ಈ ಲಕ್ಷಣಗಳು ನಿಮ್ಮ ಮೇಷ ರಾಶಿಯ ಗೆಳೆಯನಲ್ಲಿದ್ದರೆ, ಆತ ನಿಮ್ಮ ಪ್ರೀತಿಯಲ್ಲಿದಾನೆ ಅಂತಲೇ ಅರ್ಥ!

By Suvarna News  |  First Published Dec 31, 2022, 2:31 PM IST

ಮೇಷ ರಾಶಿಯ ಜನರು ತಮ್ಮ ಪ್ರೇಮದ ವಿಚಾರಗಳನ್ನು ರೋಮಾಂಚನಕಾರಿಯಾಗಿಸಲು ಯಾವಾಗಲೂ ಯೋಚಿಸುತ್ತಿರುತ್ತಾರೆ. ಆದ್ದರಿಂದ, ಅವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಕೆಲವು ಸುಳಿವುಗಳನ್ನು ಬಿಡುತ್ತಾರೆ. ಇಲ್ಲಿ ನೀಡಲಾಗಿರುವ ಸುಳಿವುಗಳು ನಿಮಗೂ ಸಿಕ್ಕಿದ್ದರೆ ಆತ ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಾನೆ ಅಂತಲೇ ಅರ್ಥ!


ಮೇಷ ರಾಶಿಯಲ್ಲಿ ಜನಿಸಿದ ಪುರುಷರು ತಮ್ಮ ಭಾವನೆಗಳನ್ನು ಸಾಕಷ್ಟು ವ್ಯಕ್ತಪಡಿಸುತ್ತಾರೆ. ಅವರೇನಾದರೂ ನಿಮ್ಮ ಬಗ್ಗೆ ಆಸಕ್ತಿ ಹೊಂದಿದ್ದರೆ ಆಗೊಮ್ಮೆ ಈಗೊಮ್ಮೆ ಸುಳಿವುಗಳನ್ನು ನೀಡುತ್ತಾರೆ. ಆದರೆ, ಅವರ ಸುಳಿವುಗಳನ್ನು ಅರ್ಥಮಾಡಿಕೊಳ್ಳುವುದು ಯಾವಾಗಲೂ ಸುಲಭವಲ್ಲ. ಹಾಗೇನಾದರೂ ನೀವು ಅವರ ಪ್ರೇಮದ ಬಗ್ಗೆ ಕ್ಲಾರಿಟಿ ತೆಗೆದುಕೊಳ್ಳಲು ಬಯಸಿದರೆ, ಇಲ್ಲಿ ನೀಡಿರುವ ಸುಳಿವುಗಳನ್ನು ಆತ ನಿಮಗೆ ನೀಡುತ್ತಿದ್ದಾನೆಯೇ ಎಂದು ಪರೀಕ್ಷಿಸಿ...

ನಿಮ್ಮ ಅಭಿಪ್ರಾಯಗಳಿಗೆ (Opinions) ಆದ್ಯತೆ ನೀಡುತ್ತಾರೆ: ಮೇಷ ರಾಶಿಯಲ್ಲಿ ಜನಿಸಿದ ಜನರು ಆಳವಾದ ಸಂಬಂಧಗಳಲ್ಲಿ ನಂಬಿಕೆ (Trust) ಇಡುತ್ತಾರೆ ಮತ್ತು ಒಮ್ಮೆ ಅವರು ನಿಮ್ಮನ್ನು ಪ್ರೀತಿಸುತ್ತಿದ್ದರೆ, ನಿಮ್ಮ ಅಭಿಪ್ರಾಯಗಳಿಗೆ ಆದ್ಯತೆ (Importance) ನೀಡಲು ಪ್ರಾರಂಭಿಸುತ್ತಾರೆ. ನಿಮ್ಮ ಆದ್ಯತೆಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸುವುದರಿಂದ ಹಿಡಿದು ದೊಡ್ಡ ವೃತ್ತಿ ನಿರ್ಧಾರಗಳಿಗೆ (Decisions) ನಿಮ್ಮ ಸಲಹೆ ಕೇಳುವವರೆಗೆ ಅವರ ಜೀವನದಲ್ಲಿ ನಿಮಗೆ ಪ್ರಾಮುಖ್ಯತೆ ನೀಡುತ್ತಾರೆ.

Tap to resize

Latest Videos

ಇದನ್ನೂ ಓದಿ: Astrology: ಸಾಕುಪ್ರಾಣಿಗಳೆಂದ್ರೆ ಈ ರಾಶಿಯವ್ರಿಗೆ ಭಾರೀ ಇಷ್ಟ!

 ನಿಮ್ಮ ಎಲ್ಲಾ ಮಾತಿಗೆ ಒಪ್ಪಿಗೆ ನೀಡುತ್ತಾರೆ: ಇವರು ನಿಮ್ಮನ್ನು ಆರಾಧಿಸಲು ಪ್ರಾರಂಭಿಸಿದರೆ, ಅವರು ಎಂದಿಗೂ ನಿಮ್ಮ ಮಾತಿಗೆ ಒಪ್ಪುವುದಿಲ್ಲ ಅನ್ನಲು ಸಾಧ್ಯವಿಲ್ಲ. ಏಕೆಂದರೆ, ಅವರಿಗೆ ನಿಮ್ಮನ್ನು ಅಸಮಾಧಾನಗೊಳಿಸಲು (Disappoint) ಇಷ್ಟವಾಗುವುದಿಲ್ಲ. ಅವರು ನಿಮ್ಮೊಂದಿಗೆ ಒಪ್ಪದಿದ್ದರೂ ಸಹ, ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಂತೂ ಇಲ್ಲ. ಬದಲಾಗಿ, ಸಂಭಾವ್ಯ ಪರಿಹಾರವನ್ನು ಕಂಡುಕೊಳ್ಳುವ ಮೂಲಕ ಅವರು ನಿಮ್ಮನ್ನು ಸಂತೋಷಪಡಿಸಲು (Happy) ಪ್ರಯತ್ನಿಸುತ್ತಾರೆ.

 ನಿಮ್ಮಿಷ್ಟಗಳೆ ಅವರ ಮೊದಲ ಪ್ರಾಮುಖ್ಯತೆ (Priority): ಇವರು ನಿಮಗೆ ಬೆಂಬಲ ಮತ್ತು ಸಾಂತ್ವನ ನೀಡುವುದರ ಜೊತೆಗೆ ನಿಮ್ಮ ಅಗತ್ಯತೆಗಳು ಮತ್ತು ಬಯಕೆಗಳ ಚಿಕ್ಕದಕ್ಕೂ ಗಮನ ಕೊಡುತ್ತಾರೆ. ಇದಲ್ಲದೆ, ಅವರು ನಿಮ್ಮ ಚಿಂತೆಗಳನ್ನು ಸರಳಗೊಳಿಸಲು ಮತ್ತು ನಿಮ್ಮ ಮುಖದ ಮೇಲೆ ದೊಡ್ಡ ಸ್ಮೈಲ್ (Smile) ತರಿಸಲು ಏನು ಬೇಕಾದರೂ ಮಾಡುತ್ತಾರೆ. ನಿಮಗೆ ಸರ್ಪ್ರೈಸಿಂಗ್ ಉಡುಗೊರೆಗಳನ್ನು ನೀಡುವುದರಿಂದ ಹಿಡಿದು ಡೇಟಿಂಗ್ ಗೆ ನಿಮ್ಮನ್ನು ಕರೆದೊಯ್ಯುವವರೆಗೆ ಈ ಜನರು ಕಾಲಕಾಲಕ್ಕೆ ನಿಮಗೆ ವಿಶೇಷ ಭಾವನೆ ಮೂಡಿಸಲು ಪ್ರಯತ್ನಿಸುತ್ತಾರೆ.

ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು (Time Spend) ಬಯಸುತ್ತಾರೆ: ಮೇಷ ರಾಶಿಯವರು ನಿಮ್ಮೊಂದಿಗೆ ಸಮಯ ಕಳೆಯಲು ಎಂದಿಗೂ ಹಿಂಜರಿಯುವುದಿಲ್ಲ. ಅವರು ಎಷ್ಟೇ ಕಾರ್ಯನಿರತರಾಗಿದ್ದರೂ (Busy), ನಿಮಗಾಗಿ ಸಮಯವನ್ನು ಕಂಡುಕೊಳ್ಳುತ್ತಾರೆ, ನಿಮ್ಮೊಂದಿಗೆ ಹ್ಯಾಂಗ್ ಔಟ್ ಮಾಡಲು ಸದಾ ಸಿದ್ಧರಿರುತ್ತಾರೆ. ನಿಮಗೆ ಎಂದಿಗೂ ಒಂಟಿತನವನ್ನು ಅನುಭವಿಸಲು ಬಿಡುವುದಿಲ್ಲ.

ಇದನ್ನೂ ಓದಿ: ಮೃಗಶಿರಾ ನಕ್ಷತ್ರ ನಿಮ್ಮದಾ? ಆರೋಗ್ಯದ ಬಗ್ಗೆ ಇರಲಿ ಎಚ್ಚರ!

ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುತ್ತಾರೆ: ಮೇಷ ರಾಶಿಯವರು ಅಭಿನಂದನೆಗಳ ಮೌಲ್ಯವನ್ನು (Value) ತಿಳಿದಿದ್ದಾರೆ, ಆದ್ದರಿಂದ ಅವರು ನಿಮ್ಮನ್ನು ಆಗಾಗ್ಗೆ ಸಿಹಿ ಮಾತುಕತೆ ಮತ್ತು ಹೊಗಳಿಕೆಗಳೊಂದಿಗೆ ಹೊಗಳುತ್ತಾರೆ. ಒಬ್ಬ ಏರಿಯನ್ ತನ್ನ ಎಲ್ಲಾ ಗಮನವನ್ನು ಶ್ಲಾಘನೆಗಳೊಂದಿಗೆ ನಿಮ್ಮ ಮೇಲೆ ಧಾರೆ ಎರೆದರೆ, ಆತ ನಿಮ್ಮನ್ನು ಪ್ರೀತಿಸುತ್ತಾನೆ ಎಂಬುದು ಬಹುತೇಕ ಖಚಿತ (Confirm). ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳದ ಹೊರತು ಸುಮ್ಮನೆ ಹೊಗಳುವುದೂ ಇಲ್ಲ. ಅವರ ಮಾತುಗಳು ಪ್ರಾಮಾಣಿಕವಾಬೀರುತ್ತವೆ.

ನಿಮ್ಮನ್ನು ಮೆಚ್ಚಿಸಲು ಹೆಚ್ಚುವರಿ ಪ್ರಯತ್ನಗಳನ್ನು (Efforts) ಮಾಡುತ್ತಾರೆ: ಏರಿಯನ್ನರು ಭಾವೋದ್ರಿಕ್ತ ಮತ್ತು ಸಹಾನುಭೂತಿಯ ವ್ಯಕ್ತಿಗಳಾಗಿದ್ದು, ಅವರು ನಿಜವಾಗಿಯೂ ಪ್ರೀತಿಸುತ್ತಿರುವಾಗ ನಿಮ್ಮ ಸುತ್ತಲೂ ವಿಶಿಷ್ಟವಾದ ರೋಮ್-ಕಾಮ್ ಕೆಲಸಗಳನ್ನು ಮಾಡುತ್ತಾರೆ. ಸರಳ ಮೆಸೇಜ್  ಕಳಿಸುವುದರಿಂದ (Soft Message) ಹಿಡಿದು ಚೀಸೀ ಫ್ಲರ್ಟಿಂಗ್‌ವರೆಗೆ, ಅವರು ನಿಮ್ಮ ಮನ ಗೆಲ್ಲಲು ಪ್ರತಿ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ. ಅವರ ಅವಿವೇಕದ ಮಾತುಕತೆಗಳಿಂದ ನೀವು ಮೂರ್ಛೆ ಹೋಗುತ್ತೀರೇನೋ ಅನ್ನುವಷ್ಟು ರಂಜಿಸುವ ಮಾತುಗಳನ್ನಾಡುತ್ತಾರೆ.

click me!