Vastu Tips: ನಿಮ್ಮಲ್ಲಾಗ್ತಿರುವ ಬದಲಾವಣೆಗೆ ಇದೂ ಕಾರಣವಿರ್ಬಹುದು

By Suvarna News  |  First Published Jun 9, 2023, 4:05 PM IST

ಕಾರಣವಿಲ್ಲದ ಕೋಪ, ಅಳು.. ನೆಮ್ಮದಿಯಿಲ್ಲದ ಜೀವನ.. ಹೊಸ ಕೆಲಸಕ್ಕೆ ಅಡ್ಡಿ ಇವೆಲ್ಲವಕ್ಕೂ ನಿಮ್ಮ ಸುತ್ತಲಿರುವ ಶಕ್ತಿಯ ಕವಚ ಕಾರಣವಾಗಿರಬಹುದು. ಅದು ದುರ್ಬಲವಾದ್ರೆ ನೀವು ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
 


ಪ್ರಪಂಚದಲ್ಲಿರುವ ಎಲ್ಲಾ ಜೀವಿಗಳಿಗೂ ಅವರದೇ ಆದ ಭಾವನೆಗಳಿರುತ್ತವೆ. ಪರಿಸ್ಥಿತಿಗೆ ತಕ್ಕಂತೆ ಇದು ಬದಲಾಗುತ್ತದೆ. ಮನುಷ್ಯನಿಗೆ ಕೂಡ ಕೆಲವೊಮ್ಮೆ ಕಾರಣವಿಲ್ಲದೇ ಸಂತೋಷವಾಗುತ್ತೆ, ದುಃಖವಾಗುತ್ತೆ ಅಥವಾ ವಿನಾಕಾರಣ ಸಿಟ್ಟು ಬರುತ್ತೆ. ಕೆಲವರಿಗೆ ಕಾರಣವಿಲ್ಲದೆ ಕೆಲಸದಲ್ಲಿ ಉತ್ಸಾಹ ಕಳೆದುಕೊಳ್ತಾರೆ. ಒಬ್ಬ ವ್ಯಕ್ತಿಯ ಇಂತಹ ವರ್ತನೆಗಳು ಆತನ ದುರ್ಬಲ ಸೆಳವಿನ  ಸಂಕೇತವಾಗಿದೆ.

ಔರಾ ಅಥವಾ ಸೆಳವು ಮನುಷ್ಯನ ಸುತ್ತ ಇರುವ ಒಂದು ಶಕ್ತಿ (Energy ) ಯ ಕವಚವಾಗಿದ್ದು ಇದು ಅನೇಕ ತೊಂದರೆಗಳಿಂದ ನಮ್ಮನ್ನು ಕಾಪಾಡುತ್ತದೆ. ಒಂದು ಶಕ್ತಿಶಾಲಿ ಸೆಳವು ನಮಗೆ ಮಾನಸಿಕ ಶಾಂತಿಯನ್ನು ಕೊಡುತ್ತದೆ ಹಾಗೂ ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಈ ಸೆಳವು ದುರ್ಬಲ (Weak) ವಾಗಿ ಇದರ ಪ್ರಭಾವ ನಮ್ಮ ಶರೀರ, ಮನಸ್ಸು ಮತ್ತು ಮೆದುಳಿನ ಮೇಲೆ ಬೀರುತ್ತದೆ. ಅಂತಹ ಸಂದರ್ಭದಲ್ಲಿ ನಿಮ್ಮಲ್ಲಿ ಮೂಡುವ ನಕಾರಾತ್ಮಕತೆಯು ನಿಮ್ಮ ಸಂಬಂಧಗಳಲ್ಲಿ ಬಿರುಕು ಮೂಡಿಸಬಹುದು ಹಾಗೂ ನಿಮ್ಮ ಪ್ರಗತಿಗೆ ದೊಡ್ಡ ಸವಾಲಾಗಬಹುದು.

Tap to resize

Latest Videos

undefined

ಭಗವಾನ್ ಕೃಷ್ಣನ ಅನಂತ ಅನುಗ್ರಹವು ಈ ರಾಶಿಗಳ ಮೇಲೆ ಯಾವಾಗ್ಲೂ ಇರುತ್ತೆ

ವಾಸ್ತು ಶಾಸ್ತ್ರದ ಪ್ರಕಾರ ನಮ್ಮ ಸೆಳವು ದುರ್ಬಲವಾದಾಗ (Weak Aura) ನಮ್ಮಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ. ಇದರಿಂದ ನಮ್ಮ ಮಾನಸಿಕ, ಭಾವನಾತ್ಮಕ, ಶಾರೀರಿಕ ಹಾಗೂ ವೃತ್ತಿ ಜೀವನದಲ್ಲಿ ಹಾನಿಯುಂಟುಮಾಡುತ್ತದೆ. ಇಂತಹ ದುರ್ಬಲ ಸೆಳವು ನಮ್ಮಲ್ಲಿ ಆರಂಭದಲ್ಲಿ ಕೆಲವು ಸಂಕೇತಗಳನ್ನು ತೋರಿಸುತ್ತದೆ. ಅಂತಹ ಕೆಲವು ಸಂಕೇತಗಳು ಇಲ್ಲಿವೆ.

ವ್ಯಕ್ತಿ ತನ್ನನ್ನು ತಾನು ದುರ್ಬಲ ಎಂದುಕೊಳ್ಳುವುದು :  ವ್ಯಕ್ತಿಯ ಸೆಳವು ದುರ್ಬಲವಾದಾಗ ಆತ ತನ್ನನ್ನು ತಾನು ಬಲಹೀನ ಎಂದುಕೊಳ್ಳುತ್ತಾನೆ. ಆತನಿಗೆ ಯಾವುದೇ ಕಾರಣವಿಲ್ಲದೇ ದುಃಖವಾಗುತ್ತೆ. ಇದರಿಂದ ಸ್ಥಿರತೆ ಇರುವುದಿಲ್ಲ. ಇನ್ನೊಬ್ಬರ ಕಷ್ಟಕ್ಕೆ ಕೂಡ ಆತ ವಿಪರೀತ ಮರುಗುತ್ತಾನೆ. 

ಹೆಚ್ಚು ಕೋಪ : ಒಬ್ಬ ವ್ಯಕ್ತಿಯ ಸೆಳವು ದುರ್ಬಲಗೊಂಡಾಗ ವಿನಾಕಾರಣ ಚಿಕ್ಕ ಚಿಕ್ಕ ವಿಷಯಕ್ಕೂ ಸಿಟ್ಟು ಬರುತ್ತೆ. ಇದರ ಕೆಟ್ಟ ಪ್ರಭಾವದಿಂದ ವ್ಯಕ್ತಿ ಎಲ್ಲರೊಡನೆ ಕೋಪದಿಂದ ವರ್ತಿಸಲು ಆರಂಭಿಸುತ್ತಾನೆ. ಔರಾ ದುರ್ಬಗೊಂಡಾಗ ಏನು ತಿನ್ನಬೇಕು, ಏನನ್ನು ಧರಿಸಬೇಕು, ಯಾರ ಜೊತೆ ಮಾತನಾಡಬೇಕೆನ್ನುವ ಸಣ್ಣ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಕಠಿಣವಾಗುತ್ತದೆ. 

ಈ ರಾಶಿಯ ಮಹಿಳೆಯರಿಗೆ ಕಿರಿಯ ಯುವಕರು ಅಂದ್ರೆ ಪಂಚಪ್ರಾಣ..!

ಶರೀರದಲ್ಲಿ ಶಕ್ತಿಯ ಕೊರತೆ : ದುರ್ಬಲ ಸೆಳವಿನ ಕಾರಣ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಅಥವಾ ನಾಲ್ಕು ಜನರ ಜೊತೆ ಮಾತನಾಡಿದಾಗ ಶಕ್ತಿಯ ಕೊರತೆ ಉಂಟಾಗುತ್ತದೆ. ಈ ಮೊದಲು ಆತ್ಮವಿಶ್ವಾಸದಿಂದ ಮಾಡುತ್ತಿದ್ದ ಕೆಲಸವನ್ನು ಕೂಡ ಮಾಡಲಾಗುವುದಿಲ್ಲ ಮತ್ತು ಆತ್ಮವಿಶ್ವಾಸದ ಕೊರತೆ ಯಾವಾಗಲೂ ಕಾಡುತ್ತದೆ.

ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದು : ಒಬ್ಬ ವ್ಯಕ್ತಿ ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ, ಆರೋಗ್ಯ ಹದಗೆಡಲು ಸರಿಯಾದ ಕಾರಣವೇ ಇಲ್ಲ ಎಂದಾದರೆ ಅದಕ್ಕೆ ದುರ್ಬಲ ಸೆಳವೇ ಕಾರಣವಾಗಿರುತ್ತದೆ. ದುರ್ಬಲ ಸೆಳವಿನ ಕಾರಣ ಅನಾರೋಗ್ಯ ಉಂಟಾಗಿರುವುದರಿಂದ ಯಾವುದೇ ಔಷಧವು ಕೂಡ ಪರಿಣಾಮ ಬೀರುವುದಿಲ್ಲ. ಇದರಿಂದ ಆಲಸಿತನ ಕೂಡ ಉಂಟಾಗುತ್ತದೆ.

ಹೊಸ ಆರಂಭಕ್ಕೆ ಹಿನ್ನಡೆ : ವೀಕ್ ಔರಾ (weak aura) ಹೊಂದಿರುವವರು ಯಾವ ಕೆಲವನ್ನು ಆರಂಭಿಸಲು ಹೆದರುತ್ತಾರೆ. ಹಾಗೊಮ್ಮೆ ಕೆಲಸವನ್ನು ಆರಂಭಿಸಿದರೂ ಕೂಡ ಕೆಲಸವನ್ನು ಪೂರ್ತಿಮಾಡದೇ ಅರ್ಧಕ್ಕೆ ಕೈ ಚೆಲ್ಲುತ್ತಾರೆ. ದುರ್ಬಲ ಸೆಳವು ಉಂಟಾದಾಗ ಹೆಚ್ಚಿನ ಸಮಯ ನಿದ್ದೆ ಮಾಡುವ ಮನಸ್ಸಾಗುತ್ತದೆ ಮತ್ತು ಯಾವ ಕೆಲಸದಲ್ಲೂ ಉತ್ಸಾಹವಿರುವುದಿಲ್ಲ.

ನಕಾರಾತ್ಮಕ ಶಕ್ತಿ : ದುರ್ಬಲ ಸೆಳವು ಉಂಟಾದಾಗ ನಿಮ್ಮ ಸುತ್ತ ಮುತ್ತ ಯಾರು ಇರದೇ ಇದ್ದರೂ ಯಾವುದೋ ಕೂಗು ನಿಮಗೆ ಕೇಳಿಸುತ್ತದೆ ಮತ್ತು ಯಾವುದೋ ಅಲೌಕಿಕ ಶಕ್ತಿ ನಿಮ್ಮೊಂದಿಗೆ ಮಾತನಾಡಲು ಬಯಸುವಂತೆ ನಿಮಗೆ ಅನ್ನಿಸುತ್ತದೆ. ಇಂತಹ ದುರ್ಬಲ ಸೆಳವಿನ ಸಂಕೇತಗಳು ಕಾಣಿಸಿಕೊಂಡಲ್ಲಿ ವಾಸ್ತು ತಜ್ಞರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಉತ್ತಮ.

click me!