ನಿಮ್ಮ birth order ಸ್ವಭಾವ ಹೇಳುತ್ತೆ !

Published : Apr 12, 2022, 12:12 PM IST
ನಿಮ್ಮ birth order ಸ್ವಭಾವ ಹೇಳುತ್ತೆ !

ಸಾರಾಂಶ

ನೀವು ತಂದೆತಾಯಿಗೆ ಹಿರಿಯ ಮಗುವೇ, ಎರಡನೇ ಮಗುವೇ, ಏಕೈಕ ಮಗುವೇ ಎಂಬುದು ನಿಮ್ಮ ಸ್ವಭಾವ ನಿರ್ಧರಿಸುತ್ತದೆ. 

ವ್ಯಕ್ತಿತ್ವದ ಪ್ರಕಾರ, ಹೆಚ್ಚಿನ ಒಡಹುಟ್ಟಿದವರು ಪರಸ್ಪರ ಭಿನ್ನವಾಗಿರುತ್ತಾರೆ. ಮನಶ್ಶಾಸ್ತ್ರಜ್ಞರು ಈ ವ್ಯತ್ಯಾಸಗಳು ಅವರ ಜನ್ಮ ಕ್ರಮದಿಂದ ಆಗುತ್ತವೆ ಎನ್ನುತ್ತಾರೆ. 

ಜನ್ಮ ಕ್ರಮ(birth order)ದ ಸಿದ್ಧಾಂತವನ್ನು ಮೊದಲು 20ನೇ ಶತಮಾನದಲ್ಲಿ ಆಸ್ಟ್ರಿಯನ್ ಮಾನಸಿಕ ಚಿಕಿತ್ಸಕ(psychotherapist) ಆಲ್ಫ್ರೆಡ್ ಆಡ್ಲರ್(Alfred Adler) ಪರಿಚಯಿಸಿದರು. ಜನರು ತಮ್ಮ ತಂದೆತಾಯಿಗೆ ಎಷ್ಟನೇ ಮಗು, ಯಾವ ಕ್ರಮದಲ್ಲಿ ಜನಿಸಿದರು ಎಂಬುದರ ಆಧಾರದ ಮೇಲೆ ಅವರ ವ್ಯಕ್ತಿತ್ವವು ರೂಪುಗೊಳ್ಳುತ್ತದೆ ಮತ್ತು ಅಭಿವೃದ್ಧಿಗೊಳ್ಳುತ್ತದೆ ಎಂದು ಅವರು ನಂಬಿದ್ದರು. ಅವರ ಪ್ರಕಾರ, ಕುಟುಂಬ, ಸಮುದಾಯ ಮತ್ತು ಸಾಮಾಜಿಕ ಅಂಶಗಳು ಮಗುವಿನ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ.

ಈ ವಾದವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದ ಅಮೆರಿಕನ್ ಮನಶ್ಶಾಸ್ತ್ರಜ್ಞ ಫ್ರಾಂಕ್ ಜೆ. ಸುಲೋವೇ, 'ಬಾರ್ನ್ ಟು ರೆಬೆಲ್: ಬರ್ತ್ ಆರ್ಡರ್, ಫ್ಯಾಮಿಲಿ ಡೈನಾಮಿಕ್ಸ್ ಮತ್ತು ಕ್ರಿಯೇಟಿವ್ ಲೈವ್ಸ್' ಎಂಬ ಪುಸ್ತಕದಲ್ಲಿ, ಬಾಲ್ಯದಲ್ಲಿ ಕುಟುಂಬದ ಡೈನಾಮಿಕ್ಸ್ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪಾತ್ರವನ್ನು ವಹಿಸುತ್ತದೆ ಎಂದಿದ್ದಾರೆ. ಒಬ್ಬರ ಜನ್ಮ ಕ್ರಮವು ಅವರ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಮನಶ್ಶಾಸ್ತ್ರಜ್ಞರು ನಂಬುತ್ತಾರೆ.

ನಿಮ್ಮ ಜನ್ಮದ ಕ್ರಮದ ಪ್ರಕಾರ, ನಿಮ್ಮ ಕೆಲವು ವ್ಯಕ್ತಿತ್ವ ಲಕ್ಷಣಗಳು ಇಲ್ಲಿವೆ.

ಹಿರಿಯ ಮಗು(First born or the eldest)
ಮನೆಯ ಹಿರಿಯ ಮಗುವಿಗೆ ಕೊಂಚ ವರ್ಷವಾದರೂ ತಂದೆತಾಯಿಯ ಸಂಪೂರ್ಣ ಲಕ್ಷ್ಯ, ಪ್ರೀತಿ ದೊರೆತಿರುತ್ತದೆ. ಎರಡನೇ ಮಗುವಾದ ನಂತರವೂ ಮೊದಲ ಮಗುವಿನ ಮೇಲೆ ಪೋಷಕರಿಗೆ ಕೊಂಚ ವಿಶೇಷ ಅಕ್ಕರೆಯೇ ಇರುತ್ತದೆ. ಆದರೆ, ನಿಮ್ಮಿಂದ ಅಷ್ಟೇ ಹೆಚ್ಚಿನದನ್ನು ಪೋಷಕರು ನಿರೀಕ್ಷಿಸುವುದು ಕೂಡಾ ಸತ್ಯ. ಹಾಗಾಗಿಯೇ ನೀವು ಹೆಚ್ಚು ಗುರಿಯ ಕಡೆ ಗಮನ ಹೊಂದಿರುವವರಾಗಿರುತ್ತೀರಿ. ಚೆನ್ನಾಗಿ ಮಾತಾಡುವವರೂ, ಜೀವನದಲ್ಲಿ ನಿಮಗೆ ಬೇಕಾದ ಸಂಗತಿಗಳಿಗೆ ಹಠಮಾರಿಗಳೂ ಆಗಿರುತ್ತೀರಿ. ನಿಮ್ಮ ತಂಗಿ, ತಮ್ಮನಿಗೆ ನೀವು ಆದರ್ಶವಾಗಿರುವಂತೆ ನಡೆದುಕೊಳ್ಳಲು ಮತ್ತೆ ಮತ್ತೆ ಹೇಳಲಾಗಿರುತ್ತದೆ. ಹಾಗಾಗಿ, ಅವರಿಗೆ ಉದಾಹರಣೆಯಾಗಿ ನಿಲ್ಲುವ ಯತ್ನದಲ್ಲಿ ಒಂದಿಷ್ಟು ಒಳ್ಳೆಯ ಗುಣಗಳು ಮೈಗೂಡಿರುತ್ತವೆ. 

ಈ ರಾಶಿಯ ಬಾಸ್ ತುಂಬಾ ಫ್ರೆಂಡ್ಲಿಯಾಗಿರುತ್ತಾರೆ

ಮಧ್ಯದ ಮಗು (Middle child)
ನೀವು ಮನೆಯಲ್ಲಿ ಎರಡನೇ ಮಗುವಾಗಿದ್ದು, ಒಬ್ಬ ಹಿರಿಯ ಹಾಗೂ ಮತ್ತೊಬ್ಬ ಕಿರಿಯ ಸಹೋದರ(ರಿ)ರು ನಿಮಗಿದ್ದರೆ ಹೆಚ್ಚು ಹೊಂದಾಣಿಕೆಯ ವ್ಯಕ್ತಿತ್ವ ನಿಮ್ಮದಾಗಿರುತ್ತದೆ. ಸಾಮಾಜಿಕವಾಗಿ ಒಪ್ಪಿಕೊಳ್ಳುವಂಥ ವ್ಯಕ್ತಿತ್ವ, ಉತ್ತಮ ಮಾತುಗಾರಿಕೆ, ಹೊಂದಾಣಿಕೆ ಇವರ ಗುಣ. ಆದರೆ, ದೊಡ್ಡವರೂ ಅಲ್ಲ, ಸಣ್ಣವರೂ ಅಲ್ಲದ ಕಾರಣ ಮಧ್ಯೆ ಸಿಕ್ಕಿ ಹಾಕಿಕೊಂಡಂತೆ ಕೆಲವೊಮ್ಮೆ ಅನಿಸಬಹುದು. ಪೋಷಕರಿಂದ ಕಡಿಮೆ ಅಟೆನ್ಷನ್ ಸಿಗುತ್ತಿದೆ ಎಂಬ ನೋವು ಕಾಡಬಹುದು. ಇದರಿಂದಾಗಿ ಕೊಂಚ ಸ್ಪರ್ಧಾತ್ಮಕ ಗುಣ ಇವರದಾಗುತ್ತದೆ. 

ಕಡೆಯ ಮಗು(Last born or the youngest)
ಇವರು ಒಂದು ಯಶಸ್ಸಿನ ಇಲ್ಲವೇ ಪೂರ್ತಿ ಉಲ್ಟಾ ಆದ ಗುಣಗಳನ್ನು ಅಳವಡಿಸಿಕೊಳ್ಳಬಹುದು ಅಂತಾರೆ ಸೈಕಾಲಜಿಸ್ಟ್‌ಗಳು. ಹೌದು, ಒಂದೇ ಯಶಸ್ಸಿಗೆ ಬೇಕಾದ ಆತ್ಮವಿಶ್ವಾಸ, ಮಾತುಗಾರಿಕೆ, ಬುದ್ಧಿವಂತಿಕೆ ಇವರಲ್ಲಿರುತ್ತದೆ. ಇಲ್ಲದಿದ್ದರೆ ಕೀಳರಿಮೆ, ಭಯ, ಅಪನಂಬಿಕೆಗಳು ತುಂಬಿ ಕೆಲ ಸನ್ನಿವೇಶಗಳಿಂದ ಪಲಾಯನಗೈಯ್ಯುತ್ತಾರೆ. ಇವರ ಹೆಗಲ ಮೇಲೆ ಕಡಿಮೆ ಜವಾಬ್ದಾರಿಗಳೂ ಹೆಚ್ಚು ಸ್ವತಂತ್ರವೂ ಇರುತ್ತದೆ.  ಇದರಿಂದ ನೀವು ಹೆಚ್ಚು ಅವಲಂಬಿತರಾಗುವಿರಿ. ಜವಾಬ್ದಾರಿ ತೆಗೆದುಕೊಳ್ಳಲು ಹೆದರುವಿರಿ. 

Jupiter Transit: 12 ವರ್ಷಗಳ ಬಳಿಕ ಗುರು ಮೀನಕ್ಕೆ, ಈ 5 ರಾಶಿಗಳಿಗಿನ್ನು ಪರ್ವ ಕಾಲ

ಏಕೈಕ ಮಗು(only child)
ಒಬ್ಬರೇ ಮಗುವಾಗಿದ್ದರೆ ಪೋಷಕರ ಸಂಪೂರ್ಣ ಗಮನ ಮತ್ತು ಪ್ರೀತಿ ಸಿಕ್ಕಿರುತ್ತದೆ. ಸಹೋದರರ ಜೊತೆ ಜಗಳ ಹೇಗಿರುತ್ತದೆಂದೇ ತಿಳಿದಿರುವುದಿಲ್ಲ. ಹಾಗಾಗಿ, ಬೆಳೆವ ಹಾದಿಯಲ್ಲಿ ಸಾಕಷ್ಟನ್ನು ಮಿಸ್ ಮಾಡಿಕೊಂಡಿರುತ್ತಾರೆ. ಸ್ಪರ್ಧೆ ಎಂಬುದು ಶಾಲೆಯಲ್ಲೇ ಮೊದಲು ಎದುರಾಗುವುದು. ಪೋಷಕರು ಕೂಡಾ ಒಂದೇ ಮಗು ಎಂದು ಅತಿಯಾಗಿ ರಕ್ಷಣೆ ಮಾಡಿ, ಇವರು ಪೋಷಕರ ಮೇಲೆ ಅವಲಂಬಿತರಾಗಿರುತ್ತಾರೆ. ಕೆಲವೊಂದು ಮಿತಿಗಳ ಅರಿವೇ ಇರುವುದಿಲ್ಲ. 

PREV
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ