Astrology Tips : ಪರ್ಸಲ್ಲಿ ಸದಾ ದುಡ್ಡು ತುಂಬಿರಬೇಕಂದ್ರೆ ಲಕ್ಷ್ಮಿ ಪಾದುಕೆ ಎಲ್ಲಿಡಬೇಕು?

By Suvarna NewsFirst Published Apr 17, 2023, 4:33 PM IST
Highlights

ಮಾತಾ ಲಕ್ಷ್ಮಿ ಪಾದುಕೆ ಮನೆಯ ಸಮೃದ್ಧಿಗೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಅದನ್ನು ಮನೆಯಲ್ಲಿ ಯಾವುದೇ ಸ್ಥಳದಲ್ಲಿ ಇರಿಸುವ ಮೊದಲು, ವಾಸ್ತು ನಿಯಮಗಳನ್ನು ಪಾಲಿಸಬೇಕು. ಆಗ ಮಾತ್ರ ಸಮೃದ್ಧಿ ಸಾಧ್ಯ. 
 

ಮನೆಯ ಒಳಿತಿಗಾಗಿ, ಮನೆಯವರ ಸುಖ ಸಮೃದ್ಧಿಗಾಗಿ ನಾವು ಎಷ್ಟೊಂದು ಪರಿಶ್ರಮ ಪಡುತ್ತೇವೆ. ನಮ್ಮ ಎಲ್ಲ ಕೆಲಸದ ಮೂಲ ಉದ್ದೇಶ ಸಂಸಾರದ ಸುಖವೇ ಆಗಿರುತ್ತೆ. ಮನೆಯ ಒಳಾಂಗಣವನ್ನು ಚೆಂದಗಾಣಿಸಲು ಮನೆಯ ಒಳಗೆ ಅಲಂಕಾರಿಕ ಸಾಮಾನುಗಳನ್ನು ಇಡುತ್ತೇವೆ. ಕೆಲವೊಬ್ಬರು ವಾಸ್ತು ಪ್ರಕಾರ ಅಥವಾ ಮನೆಯ ದಿಕ್ಕುಗಳಿಗೆ ಅನುಸಾರವಾಗಿ ಕೆಲ ವಸ್ತುಗಳನ್ನು ಅಳವಡಿಸುತ್ತಾರೆ. ಮನೆಗೆ ಏಳ್ಗೆಯನ್ನು ಉಂಟುಮಮಾಡುವ ಅನೇಕ ವಸ್ತುಗಳನ್ನು ಕೂಡ ವಾಸ್ತುಪ್ರಕಾರವಾಗಿಯೇ ಇಡಲಾಗುತ್ತದೆ. ಉದಾಹರಣೆಗೆ ನಾನಾ ಭಂಗಿಯ ಲಾಫಿಂಗ್ ಬುದ್ಧ, ಕುದುರೆಯ ಚಿತ್ರ, ದೇವರ ಚಿತ್ರಗಳು ಮನೆಗೆ ಶುಭವನ್ನು ತರುತ್ತವೆ.

ಹಣ (Money) ದ ಒಡತಿಯಾಗಿರುವ ಲಕ್ಷ್ಮಿ (Lakshmi) ವಿಷ್ಣುವಿನ ಪತ್ನಿ.  ಲಕ್ಷ್ಮಿಯ ಪೂಜೆಯಿಂದ ಮನೆಗೆ ಸೌಭಾಗ್ಯ ಪ್ರಾಪ್ತಿಯಾಗುತ್ತೆ. ಲಕ್ಷ್ಮಿ ತನ್ನ ಭಕ್ತರನ್ನು ಎಲ್ಲ ರೀತಿಯ ದುಃಖ ಮತ್ತು ಆರ್ಥಿಕ ತೊಂದರೆಗಳಿಂದ ದೂರಮಾಡುತ್ತಾಳೆ ಎಂಬ ನಂಬಿಕೆಯಿದೆ. ಹಿಂದೂ (Hindu) ಸಂಸ್ಕೃತಿಯಲ್ಲಿ ಅನೇಕ ಪೂಜೆಗಳಲ್ಲಿ ಲಕ್ಷ್ಮಿಯನ್ನು ಆರಾಧಿಸಲಾಗುತ್ತದೆ ಹಾಗೂ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಅನೇಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆ ವಿಧಾನಗಳ ಪೈಕಿ ಲಕ್ಷ್ಮಿಯ ಪಾದಗಳನ್ನು ಮನೆಯಲ್ಲಿ ಇಡುವುದು ಕೂಡ ಒಂದು. ಸಾಮಾನ್ಯವಾಗಿ ಜನರು ಲಕ್ಷ್ಮಿಯ ಪಾದಗಳನ್ನು ಮನೆಯ ಮುಖ್ಯ ಬಾಗಿಲಲ್ಲಿ ಹಾಕುತ್ತಾರೆ. ಇದರ ಜೊತೆಗೆ ಮನೆಯ ಯಾವ ಸ್ಥಾನಗಳಲ್ಲಿ ಲಕ್ಷ್ಮಿಯ ಪಾದವನ್ನು ಇಟ್ಟರೆ ಒಳ್ಳೆಯದಾಗುತ್ತದೆ ಎಂಬ ಮಾಹಿತಿ ಇಲ್ಲಿದೆ.

Latest Videos

ಮೇಷದಿಂದ ಸಿಂಹದವರೆಗೆ; ಈ ರಾಶಿಯ ಒಡಹುಟ್ಟಿದವರನ್ನು ಹೊಂದಲು ಪುಣ್ಯ ಮಾಡಿರಬೇಕು!

ಲಕ್ಷ್ಮಿಯ ಪಾದಗಳು ಮನೆಗೆ ಬಹಳ ಶುಭ :  ಸಮುದ್ರ ಮಂಥನದ ಸಮಯದಲ್ಲಿ ಉದ್ಭವವಾದ ರತ್ನಗಳಲ್ಲಿ ದೇವಿ ಲಕ್ಷ್ಮಿ ಒಂದು ಎಂಬ ಪ್ರತೀತಿ ಇದೆ. ಹೀಗೆ ಲಕ್ಷ್ಮಿ ಉದ್ಭವಿಸಿದಾಗ ದೇವತೆಗಳು ಲಕ್ಷ್ಮಿಯ ಪಾದದ ಅಚ್ಚುಗಳನ್ನು ತೆಗೆದುಕೊಂಡರು. ಲಕ್ಷ್ಮಿಯ ಪಾದದಲ್ಲಿ ಹದಿನೈದು ಚಿಹ್ನೆಗಳಿದ್ದವು. ಈ ಚಿಹ್ನೆಗಳನ್ನು ಸಮೃದ್ಧಿಯ ಪ್ರತೀಕ ಎಂದು ಹೇಳಲಾಗುತ್ತದೆ. ಅಂದಿನಿಂದ ಲಕ್ಷ್ಮಿಯ ಪಾದಗಳಿಗೆ ಪಾದುಕೆ ಎಂಬ ಹೆಸರಿಟ್ಟು ಅದನ್ನು ಎಲ್ಲೆಡೆ ಸ್ಥಾಪಿಸಿ ದೀಪ ಬೆಳಗಿಸಿ ಉತ್ಸವವನ್ನು ಕೂಡ ಮಾಡಲಾಗುತ್ತದೆ.

ಲಕ್ಷ್ಮಿಯ ಪಾದದಲ್ಲಿ ಏನಿರುತ್ತೆ? : ಲಕ್ಷ್ಮಿಯ ಎಡ ಪಾದದ ಮೇಲೆ ಅನೇಕ ಚಿಹ್ನೆಗಳು ಇರುತ್ತವೆ. ಎಲ್ಲ ಚಿಹ್ನೆಗಳು ಕೂಡ ಅದರದೇ ಆದ ಮಹತ್ವವನ್ನು ಹೊಂದಿದೆ. ಅದರಲ್ಲಿರುವ ಬಾಣದ ಚಿಹ್ನೆಗಳು, ಉದ್ದೇಶ ಮತ್ತು ಗುರಿಯ ಪ್ರತೀಕವಾಗಿದೆ. ಇದರಲ್ಲಿರುವ ಮೀನಿನ ಚಿತ್ರವು ಸಮೃದ್ಧಿ ಮತ್ತು ಆರೋಗ್ಯದ ಸಂಕೇತವಾಗಿದೆ. ಲಕ್ಷ್ಮಿಯ ಪಾದದಲ್ಲಿನ ಕುಂಭವು ಆರೋಗ್ಯ ಮತ್ತು ಆಸೆಗಳ ಈಡೇರುವಿಕೆಯ ಚಿಹ್ನೆ ಹಾಗೂ ಚಂದ್ರ ಜೀವನದ ಬೆಳಕು ಮತ್ತು ಪವಿತ್ರತೆಯ ಪ್ರತೀಕವಾಗಿದೆ. ತಿಲಕ ವಿಜಯ ಮತ್ತು ಗೌರವವನ್ನು ಸೂಚಿಸುತ್ತದೆ. ಇದೇ ರೀತಿ ಲಕ್ಷ್ಮಿಯ ಪಾದುಕೆಯಲ್ಲಿ ಇನ್ನೂ ಅನೇಕ ಅರ್ಥಗಳನ್ನು ಸೂಚಿಸುವ ಚಿಹ್ನೆಗಳಿವೆ. ಲಕ್ಷ್ಮಿಯ ಬಲ ಕಾಲಿನ ಪಾದುಕೆಯಲ್ಲಿರುವ ಸ್ವಸ್ತಿಕವು ಗಣೇಶ, ಆಶೀರ್ವಾದ ಮತ್ತು ಜ್ಞಾನದ ಪ್ರತೀಕವಾಗಿದೆ. ಚಕ್ರವು ದುಷ್ಟ ಶಕ್ತಿಗಳಿಂದ ನಮ್ಮನ್ನು ಕಾಪಾಡುತ್ತದೆ. ಶಂಖವು ಜೀವನಕ್ಕೆ ಶಕ್ತಿ ಮತ್ತು ಪವಿತ್ರತೆಯನ್ನು, ಸೂರ್ಯನು ಸಫಲತೆ ಮತ್ತು ಸಮೃದ್ಧಿಯನ್ನು ನೀಡುತ್ತದೆ.

Vastu Tips: ಮನೆಯ ಯಾವ ದಿಕ್ಕಿಗೆ ಯಾವ ಬಣ್ಣ ಹಚ್ಚಿದ್ರೆ ಬೆಸ್ಟ್?

ಲಕ್ಷ್ಮಿಯ ಪಾದುಕೆಯನ್ನು ಎಲ್ಲಿ ಹಾಕಬೇಕು? : 
• ಕೆಲಸದ ಸ್ಥಳದಲ್ಲಿ ಲಕ್ಷ್ಮಿಯ ಪಾದುಯನ್ನು ಇಟ್ಟುಕೊಂಡರೆ ಕಾರ್ಯದಲ್ಲಿ ಯಶಸ್ಸು ಮತ್ತು ಭವಿಷ್ಯದಲ್ಲಿ ಎತ್ತರದ ಸ್ಥಾನ ಸಿಗುತ್ತದೆ.
• ಮನೆಯ ಮುಖ್ಯ ಬಾಗಿಲಲ್ಲಿ ಲಕ್ಷ್ಮಿಯ ಪಾದುಕೆ ಇರುವುದರಿಂದ ಮನೆಗೆ ಲಕ್ಷ್ಮಿಯ ಆಗಮನವಾಗುತ್ತೆ.
• ಮನೆಯ ಒಳಗಡೆ ಲಕ್ಷ್ಮಿ ಬರುವಂತೆ ಹೆಜ್ಜೆಯನ್ನು ಅಳವಡಿಸಬೇಕು.
• ಬಾಗಿಲಿನ ಎರಡೂ ಕಡೆ ಪಾದಗಳನ್ನು ಇಡಬಹುದು. ಮನೆಯ ಶೌಚಾಲಯಗಳಲ್ಲಿ ಇದನ್ನು ಇಡಬಾರದು.

ಲಕ್ಷ್ಮಿಯ ಪಾದಗಳಿಂದ ಎಷ್ಟೆಲ್ಲ ಲಾಭವಿದೆ ಗೊತ್ತಾ? : 
• ಲಕ್ಷ್ಮಿಯ ಪಾದದಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಸಫಲತೆ ಸಿಗುತ್ತೆ.
• ಒಳ್ಳೆಯ ಆರೋಗ್ಯ ಲಭಿಸುತ್ತದೆ.
• ಏಕಾಗ್ರತೆ ಹೆಚ್ಚಾಗುತ್ತದೆ. ಸೌಭಾಗ್ಯ ಪ್ರಾಪ್ತಿಯಾಗುತ್ತದೆ.
 

click me!