Marriage Muhurat 2023: ಮುಹೂರ್ತವೇ ಇಲ್ಲ ಅನ್ನೋ ಟೈಂ ಮುಗೀತು, ಮೇ ಪೂರ್ತಿ ಮದುವೆ ಊಟನೇ ಮಾಡಿ ಬದುಕ್ಬೋದು!

By Suvarna News  |  First Published May 1, 2023, 10:23 AM IST

ಗುರು ಅಸ್ತದಿಂದ ಏಪ್ರಿಲ್ ಪೂರ್ತಿ ವಿವಾಹಕ್ಕೆ ಮುಹೂರ್ತವಿರಲಿಲ್ಲ. ಇದೀಗ ಮೇ ತಿಂಗಳು ಶುಭ ಕಾರ್ಯಗಳ ಸುಗ್ಗಿ ಕಾಲ. ಪ್ರತಿ ದಿನ ಮದುವೆ ಊಟನೇ ಉಂಡು ಸಂತೋಷವಾಗಿರ್ಬೋದು!


ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗುತ್ತವೆ ಎನ್ನಲಾಗುತ್ತದೆ. ಮದುವೆಗಾಗಿ ಜಾತಕ, ಮತ್ತೊಂದು ಮಗದೊಂದು ಏನೇ ನೋಡಿದರೂ ಕಡೆಗೆ ಅವು ಹಣೆಬರಹದಂತೆಯೇ ಸಂಗಾತಿಯ ಆಯ್ಕೆಯಾಗುವುದು. 
ಮೊದಲು ಜಾತಕದ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ನಂತರ ವಧು ವರರ ಜಾತಕ ಹೊಂದಾಣಿಕೆಯಾಗಬೇಕು. ಉಳಿದಂತೆ ಕುಟುಂಬದ ನಿರೀಕ್ಷೆಗಳೆಲ್ಲ ಭರ್ತಿಯಾಗಿ ಮದುವೆ ಏರ್ಪಡಬೇಕು. ಅಷ್ಟಾದರೆ ಸಾಲುವುದಿಲ್ಲ, ವಿವಾಹಕ್ಕೆ ನೋಡಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಶುಭ ಮುಹೂರ್ತ. ಶುಭ ಮುಹೂರ್ತದಲ್ಲಿ ವಿವಾಹವು ನಡೆದರೆ, ದಂಪತಿಗೆ ಇದು ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ಮುಹೂರ್ತವೇ ಇಲ್ಲದೆ ಆದ ವಿವಾಹ ಅಡೆತಡೆಗಳನ್ನು ಹೊಂದಿರುತ್ತದೆ, ಪ್ರತಿಕೂಲ ಸಂದರ್ಭಗಳಲ್ಲಿ ಅವರು ಪರಸ್ಪರ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಾರೆ ಎನ್ನಲಾಗುತ್ತದೆ. 

ಕಳೆದ ತಿಂಗಳು ನಿಮ್ಮ ಮದುವೆ ನಿಶ್ಚಯಗೊಂಡಿದ್ದರೂ ಗ್ರಹಗತಿಯ ಕಾರಣದಿಂದ ವಿವಾಹ ಸಾಧ್ಯವಿರಲಿಲ್ಲ. ವಿವಾಹ ಕಾರಕನಾದ ಗುರು ಗ್ರಹ ಅಸ್ತಗೊಂಡ ಕಾರಣ ಏಪ್ರಿಲ್‌ನಲ್ಲಿ ವಿವಾಹ, ಮುಂಜಿ, ನಿಶ್ಚಿತಾರ್ಥ ಸೇರಿದಂತೆ ಯಾವುದೇ ಶುಭ ಕಾರ್ಯಗಳಿಗೆ ಮುಹೂರ್ತವೇ ಇರಲಿಲ್ಲ. ಆದರೆ, ಇದೀಗ ಗುರು ಉದಯನಾಗಿದ್ದಾನೆ. ಹಾಗಾಗಿ, ಮೇ ತಿಂಗಳು ಮುಹೂರ್ತಗಳಿಂದ ತುಂಬಿದೆ. ಪಂಚಾಂಗದ ಪ್ರಕಾರ, ಮೇ ತಿಂಗಳಲ್ಲಿ ಮದುವೆಗೆ 13 ಮಂಗಳಕರ ಸಮಯಗಳಿವೆ. ಎಲ್ಲೆಡೆ ಚೌಲ್ಟ್ರಿಗಳೂ ಪ್ರತಿ ದಿನ ವಿವಾಹ ಸಮಾರಂಭದ ಕಾರಣ ಸಿಂಗರಿಸಿಕೊಳ್ಳುತ್ತಿವೆ. 

Tap to resize

Latest Videos

Chandra Grahanದ ದಿನ ಈ 8 ತಪ್ಪುಗಳನ್ನು ಮಾಡಿದ್ರೆ ತೊಂದರೆ ತಪ್ಪಿದ್ದಲ್ಲ!

ಮೇ ತಿಂಗಳಲ್ಲಿ ವಿವಾಹ ಸಮಾರಂಭಕ್ಕೆ ಯಾವೆಲ್ಲ ದಿನ ಶುಭ ಮುಹೂರ್ತಗಳಿವೆ, ಆ ಮುಹೂರ್ತದ ಸಮಯವೇನು ನೋಡೋಣ. 

ಮೇ 2023ರಲ್ಲಿ ಮದುವೆಗೆ ಮಹೂರ್ತ
ವಿವಾಹ ಮುಹೂರ್ತವನ್ನು ಲೆಕ್ಕಾಚಾರ ಮಾಡುವಾಗ ಪಂಚಾಂಗ ಮತ್ತು ಕುಂಡಲಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಾದಿ ಮುಹೂರ್ತವನ್ನು ನಿಗದಿಪಡಿಸುವಾಗ ಭವಿಷ್ಯದ ವಧು ಮತ್ತು ವರರು ಜನಿಸಿದ ನಕ್ಷತ್ರದಲ್ಲಿ ಚಂದ್ರನ ಸ್ಥಾನವನ್ನು ವಿಶ್ಲೇಷಿಸಲು ಜ್ಯೋತಿಷಿಗಳು ಪ್ರಯತ್ನಿಸುತ್ತಾರೆ. ನಂತರದಲ್ಲಿ ಅಗತ್ಯವಿರುವ ತಿಂಗಳಲ್ಲಿ ಯಾವಾಗ ಶುಭ ಮುಹೂರ್ತವಿದೆ, ಅದು ವಿವಾಹಾಕಾಂಕ್ಷಿಗಳಿಗೆ ಹೊಂದುತ್ತದೆ ಎಂಬುದನ್ನು ಲೆಕ್ಕ ಹಾಕಿ ಬಳಿಕ ವಿವಾಹದ ದಿನ ನಿಶ್ಚಯಿಸಲಾಗುತ್ತದೆ. ಇದೀಗ ಮೇನಲ್ಲಿ ಯಾವೆಲ್ಲ ಶುಭ ಮುಹೂರ್ತಗಳು ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಇದೆ ನೋಡೋಣ. 

Chandra Grahan 2023: ಗ್ರಹಣ ಕಾಲದಲ್ಲೂ ಈ ದೇವಾಲಯದ ಬಾಗಿಲು ಮುಚ್ಚೋದಿಲ್ಲ! ಕಾರಣವೇನು?

ದಿನಾಂಕ ಮುಹೂರ್ತ ಸಮಯ
ಮೇ 2, 2023, ಮಂಗಳವಾರ:  ಬೆಳಗ್ಗೆ 11:50ರಿಂದ ಮೇ 3ರ ಬೆಳಗ್ಗೆ 6:06 ನಿಮಿಷದವರೆಗೆ 
ಮೇ 3, 2023, ಬುಧವಾರ: ಬೆಳಗ್ಗೆ 6:06ರಿಂದ ಸಂಜೆ 08:56ರವರೆಗೆ
ಮೇ 6, 2023, ಶನಿವಾರ: ರಾತ್ರಿ 9:13ರಿಂದ ಮೇ 7 ಬೆಳಗ್ಗೆ 6:03ವರೆಗೆ
ಮೇ 8, 2023, ಸೋಮವಾರ: ಬೆಳಗ್ಗೆ 12:49ರಿಂದ ಮೇ 9 ಬೆಳಗ್ಗೆ 6:02ರವರೆಗೆ
ಮೇ 9, 2023, ಮಂಗಳವಾರ: ಬೆಳಗ್ಗೆ  6:02ರಿಂದ ಸಂಜೆ 5:45ರವರೆಗೆ
ಮೇ 10, 2023, ಬುಧವಾರ:  ಸಂಜೆ 4:12ರಿಂದ ಮೇ 11ರ ಬೆಳಗ್ಗೆ 6:01ವರೆಗೆ, 
ಮೇ 11, 2023, ಗುರುವಾರ: ಬೆಳಗ್ಗೆ 6:01ರಿಂದ 11:27ರವರೆಗೆ
ಮೇ 15, 2023, ಸೋಮವಾರ: ಬೆಳಗ್ಗೆ 9:08ರಿಂದ ಮೇ 16ರ ಬೆಳಗ್ಗೆ 5:59ವರೆಗೆ
ಮೇ 16, 2023, ಮಂಗಳವಾರ:  ಬೆಳಗ್ಗೆ 5:59ರಿಂದ ಮೇ 17ರ ಬೆಳಗ್ಗೆ 1:48ರವರೆಗೆ
ಮೇ 20, 2023, ಶನಿವಾರ: ಸಂಜೆ 5:18ರಿಂದ ಮೇ 21ರ ಬೆಳಗ್ಗೆ 5:57ರವರೆಗೆ
ಮೇ 21, 2023, ಭಾನುವಾರ:  ಬೆಳಗ್ಗೆ 5:57ರಿಂದ ಮೇ 22ರ ಬೆಳಗ್ಗೆ 5:56
ಮೇ 22, 2023, ಸೋಮವಾರ: ಬೆಳಗ್ಗೆ 5:56ರಿಂದ ರಾತ್ರಿ 10:37ವರೆಗೆ
ಮೇ 29, 2023, ಸೋಮವಾರ: ಬೆಳಗ್ಗೆ 5:54ರಿಂದ ಮೇ 30ರ ಬೆಳಗ್ಗೆ 05:54ರವರೆಗೆ 
ಮೇ 30, 2023, ಮಂಗಳವಾರ: ಬೆಳಗ್ಗೆ 5:54ರಿಂದ ಸಂಜೆ 8:55ರವರೆಗೆ

click me!