Most attractive Men: ಈ ರಾಶಿಯ ಪುರುಷರಿಗೆ ಹುಡುಗಿಯರು ಹೆಚ್ಚು ಆಕರ್ಷಿತರಾಗ್ತಾರೆ!

By Suvarna News  |  First Published Jan 14, 2023, 10:42 AM IST

ಒಂದೊಂದು ರಾಶಿಯ ಸ್ವಭಾವ ಒಂದೊಂದು ರೀತಿಯಿರುತ್ತದೆ. ಅಂತೆಯೇ ಈ ಐದು ರಾಶಿಗಳ ಪುರುಷರ ಸ್ವಭಾವ ಮಹಿಳೆಯರಿಗೆ ಹೆಚ್ಚು ಆಕರ್ಷಕವೆನಿಸುವಂತೆ ಇರುತ್ತದೆ. 


ಪುರುಷರು ಮತ್ತು ಮಹಿಳೆಯರ ಪರಸ್ಪರ ಆಕರ್ಷಣೆಯು ಶಾಶ್ವತವಾಗಿದೆ. ಮಾನವ ನಾಗರಿಕತೆಯು ಈ ಆಕರ್ಷಣೆಯ ಮೇಲೆ ಆಧಾರಿತವಾಗಿದೆ. ಯಾರು ಯಾರಿಗೆ ಆಕರ್ಷಿತರಾಗುತ್ತಾರೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಆದ್ಯತೆಯ ವಿಷಯವಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಹಿಳೆಯರು ಈ ಐದು ರಾಶಿಚಕ್ರ ಚಿಹ್ನೆಗಳ ಪುರುಷರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಈ ಐದು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಜನಿಸಿದ ಪುರುಷರು ತಮ್ಮ ವರ್ಚಸ್ಸಿನಿಂದ ಮಹಿಳೆಯರನ್ನು ಸುಲಭವಾಗಿ ಆಕರ್ಷಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ನಿಮ್ಮ ರಾಶಿ(zodiac signs) ಈ ಪಟ್ಟಿಯಲ್ಲಿದೆಯೇ ನೋಡಿಕೊಳ್ಳಿ. 

ಮಕರ ರಾಶಿ(Capricorn)
ಬಾಲಿವುಡ್ ನ ಗ್ರೀಕ್ ಗಾಡ್ ಹೃತಿಕ್ ರೋಷನ್. ಆತ ವಿಶ್ವದ ಅತ್ಯಂತ ಸುಂದರ ಪುರುಷರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದಾನೆ. ಮಕರ ರಾಶಿಯ ಪುರುಷರ ವರ್ಚಸ್ಸಿನಲ್ಲಿ ಮಹಿಳೆಯರು ಸುಲಭವಾಗಿ ತಮ್ಮನ್ನು ತಾವು ಕಳೆದುಕೊಳ್ಳುತ್ತಾರೆ. ಸೌಂದರ್ಯ ಮಾತ್ರವಲ್ಲ, ಮಹಿಳೆಯರು ಈ ರಾಶಿಯ ಪುರುಷರ ಪ್ರಬುದ್ಧ ಮನಸ್ಸು ಮತ್ತು ಬುದ್ಧಿವಂತ ನೋಟದಿಂದ ಪ್ರೀತಿಯಲ್ಲಿ ಬೀಳುತ್ತಾರೆ. ಅವರು ಹೆಚ್ಚು ಮಾತನಾಡುವುದಿಲ್ಲ, ಆದರೆ ಅವರು ಎಲ್ಲರನ್ನು ಕೇಳಿಸಿಕೊಳ್ಳುತ್ತಾರೆ. ಮಕರ ರಾಶಿಯ ಪುರುಷರು ತುಂಬಾ ಭಾವುಕರು.

Tap to resize

Latest Videos

Kodimatha Swamiji: ಈ ಸಾರಿ ಸಮ್ಮಿಶ್ರ ಸರಕಾರ ರಚನೆಯಾಗೋಲ್ಲ: ಕೋಡಿ ಮಠ ಶ್ರೀ ರಾಜಕೀಯ ಭವಿಷ್ಯ

ವೃಷಭ ರಾಶಿ(Taurus)
ವೃಷಭ ರಾಶಿಯ ಪುರುಷರು ಮೊದಲ ನೋಟದಲ್ಲಿ ಸುಂದರವಾಗಿ ಕಾಣುವುದಿಲ್ಲ. ಆದರೆ ಮಹಿಳೆಯರು ಮತ್ತೆ ಮತ್ತೆ ಬೇಟಿ ಮಾಡಿದ ನಂತರ ಅವರತ್ತ ಆಕರ್ಷಿತರಾಗಬಹುದು. ವೃಷಭ ರಾಶಿಯ ಪುರುಷರು ಎಂಥ ವರ್ಚಸ್ಸನ್ನು ಹೊಂದಿದ್ದಾರೆ ಎಂದರೆ ನೀವು ಅವರೊಂದಿಗೆ ಹೆಚ್ಚು ಮಾತಾಡಿದಂತೆಲ್ಲ ಅವರು ಹೆಚ್ಚು ಸುಂದರವಾಗಿ ಕಾಣಿಸಲಾರಂಭಿಸುತ್ತಾರೆ. ಅವರು ಒಳ್ಳೆಯ ಬಟ್ಟೆಗಳನ್ನು ಧರಿಸಲು ಇಷ್ಟಪಡುತ್ತಾರೆ. ಆದರೆ ಮಹಿಳೆಯರು ವೃಷಭ ರಾಶಿ ಪುರುಷರ ಕಣ್ಣುಗಳಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. 

ಸಿಂಹ ರಾಶಿ(Leo)
ಸಿಂಹ ರಾಶಿಯ ಪುರುಷರು ತುಂಬಾ ಸುಂದರವಾಗಿರುತ್ತಾರೆ. ಕೇವಲ ದೈಹಿಕ ಸೌಂದರ್ಯವಲ್ಲ, ಸಿಂಹ ರಾಶಿಯ ಪುರುಷರ ದೃಷ್ಟಿಯಲ್ಲಿ ಸ್ಪಷ್ಟ ಬುದ್ಧಿವಂತಿಕೆ ಇರುತ್ತದೆ. ಅವರು ವಾಸ್ತವಿಕ ಮತ್ತು ಪ್ರಬಲರಾಗಿದ್ದಾರೆ. ಸಿಂಹ ರಾಶಿಯವರು ಬಹಳ ಬಲವಾದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಎಲ್ಲರ ಗಮನದ ಕೇಂದ್ರಬಿಂದುವಾಗುವುದು ಅವರಿಗೆ ಗೊತ್ತು. ಅದಕ್ಕಾಗಿಯೇ ಮಹಿಳೆಯರು ಅವರತ್ತ ಸುಲಭವಾಗಿ ಆಕರ್ಷಿತರಾಗುತ್ತಾರೆ.

ಕುಂಭ ರಾಶಿ(Aquarius)
ಕುಂಭ ರಾಶಿಯ ಪುರುಷರು ತುಂಬಾ ಹೃದಯವಂತರು. ಕುಂಭ ರಾಶಿಯ ಪುರುಷರು ತಮ್ಮ ಉದಾರ ಮನಸ್ಥಿತಿಯಿಂದಾಗಿ ಮಹಿಳೆಯರನ್ನು ಆಕರ್ಷಿಸುತ್ತಾರೆ. ಇವರ ಬುದ್ಧಿವಂತಿಕೆ, ಸೃಜನಶೀಲತೆಗೆ ಹೆಣ್ಮಕ್ಕಳು ಬೇಗ ಆಕರ್ಷಿತರಾಗುತ್ತಾರೆ. ಇವರು ತೀರಾ ಪರಿಚಿತರಾಗದೆ ತುಂಬಾ ಮಾತನಾಡಲಾರರು. ಕುಂಭದ ಪುರುಷರು ಚೆನ್ನಾಗಿ ಪರಿಚಿತರಾದರೆಂದರೆ ಮತ್ತೆ ಯುವತಿಯರು ಅವರ ಸ್ನೇಹ ಬಿಡಲು ಎಂದಿಗೂ ತಯಾರಿರುವುದಿಲ್ಲ.

Palmistry; ಅಂಗೈಯ ಈ 5 ರೀತಿಯ ರೇಖೆಗಳು ದುರದೃಷ್ಟದ ಸೂಚನೆ

ಕನ್ಯಾರಾಶಿ(Virgo)
ಕನ್ಯಾ ರಾಶಿಯ ಪುರುಷರು ಆಕರ್ಷಕ ನೋಟವನ್ನು ಹೊಂದಿರುವಂತೆ, ಅವರು ತಮ್ಮನ್ನು ತಾವು ಅಂದಗೊಳಿಸುವಲ್ಲಿಯೂ ಪರಿಪೂರ್ಣರಾಗಿದ್ದಾರೆ. ಕನ್ಯಾ ರಾಶಿ ಪುರುಷರು ಯಾವಾಗಲೂ ಇತರರ ದೃಷ್ಟಿಯಲ್ಲಿ ತಮ್ಮ ಪರಿಪೂರ್ಣ ಚಿತ್ರವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಕನ್ಯಾರಾಶಿ ಪುರುಷರು ತಮ್ಮ ಪಾಲುದಾರರಿಗೆ ನಿಷ್ಠರಾಗಿರುತ್ತಾರೆ. ಕನ್ಯಾ ರಾಶಿಯ ಪುರುಷರು ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಾರೆ. ಅವರಲ್ಲಿರುವ ಈ ಗುಣಗಳು ಮಹಿಳೆಯರ ಹೃದಯವನ್ನು ಸುಲಭವಾಗಿ ಗೆಲ್ಲುತ್ತವೆ.

click me!