
ಹಲವು ಸಲ ನಮ್ಮ ಕನಸಿನಲ್ಲಿ ಒಂದು ಹಾವು ಅಥವಾ ಹಲವು ಹಾವುಗಳು ಕಾಣಬಹುದು. ಆಗ ಬೆಚ್ಚಿ ಬೀಳುವಂತಾಗುತ್ತದೆ. ಕೆಲವೊಮ್ಮೆ ಬೆಚ್ಚಿ ಬೆವರುತ್ತ ಏಳುತ್ತೀರಿ. ಆ ಕನಸಿನ ಅರ್ಥವೇನು ಎಂಬುದು ನಿಮ್ಮನ್ನು ಬಹಳ ಕಾಡುತ್ತದೆ. ಯಾವ ಹಾವು, ಎಷ್ಟು ಹಾವು, ಹೇಗೆ ಕಾಣಿಸಿಕೊಂಡಿದೆ ಎಂಬುದರ ಮೇಲೆ ಆ ಕನಸಿನ ಅರ್ಥ ನಿರ್ಧಾರವಾಗುತ್ತದೆ.
ಅನಕೊಂಡ ಹಾವು
ದೊಡ್ಡ ಅನಕೊಂಡ ಹಾವು ಕಂಡರೆ ಅದು ವಿಶ್ವಾಸಘಾತುಕತನ ಮತ್ತು ಅಸ್ಪಷ್ಟತೆಗೆ ಸಂಬಂಧಿಸಿದೆ. ನಿದ್ರೆಯಲ್ಲಿ ನೀವು ಕಪ್ಪು ಬಣ್ಣದ ದೊಡ್ಡ ಹಾವನ್ನು ನೋಡಿದರೆ, ನುಮ್ಮ ಹತ್ತಿರದವರು ನಿಮ್ಮನ್ನು ನಿರ್ಲಕ್ಷಿಸಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ. ಈ ಕಪ್ಪು ಹಾವು ನಿಮಗೆ ಇನ್ನು ಮೇಲಾದರೂ ಜೀವನದಲ್ಲಿ ಪಾಠ ಕಲಿಯುವಂತೆ ತಿಳಿಸುತ್ತದೆ. ನೀವು ಯಾವುದಾದರೂ ಹೊಸ ಕೆಲಸಗಳತ್ತ, ಏನನ್ನಾದರೂ ಮೌಲ್ಯಯುತ ವಸ್ತುಗಳನ್ನು ಕೊಂಡುಕೊಳ್ಳುವ ಯೋಜನೆಯನ್ನು ಅಥವಾ ಇನ್ನಿತರ ಯಾವುದೇ ಹೊಸ ಯೋಜನೆಯನ್ನು ಹಾಕಿಕೊಂಡಿದ್ದರೆ ಆ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನ ಈ ಕನಸು ನಿಮ್ಮನ್ನು ಕಾಡಿದರೆ ಒಂದು ಬಾರಿ ಯೋಚಿಸಿ ನಂತರ ಮುಂದುವರೆಯುವುದು ಉತ್ತಮ.
ನಾಗರಹಾವು ಕಂಡರೆ
ನಾಗರ ಹಾವು ಮತ್ತು ನೀವು ಮುಖಾಮುಖಿಯಾಗುವ ಕನಸು ಬಿದ್ದರೆ ನಿಮ್ಮ ಕುಂಡಲಿನಿ ಜಾಗೃತಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಹಿಂದೂ ಧರ್ಮದ ಪ್ರಕಾರ ನಾಗರಹಾವು ಪೂಜನೀಯ ಹಾಗೂ ಆಧ್ಯಾತ್ಮಿಕ ಗೌರವವನ್ನು ಪಡೆದುಕೊಂಡ ಹಾವಾಗಿದೆ. ನಾಗರಹಾವು ದೇವೀ ಸಂಭೂತವಾಗಿರುವುದರಿಂದ ಈ ಹಾವು ಕನಸಿನಲ್ಲಿ ಕಾಣಿಸಿಕೊಂಡರೆ ಅದು ನಿಮ್ಮ ಜೀವನದಲ್ಲಿ ಒಳ್ಳೆಯದಾಗುವುದನ್ನು ತಿಳಿಸುತ್ತದೆ.
ಹಲವು ಹಾವುಗಳು ಕಂಡರೆ
ನಿಮಗೆ ಕನಸಿನಲ್ಲಿ ಒಂದಕ್ಕಿಂದ ಹೆಚ್ಚು ಹಾವುಗಳು ಕಾಣಿಸಿಕೊಂಡಾಗ ಇದು ನಿಮ್ಮ ಜೀವನದಲ್ಲಿರುವ ಹಲವಾರು ಶತ್ರುಗಳಿರುವುದನ್ನು ಸೂಚಿಸುತ್ತದೆ. ಹಾಗೂ ನಿಮ್ಮ ಆರೋಗ್ಯದ ಸಮಸ್ಯೆಗಳ ಬಗ್ಗೆ ನಿಮಗೆ ಗಮನಕ್ಕೆ ಬಾರದ ವಿಷಯಗಳನ್ನು ಸೂಚಿಸುತ್ತದೆ. ಹಾಗಾಗಿ ನಿಮ್ಮ ಕನಸಿನಲ್ಲಿ ಒಂದಕ್ಕಿಂತ ಹೆಚ್ಚು ಹಾವು ಕಾಣಿಸಿದಾಗ ಮೊದಲು ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯದ ಕುಳಿತು ತಿಳಿದುಕೊಳ್ಳಿ.
ಸತ್ತ ಹಾವಿನ ದರ್ಶನ
ನಿದ್ರೆಯಲ್ಲಿ ಸತ್ತಿರುವ ಹಾವು ಕಾಣಿಸಿಕೊಂಡರೆ ಜೀವನದಲ್ಲಿರುವ ಅಡಚಣೆಯನ್ನು ನಾವು ನಿಭಾಯಿಸಿದ್ದೇವೆ ಎನ್ನುವುದನ್ನು ಸೂಚಿಸುತ್ತದೆ. ನಮ್ಮ ಶತ್ರುಗಳನ್ನು ನಾವು ನಾಶಪಡಿಸಿದ್ದೇವೆ ಎನ್ನುವುದೇ ಈ ಕನಸಿನ ಅರ್ಥವಾಗಿದೆ. ಕನಸಿನಲ್ಲಿ ಸತ್ತ ಹಾವನ್ನು ನೋಡುವುದು ಜೀವನದಲ್ಲಿ ಸಕಾರಾತ್ಮಕತೆಯನ್ನು ನೀಡುತ್ತದೆ.
ಹಾವು ಕಚ್ಚಿದರೆ
ಹಾವು ನಿಮ್ಮನ್ನು ಕಚ್ಚಿ, ನಿಮ್ಮ ದೇಹವು ವಿಷದಿಂದ ಕೂಡಿರುವಂತೆ ಕನಸು ಬಿದ್ದರೆ ಅದರ ಅರ್ಥ ನಿಮಗೆ ಹಾವು ಕಚ್ಚುವ ಮುನ್ಸೂಚನೆಯಲ್ಲ, ಬದಲಾಗಿ ನೀವು ಯಾವುದೋ ಓರ್ವ ಕೆಟ್ಟ ವ್ಯಕ್ತಿಯೊಡನೆ ಸಂಬಂಧವನ್ನು ಹೊಂದಿದ್ದೀರಿ ಎಂದರ್ಥ. ನೀವು ಯಾವುದಾದರೂ ಓರ್ವ ಕೆಟ್ಟ ವ್ಯಕ್ತಿಯೊಡನೆ ಅಥವಾ ನಿಮಗೆ ಕೆಟ್ಟದ್ದನ್ನೇ ಬಯಸುವ ವ್ಯಕ್ತಿಯೊಡನೆ ಸ್ನೇಹವನ್ನು ಬೆಳೆಸಿದ್ದರೆ ನಿಮಗೆ ಈ ರೀತಿಯಾಗಿ ಕನಸು ಬೀಳುತ್ತದೆ. ಹಾವು ಕಚ್ಚಿದಾಗ ಹೇಗೆ ಮೈಯೆಲ್ಲಾ ವಿಷ ಆವರಿಸುತ್ತದೋ ಅಷ್ಟೇ ಕೆಟ್ಟದ್ದನ್ನು ಬಯಸುವವರು ಆ ವ್ಯಕ್ತಿಯಾಗಿರುತ್ತಾರೆ. ಹಾಗಾಗಿ ಈ ರೀತಿ ಕನಸು ಬಿದ್ದಾಗ ಒಮ್ಮೆ ಸರಿಯಾಗಿ ಯೋಚಿಸಿ, ನಮ್ಮ ಎದುರಿನಲ್ಲಿ ಸ್ನೇಹಿತರಂತಿದ್ದು, ಬೆನ್ನಹಿಂದೆ ವಿಷಕಾರಿ ವ್ಯಕ್ತಿ ಯಾರೆಂದು ಪರಿಶೀಲಿಸಿ ಅವರಿಂದ ದೂರಿರಿ.
ಮಕ್ಕಳು ತಪ್ಪು ಮಾಡಿದರೆ ಯಮನೂ ಶಿಕ್ಷೆ ಕೊಡಲ್ಲ! ಅದ್ಯಾಕೆ?
ಹಾವು ಅಟ್ಟಿಸಿಕೊಂಡು ಬಂದರೆ
ಸಾಮಾನ್ಯವಾಗಿ ಬೀಳುವ ಹಾವಿಗೆ ಸಂಬಂಧಿಸಿದ ಕನಸುಗಳಲ್ಲಿ ಹಾವು ಅಟ್ಟಸಿಕೊಂಡು ಬಂದಂತೆ ಕನಸು ಬೀಳುವುದು ಸಾಮಾನ್ಯ. ಈ ಕನಸಿನ ಅರ್ಥ ಮುಂದೊಂದು ದಿನ ನಿಮ್ಮನ್ನು ಹಾವು ಕಚ್ಚಲೆಂದು ಅಟ್ಟಿಸಿಕೊಂಡು ಬರುತ್ತದೆ ಎನ್ನುವುದಲ್ಲ, ಬದಲಾಗಿ ನೀವು ಯಾವುದೋ ಒಂದು ಸಮಸ್ಯೆಯನ್ನು ಎದುರಿಸಲಾಗದೇ ಅದರಿಂದ ಓಡಿಹೋಗುತ್ತಿದ್ದೀರಿ ಎಂದರ್ಥ. ಸದ್ಯದ ಪರಿಸ್ಥಿತಿಯಲ್ಲಿ ನೀವು ಆ ಸಮಸ್ಯೆಯಿಂದ ಓಡಿಹೋದರೂ ಕೂಡ ಮುಂದೊಂದು ದಿನ ಆ ಅಪಾಯ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎನ್ನುವುದೇ ಈ ಕನಸಿನ ಒಳಾರ್ಥವಾಗಿದೆ.
ಹಾವುಗಳ ಕಚ್ಚಾಟ
ಒಂದು ವೇಳೆ ನಿಮ್ಮ ಕನಸಿನಲ್ಲಿ ಹಾವು ಕುಸ್ತಿ ಮಾಡುತ್ತಿರುವ ದೃಶ್ಯ ಕಾಣಿಸಿಕೊಂಡರೆ ನೀವು ಯಾವುದೋ ಒಂದು ವ್ಯಕ್ತಿಯನ್ನು ಮಟ್ಟಹಾಕಲು ನೀವು ಪ್ರಯತ್ನಿಸುತ್ತಿದ್ದೀರಿ ಎಂದರ್ಥ. ನಿಮ್ಮ ಕೆಲಸದ ಸ್ಥಳದಲ್ಲಾಗಿರಬಹುದು ಅಥವಾ ಕುಟುಂಬದಲ್ಲೇ ಆಗಿರಬಹುದು ಉನ್ನತ ಸ್ಥಾನವನ್ನು ಬಯಸುತ್ತಿರುವುದರಿಂದ ನಿಮಗೆ ಈ ರೀತಿಯ ಕನಸು ಬೀಳುತ್ತದೆ.
ಎಲ್ಲಾ ಕನಸುಗಳು 138 ದಿನಗಳಲ್ಲಿ ನನಸು ಖಜಾನೆ ಸಂಪತ್ತಿನಿಂದ ಫುಲ್, ಶನಿಯ ಹಿಮ್ಮುಖ ಚಲನೆಯು 5 ಜನರಿಗೆ ವರದಾನ