ರಕ್ಷಾಬಂಧನ ಹತ್ರ ಬಂತು.. ರಾಖಿ ಕಟ್ಟೋ ವಿಧಾನ ತಿಳ್ದಿದಿರಾ?

By Suvarna News  |  First Published Jul 7, 2022, 4:29 PM IST

ರಕ್ಷಾಬಂಧನ ಎಂದರೆ ಅಣ್ಣ ತಂಗಿಯರ ಸಂಭ್ರಮದ ಹಬ್ಬ. ತಂಗಿಯರೆಲ್ಲ ಕಾತುರದಿಂದ ಕಾಯುವ ಈ ಹಬ್ಬ ಹತ್ತಿರ ಬಂದಿದೆ. ಯಾವಾಗ ರಕ್ಷಾ ಬಂಧನ? ರಾಖಿ ಕಟ್ಟುವ ವಿಧಾನವೇನು ತಿಳಿಯಿರಿ..


ಒಡಹುಟ್ಟಿದವರು(Siblings) ನಮ್ಮ ಕುಟುಂಬದ ಅವಿಭಾಜ್ಯ ಅಂಗ. ಈ ಜಂಜಾಟದ ಜಗತ್ತಿನಲ್ಲಿ ನಮ್ಮ ಹೆತ್ತವರ ನಂತರ ನಮಗೆ ಹೆಚ್ಚು ಮುಖ್ಯವಾದವರೆಂದರೆ ಒಡಹುಟ್ಟಿದವರು. ರಕ್ಷಾ ಬಂಧನವು ನಮ್ಮ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಕಾಳಜಿಯಿಂದ ತುಂಬಿರುವ ಬಾಂಧವ್ಯವನ್ನು ಆಚರಿಸುವ ದಿನವಾಗಿದೆ.

ಶ್ರಾವಣ ಮಾಸ ಹಬ್ಬಗಳ ಆಗರವಾಗಿದ್ದು, ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯನ್ನು ನೂಲುಹುಣ್ಣಿಮೆ, ರಕ್ಷಾಬಂಧನ, ಉಪಕರ್ಮ ಮುಂತಾದ ಹೆಸರಿನಿಂದ ಕರೆದು ಹಬ್ಬವಾಗಿ ಆಚರಿಸುತ್ತಾ ಬಂದಿದ್ದೇವೆ. ರಕ್ಷಾ ಬಂಧನ(Raksha bandhan) ಎಂದರೆ ಅಣ್ಣ ತಂಗಿಯರ ಹಬ್ಬ. ಸೋದರಿಯರು ಸಹೋದರರ ಕೈಗೆ ರಕ್ಷಾ ದಾರವನ್ನು ಕಟ್ಟಿ ಅವರ ಆಯುರಾರೋಗ್ಯಕ್ಕಾಗಿ ಬೇಡುತ್ತಾರೆ. ಅಂತೆಯೇ ಸೋದರರು, ತಮ್ಮ ಸೋದರಿಯರ ರಕ್ಷೆಯ ವಾಗ್ದಾನ ನೀಡುತ್ತಾರೆ. 

Tap to resize

Latest Videos

ಶ್ರಾವಣ ಹುಣ್ಣಿಮೆಯಂದು ರಾಖಿ ಹಬ್ಬವನ್ನು ಆಚರಿಸುವ ಸಂಪ್ರದಾಯವಿದೆ. ಹಾಗಾಗಿ ಈ ಬಾರಿ ರಕ್ಷಾ ಬಂಧನದ ಹಬ್ಬವನ್ನು ಗುರುವಾರ, ಆಗಸ್ಟ್ 11 ರಂದು ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ಸಹೋದರರ ಮಣಿಕಟ್ಟಿನ ಮೇಲೆ ರಕ್ಷಾಸೂತ್ರಗಳನ್ನು ಕಟ್ಟುತ್ತಾರೆ. ಮತ್ತು ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಮತ್ತೊಂದೆಡೆ, ಸಹೋದರರು ರಕ್ಷಾಸೂತ್ರವನ್ನು ಕಟ್ಟಿದ ನಂತರ ತಮ್ಮ ಸಹೋದರಿಯನ್ನು ರಕ್ಷಿಸುವ ಭರವಸೆ ನೀಡುತ್ತಾರೆ.

ರಕ್ಷಾ ಬಂಧನದಂದು ಶುಭ ಯೋಗ(Shubh yog)
ಹಿಂದೂ ಧರ್ಮದಲ್ಲಿ, ರಕ್ಷಾ ಬಂಧನದ ಹಬ್ಬವು ಸಹೋದರ ಸಹೋದರಿಯರ ಅವಿನಾಭಾವ ಪ್ರೀತಿಯ ಸಂಕೇತವಾಗಿದೆ. ಈ ದಿನದಂದು ರವಿ ಯೋಗವು ಉಂಟಾಗುತ್ತಿದೆ. ಇದರಿಂದಾಗಿ ಈ ದಿನದ ಮಹತ್ವ ಹೆಚ್ಚಿದೆ.

ಇದನ್ನೂ ಓದಿ: ದೇವಶಯನಿ ಏಕಾದಶಿ ಆಚರಿಸಿದವನ ಪುಣ್ಯದ ಲೆಕ್ಕ ಬ್ರಹ್ಮನಿಗೂ ಸಿಕ್ಕಲ್ಲ! ಯಾವಾಗ ಈ ಏಕಾದಶಿ?

ಶ್ರಾವಣ ಮಾಸದ ಹುಣ್ಣಿಮೆಯನ್ನು ಶ್ರಾವಣ ಪೂರ್ಣಿಮಾ ಅಥವಾ ಕಜರಿ ಪೂನಂ ಎಂದೂ ಕರೆಯುತ್ತಾರೆ. ರಾಖಿಯ ಹಬ್ಬದಲ್ಲಿ ಭದ್ರನಿಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ ಏಕೆಂದರೆ ಭದ್ರ ಕಾಲದಲ್ಲಿ ರಾಖಿ ಕಟ್ಟಬಾರದು. ಜ್ಯೋತಿಷ್ಯದಲ್ಲಿ ಭದ್ರ ಕಾಲವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ, ರಾಖಿ ಕಟ್ಟುವ ಮುಹೂರ್ತದ ಬಗ್ಗೆ ತಿಳಿದುಕೊಂಡಿರಬೇಕು. 

ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯು ಆಗಸ್ಟ್ 11ರಂದು ಬೆಳಿಗ್ಗೆ 10.38ಕ್ಕೆ ಪ್ರಾರಂಭವಾಗಲಿದೆ. ಅದು ಆಗಸ್ಟ್ 12ರಂದು ಬೆಳಿಗ್ಗೆ 07.05ರವರೆಗೆ ಇರುತ್ತದೆ. ಸಂಜೆ 5.15ರಿಂದ 6.17ರವರೆಗೆ ಭದ್ರಾ ಕಾಲವಿರುತ್ತದೆ. ಈ ಸಮಯದಲ್ಲಿ ರಾಖಿ ಕಟ್ಟಬಾರದು. ಉದಯತಿಥಿಯ ಪ್ರಕಾರ, ಆಗಸ್ಟ್ 11ರಂದು ರಕ್ಷಾ ಬಂಧನದ ಹಬ್ಬವನ್ನು ಆಚರಿಸಲಾಗುತ್ತದೆ. 

ರಾಖಿ ಕಟ್ಟಲು ಶುಭ ಸಮಯ(Auspicious time for tying Rakhi 2022)
ರಾಖಿ ಕಟ್ಟುವ ಶುಭ ಮುಹೂರ್ತವು ಆಗಸ್ಟ್ 11ರ ಬೆಳಿಗ್ಗೆ 9.28ರಿಂದ ಪ್ರಾರಂಭವಾಗಲಿದೆ. ಅಮೃತ ಕಾಲವು ಸಂಜೆ 08.20ರವರೆಗೆ ಇರುತ್ತದೆ. ರಾಖಿ ಕಟ್ಟಲು ಉತ್ತಮ ಸಮಯ ಬೆಳಿಗ್ಗೆ 09:28 ರಿಂದ ರಾತ್ರಿ 09:14ರವರೆಗೆ ಇರುತ್ತದೆ.

ಇದನ್ನೂ ಓದಿ: ಅಬ್ಬಾ, ಈ ರಾಶಿಯವರಿಗೆ ತಿನ್ನೋದೇ ಕಾಯಿಲೆ, ಸುಮ್ ಸುಮ್ನೆ ತಿಂತಾರೆ!

ರಾಖಿ ಕಟ್ಟುವ ವಿಧಾನ(method of tying rakhi)
ಧಾರ್ಮಿಕ ನಂಬಿಕೆಗಳ ಪ್ರಕಾರ ರಾಖಿ ಕಟ್ಟುವಾಗ ಸಹೋದರನ ಮುಖ ಪೂರ್ವ ದಿಕ್ಕಿಗೆ ಹಾಗೂ ಸಹೋದರಿಯ ಮುಖ ಪಶ್ಚಿಮ ದಿಕ್ಕಿಗೆ ಇರಬೇಕು.
ಮೊದಲನೆಯದಾಗಿ, ಸಹೋದರಿಯರು ತಮ್ಮ ಸಹೋದರನಿಗೆ ಕುಂಕುಮ ಇಡಿಸಿ, ಅಕ್ಷತೆ ಹಾಕಬೇಕು.
ನಂತರ ತುಪ್ಪದ ದೀಪದಿಂದ ಆರತಿ ಮಾಡಿ, ಸಿಹಿ ತಿನ್ನಿಸಿದ ನಂತರ, ಸಹೋದರನ ಬಲ ಮಣಿಕಟ್ಟಿನ ಮೇಲೆ ರಾಖಿ ಕಟ್ಟಬೇಕು.
 

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!