ಶಿವರಾತ್ರಿಯಂದೇ ಕಾದ ಬಂಡೆಯ ಮೇಲೆ ನೀರು ಪ್ರತ್ಯಕ್ಷ!

By Kannadaprabha News  |  First Published Feb 19, 2023, 9:24 AM IST

ಬಿರು ಬೇಸಿಗೆಯಲ್ಲಿಯೂ ಇಲ್ಲಿನ ಬೆಟ್ಟದ ತುದಿಯಲ್ಲಿ ಕಾದ ಬಂಡೆಯ ಮೇಲೆ ತಂಪಾದ ಸಿಹಿ ನೀರು ಜಿನುಗುತ್ತದೆಈ ಪ್ರಕೃತಿ ವಿಸ್ಮಯ ತಾಣಕ್ಕೆ ‘ಬಾಧೆ ಚಿಲುಮೆ, ಶಿವನ ಗಂಗೆ’ ಎಂದು ಕರೆಯುತ್ತ ನೀರನ್ನು ಪೂಜಿಸುತ್ತಾರೆ. ಈ ನೀರು ಕುಡಿದರೆ ಮನುಷ್ಯನಿಗೆ ರೋಗಗಳೂ ದೂರ ಎನ್ನುವ ನಂಬಿಕೆ ಇದೆ. ಇಂತಹ ವಿಸ್ಮಯ ತಾಣ ನೋಡುವುದೇ ಸೋಜಿಗ!


ಭೀಮಣ್ಣ ಗಜಾಪುರ

ಕೂಡ್ಲಿಗಿ (ಫೆ.19) : ಬಿರು ಬೇಸಿಗೆಯಲ್ಲಿಯೂ ಇಲ್ಲಿನ ಬೆಟ್ಟದ ತುದಿಯಲ್ಲಿ ಕಾದ ಬಂಡೆಯ ಮೇಲೆ ತಂಪಾದ ಸಿಹಿ ನೀರು ಜಿನುಗುತ್ತದೆ!

Tap to resize

Latest Videos

undefined

ಆ ಬಂಡೆಯ ಇಕ್ಕೆಲಗಳಲ್ಲಿ ಜಿನುಗುವ ಪರಿಶುದ್ಧ ನೀರು ಒರತೆಯಂತ ತಗ್ಗುಗುಂಡಿಗಳಲ್ಲಿ ಶೇಖರಣೆಯಾಗುತ್ತಿದ್ದು, ಈ ಪ್ರಕೃತಿ ವಿಸ್ಮಯ ತಾಣಕ್ಕೆ ‘ಬಾಧೆ ಚಿಲುಮೆ, ಶಿವನ ಗಂಗೆ’ ಎಂದು ಕರೆಯುತ್ತ ನೀರನ್ನು ಪೂಜಿಸುತ್ತಾರೆ. ಈ ನೀರು ಕುಡಿದರೆ ಮನುಷ್ಯನಿಗೆ ರೋಗಗಳೂ ದೂರ ಎನ್ನುವ ನಂಬಿಕೆ ಇದೆ. ಇಂತಹ ವಿಸ್ಮಯ ತಾಣ ನೋಡುವುದೇ ಸೋಜಿಗ!

ಮುಂದಿನ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಅಧಿಕಾರ ಯೋಗವಿಲ್ಲ; ಕೊಡೇಕಲ್ ಕಾಲಜ್ಞಾನಿಯ ಭವಿಷ್ಯನುಡಿ ನಿಜವಾಗುತ್ತಾ?

ಹೆಬ್ಬಂಡೆಗಳೇ ತುಂಬಿರುವ ಬೆಟ್ಟದಲ್ಲಿ ಸುತ್ತಮುತ್ತ ಎಲ್ಲಿ ನೋಡಿದರೂ ಬಿಸಿಲಿನ ಒಣ ಹವೆ, ಧಗಧಗ ಬಿಸಿಲು, ಮಳೆಗಾಲದಲ್ಲಿಯೇ ಕುಡಿಯಲು ನೀರು ಸಿಗದ ಈ ಪ್ರದೇಶದಲ್ಲಿ ಬಿರು ಬಿಸಿಲಿನ ಬೇಸಿಗೆಯ ಶಿವರಾತ್ರಿಯಂದು ಈ ಬೆಟ್ಟದಲ್ಲಿ ನೀರು ಪ್ರತ್ಯಕ್ಷವಾಗುತ್ತದೆ. ಬೆಟ್ಟದ ಇಳಿಜಾರಿನ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ. ಈ ನೀರಿನಲ್ಲಿ ಔಷಧಿಯ ಗುಣವಿದೆಯೆಂಬುದು ಜನತೆಯ ಪರಂಪರಾಗತ ನಂಬಿಕೆ. ಈ ಬೆಟ್ಟದ ಗಂಗೆಯನ್ನು ಸ್ಥಳೀಯರು ಪೂಜೆ ಮಾಡುತ್ತಾರೆ. ರೋಗ ರುಜಿನ ದೂರವಾಗೋದ್ರಿಂದ ಎಲ್ಲರೂ ಈ ನೀರು ಕುಡಿತಾರೆ, ಸ್ಥಳೀಯರು ಸಂಗ್ರಹಿಸಿ ಮನೆಗಳಲ್ಲಿಟ್ಟು ವರ್ಷಗಟ್ಟಲೇ ಈ ನೀರು ಕುಡಿಯುತ್ತಾರೆ.

ನೀವೂ ಈ ವಿಸ್ಮಯ ತಾಣ ನೋಡಬೇಕೇ?

ಕೂಡ್ಲಿಗಿ(Koodligi) ಹಾಗೂ ಗುಡೇಕೋಟೆ(Gudekote)ಯಿಂದ ನರಸಿಂಹನಗಿರಿ(Narasimhanagiri)ಗೆ ಬರಬಹುದು ಇಲ್ಲವೇ ಚಿಕ್ಕಜೋಗಿಹಳ್ಳಿಯಿಂದ ಭೀಮಸಮುದ್ರ ಮೂಲಕ ಕರಡಿಹಳ್ಳಿ(Karadihalli)ಗೆ ಬಂದರೆ ನೀವು ಬಾಧೆ ಚಿಲುಮೆ ನೋಡಬಹುದು. ಕರಡಿಹಳ್ಳಿಯಿಂದ ನರಸಿಂಹಗಿರಿಗೆ ಹೋಗುವ ಕಚ್ಚಾ ರಸ್ತೆಯಲ್ಲಿ 2 ಕಿಮೀ ಸಾಗಿದರೆ ಈ ಪ್ರದೇಶ ಸಿಗುತ್ತದೆ. ವಾಹನ ಇಳಿದು ಕಾಡಿನಲ್ಲಿ ತುಸು ದೂರ ಕಾಲ್ನಡಿಗೆ ಮೂಲಕ ಹೋಗಬೇಕು, ಆಗ ಈ ಬೆಟ್ಟದ ಗಂಗೆ ನಿಮಗೆ ಸಿಗುತ್ತಾಳೆ. ಈ ಸ್ಥಳವನ್ನು ತೆಲುಗಿನಲ್ಲಿ ಬಾಗಲ… ಚಿಲುಮೆ ಎನ್ನುತ್ತಾರೆ. ಬಾಗಲ್‌ ಚಿಲುಮೆ ಅಂದರೆ ಬಾಧೆ ತೀರಿಸುವ ಚಿಲುಮೆ ಎಂದರ್ಥ. ಇಲ್ಲಿ ಕರಡಿ, ಚಿರತೆ ಮುಂತಾದ ಕಾಡು ಪ್ರಾಣಿಗಳ ಓಡಾಟ ಜಾಸ್ತಿ, ಹೀಗಾಗಿ ಗುಂಪಾಗಿ ಹೋಗುವುದು ಕ್ಷೇಮ.

ವಿಸ್ಮಯ ತಾಣದಲ್ಲಿ ವಿಸ್ಮಯಗಳು:

ಈ ಬೆಟ್ಟದಲ್ಲಿ 3ಕಡೆ ನೀರು ಜಿನುಗುತ್ತೆ. ಬಿಸಿಲು ಏರಿದಂತೆ ನೀರು ಜಾಸ್ತಿಯಾಗುತ್ತೆ, ಬಿಸಿಲು ಕಡಿಮೆಯಾದಂಗೆ ನೀರು ಕೂಡ ಜಿನುಗೋ ಪ್ರಮಾಣ ಕಡಿಮೆಯಾಗುತ್ತದೆ. ಋುತುಮಾತಿಯಾದ ಮಹಿಳೆಯರು ಈ ಚಿಲುಮೆ ಹತ್ತಿರ ಹೋದರೆ ಇಲ್ಲಿ ನೀರು ಬತ್ತುತ್ತದೆ ಎನ್ನುವ ನಂಬಿಕೆಯೂ ಇದೆ. ಹೀಗೆ ಆದ ಹಲವಾರು ಉದಾಹರಣೆಗಳನ್ನು ಕರಡಿಹಳ್ಳಿಯ ಶೆಟ್ರು ಶರಣಪ್ಪ ವಿವರಿಸುತ್ತಾರೆ.

ಬತ್ತಿ ಹೋದ ಚಿಲುಮೆಯಲ್ಲಿ ಪುನಃ ನೀರು ಬರಬೇಕೆಂದರೆ ಕಪ್ಪು ಬಣ್ಣದ ಮೇಕೆಯನ್ನು ಆ ಬಾಗಲ್‌ (ಬಾಧೆ ಚಿಲುಮೆ) ಮುಂದೆ ನಿಲ್ಲಿಸಿ ಹಾಲು ಕರೆದಾಗ ಮತ್ತೆ ಯಥಾ ರೀತಿ ಬಂಡೆಯ ಮೇಲೆ ನೀರು ಕಾಣಿಸುತ್ತದೆ ಎಂದು ಅವರು ಹೇಳುತ್ತಾರೆ.

ವಿಜಯಪುರ: ಶಿವರಾತ್ರಿಯಂದು ಸಿದ್ದೇಶ್ವರ ಶ್ರೀಗಳ ರೀತಿ ಉಡುಗೆ ತೊಟ್ಟ ಪುಟಾಣಿ, ಕಾಲಿಗೆ ಬಿದ್ದ ಭಕ್ತರು..!

ಕಾಡಲ್ಲಿರೋದರಿಂದ ಇಲ್ಲಿಗೆ ಜನತೆ ಬರೋದು ಕಡಿಮೆ ಈ ನೀರನ್ನು ಸಂಶೋಧನೆಗೊಳಪಡಿಸಿದರೆ ಔಷಧಿಯ ಗುಣ ತಿಳಿಯುತ್ತದೆ, ಈ ತಾಣಕ್ಕೆ ರಸ್ತೆ ನಿರ್ಮಿಸಿದರೆ ಎಲ್ಲರೂ ಈ ವಿಸ್ಮಯ ನೋಡಲು ಸಾಧ್ಯ. ಆಧುನಿಕ ದಿನಗಳಲ್ಲಿಯೂ ಅಚ್ಚರಿ ಮೂಡಿಸುತ್ತಿರುವುದು ಈ ತಾಣ ಎಲ್ಲರಲ್ಲೂ ಕುತೂಹಲ ಮೂಡಿಸುತ್ತದೆ. ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆಯಂದು ಕಾಣಿಸುವ ನೀರು ಕೆಲವು ಬಾರಿ ಒಂದು ದಿನ ಮುಂಚೆಯೇ ಅಥವಾ ಒಂದು ದಿನ ತಡವಾಗಿಯೂ ನೀರು ಕಾಣಿಸಿದ ಉದಾಹರಣೆಗಳು ಇವೆ. ಹೀಗಾಗಿ ಈ ಬಾಧೆ ಚಿಲುಮೆ ನೋಡಲು ಹೋಗುವವರು ಕರಡಿಹಳ್ಳಿ, ನರಸಿಂಹಗಿರಿ ಗ್ರಾಮದ ರೈತರ ಕುರಿಗಾಹಿಗಳ ಮೂಲಕ ನೀರು ಬಂದಿದಿಯೋ ಇಲ್ಲವೋ ಎಂದು ತಿಳಿದುಕೊಂಡು ಹೋಗಬೇಕಾಗುತ್ತದೆ.

click me!