ಜವಾಬ್ದಾರಿ, ಸೂಕ್ಷ್ಮ ಜೀವಿ..ಒಂದೊಂದು ರಾಶಿಗೆ ಒಂದೊಂದು ಭಯ, ನಿಮಗೆ?

By Suvarna News  |  First Published Jun 20, 2022, 3:34 PM IST

ಎಲ್ಲರಿಗೂ ಒಂದಲ್ಲ ಒಂದು ಭಯ ಇದ್ದೇ ಇರುತ್ತದೆ. ಒಂದೊಂದು ಜನ್ಮರಾಶಿಯಲ್ಲಿ ಜನಿಸಿದವರಿಗೆ ಒಂದೊಂದು ಸಂಗತಿಯ ಕುರಿತು ಭಯವಿರುತ್ತದೆ. ನಿಮಗೆ ಈ ಫೋಬಿಯಾಗಳ ಉದ್ದೂದ್ದ ಹೆಸರಿನ ಕುರಿತೇ ಫೋಬಿಯಾ ಇರಬಹುದು! ನಿಮಗ್ಯಾವ ಫೋಬಿಯಾ ಇದೆ? ಬನ್ನಿ ಇಲ್ಲಿ ನೋಡಿ.


ಮೇಷ (Aries) ರಾಶಿ
ಕಕೊರಾಫಿಯಾಫೋಬಿಯಾ (kakorrhaphiophobia): ಬದುಕಿನ ಯಾವುದೇ ಸಂಗತಿಯಲ್ಲಿ ವಿಫಲವಾಗುವ ಭಯ. ಬದುಕು ಅಂದ ಮೇಲೆ ಒಂದಲ್ಲ ಒಂದು ಕಡೆಯಲ್ಲಿ ವಿಫಲವಾಗಲೇಬೇಕು. ಸಫಲತೆಗಳಿದ್ದಂತೆ ವಿಫಳತೆಗಳೂ ಇರುತ್ತವೆ ಎಂಬುದು ಇವರ ಬದುಕಿನ ಸೂತ್ರ ಆಗಬೇಕು. ಫೇಲ್ಯೂರ್‌ಗಳು ನಮ್ಮನ್ನು ಪಕ್ವವಾಗಿಸುತ್ತವೆ. ಇದಕ್ಕೆ ಭಯ ಸಲ್ಲದು. 

ವೃಷಭ (Taurus) ರಾಶಿ 
ಮೆಟಾಥಿಸಿಯೊಫೋಬಿಯಾ (Metathesiophobia): ಬದುಕಿನಲ್ಲಿ ಯಾವುದೇ ಹೊಸತನ್ನು ಪ್ರಯತ್ನಿಸುವುದು ಎಂದರೆ ಇವರಿಗೆ ಭಯ. ಯಾಕೆಂದರೆ ಹೊಸತು ನಾವೆಣಿಸಿದಂತೆ ಇಲ್ಲದಿದ್ದರೆ, ಹೊಸ ಕಾರ್ಯದಲ್ಲಿ ವಿಫಲಗೊಂಡರೆ, ಹೊಸತು ನಮ್ಮ ಕಂಫರ್ಟ್ ಜೋನನ್ನು ಒಡೆದುಹಾಕಿದರೆ... ಎಂಬ ಭಯ. ಹಕ್ಕಿಯಂತೆ ಕೊಂಬೆ ಬಿಟ್ಟು ಹಾರಬೇಕು ಇವರು.

Tap to resize

Latest Videos

undefined

ಮಿಥುನ (Gemini) ರಾಶಿ
ಗೇಮೋಫೋಬಿಯಾ (gamophobia) : ಹಾಗೆಂದರೆ ಗೇಮ್‌ಗಳ ಬಗ್ಗೆ ಭಯವಲ್ಲ, ಕಮಿಟ್‌ಮೆಂಟ್‌ಗಳ ಬಗ್ಗೆ ಇರುವ ಆತಂಕ. ಯಾವುದೇ ಹೊಸ ಸಂಬಂಧಗಳು, ಹೊಸ ರಿಲೇಶನ್‌ಗಳು, ಹೊಸ ಪ್ರೇಮ ಸ್ನೇಹಗಳು ಇವರನ್ನು ಆತಂಕಿತರನ್ನಾಗಿ ಮಾಡುತ್ತವೆ.

Numerology Today: ಸಂಖ್ಯೆ ಎಂಟು, ನಿರುದ್ಯೋಗಿಗಳಿಗೆ ಕೆಲಸ ಫಲ ಉಂಟು

ಕಟಕ (Cancer) ರಾಶಿ
ಅಗೋರಾಫೋಬಿಯಾ (agoraphobia) : ಇವರಿಗೆ ಜನರಿಂದ ತುಂಬಿದ ಸ್ಥಳಗಳೆಂದರೆ ಆಗದು. ಅಲ್ಲಿಂದ ಮಾರು ದೂರ ಹಾರಿ ಹೋಗುತ್ತಾರೆ. ತುಂಬಾ ಮುಕ್ತವಾದ ಓಪನ್ ಸ್ಪೇಸುಗಳು ಕೂಡ ಇವರಲ್ಲಿ ತುಸು ಆತಂಕ ಮೂಡಿಸುತ್ತವೆ. 

ಸಿಂಹ (Leo) ರಾಶಿ
ಅಥಾಜಗೋರಾಫೋಬಿಯಾ (athazagoraphobia): ಯಾರನ್ನಾದರೂ ಅಥವಾ ಏನನ್ನಾದರೂ ಮರೆತುಬಿಡುವ ಭಯ. ಹಾಗೆಯೇ ಮರೆತುಹೋಗುವ ಭಯ. ಉದಾಹರಣೆಗೆ, ನೀವು ಅಥವಾ ನಿಮಗೆ ಹತ್ತಿರವಿರುವ ಯಾರಾದರೂ ಆಲ್ಝೈಮರ್ ಕಾಯಿಲೆ ಅಥವಾ ನೆನಪಿನ ನಾಶ ಅನುಭವಿಸಿದರೆ ಎಂಬ ಆತಂಕ ಅಥವಾ ಭಯ. ಇದು ಆಲ್ಝೈಮರ್ ಅಥವಾ ಬುದ್ಧಿಮಾಂದ್ಯತೆ ಹೊಂದಿರುವ ಯಾರ ಸಾಮೀಪ್ಯದಿಂದ ಬರಬಹುದು.

ಕನ್ಯಾ (Virgo) ರಾಶಿ 
ಅಟೆಲೋಫೋಬಿಯಾ (atelophobia): ಇದು ಅಪೂರ್ಣತೆಯ ಗೀಳಿನ ಭಯವಾಗಿದೆ. ಈ ಸ್ಥಿತಿಯನ್ನು ಹೊಂದಿರುವವರು ಯಾವುದೇ ತಪ್ಪುಗಳನ್ನು ಮಾಡಲು ಭಯಪಡುತ್ತಾರೆ. ನಾನು ಯಶಸ್ವಿಯಾಗುವುದಿಲ್ಲ ಎಂದು ಭಾವನೆ ಬರುವ ಯಾವುದೇ ಪರಿಸ್ಥಿತಿಯನ್ನು ತಪ್ಪಿಸಲು ಮುಂದಾಗುತ್ತಾರೆ. ಇದು ಆತಂಕ, ಖಿನ್ನತೆ ಮತ್ತು ಕಡಿಮೆ ಸ್ವಾಭಿಮಾನಕ್ಕೆ ಕಾರಣವಾಗಬಹುದು.

ತುಲಾ (Libra) ರಾಶಿ 
ಆಟೋಫೋಬಿಯಾ ಅಥವಾ ಮೊನೊಫೋಬಿಯಾ (monophobia): ಒಬ್ಬಂಟಿಯಾಗಿರುವುದು ಇವರಿಗೆ ತುಂಬಾ ಆತಂಕವನ್ನುಂಟು ಮಾಡುತ್ತದೆ. ಏಕಾಂಗಿಯಾಗಿರುವುದರ ಈ ಭಯವು ಇವರ ಸಂಬಂಧಗಳು, ಸಾಮಾಜಿಕ ಜೀವನ ಮತ್ತು ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು. ಆಘಾತಕಾರಿ ಬಾಲ್ಯದ ಅನುಭವದಿಂದ ಉಂಟಾಗುವ ಭಯವನ್ನು ಸಹ ಇವರು ಹೊಂದಿರಬಹುದು.

ವೃಶ್ಚಿಕ (Scorpio) ರಾಶಿ
ಪ್ರಾಡಿಟಿಯೋಫೋಬಿಯಾ (proditiophobia): ನಿಮ್ಮ ಸ್ನೇಹಿತರು ನಿಮಗೆ ಮೋಸ ಮಾಡಬಹುದು ಎಂಬ ಆತಂಕ, ಅಥವಾ ನಿಮ್ಮ ಸಂಗಾತಿ ನಿಮ್ಮನ್ನು ಡಬಲ್-ಕ್ರಾಸ್ ಮಾಡಲಿದ್ದಾರೆ ಎಂಬ ಭಯ ನಿಮ್ಮನ್ನು ಸದಾ ಕಾಡುತ್ತದಾ? ಹಾಗಿದ್ದರೆ ನೀವು ಪ್ರಾಡಿಟಿಯೋಫೋಬಿಯಾದಿಂದ ಬಳಲುತ್ತಿರಬಹುದು. ನೀವು ಪ್ರೀತಿಸುವವರಿಂದ ದ್ರೋಹಕ್ಕೆ ಒಳಗಾಗುವ ಭಯ.

ಈ 5 ರಾಶಿಗಳು ಸಂಬಂಧ ಹಾಳು ಮಾಡಿಕೊಳ್ಳೋದು ಹೆಚ್ಚು!

ಧನು (Sagittarius) ರಾಶಿ
ಫೋಮೋ (FoMO) : ಇದು ಮುಖ್ಯ ವಿಷಯಗಳು ನಿಮ್ಮ ಗಮನಕ್ಕೆ ಬರದೇ ತಪ್ಪಿಹೋಗಬಹುದು ಎಂಬ ಭಯ. ಇದು ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ವಿದ್ಯಮಾನ. ನನ್ನ ಸ್ನೇಹಿತರು ನನಗಿಂತ ಸೋಶಿಯಲ್ ಪೋಸ್ಟ್‌ಗಳಲ್ಲಿ ಅಥವಾ ಲೇಟೆಸ್ಟ್ ಮಾಹಿತಿ ಪಡೆಯುವುದರಲ್ಲಿ ತನಗಿಂತ ತುಂಬಾ ಮುಂದೆ ಹೋಗಿರಬಹುದು, ಪಾರ್ಟಿಯಲ್ಲಿ ತಾನು ಮಿಸ್ ಆಗಬಹುದು, ಎಂಬ ಆತಂಕವಿದು.

ಮಕರ (Capricorn) ರಾಶಿ 
ಅಟಿಚಿಫೋಬಿಯಾ (atychiphobia) ಇದು ಮಕರ ರಾಶಿಯಂತೆಯೇ ವೈಫಲ್ಯದ ಭಯ. ಇದನ್ನು ಕೆಲವೊಮ್ಮೆ ಅಟಿಚಿಫೋಬಿಯಾ ಎಂದು ಕರೆಯಲಾಗುತ್ತದೆ. ಇದು ವಿಫಲಗೊಳ್ಳುವ ನಿರಂತರ ಭಯ. ಕೆಲವೊಮ್ಮೆ ಈ ಭಯವು ನಿರ್ದಿಷ್ಟ ಸನ್ನಿವೇಶಕ್ಕೆ ಪ್ರತಿಕ್ರಿಯೆಯಾಗಿ ಹೊರಹೊಮ್ಮಬಹುದು. ಇತರ ಸಂದರ್ಭಗಳಲ್ಲಿ ಇದು ಖಿನ್ನತೆಯಂತಹ ಮತ್ತೊಂದು ಮಾನಸಿಕ ಅನಾರೋಗ್ಯ ಸ್ಥಿತಿಗೆ ಸಂಬಂಧಿಸಿರಬಹುದು.

ಕುಂಭ (Aquarius) ರಾಶಿ
ಮೈಸೋಫೋಬಿಯಾ (mysophobia): ಇದು ಸೂಕ್ಷ್ಮಾಣುಜೀವಿಗಳ ಕುರಿತ ವಿಪರೀತ ಭಯ. ಸೂಕ್ಷ್ಮಜೀವಿಗಳಿಗೆ ತಮ್ಮನ್ನು ಒಡ್ಡುವ ಸಂದರ್ಭಗಳನ್ನು ತಪ್ಪಿಸಲು ಇವರು ಪ್ರಯತ್ನಿಸುತ್ತಿರುತ್ತಾರೆ. ಯಾವುದಾದರೂ ಆಘಾತಕಾರಿ ಸೋಂಕನ್ನು ಅನುಭವಿಸಿದ ನಂತರ ಈ ಫೋಬಿಯಾ ಉಂಟಾಗಬಹುದು. ಸೂಕ್ಷ್ಮಜೀವಿಗಳನ್ನು ನಾಶ ಮಾಡಲು ಯತ್ನಿಸುತ್ತಿರುತ್ತಾರೆ. ಹ್ಯಾಂಡ್ ಸ್ಯಾನಿಟೈಸರ್‌ ಪದೇ ಪದೇ ಬಳಸಬಹುದು. 

ಮೀನ (Pisces) ರಾಶಿ
ಹೈಪೆಂಗ್ಯೋಫೋಬಿಯಾ (hypengyophobia): ಇದು ಜವಾಬ್ದಾರಿಯ ಭಯ. ಯಾವುದೇ ಹೊಸ ಅಥವಾ ಮಹತ್ವದ ಹೊಣೆಗಾರಿಕೆ ಹೊತ್ತುಕೊಳ್ಳಲು ಇವರು ಭಯಪಡುತ್ತಾರೆ. ಅಥವಾ ತಾವೀಗ ಇರುವ ಗುರುತರ ಸ್ಥಾನದ ಜವಾಬ್ದಾರಿಗಳನ್ನು ನಿರ್ಲಕ್ಷಿಸುತ್ತಾರೆ. 

ಈ ಐದು ರಾಶಿಗಳೊಂದಿಗೆ ವಾದಿಸಿ, ಜಗಳ ಮಾಡಿ ಗೆಲ್ಲೋದು ಸುಲಭವಲ್ಲ!

click me!