ಇವೆಲ್ಲ ದೈವಿಕ ಶಕ್ತಿಗಳು ನಿಮಗೆ ಕೊಡೋ ಸಂಕೇತಗಳು, ಕಡೆಗಣಿಸ್ಬೇಡಿ!

By Suvarna News  |  First Published May 1, 2023, 11:29 AM IST

ದೈವಿಕ ಶಕ್ತಿಗಳು ನಿಮಗೆ ಏನಾದರೂ ಮುಖ್ಯವಾದುದನ್ನು ಹೇಳಲು ಬಯಸಿದಾಗ, ನೀವು ಕೆಲ ಸಂಕೇತಗಳನ್ನು ಪಡೆಯುತ್ತೀರಿ. ಎಷ್ಟೋ ಬಾರಿ ಕೆಟ್ಟದೇನಾದರೂ ಆಗುವ ಮುಂಚೆ ಕೆಲ ಸೂಚನೆಗಳು ಸಿಗುತ್ತವೆ. ಅವುಗಳನ್ನು ನಿರ್ಲಕ್ಷಿಸಬೇಡಿ. ಕೂಡಲೇ ಎಚ್ಚೆತ್ತುಕೊಳ್ಳಿ ಎಂದೇ ದೈವಿಕ ಶಕ್ತಿ ನಿಮಗೆ ಆ ಸಂಕೇತ ನೀಡಿರುತ್ತದೆ. 


ಬ್ರಹ್ಮಾಂಡವು ಹೆಚ್ಚಾಗಿ ಮಾನವ ಗ್ರಹಿಕೆಗೆ ಮೀರಿದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಬರಿಗಣ್ಣಿಗೆ ಗೋಚರಿಸದ ಶಕ್ತಿಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಆದರೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ಪ್ರಶಂಸಿಸಲು ನಾವು ವಿಕಾಸದ ಮಟ್ಟವನ್ನು ಹೊಂದಿದ್ದರೆ ಮಾತ್ರ ಅದರ ಉಪಸ್ಥಿತಿಯನ್ನು ಅನುಭವಿಸಬಹುದು. ಈ ಶಕ್ತಿಗಳನ್ನು ದೈವಿಕ ಶಕ್ತಿಗಳು ಎಂದು ಕರೆಯಲಾಗುತ್ತದೆ ಮತ್ತು ಅವು ನಮ್ಮ ಸ್ವಂತ ಒಳಿತಿಗಾಗಿ ಇವೆ. ಕೆಲವು ಬಾರಿ ಈ ಶಕ್ತಿಗಳು ಅಪಾಯ ಅಥವಾ ವಿಪತ್ತಿನ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತವೆ. ಅದನ್ನು ಗುರುತಿಸುವ ಶಕ್ತಿ ನಮಗೆ ಬೇಕಷ್ಟೇ. 

ಮುಂದಿನ ದಿನಗಳಲ್ಲಿ ಸಂಭವಿಸಲಿರುವ ಘಟನೆಗಳ ಬಗ್ಗೆ ನಾವೆಲ್ಲರೂ ಅರ್ಥ ಮಾಡಿಕೊಳ್ಳಲಿ ಎಂಬಂತೆ ಕೆಲ ಸೂಚನೆಗಳನ್ನು ಈ ಬ್ರಹ್ಮಾಂಡ ನೀಡುತ್ತಲೇ ಇರುತ್ತದೆ. ಇದು ಮುನ್ನೆಚ್ಚರಿಕೆಗಿಂತ ಭಿನ್ನವಾಗಿರುತ್ತದೆ- ಏಕೆಂದರೆ ಈ ಸಂದರ್ಭದಲ್ಲಿ ಒಬ್ಬರು ಏನಾಗಲಿದೆ ಎಂಬುದನ್ನು ಸ್ಪಷ್ಟವಾಗಿ ನೋಡಲಾಗುವುದಿಲ್ಲ, ಆದರೆ ಏನಾದರೂ ಸಂಭವಿಸಲಿದೆ ಎಂಬ ಬಲವಾದ ಭಾವನೆ ಮನಸ್ಸಿಗೆ ಸಿಗುತ್ತದೆ. ಇದು ನಿಮಗೂ ಆಗಿರಬಹುದು. ನಿಮ್ಮ ಆರನೇ ಇಂದ್ರಿಯ ಇಂದೇನೋ ಕೆಟ್ಟದಾಗುತ್ತದೆ ಎಂದೋ, ಒಳ್ಳೆಯದಾಗುತ್ತದೆ ಎಂದೋ, ಯಾವುದೋ ಕೆಲಸ ಮಾಡಲೇಬೇಡವೆಂದೋ ಎಚ್ಚರಿಕೆ ನೀಡುತ್ತದೆ. ನೀವದನ್ನು ಕಡೆಗಣಿಸುತ್ತೀರಿ. ಕಡೆಗೆ, ಅಯ್ಯೋ ನಂಗ್ಯಾಕೋ ಹಿಂಗನ್ನಿಸಿತ್ತಲ್ಲ, ಮನಸ್ಸಿನ ಮಾತನ್ನು ಕೇಳಬೇಕಿತ್ತು ಎನ್ನಿಸಿಬಿಡುತ್ತದೆ. 

Tap to resize

Latest Videos

ಈ ಚಿಹ್ನೆಗಳೇ ದೈವಿಕ ಶಕ್ತಿಗಳು ಭವಿಷ್ಯದಲ್ಲಿ ಸಂಭವಿಸಲಿರುವ ಘಟನೆಗಳ ಬಗ್ಗೆ ನಮಗೆ ಎಚ್ಚರಿಕೆ ನೀಡಲು ಪ್ರಯತ್ನಿಸುತ್ತಿರುವುದರ ಸೂಚನೆ. ಇಂಥ ಸೂಚನೆಗಳಿಗೆ ಸೂಕ್ಷ್ಮವಾಗಿ ಕಿವಿಗೊಟ್ಟರೆ ನಾವು ಈ ಅಹಿತಕರ ಘಟನೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಮುಂಬರುವ ಘಟನೆಗಳ ಬಗ್ಗೆ ನಮಗೆ ಎಚ್ಚರಿಕೆ ನೀಡುವ ನಾಲ್ಕು ಅಂತಹ ಚಿಹ್ನೆಗಳ ಬಗ್ಗೆ ಇಲ್ಲಿ ಹೇಳಲಾಗಿದೆ. 

Marriage Muhurat 2023: ಮುಹೂರ್ತವೇ ಇಲ್ಲ ಅನ್ನೋ ಟೈಂ ಮುಗೀತು, ಮೇ ಪೂರ್ತಿ ಮದುವೆ ಊಟನೇ ಮಾಡಿ ಬದುಕ್ಬೋದು!

ಚದುರಿದ ಎಲೆಗಳು
ನೀವು ಆಗಾಗ್ಗೆ ದಾರಿಯಲ್ಲಿ ಎಲ್ಲೋ ಚದುರಿದ ಎಲೆಗಳನ್ನು ನೋಡಿದರೆ, ಅದು ದೈವಿಕ ಶಕ್ತಿಗಳ ಸಂಕೇತವಾಗಿದೆ. ಅದು ನಿಮ್ಮನ್ನು ರಕ್ಷಿಸಲು ಇರುವ ಅದೃಶ್ಯ ಶಕ್ತಿಯು ಕಷ್ಟದ ಸಮಯದಲ್ಲಿ ನಿಮಗೆ ಸಹಾಯ ಮಾಡಲು ಯತ್ನಿಸುತ್ತಿರುವುದರ ಸಂಕೇತ. ಅದೊಂದು ಅದೃಶ್ಯ ಧನಾತ್ಮಕ ಶಕ್ತಿಯಾಗಿದೆ. ಬಿಕ್ಕಟ್ಟಿನ ಮಧ್ಯದಲ್ಲಿ ನಿಮ್ಮನ್ನು ಕಂಡುಕೊಂಡಾಗಲೆಲ್ಲಾ ಸಹಾಯಕ್ಕಾಗಿ ನೀವು ಆ ಶಕ್ತಿಯನ್ನು ಪ್ರಾರ್ಥಿಸಬಹುದು.

ನಿರ್ದಿಷ್ಟ ಸಂಖ್ಯೆಗಳನ್ನು ನಿಯಮಿತವಾಗಿ ನೋಡಿದರೆ
ಜ್ಯೋತಿಷ್ಯದಲ್ಲಿ ಕೆಲವು ಸಂಖ್ಯೆಗಳನ್ನು ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಇವುಗಳಲ್ಲಿ ಎರಡು ಸಂಖ್ಯೆಗಳು 3 ಮತ್ತು 8. ಯಾರಾದರೂ ಈ ಸಂಖ್ಯೆಗಳನ್ನು ಮತ್ತೆ ಮತ್ತೆ ನೋಡಿದರೆ, ಅದು ಕೆಲವು ದೈವಿಕ ಶಕ್ತಿಯು ನಿಮ್ಮೊಂದಿಗೆ ನಿರಂತರವಾಗಿ ಇರುತ್ತದೆ ಮತ್ತು ಅದು ನಿಮಗೆ ಏನನ್ನಾದರೂ ತಿಳಿಸಲು ಬಯಸುತ್ತದೆ ಎಂಬ ಸಂಕೇತವಾಗಿದೆ ಎಂದು ಹೇಳಲಾಗುತ್ತದೆ. ಇದಲ್ಲದೆ 22, 33, 444 ಹೀಗೆ ಡಬಲ್, ತ್ರಿಬಲ್ ಸಂಖ್ಯೆಗಳನ್ನು ಮತ್ತೆ ಮತ್ತೆ ನೋಡುವುದು ಕೂಡಾ ಒಂದೇ ವಿಷಯದ ಸೂಚಕವಾಗಿರುತ್ತದೆ. ಅಂಥ ಸಂದರ್ಭದಲ್ಲಿ ನೀವು ಆ ಸಂಖ್ಯೆಗಳನ್ನು ಡಿಕೋಡ್ ಮಾಡಲು ಪ್ರಯತ್ನಿಸಬೇಕು. 

ನರಮಂಡಲದಲ್ಲಿ ಕಂಪನಗಳು
ನಮ್ಮ ದೇಹದ ಕೇಂದ್ರ ಬಿಂದು ಸೌರ ಪ್ಲೆಕ್ಸಸ್ ಚಕ್ರ. ಇದು ನಮ್ಮ ನರಮಂಡಲದ ಆ ಭಾಗವಾಗಿದೆ- ಅಲ್ಲಿಂದ ಮೆದುಳಿನಿಂದ ನಮ್ಮ ದೇಹದ ಇತರ ಭಾಗಗಳಿಗೆ ಸಂದೇಶಗಳನ್ನು ಕಳುಹಿಸಲಾಗುತ್ತದೆ ಮತ್ತು ಅದೇ ಸಮಯದಲ್ಲಿ ಆ ಭಾಗಗಳ ಸಂದೇಶಗಳನ್ನು ಮೆದುಳು ಸ್ವೀಕರಿಸುತ್ತದೆ. ಈ ಸ್ಥಳದಲ್ಲಿ ನೀವು ಮತ್ತೆ ಮತ್ತೆ ಏನನ್ನಾದರೂ ಅನುಭವಿಸುತ್ತಿದ್ದರೆ ಅಥವಾ ನೀವು ಚಿಂತೆ ಮಾಡುತ್ತಿದ್ದರೆ, ಇದರರ್ಥ ದೈವಿಕ ಶಕ್ತಿಗಳು ನಿಮಗೆ ಮುಖ್ಯವಾದದ್ದನ್ನು ಹೇಳಲು ಪ್ರಯತ್ನಿಸುತ್ತಿವೆ ಎಂದು. ಇದನ್ನು ಆರನೇ ಇಂದ್ರಿಯ ಎಂದೂ ಪರಿಗಣಿಸಬಹುದು.

Chandra Grahanದ ದಿನ ಈ 8 ತಪ್ಪುಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ!

ನಿಮ್ಮ ಕಿವಿಯಲ್ಲಿ ನಿರಂತರ ಪಿಸುಗುಟ್ಟುವಿಕೆ
ಸುತ್ತ ಯಾರೂ ಇಲ್ಲದಾಗಲೂ ನಿಮ್ಮ ಕಿವಿಯಲ್ಲಿ ಯಾರಾದರೂ ನಿಮ್ಮೊಂದಿಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಾವನೆಯನ್ನು ನೀವು ಪದೇ ಪದೇ ಅನುಭವಿಸುತ್ತಿದ್ದರೆ, ದೈವಿಕ ಶಕ್ತಿಗಳು ನಿಮಗೆ ಏನನ್ನಾದರೂ ಹೇಳಲು ಪ್ರಯತ್ನಿಸುತ್ತಿವೆ ಎಂದು ಅರ್ಥ. ದೈವಿಕ ಶಕ್ತಿಗಳು ನಿಮಗೆ ಹೇಳಲು ಪ್ರಯತ್ನಿಸುತ್ತಿರುವ ಯಾವುದೇ ವಿಷಯಗಳು ನಿಮ್ಮ ಸ್ವಂತ ಒಳ್ಳೆಯದಕ್ಕಾಗಿ ಆಗಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ನೀವು ಈ ಧ್ವನಿಗಳನ್ನು ಕೇಳಿದ ತಕ್ಷಣ ಎಚ್ಚರಗೊಳ್ಳಬೇಕು.

click me!