Astrology Tips: ಗುಬ್ಬಚ್ಚಿ ಗೂಡು ಕಟ್ಟಿದರೆ ಆ ಮನೆಗೆ ತರುತ್ತ ಅದೃಷ್ಟ

By Suvarna NewsFirst Published Mar 25, 2023, 2:45 PM IST
Highlights

ಮನೆ ಮುಂದಿನ ಗಿಡ – ಮರದಲ್ಲಿ ಹಕ್ಕಿ ಗೂಡು ಕಟ್ಟೋದನ್ನು ನಾವು ನೋಡಿರ್ತೇವೆ. ಕೆಲ ಹಕ್ಕಿಗಳು ಮನೆಯೊಳಗೆ ಪ್ರವೇಶ ಮಾಡಿ, ಮನೆ ಮೂಲೆಯಲ್ಲಿ ಗೂಡು ಕಟ್ಟಿರುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ಹಕ್ಕಿ ಮನೆಯಲ್ಲಿ ಗೂಡು ಕಟ್ಟಿದ್ರೆ ಒಳ್ಳೆಯದು ಎಂಬುದನ್ನು ಹೇಳಲಾಗಿದೆ. 
 

ಸ್ವಚ್ಛಂದ ಬದುಕಿಗೆ ಇನ್ನೊಂದು ಉದಾಹರಣೆಯೆಂದರೆ ಅದು ಹಕ್ಕಿಯ ಜೀವನ. ತನ್ನ ಆಹಾರವನ್ನು ತಾನೇ ಹುಡುಕಿ, ಮರಿಗಳಿಗೆ ಅದನ್ನು ತಿನಿಸುವ ಪರಿ ನೋಡಲು ಎರಡು ಕಣ್ಣು ಸಾಲುವುದಿಲ್ಲ. ತನ್ನಿಷ್ಟ ಬಂದಲ್ಲಿ ಹಾರುತ್ತಾ ಹುಲ್ಲು ಕಡ್ಡಿಗಳನ್ನು ತಂದು ಪುಟ್ಟದಾದ ಗೂಡನ್ನು ಕಟ್ಟುವ ಅದರ ಸಾಹಸಕ್ಕೆ ಎಂತವರೂ ಮೆಚ್ಚಲೇಬೇಕು. 

ಒಂದೊಂದು ಹಕ್ಕಿ (Bird) ಗಳು ಒಂದೊಂದು ರೀತಿ ಗೂಡು ಕಟ್ಟುತ್ತೆ. ತನ್ನ ವೈರಿಗೆ ಕಾಣಿಸದ ಹಾಗೆ ಗೌಪ್ಯ ಜಾಗದಲ್ಲಿ ಅವು ಹೆಚ್ಚಾಗಿ ಗೂಡು ಕಟ್ಟುತ್ತವೆ. ಅನೇಕ ಮನೆ (House) ಗಳಲ್ಲಿಯೂ ಅವು ಗೂಡು ಕಟ್ಟಿಕೊಳ್ಳುವುದನ್ನು ನಾವು ನೋಡ್ತೇವೆ. ಮನೆಯಲ್ಲಿ ಗೂಡು ಕಟ್ಟಿಕೊಂಡು ಮನೆತುಂಬ ಚಿಲಿಪಿಲಿ ಎನ್ನುತ್ತ ಅವು ಹಾರುತ್ತಿದ್ದರೆ ಮನೆಯವರ ಮನಸ್ಸಿಗೂ ಏನೋ ಒಂದು ರೀತಿಯ ಸಂತೋಷ ಸಿಗುತ್ತದೆ. ಹಕ್ಕಿಗಳು ತಮ್ಮ ಸ್ವಂತ ಪರಿಶ್ರಮದಿಂದ ಮನೆಯಲ್ಲಿ ಗೂಡು ಕಟ್ಟಿಕೊಳ್ಳುತ್ತವೆ. ಹೀಗೆ ಹಕ್ಕಿಗಳು ಮನೆಯಲ್ಲಿ ಗೂಡು ಕಟ್ಟುವುದು ಅತ್ಯಂತ ಶುಭಕರ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

RAM NAVAMI 2023: ರಾಮರಾಜ್ಯ ಹೇಗಿರತ್ತೆ ಅಂದ್ರೆ?

ಜ್ಯೋತಿಷ್ಯ (Astrology) ಶಾಸ್ತ್ರದಲ್ಲಿ ಪಶು-ಪಕ್ಷಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗ್ರಹ (Planet) ಗಳು ಮತ್ತು ದೇವರ ಸಂಕೇತವನ್ನು ಪಶು-ಪಕ್ಷಿಗಳು ಮನುಷ್ಯರಿಗೆ ತಲುಪಿಸುತ್ತವೆ ಎಂಬ ನಂಬಿಕೆಯಿದೆ. ಉದಾಹರಣೆಗೆ ಭೂಕಂಪ, ಸುನಾಮಿ ಮುಂತಾದ ದುರ್ಘಟನೆಗಳು ನಡೆಯುವ ಮೊದಲು ಪ್ರಾಣಿ, ಪಕ್ಷಿಗಳು ಕೂಗುವ ಮೂಲಕ ನಮಗೆ ಸಂದೇಶ ನೀಡುತ್ತವೆ. ಅಂತಹ ಸಂದರ್ಭದಲ್ಲಿ ಅವು ನಾನಾ ರೀತಿಯ ಸಂಕೇತಗಳನ್ನು ನೀಡುವುದರ ಮೂಲಕ ಮುಂದೆ ನಡೆಯುವ ಅನಾಹುತಗಳ ಬಗ್ಗೆ ಮನುಷ್ಯರಿಗೆ ಎಚ್ಚರಿಕೆ ನೀಡುತ್ತವೆ. ನಾವು ಅಂತಹ ಸಂಕೇತಗಳನ್ನು ಗ್ರಹಿಸಬೇಕಷ್ಟೇ. ಈಗ ನಾವು ಅಂತಹುದೇ ಸಂಕೇತಗಳ ಬಗ್ಗೆ ಹೇಳಲಿದ್ದೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಹಕ್ಕಿಗಳು ಮನೆಯಲ್ಲಿ ಗೂಡು ಮಾಡುವುದು ಶುಭ ಸಂಕೇತವಾದರೆ ಕೆಲವು ಹಕ್ಕಿಗಳ ಗೂಡು ಅಶುಭವನ್ನು ಸೂಚಿಸುತ್ತದೆ.

ಮನೆಯಲ್ಲಿ ಈ ಹಕ್ಕಿ ಗೂಡು ಕಟ್ಟಿದರೆ ಶುಭವಾಗುತ್ತೆ : ಗುಬ್ಬಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಎಲ್ಲರೂ ಗುಬ್ಬಿಯನ್ನು ಇಷ್ಟಪಡುತ್ತಾರೆ. ಹಲವು ಮಂದಿ ಗುಬ್ಬಿ ತಮ್ಮ ಮನೆಯಲ್ಲಿ ಗೂಡು ಕಟ್ಟಲಿ ಎಂದು ಬಯಸುತ್ತಾರೆ. ಗುಬ್ಬಿ ಗೂಡು ಕಟ್ಟಲು ಬೇಕಾದ ಏರ್ಪಾಟುಗಳನ್ನು ಮಾಡುತ್ತಾರೆ. ಹಾವು ಮುಂತಾದವು ಗುಬ್ಬಿ ಗೂಡಿಗೆ ದಾಳಿ ಮಾಡದಂತೆ ಎಚ್ಚರಿಕೆ ಕೂಡ ವಹಿಸುತ್ತಾರೆ.  ಜ್ಯೋತಿಷ್ಯ ಶಾಸ್ತ್ರ ಕೂಡ ಗುಬ್ಬಿ ಬಹಳ ಶುಭ ಮತ್ತು ಸಕಾರಾತ್ಮಕತೆಯ ಸಂಕೇತ ಎಂದು ಹೇಳುತ್ತದೆ. ಇದು ಸಾಮಾನ್ಯವಾಗಿ ಯಾರ ದೃಷ್ಟಿಯೂ ಬೀಳದ ಕಡೆ ಅಥವಾ ಮರದ ಮೇಲೆ ತನ್ನ ಗೂಡನ್ನು ಕಟ್ಟುತ್ತದೆ. ಗುಬ್ಬಿ ಯಾರ ಮನೆಯಲ್ಲಿ ಗೂಡು ಕಟ್ಟುತ್ತೋ ಆ ಮನೆಗೆ ದೇವಿ ಲಕ್ಷ್ಮಿಯ ಕೃಪೆ ಸದಾ ಇರುತ್ತೆ, ಧನಲಾಭವಾಗುತ್ತೆ ಎಂದು ಜ್ಯೋತಿಷ್ಯ ಹೇಳುತ್ತದೆ. ಗುಬ್ಬಿಯ ಗೂಡು ಮನೆಯಲ್ಲಿರುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹುಟ್ಟುತ್ತದೆ.

ಸುಳ್ಳು ಹೇಳೋರ್ನ ಕಂಡ್ರೆ ಮೈ ಎಲ್ಲ ಉರಿಯೋಷ್ಟು ಕೋಪ ಈ ರಾಶಿಗಳಿಗೆ!

ತನ್ನ ಪರಿವಾರದ ಪಾಲನೆಗಾಗಿ ಗುಬ್ಬಿಗಳು ಮನೆಯಲ್ಲಿ ಗೂಡು ಕಟ್ಟುತ್ತವೆ. ಹೀಗೆ ಅವು ಮನೆಯಲ್ಲಿ ಗೂಡು ಕಟ್ಟುವುದು ಮನೆಗೆ ಸುಖ, ಸಮೃದ್ಧಿಯ ಆಗಮನದ ಸೂಚನೆಯಾಗಿದೆ. ಇದು ಮನೆಯವರ ಸಕಲ ಸೌಭಾಗ್ಯ ದೊರಕುವುದರ ಪ್ರತೀಕ ಎಂದು ಕೂಡ ಹೇಳಲಾಗುತ್ತೆ. ವಾಸ್ತು ಶಾಸ್ತ್ರದ ಪ್ರಕಾರ ಗುಬ್ಬಿ ಮನೆಯ ಪೂರ್ವ ದಿಕ್ಕಿಗೆ ಗೂಡು ಕಟ್ಟಿದರೆ ಸಮಾಜದಲ್ಲಿ ಆ ಮನೆಯವರ ಸ್ಥಾನಮಾನ ಉನ್ನತಮಟ್ಟಕ್ಕೆ ಏರುತ್ತದೆ. ಆಗ್ನೇಯ ದಿಕ್ಕಿನಲ್ಲಿ ಗುಬ್ಬಿ ಗೂಡು ಕಟ್ಟಿದರೆ ಮನೆಯ ಮಕ್ಕಳಿಗೆ ಶೀಘ್ರದಲ್ಲೇ ವಿವಾಹವಾಗುತ್ತದೆ ಎಂದರ್ಥ. ಒಮ್ಮೆ ಮನೆಯ ಹೊರಭಾಗದಲ್ಲಿ ಗುಬ್ಬಿ ಗೂಡು ಕಟ್ಟುವುದು ಮನೆಯ ಏಳ್ಗೆಗೆ ಯಾವುದೇ ರೀತಿಯ ಅಡ್ಡಿಯಾಗುವುದಿಲ್ಲ ಮತ್ತು ಕುಟುಂಬದವರಿಗೆ ಎಲ್ಲ ಕೆಲಸದಲ್ಲೂ ಗೆಲುವು ಸಿಗುತ್ತದೆ ಎಂಬುದರ ಸಂಕೇತವಾಗಿದೆ. ಇದರಿಂದ ನಕಾರಾತ್ಮಕ ಶಕ್ತಿಯೂ ಮನೆಯಿಂದ ದೂರವಾಗುತ್ತದೆ.

click me!