಾತ್ರಿ ದಿಂಬಿನ ಬಳಿ ಈ ವಸ್ತು ಇಡಿ; ಉತ್ತಮ ನಿದ್ರೆ, ಸಂಪತ್ತು ಪಡೆಯಿರಿ...
 

click me!