
ಈ ಬಾರಿ ಅಕ್ಟೋಬರ್ 18 ರಂದು ಧನತ್ರಯೋದಶಿ (Dhantrayodashi) ಆಚರಣೆ ಮಾಡಲಾಗ್ತಿದೆ. ಇದು ಕೇವಲ ಸಂಪತ್ತು ಮತ್ತು ಸಮೃದ್ಧಿಯ ಹಬ್ಬವಲ್ಲ. ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಿಂದಲೂ ಇದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ಈ ಬಾರಿ ಧನತ್ರಯೋದಶಿನಲ್ಲಿ ಎರಡು ಶುಭ ಯೋಗಗಳು ರೂಪುಗೊಳ್ಳುತ್ತಿದೆ. ಅಪರೂಪದ ಬ್ರಹ್ಮ ಯೋಗ ರೂಪುಗೊಳ್ಳಲಿದೆ. ಈ ಬ್ರಹ್ಮ ಯೋಗವು ನಿಮ್ಮ ಮನೆ ಮತ್ತು ವ್ಯವಹಾರಕ್ಕೆ ಸಕಾರಾತ್ಮಕ ಶಕ್ತಿಯನ್ನು ತರಲಿದೆ. ಸಮೃದ್ಧಿ ಮತ್ತು ಪ್ರಗತಿಯನ್ನು ತರಲು ಸಹಾಯ ಮಾಡುತ್ತದೆ. ಇದರೊಂದಿಗೆ, ಧನತ್ರಯೋದಶಿಯಲ್ಲಿ ಶುಭ ಶಿವವಾಸ ಯೋಗ ರೂಪುಗೊಳ್ಳುತ್ತಿದೆ. ಇದು ಕುಟುಂಬದಲ್ಲಿ ಶಾಂತಿ, ಅದೃಷ್ಟ ಮತ್ತು ಸಮೃದ್ಧಿಯನ್ನು ತರಲಿದೆ
ಹಿಂದೂ ಧರ್ಮದಲ್ಲಿ ಧನ ತ್ರಯೋದಶಿ ವಿಶೇಷ ಮಹತ್ವ ಹೊಂದಿದೆ. ಈ ದಿನ ಚಿನ್ನ ಅಥವಾ ಬೆಳ್ಳಿ ಖರೀದಿಸುವುದರಿಂದ ಕುಟುಂಬಕ್ಕೆ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ಬರುತ್ತದೆ ಎಂದು ನಂಬಲಾಗಿದೆ. ಆದ್ರೆ ಈಗಿನ ಸ್ಥಿತಿಯಲ್ಲಿ ಬಂಗಾರ, ಬೆಳ್ಳಿ ಖರೀದಿ ಸುಲಭವಲ್ಲ. ಸಣ್ಣ ರಿಂಗ್ ಖರೀದಿಗೂ ಸಾವಿರಾರು ರೂಪಾಯಿ ಖರ್ಚು ಮಾಡ್ಬೇಕಾಗಿದೆ. ಧನ ತ್ರಯೋದಶಿ ದಿನ ಬಂಗಾರ, ಬೆಳ್ಳಿ ಖರೀದಿ ಸಾಧ್ಯವಿಲ್ಲ ಎನ್ನುವವರು ಬೇರೆ ಉಪಾಯ ಮಾಡಿ ತಾಯಿ ಲಕ್ಷ್ಮಿಯನ್ನು ಒಲಿಸಿಕೊಳ್ಳಬಹುದು.
ಈ 4 ರಾಶಿಗೆ ಧನ್ತೇರಸ್ (ದೀಪಾವಳಿ) ಅದೃಷ್ಟಶಾಲಿ, ಬಂಪರ್ ಲಾಭ, ಹಣವೇ ಹಣ
• ಹಿತ್ತಾಳೆ ಪಾತ್ರೆ : ಹಿತ್ತಾಳೆ ಪಾತ್ರೆ ಖರೀದಿಸುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ಬಂದಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಹಿತ್ತಾಳೆಯನ್ನು ಧನ್ವಂತರಿ ದೇವರ ಲೋಹವೆಂದು ಪರಿಗಣಿಸಲಾಗುತ್ತದೆ. ನೀವು ಬಂಗಾರದ ಬದಲು ಹಿತ್ತಾಳೆ ಪಾತ್ರೆ ಖರೀದಿ ಮಾಡಿ.
• ಪೊರಕೆ : ಪೊರಕೆಯನ್ನು ಲಕ್ಷ್ಮಿ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ದಿನ ನೀವು ಪೊರಕೆ ಖರೀದಿ ಮಾಡಿದ್ರೆ ನಕಾರಾತ್ಮಕತೆ ದೂರವಾಗುತ್ತದೆ. ಪೊರಕೆಯನ್ನು ಮನೆಗೆ ತಂದು ಅದನ್ನು ಪೂಜೆ ಮಾಡಿ.
• ಕೊತ್ತಂಬರಿ ಬೀಜ : ಧನತ್ರಯೋದಶಿ ದಿನ ನೀವು ಕೊತ್ತಂಬರಿ ಬೀಜವನ್ನು ಖರೀದಿ ಮಾಡಿ. ಅದನ್ನು ದೇವರ ಮುಂದಿಟ್ಟು ಪೂಜೆ ಮಾಡಿ ನಂತ್ರ ಅದನ್ನು ಕಪಾಟಿನಲ್ಲಿ ಇಡಿ.
ದೀಪಾವಳಿಯ ನಂತರ ಈ 3 ರಾಶಿಗೆ ಅದೃಷ್ಟ, ವೃಶ್ಚಿಕದಲ್ಲಿ ಬುಧನ ಸಂಚಾರದಿಂದ ಸಂಪತ್ತು
• ಗೋಮತಿ ಚಕ್ರ : ಧನತ್ರಯೋದಶಿ ದಿನ ನೀವು ಗೋಮತಿ ಚಕ್ರವನ್ನನು ಕೂಡ ಖರೀದಿ ಮಾಡಬಹುದು. ಇದನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ಧನ್ತೇರಸ್ ದಿನ ಮನೆಯನ್ನು ಸ್ವಚ್ಛಗೊಳಿಸಿ. ದೇವರ ಮುಂದೆ, ಮನೆಯ ಮುಖ್ಯ ದ್ವಾರಕ್ಕೆ ರಂಗೋಲಿ ಹಾಕಿ. ಕಲಶ ಸ್ತಾಪನೆ ಮಾಡುವ ಮುನ್ನ ಆ ಜಾಗವನ್ನು ಸ್ವಚ್ಛಗೊಳಿಸಿ. ಕಲಶ ಸ್ಥಾಪನೆ ನಂತ್ರ ಲಕ್ಷ್ಮಿ ಮತ್ತು ಕುಬೇರ ದೇವಿಯ ಮೂರ್ತಿ ಅಥವಾ ಫೋಟೋ ಇಡಿ. ಧನ್ವಂತರಿಗೆ ಶೋಡಶೋಪಚಾರದೊಂದಿಗೆ ಪೂಜೆ ಮಾಡಿ. ದೀಪಗಳನ್ನು ದಾನ ಮಾಡಿ ಮತ್ತು ಲಕ್ಷ್ಮಿಯನ್ನು ಪೂಜಿಸಿ. ಬಡವರಿಗೆ ದಾನ ಮಾಡಿ. ಭಕ್ತಿಯಿಂದ ದೇವಿ ಪೂಜೆ ಮಾಡಿದ್ರೆ ನಿಮ್ಮೆಲ್ಲ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗಲಿದೆ.