ಯಾವುದೇ ಜನ್ಮರಾಶಿಯಲ್ಲಿ ಜನಿಸಿದರೂ ಅಪಮೃತ್ಯು, ಅಕಾಲಿಕ ಮರಣದ ಭಯವಿದ್ದೇ ಇರುತ್ತದೆ. ಅದನ್ನು ಮೀರಲು ಕೆಲವು ಬಗೆಯ ದೇವತಾರ್ಚನೆ ಮಾಡಬೇಕು. ಅವು ಯಾವುದು ಅಂತ ಇಲ್ಲಿ ಕೊಡಲಾಗಿದೆ.
ಮೇಷ ರಾಶಿ
ನೀವು ಸಾಮಾನ್ಯವಾಗಿ ತುಂಬು ಬದುಕನ್ನು ಬದುಕುತ್ತೀರಿ ಎಂದೇ ಹೇಳಲಾಗುತ್ತದೆ. ಭಗವಂತ ನಿಮಗೆ ಪೂರ್ಣಾಯುಸ್ಸನ್ನು ಕೊಟ್ಟಿರುತ್ತಾನೆ. ಆದರೂ ನಿಮ್ಮ ಕುಲದೇವತೆಯ ಆರಾಧನೆಯಿಂದ ಎಲ್ಲ ಬಗೆಯ ಆತಂಕಗಳು ದೂರಾಗುತ್ತವೆ. ಕುಲದೇವರು ಯಾರು ಎಂದು ತಿಳಿಯದಿದ್ದರೆ ಗಣಪತಿಯ ಆರಾಧನೆ ಮಾಡಬಹುದು.
ವೃಷಭ ರಾಶಿ
ನೀವು ವೃಷಭದಂತೆ ಎಷ್ಟೇ ಕಾಲ ಬದುಕಿದರೂ ಯಾರಿಗೂ ಬಗ್ಗದೆ ತಲೆ ತಗ್ಗದೆ ಸ್ವಾಭಿಮಾನ ವರ್ಚಸ್ಸಿನಿಂದ ಬದುಕುವವರು. ಆದರೆ ಭಗವಂತನ ಮುಂದೆ ತಲೆಬಾಗಬೇಕಾಗುತ್ತದೆ. ಎಲ್ಲ ಬಗೆಯ ಮೃತ್ಯುಭಯ ತಪ್ಪಿಸಲು ನೀವು ಪ್ರತಿದಿನ ಕನಿಷ್ಠ ನೂರೆಂಟು ಬಾರಿ ಶಿವಪಂಚಾಕ್ಷರಿ ಮಂತ್ರವನ್ನು ಪಠಿಸಬೇಕು. ಸಾಧ್ಯವಾದರೆ ಮನೆಯಲ್ಲಿ ಅಥವಾ ದೇಗುಲದಲ್ಲಿ ಶಿವಪೂಜೆ ಮಾಡಿಸಿ.
ಮಿಥುನ ರಾಶಿ
ನೀವು ವೃದ್ಧಾಪ್ಯಕ್ಕೂ ಮೊದಲೇ ಮರಣ ಕಾಣುವ ಯಾವುದೇ ಸಾಧ್ಯತೆ ಇಲ್ಲ. ಆದಾಗ್ಯೂ, ಮಂಗಳಗ್ರಹ ಹಾಗೂ ರಾಹುಗ್ರಹಗಳ ಚಲನೆಯ ಮೇಲೆ ಒಂದು ಕಣ್ಣು ಇಟ್ಟಿರುವುದು ಒಳ್ಳೆಯದು. ಇವರನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಕೈಲಾಸವಾಸಿ ಪರಮಶಿವನ ಆರಾಧನೆ ಮಾಡಬೇಕು. ಶಿವದೇವಾಲಯಗಳಿಗೆ ಭೇಟಿ ಕೊಡಿ.
ಕಟಕ ರಾಶಿ
ಮೂರು ಕೇಡುಕಾರಕ ಗ್ರಹಗಳು ಒಟ್ಟಾಗಿ ಒಂದೇ ಮನೆಯಲ್ಲಿ ಬಂದರೆ ನಿಮಗೆ ಅಪಘಾತ ಯೋಗವಿರುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡುವಾಗ, ವಾಹನದಲ್ಲಿ ಹೋಗುವಾಗ ಜಾಗರೂಕತೆ ಇರಲಿ. ಗಣಪತಿ ಹಾಗೂ ಆಂಜನೇಯನ ಆರಾಧನೆ ತಪ್ಪಿಸಬೇಡಿ. ಹನುಮಾನ್ ಚಾಲೀಸಾ ತಪ್ಪದೆ ಪಠಿಸಿ. ಹನುಮನ ಗುಡಿಗೆ ಭೇಟಿ ಕೊಡುತ್ತಿರಿ.
ಸಿಂಹ ರಾಶಿ
ನೀವು ಆಯುಷ್ಯಪೂರ್ತಿ ಆಗುವವರೆಗೂ ಸಿಂಹದಂತೆ ಗಾಂಭೀರ್ಯದಿಂದ ಹಾಗೂ ಯಾರದೇ ಆರೈಕೆಯ ಅಗತ್ಯ ಬೀಳದೆ ಬದುಕುವವರು. ನೀವು ಕರ್ಮಸಿದ್ದಾಂತಿಗಳಾಗಿರುವುದರಿಂದ ಅಗತ್ಯ ಕರ್ಮಗಳನ್ನೇ ಯಜ್ಞದಂತೆ ಮಾಡಬೇಕು. ಜೀವನದ ಯಾವ್ಯಾವ ಹಂತದಲ್ಲಿ ಯಾವ ದೇವತೆಗೆ ಏನನ್ನು ಕೊಡಬೇಕೋ ಅದನ್ನು ಕೊಟ್ಟರೆ ನಿಮ್ಮ ಆಯುಷ್ಯಕ್ಕೆ ಕಂಟಕವಿಲ್ಲ.
ಕನ್ಯಾ ರಾಶಿ
ನಿಮಗೆ ನೀರಿನಿಂದ ಆತಂಕವಿದೆ. ನೀವು ನೀರಿನ ದೇವತೆ ವರುಣನನ್ನು ಕೋಪಗೊಳಿಸಬಾರದು. ದೇವರ ತೀರ್ಥವನ್ನು ಎಲ್ಲೂ ವ್ಯರ್ಥ ಮಾಡಬೇಡಿ. ತೀರ್ಥಕ್ಷೇತ್ರಗಳಿಗೆ ಹೋದಾಗ ತಪ್ಪದೆ ಅಭಿಷೇಚನ ಮಾಡಿಸಿಕೊಳ್ಳಿ. ಮುಖ್ಯವಾಗಿ ಮಹಾವಿಷ್ಣುವಿನ ಕ್ಷೇತ್ರಗಳಲ್ಲಿ ವಿಷ್ಣುಪಾದ ಸಮುದ್ಭವೆ ಎನಿಸಿದ ಗಂಗೆಯನ್ನು ಸ್ಮರಿಸಿ ದೇಹಶುದ್ಧಿ ಮಾಡಿಕೊಳ್ಳಿ.
ತುಲಾ ರಾಶ
ನಿಮಗೆ ಬೆಂಕಿಯಿಂದ ಭಯವಿದೆ. ಬೆಂಕಿಯ ದೇವರು ಅಗ್ನಿಯಾದರೂ, ಆತನನ್ನು ನಿಯಂತ್ರಿಸುವವನು ಪರಮೇಷ್ಠಿ ಎನಿಸಿದ ಲಯಕರ್ತ ಶಿವ. ಇವನು ಭೈರವರೂಪ. ಶಿವನ ರುದ್ರರೂಪವನ್ನು ನೀವು ಅರ್ಚಿಸಬೇಕು. ರುದ್ರಾಭಿಷೇಕ ಮಾಡಿಸುವುದರಿಂದ ಲಿಂಗವು ತಾಪವನ್ನು ಕಳೆದುಕೊಂಡು ತಣ್ಣಗಾಗಿ ಅಗ್ನಿಯನ್ನೂ ತಂಪು ಮಾಡುತ್ತದೆ.
ಗಣೇಶನ ಪೂಜಿಸಿದ್ರೆ ಶನಿದೇವರ ಕಾಟವಿಲ್ಲ, ಯಾಕೆ ಗೊತ್ತೆ?
ವೃಶ್ಚಿಕ ರಾಶಿ
ಆಹಾರದಿಂದ ನಿಮಗೆ ಒಳ್ಳೆಯದೂ ಇದೆ, ಕೆಟ್ಟದೂ ಇದೆ. ಆಹಾರ ಸಂಬಂಧಿತ ಕಾಯಿಲೆಗಳು ನಿಮ್ಮನ್ನು ಬಾಧಿಸಬಹುದು. ಆಹಾರಕ್ಕೆ ಮೂಲವಸ್ತುಗಳು ಸಿದ್ಧವಾಗುವುದು ಭೂಮಿಯಲ್ಲಿ. ಭೂಮಿಯನ್ನು ಹೊತ್ತವನು ವರಾಹರೂಪಿಯಾದ ವಿಷ್ಣು. ಆದ್ದರಿಂದ ನೀವು ಭೂದೇವಿ ಸಮೇತನಾದ ಮಹಾವಿಷ್ಣುವನ್ನು ಅರ್ಚಿಸಬೇಕು. ಇಬ್ಬರ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಂಡು ನಿತ್ಯ ಪೂಜಿಸಿ.
ಧನು ರಾಶಿ
ಒಳಗೊಳಗೇ ದೇಹವನ್ನು ಕೊರೆಯುವ ರೋಗಗಳು ನಮಗೆ ತಿಳಿಯದಂತೆಯೇ ಅಟ್ಯಾಕ್ ಮಾಡುತ್ತವೆ. ಆದ್ದರಿಂದ ಅಂತರಂಗ ಬಹಿರಂಗ ಶುದ್ಧಿಗಳೆರಡೂ ನಮಗೆ ಅಗತ್ಯ. ನಿತ್ಯವೂ ದುರ್ಗೆಯ ಆರಾಧನೆ ಮಾಡಿ. ಪ್ರಕೃತಿಯ ಮಾತೆಯಾದ ದುರ್ಗೆಯು ದೇಹಪ್ರಕೃತಿಯನ್ನು ಕೂಡ ಚೆನ್ನಾಗಿ ಇರುವಂತೆ ನೋಡಿಕೊಳ್ಳುವವಳು. ತಾಯಿ ಒಲಿದರೆ ಸದಾ ಆರೋಗ್ಯ.
ರಾಶಿ
ಹರ ಮುನಿದರೆ ಗುರು ಕಾಯುವನು ಎಂಬ ಮಾತನ್ನು ನೀವು ಕೇಳಿಸಿಕೊಂಡಿರಬಹುದು. ಗುರುವಿನಿಂದ ನಿಮಗೆ ಯಾವುದಾದರೂ ಮಂತ್ರೋಪದೇಶ ಆಗಿದ್ದರೆ, ಅದನ್ನು ಯಾವತ್ತೂ ಕೈಬಿಡಬೇಡಿ. ಅದು ಗಾಯತ್ರಿ ಆಗಿರಲಿ, ಮೃತ್ಯುಂಜಯ ಮಂತ್ರವಾಗಿರಲಿ- ಅದರಲ್ಲೇ ನಿಮ್ಮ ಸೋಕ್ಷ ಮೋಕ್ಷಗಳೆರಡೂ ಅಡಗಿರುತ್ತವೆ. ಮಂತ್ರದಿಂದ ಜೀವನ ಪಾವನ.
ನೀರು, ಬೆಂಕಿ, ಗಾಳಿ, ಭೂಮಿ- ಇದರಲ್ಲಿ ನಿಮ್ಮದು ಯಾವ ಜನ್ಮರಾಶಿ? ನಿಮ್ಮ ಗುಣ ಹೇಗೆ?
ಕುಂಭ ರಾಶಿ
ಆಹಾರ ಕೆಲವೊಮ್ಮೆ ವಿಷವಾಗುತ್ತದೆ ಎಂಬುದನ್ನು ಮರೆಯಬೇಡಿ. ಸಿಕ್ಕಸಿಕ್ಕಲ್ಲಿ ಆಹಾರ ಸೇವಿಸುವುದು, ತಂಗಳು ಸೇವಿಸುವುದು ಮಾಡಬೇಡಿ. ಆಹಾರವನ್ನು ನಮಗೆ ಒದಗಿಸುವ ಅನ್ನಪೂರ್ಣಾದೇವಿಯ ಒಂದು ಸಣ್ಣ ಬೆಳ್ಳಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಂಡು ಸದಾ ಆಕೆಗೆ ಒಂದು ಅರ್ಚನೆಯನ್ನು ಮಾಡುತ್ತಿರಿ. ನಿಮ್ಮ ಆರೋಗ್ಯವನ್ನು ಆಕೆ ಕಾಪಾಡುತ್ತಾಳೆ.
ಮೀನ ರಾಶಿ
ಶತ್ರುಗಳಿಂದ ನಿಮಗೆ ಜೀವಭಯವಿರಬಹುದು. ಆದರೆ ಅದರಿಂದ ದೂರಾಗಲು ಹಲವು ದಾರಿಗಳು ಉಂಟು. ಉದಾಹರಣೆಗೆ ಮೃತ್ಯುಂಜಯ ಮಂತ್ರದ ಪಠನ, ಹನುಮಾನ್ ಚಾಲಿಸಾ ಪಠಣ, ಹಾಗೇ ಅಷ್ಟಾದಶಾಕ್ಷರಿ ಮಂತ್ರವನ್ನು ಪಠಿಸಿ. ನಿತ್ಯ ಮುಂಜಾನೆ ಈ ಮೂರೂ ಮಂತ್ರಗಳ ಪುನಶ್ಚರಣದಿಂದ ಜೀವಭಯ ದೂರವಾಗಿ ಸೌಖ್ಯ ಉಂಟಾಗುತ್ತದೆ.