15 ವರ್ಷಕ್ಕೊಮ್ಮೆ ನಡೆಯೂ ಅಚ್ಚರಿ ಈ ಬಾರಿ 5 ವರ್ಷದಲ್ಲೇ ಗೋಚರ!, ಕುಂದೂರು ಕೆಂಪಮ್ಮ ದೇವಿ ಪವಾಡವೇನು?

By Suvarna News  |  First Published Jun 8, 2023, 9:31 PM IST

ಚಿಕ್ಕಮಗಳೂರು  ಜಿಲ್ಲೆಯಲ್ಲಿ ಗರ್ಭಗುಡಿಯ ದೇವರ ಮೈಮೇಲೆ ಮೇಲೆ ಬೆಳೆಯುತ್ತಿರುವ ಹುತ್ತ. ದಿನೇ-ದಿನೇ ದೇವರ ಮೂರ್ತಿಯನ್ನ ಆವರಿಸಿಕೊಂಡು ಬೆಳೆಯುತ್ತಿದೆ. ಗರ್ಭಗುಡಿಯ ದೇವರ ಮೂರ್ತಿ ಮೇಲೆ ಬೆಳೆಯುತ್ತಿದ್ದಂತೆ ದೇವರನ್ನ ವಿಸರ್ಜನೆ ಮಾಡಬೇಕು


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಜೂ.8): ಹುತ್ತ ಎಲ್ಲಿ ಬೆಳೆಯುತ್ತೆ. ಹೊಲ-ಗದ್ದೆ, ತೋಟ, ಬಯಲು ಪ್ರದೇಶದಲ್ಲಿ ಬೆಳೆಯುತ್ತೆ. ದೇವರ ಮೈ ಮೇಲೆ ಬೆಳೆಯೋದ ಎಲ್ಲಾದ್ರು ನೋಡಿದ್ದೀರಾ. ಅಂತಹಾ ಒಂದು ಅಪರೂಪದ ಘಟನೆಗೆ  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಂದೂರು ಸಾಕ್ಷಿಯಾಗಿದೆ. ಗ್ರಾಮ ದೇವತೆಯ ಮೇಲೆ ಅಚ್ಚರಿ ಎಂಬಂತೆ ಬೆಳೆಯುತ್ತಿರೋ ಹುತ್ತವನ್ನ. ಗ್ರಾಮಸ್ಥರ ಕಣ್ಣೆದುರೆ ನೋಡನೋಡುತ್ತಿದ್ದಂತೆ ದಿನೇ-ದಿನೇ ಇಡೀ ದೇವಾಲಯವನ್ನ ಆವರಿಸಿಕೊಳ್ತಿದೆ. ಗ್ರಾಮದಿಂದ ಹಿಡಿದು ಇಡೀ ಜಿಲ್ಲೆಯಾದ್ಯಂತ ಈಕೆಯದ್ದೆ ಸದ್ದು -ಸುದ್ದಿ ಆಗಿದೆ. ಗರ್ಭಗುಡಿಯಲ್ಲಿನ ಈಕೆ ವಿಗ್ರಹದ ಮೇಲೆ ಹುತ್ತಾ ಬೆಳೆಯುತ್ತಿರುವುದು ಭಕ್ತರ ಅಚ್ಚರಿಗೆ ಕಾರಣವಾಗಿದೆ. ದಶಕಗಳಿಂದಲೂ ಭಕ್ತರು ಕೆಂಪಮ್ಮಳನ್ನ (kempamma ) ಭಯ, ಭಕ್ತಿಯಿಂದ ಪೂಜೆ ಮಾಡಿಕೊಂಡು ಬರ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇವರ ಮೂರ್ತಿ ಮೇಲೆ ಹುತ್ತ ಬೆಳೆಯುತ್ತಿರುವುದು ಪವಾಡ ಎನಿಸಿದೆ. ಕಳೆದ 15 ವರ್ಷಗಳ ಹಿಂದೆ ಇಂಥದೊಂದು ಘಟನೆ ನಡೆದಿತ್ತು. ಇದೀಗ ಮತ್ತೆ ಮತ್ತೆ ಪುನರಾವರ್ತನೆಯಾಗ್ತಿರೋದು ಭಕ್ತರಲ್ಲಿ ಕೌತುಕ ತರೋದ್ರ ಜೊತೆ ಭಕ್ತರಿಗೆ ದೇವಿ (goddess) ಮೇಲೆ ಮತ್ತಷ್ಟು ನಂಬಿಕೆ ಮೂಡುವಂತೆ ಮಾಡಿದೆ.

Tap to resize

Latest Videos

undefined

15 ವರ್ಷಕ್ಕೊಮ್ಮೆ ಬೆಳೆಯುತ್ತಿದ್ದ ಹುತ್ತ ಈಗ ಐದೇ ವರ್ಷಕ್ಕೆ: 
ಆಕೆ ಹುತ್ತದ ಕೆಂಪಮ್ಮ ಎಂದೇ ಖ್ಯಾತಿ. ಆಕೆ ಹುಟ್ಟಿದ್ದೆ, ಹುತ್ತದಲ್ಲಿ ಎಂಬ ನಂಬಿಕೆ ಭಕ್ತರದ್ದು. ಶತಮಾನಗಳಿಂದಲೂ ದಶಕಕೊಮ್ಮೆ ಆಕೆ ಮೇಲೆ ಹುತ್ತ ಬೆಳೆಯುತ್ತಿತ್ತು.‌ ಹೀಗೆ ಹುತ್ತ ಬೆಳೆದಾಗಲೆಲ್ಲ ಆಕೆಯನ್ನ ವಿಸರ್ಜಿಸಿ ಭಕ್ತರು ಹೊಸದೊಂದು ರೂಪ ಕೊಡುತ್ತಿದ್ದರು.‌ ದೇವರ ಮೇಲೆ 15 ವರ್ಷಕ್ಕೊಮ್ಮೆ ಬೆಳೆಯುತ್ತಿದ್ದ ಹುತ್ತ ಈಗ ಐದೇ ವರ್ಷಕ್ಕೆ ಬೆಳೆಯುತ್ತಿದೆ.‌ ದಿನದಿಂದ ದಿನಕ್ಕೆ ಇಡೀ ದೇವತೆಯನ್ನೇ ಹುತ್ತ ಆವರಿಸಿಕೊಳ್ಳುತ್ತಿದೆ.‌ ಅದಕ್ಕೆ ಆ ಹುತ್ತದ ಕೆಂಪಮ್ಮ ಭಕ್ತರಿಗೆ ಸೂಚನೆಯನ್ನು ಕೊಟ್ಟಿದೆ.

ಮೆಕ್ಕಾ ಮತ್ತು ಮದೀನಾಕ್ಕೆ ಮುಸ್ಲಿಮೇತರರಿಗೆ ಏಕೆ ಅವಕಾಶವಿಲ್ಲ ಗೊತ್ತಾ?

ಈ ಬಾರಿ ಮೂರ್ತಿಯನ್ನು ವಿಸರ್ಜಿಸಿದ ಬಳಿಕ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತೆ ದೇವಿಯೇ ಪ್ರಸಾದ ರೂಪದಲ್ಲಿ ಭಕ್ತರಿಗೆ ಸೂಚನೆ ಕೊಟ್ಟಿದೆ ಎನ್ನುವುದು ಗ್ರಾಮಸ್ಥರು ಮಾತು. ಕಳೆದ ಒಂದೂವರೆ ದಶಕಗಳ ಹಿಂದೆ ಇದೇ ರೀತಿ ದೇವಿಯ ಮೇಲೆ ಹುತ್ತ ಬೆಳೆದ ಪರಿಣಾಮ ದೇವರನ್ನು ವಿಸರ್ಜಿಸಿ ಪುನರ್ ಪ್ರತಿಷ್ಠಾಪಿಸಲಾಗಿತ್ತು. ಕಳೆದ ಹಲವು ತಿಂಗಳಿಂದ ದೇವಿಯ ಎಡಗೈ ಸೇರಿದಂತೆ ವಿವಿಧ ಭಾಗಗಳಲ್ಲಿ ಹುತ್ತ ಗಣನೀಯವಾಗಿ ಬೆಳೆಯುತ್ತಿರುವುದನ್ನು ಕಂಡ ಗ್ರಾಮಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುತ್ತದ ಕೆಂಪಮ್ಮ ಎಂದೇ ಖ್ಯಾತಿಯಾಗಿದ್ದಾಳೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಈ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು  ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

ಭಗವಾನ್ ಕೃಷ್ಣನ ಅನಂತ ಅನುಗ್ರಹವು ಈ ರಾಶಿಗಳ ಮೇಲೆ ಯಾವಾಗ್ಲೂ ಇರುತ್ತೆ

ಅಚ್ಚರಿ ಬೆಳವಣಿಗೆಗೆ ಬಯಲುಸೀಮೆ ಸಾಕ್ಷಿ: 
ವೈಜ್ಞಾನಿಕವೋ ಅಥವಾ ಭಕ್ತರ ನಂಬಿಕೆಯೋ ಗೊತ್ತಿಲ್ಲ. ಆದ್ರೆ, ಈ ಅಚ್ಚರಿಯ ಬೆಳವಣಿಗೆಗಂತೂ ಕಡೂರು ತಾಲೂಕಿನ ಕುಂದೂರು (kunduru ) ಗ್ರಾಮ ಸಾಕ್ಷಿಯಾಗಿದೆ. ಹುತ್ತದ ಬೆಳವಣಿಗೆಯ ಹಿಂದಿನ ಸತ್ಯ ಹಾಗೂ ಸಾವಿರಾರು ಭಕ್ತರ ನಂಬಿಕೆಗೆ ಹುಸಿಯಾಗದಂತೆ ಸಂಬಂಧಪಟ್ಟವರು ಸಾಕ್ಷೀಕರಿಸಬೇಕಿದೆ. ಸದ್ಯ ಕೆಂಪಮ್ಮ ಕಾಫಿನಾಡ ಕೇಂದ್ರ ಬಿಂದುವಾಗಿದ್ದು ನೂರಾರು ಭಕ್ತರನ್ನು ಸೆಳೆಯುತ್ತಲೇ ಇದ್ದಾಳೆ.ಆದ್ರೆ, ಈಹುತ್ತದ ಮಹಿಮೆ ಅಚ್ಚರಿ ಮೂಡಿಸಿದ್ದು ಜನ ಮರಳೋ, ಜಾತ್ರೆ ಮರಳೋ ಎಂಬಂತೆ ನಿತ್ಯ ನೂರಾರು ಭಕ್ತರು ಬಂದು ದೇವಿಯ ದರ್ಶನ ಮಾಡ್ತಿದ್ದಾರೆ.

click me!