ಗಣೇಶ ರುದ್ರಾಕ್ಷಿ ಧರಿಸಿದರೆ ನಿಮ್ಮ ಅದೃಷ್ಟವೇ ಬದಲಾಗತ್ತೆ…!

By Suvarna News  |  First Published Sep 14, 2020, 5:59 PM IST

ರುದ್ರಾಕ್ಷಿ ಧಾರಣೆಯಿಂದ ಅನೇಕ ಲಾಭಗಳಿರುವ ಬಗ್ಗೆ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ಶುಭವಾಗಲಿದ್ದು, ಇದರ ಧಾರಣೆಯನ್ನು ರೀತಿ ನೀತಿಗಳಿಗನುಸಾರವಾಗಿ ಮಾಡಬೇಕಾಗುತ್ತದೆ. ಇದನ್ನು ಧರಿಸುವುದರಿಂದ ಪ್ರಥಮ ಪೂಜಕ ಗಣೇಶ ಮಾತ್ರವಲ್ಲದೆ ಸಾಕ್ಷಾತ್ ಶಿವ ಸಹ ಪ್ರಸನ್ನನಾಗುತ್ತಾನೆಂದು ಹೇಳಲಾಗುತ್ತದೆ. ಹಾಗಾದರೆ ಇದರ ಪ್ರಯೋಜನವೇನು ಎಂಬ ಬಗ್ಗೆ ತಿಳಿಯೋಣ…


ಗಣೇಶ ರುದ್ರಾಕ್ಷಿಗೆ ಅದರದ್ದೇ ಆದ ಮಹತ್ವವಿದೆ. ಇದರಿಂದ ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಶಕ್ತಿಯಿದೆ. ಇದನ್ನು ಧರಿಸಿದರೆ ಧನಾತ್ಮಕ ಅಂಶಗಳನ್ನು ನೀವು ಪಡೆಯಬಹುದಾಗಿದ್ದು, ಉತ್ತಮ ಲಾಭಗಳನ್ನು ಪಡೆಯಬಹುದಾಗಿದೆ. ಇನ್ನು ರುದ್ರಾಕ್ಷಿ ಬಗ್ಗೆ ತಿಳಿಯುವುದಾದರೆ ಹಿಂದೂಧರ್ಮದಲ್ಲಿ ರುದ್ರಾಕ್ಷಿಗೆ ವಿಶೇಷವಾದ ಮಹತ್ವವಿದೆ. ಶಿವನ ಕಣ್ಣೀರಿನಿಂದ ಬಿದ್ದ ಬಿಂದುವಿನಿಂದ ರುದ್ರಾಕ್ಷಿ ಉದ್ಭವವಾಯಿತೆಂಬ ನಂಬಿಕೆಯಿದೆ. ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಈ ರುದ್ರಾಕ್ಷಿಗೆ ಇದೆ. ರುದ್ರಾಕ್ಷಿ ಧಾರಣೆ ಮಾಡುವುದರಿಂದ ಸಕಾರಾತ್ಮಕ ಶಕ್ತಿಯು ಹೆಚ್ಚುತ್ತದೆ. 



ರುದ್ರಾಕ್ಷಿಯನ್ನು ಧರಿಸುವುದರಿಂದ ಅನೇಕ ಲಾಭವಾಗುತ್ತದೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಶಿವ ಪುರಾಣ, ಸ್ಕಂದ ಪುರಾಣ, ಲಿಂಗ ಪುರಾಣ ಸೇರಿ ಹಲವು ಪುರಾಣಗಳಲ್ಲಿ ಇದರ ಮಹತ್ವದ ಬಗ್ಗೆ ವಿವರಿಸಲಾಗಿದ್ದು, 14 ಪ್ರಕಾರದ ರುದ್ರಾಕ್ಷಿಗಳಿವೆ. ಈಗ ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ಆಗುವ ಲಾಭದ ಬಗ್ಗೆ ಗಮನಿಸೋಣ. 

ಇದನ್ನು ಓದಿ:
 
ಗಣೇಶ-ಶಿವನ ಆಶೀರ್ವಾದ
ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ಪ್ರಥಮ ಪೂಜಕ ಗಣೇಶನ ವಿಶೇಷ ಕೃಪೆಗೆ ಪಾತ್ರರಾಗಬಹುದು. ಜೊತೆಗೆ ಶಿವನ ಕೃಪಾಶೀರ್ವಾದವೂ ಲಭಿಸಲಿದೆ. 

ಗಣೇಶ ರುದ್ರಾಕ್ಷಿಯ ಲಾಭಗಳು

Latest Videos

• ಗಣೇಶ ರುದ್ರಾಕ್ಷಿಯನ್ನು ಧಾರಣೆ ಮಾಡುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಓದಿನಲ್ಲಿ ಆಸಕ್ತಿ ಇಲ್ಲದವರಿಗೆ ಇದರಿಂದ ಪ್ರೇರಣೆ ಹೆಚ್ಚಿ ಓದಿನಲ್ಲಿ ಒಳ್ಳೆಯದನ್ನು ಮಾಡುವಂತಾಗುತ್ತದೆ. ಓದಿದ ವಿಷಯ ಹೆಚ್ಚು ನೆನಪಿನಲ್ಲಿಡುವಂತೆ ಮಾಡುತ್ತದೆ. 

• ರಾಶಿಯ ಅಧಿಪತಿ ಬುಧಗ್ರಹವಾಗಿದ್ದರೆ ಅಂಥವರು ಗಣೇಶ ರುದ್ರಾಕ್ಷಿಯನ್ನು ಧರಿಸಬೇಕು. ಇದರಿಂದ ಜಾತಕದಲ್ಲೇನಾದರೂ ಬುಧಗ್ರಹ ನೀಚವಾಗಿದ್ದರೆ ಉಚ್ಛ ಸ್ಥಿತಿಗೆ ಬರಲಿದೆ. ಇದರಿಂದ ಬುಧಗ್ರಹದ ವಿಶೇಷ ಕೃಪೆಗೆ ಪ್ರಾಪ್ತವಾಗಬಹುದು. 

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ರಾಶಿಗಳ ಮೇಲಾಗುವ ಶುಭಾಶುಭ ಫಲಗಳ ಬಗ್ಗೆ ತಿಳಿಯೋಣ..! 

• ಗಣೇಶ ರುದ್ರಾಕ್ಷಿಯನ್ನು ಧರಿಸುವುರದರಿಂದ ಗಣೇಶನ ವಿಶೇಷ ಕೃಪೆ ಇರುವುದಲ್ಲದೆ, ಧರಿಸಿದವರ ಜೊತೆಗೇ ಇದ್ದು, ಅವರ ರಕ್ಷಣೆಯನ್ನೂ ಅವನೇ ಮಾಡುತ್ತಾನೆ.

• ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ಅಂಥವರು ಸಹ ಈ ರುದ್ರಾಕ್ಷಿಯನ್ನು ಧರಿಸಬೇಕು. ಗಣೇಶ ರುದ್ರಾಕ್ಷಿ ಧಾರಣೆ ಮಾಡುವುದರಿಂದ ಮಾನಸಿಕ ಸಮಸ್ಯೆ ದೂರವಾಗುತ್ತದೆ. ಜೊತೆಗೆ ಡಿಪ್ರೆಶನ್ ನಲ್ಲಿದ್ದವರು ಧರಿಸಿದರೂ ಸಹ ಉತ್ತಮ ಎಂದು ಹೇಳಲಾಗುತ್ತದೆ. 

• ಗಣೇಶ ರುದ್ರಾಕ್ಷಿ ಧರಿಸುವುದರಿಂದ ಓದಿನಲ್ಲಿಯೂ ಉತ್ತಮ ಪ್ರಗತಿಯನ್ನು ಸಾಧಿಸಬಹುದಾಗಿದೆ. 

• ಗಣೇಶ ರುದ್ರಾಕ್ಷಿಯನ್ನು ಧರಿಸಿದವರು ಜೀವನದಲ್ಲಿ ಎಲ್ಲ ಕ್ಷೇತ್ರದಲ್ಲೂ ಸಫಲತೆಯನ್ನು ಪಡೆಯುತ್ತಾರೆ.

• ಕೇತು ಗ್ರಹದ ಅಶುಭ ಪ್ರಭಾವದಿಂದ ಪಾರಾಗಲು ಗಣೇಶ ರುದ್ರಾಕ್ಷಿಯನ್ನು ಧರಿಸುವುದು ಉತ್ತಮ

ಗಣೇಶ ಚತುರ್ಥಿ ದಿನ ಶುಭ
ಗಣೇಶ ರುದ್ರಾಕ್ಷಿಯನ್ನು ಯಾವಾಗ ಧರಿಸಬೇಕು? ಯಾವಾಗ ಧರಿಸಿದರೆ ಉತ್ತಮ ಎಂಬ ಬಗ್ಗೆ ಜ್ಯೋತಿಷಿಗಳನ್ನು ಕೇಳಿ ತಿಳಿದುಕೊಳ್ಳಬಹುದು. ಅದಲ್ಲದೆ, ಗಣೇಶ ಚತಿರ್ಥಿಯ ದಿನ ಈ ಗಣೇಶ ರುದ್ರಾಕ್ಷಿಯನ್ನು ಧಾರಣೆ ಮಾಡಿದರೆ ಬಹುಳ ಒಳ್ಳೆಯದು, ಶುಭಕಾರಕ ಎಂದು ಹೇಳಲಾಗುತ್ತದೆ. ಒಂದು ವೇಳೆ ಇದನ್ನು ಧರಿಸದೇ ಇದ್ದರೂ ಪೂಜಾ ಸ್ಥಳದಲ್ಲಿ ಅದನ್ನು ಸ್ಥಾಪನೆ ಮಾಡಿ ಪೂಜೆ ಮಾಡಿದರೂ ಬಹಳ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಒಂದು ವೇಳೆ ಸ್ಥಾಪನೆ ಮಾಡಿದ್ದೇ ಆದಲ್ಲಿ ಅದಕ್ಕೆ ಪ್ರತಿ ದಿನ ಪೂಜೆ ಪುನಸ್ಕಾರಗಳು ನಡೆಯಲೇಬೇಕು. ಇದು ಬಿಟ್ಟರೆ ಸೋಮವಾರದ ದಿನ ಗಣೇಶ ರುದ್ರಾಕ್ಷಿಯನ್ನು ಕೆಂಪು ದಾರದಿಂದ ಇಲ್ಲವೇ ಬಂಗಾರ, ಬೆಳ್ಳಿಯ ಜೊತೆ ಧರಿಸಬಹುದಾಗಿದೆ. 

ಇದನ್ನು ಓದಿ: ರಾಹು ರಾಶಿ ಪರಿವರ್ತನೆಯಿಂದ ಸಮಸ್ಯೆ ಎದುರಿಸುವವರಿಗಿಲ್ಲಿದೆ ಪರಿಹಾರ..! 

ಗಣೇಶ ರುದ್ರಾಕ್ಷಿ ಹೇಗಿರುತ್ತದೆ?
ಗಣೇಶ ರುದ್ರಾಕ್ಷಿ ನೋಡಲು ಹೇಗೆ ಇರುತ್ತದೆ ಎಂದರೆ, ಅದು ಎಂದಿನ ರುದ್ರಾಕ್ಷಿಯಂತಲೇ ಇದ್ದು, ಗಣೇಶನ ಸೊಂಡಿಲ ಆಕಾರವು ಪ್ರತ್ಯೇಕವಾಗಿ ಮೂಡಿರುತ್ತದೆ. ನೋಡಲು ಗಣೇಶನ ರೀತಿಯೇ ಕಾಣುತ್ತದೆ. ಹಾಗಾಗಿ ಇದನ್ನು ಧರಿಸುವುದರಿಂದ ಅದೃಷ್ಟ ಖುಲಾಯಿಸುತ್ತದೆ ಎಂದೇ ನಂಬಲಾಗಿದೆ.

click me!