ಮನಸ್ಸಿಗೆ ಇಷ್ಟವಾಗೋ ಜಾಬ್ ಪಡೆಯಲು ಈ ಉಪಾಯ ಮಾಡಿ..!

By Suvarna News  |  First Published Dec 6, 2020, 3:24 PM IST

ಕೆಲಸ ಪಡೆಯುವುದು, ಕೆಲಸ ಸಿಗುವವರೆಗೆ ಅಲೆಯುವುದು ಎಲ್ಲವು ಕಷ್ಟ. ಬದುಕಲು ಸರಿಯಾದ ಒಂದು ಉದ್ಯೋಗ ಪಡೆಯುವುದು ಎಲ್ಲರ ಅವಶ್ಯಕತೆಯಾಗಿರುತ್ತದೆ. ಅದಕ್ಕೆಂದೇ ಕಷ್ಟ ಪಟ್ಟು ಓದಿ, ಹೆಚ್ಚು ಅಂಕ ಗಳಿಸಿದರೂ ಸಹ ಕೆಲವೊಮ್ಮೆ ಕೆಲಸ ಸಿಗುವುದು ಕಷ್ಟವಾಗುತ್ತದೆ. ಸಂದರ್ಶಕರ ಪ್ರಶ್ನೆಗೆ ಉತ್ತರಿಸಲಾಗದೇ ಅವಕಾಶಗಳನ್ನು ಕಳೆದುಕೊಂಡವರು ಹಲವರಾಗಿರುತ್ತಾರೆ. ಕೆಲಸಕ್ಕಾಗಿ ದೇವರ ಮೊರೆ ಹೋಗಿ, ದೇವಸ್ಥಾನ ಪ್ರದಕ್ಷಿಣೆ ಹಾಕುವುದರ ಜೊತೆಗೆ ಶಾಸ್ತ್ರದಲ್ಲಿ ಕೆಲವು ಸುಲಭ ಉಪಾಯಗಳನ್ನು ತಿಳಿಸಿದ್ದಾರೆ. ಅವುಗಳ ಪಾಲನೆಯಿಂದ ಮನಸ್ಸಿಗೆ ಇಷ್ಟವಾಗುವ ಕೆಲಸ ಲಭಿಸುವುದಾಗಿ ಹೇಳಲಾಗುತ್ತದೆ. ಹಾಗಾದರೆ ಆ ಉಪಾಯಗಳ ಬಗ್ಗೆ ತಿಳಿಯೋಣ...


ಉತ್ತಮ ಕೆಲಸವನ್ನು ಪಡೆಯುವುದು ತುಂಬಾ ಕಷ್ಟದ ವಿಚಾರ. ಕೆಲವರಿಗೆ ಇಷ್ಟ ಪಡುವ ಕೆಲಸ ಬೇಗ ಸಿಕ್ಕಿ ಬಿಡುತ್ತದೆ. ಮತ್ತೆ ಕೆಲವರಿಗೆ ವರ್ಷಗಟ್ಟಲೆ ಅಲೆದರೂ ಕೆಲಸ ಸಿಗುವುದು ಕಷ್ಟ. ಅದರಲ್ಲೂ ಉತ್ತಮ ಕೆಲಸ, ಮನಸ್ಸಿಗೂ ಹಿಡಿಸುವ ಕೆಲಸ ಎರಡೂ ಬೇಕೆಂದರೆ ಹರಸಾಹಸ ಮಾಡಬೇಕು.

ಯೋಗ್ಯತೆಯನುಸಾರ ಕೆಲಸ ಸಿಕ್ಕರೆ ಇಷ್ಟಪಟ್ಟು ಮಾಡಬಹುದು, ಅದೇ ಮನಸ್ಸಿಗೆ ಒಲ್ಲದ ಕೆಲಸ ಮಾಡುವುದು ತುಂಬಾ ಕಷ್ಟ. ಕಠಿಣ ಪರಿಸ್ಥಿತಿಗಳಲ್ಲಿ ಎಷ್ಟೇ ಕಷ್ಟಪಟ್ಟರೂ ಕೆಲಸ ಸಿಗುವುದಿಲ್ಲ. ದೇವರಿಗೆ ಹರಕೆ ಹೊತ್ತುಕೊಳ್ಳುವುದು, ಹಲವಾರು ದೇವಾಲಯಗಳ ಪ್ರದಕ್ಷಿಣೆ ಹಾಕುವುದು, ದಾನ-ಧರ್ಮ ಮಾಡುವುದು ಹೀಗೆ ಹತ್ತಾರು ರೀತಿ ಪ್ರಯತ್ನಿಸಿದರೂ ಕೆಲವು ಬಾರಿ ಕೆಲಸ ಸಿಗುವುದು ತುಂಬಾ ಕಷ್ಟವಾಗಿರುತ್ತದೆ. ಇದೆಲ್ಲವನ್ನು ಮಾಡುವುದರ ಜೊತೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಉಪಾಯಗಳನ್ನು ತಿಳಿಸಿದ್ದಾರೆ. ಹಾಗಾದರೆ ಮನಸ್ಸಿಗೆ ಇಷ್ಟವಾಗುವ ಕೆಲಸವನ್ನು ಪಡೆಯಬೇಕೆಂದರೆ ಏನು ಮಾಡಬೇಕೆಂದು ತಿಳಿಯೋಣ..

ಇದನ್ನು ಓದಿ: ಶುಕ್ರ ಗ್ರಹ ರಾಶಿ ಪರಿವರ್ತನೆ: ಈ ಆರು ರಾಶಿಯವರಿಗೆ ಸಖತ್ ಪ್ಲಸ್, ನಿಮ್ಮ ರಾಶಿ ಯಾವುದು? 

ಇಷ್ಟವಾದ ಕೆಲಸ ಪಡೆಯಲು
ಕೆಲಸಕ್ಕಾಗಿ ಅಲೆದು ಸುಸ್ತಾಗಿದ್ದರೆ, ಎಲ್ಲ ಉಪಾಯಗಳನ್ನು ಮಾಡಿ ಸೋತಿದ್ದರೆ ಹೀಗೆ ಮಾಡುವುದರಿಂದ ಮನಸ್ಸಿಗೆ ಇಷ್ಟವಾಗುವ ಕೆಲಸ ಸಿಗುತ್ತದೆ ಎಂದು ಹೇಳಲಾಗುತ್ತದೆ. ತಿಂಗಳ ಮೊದಲ ಸೋಮವಾರದಂದು ಶ್ವೇತ ವರ್ಣದ ವಸ್ತ್ರದಲ್ಲಿ ಕಪ್ಪು ಅಕ್ಕಿಯನ್ನು ಹಾಕಿ ಅದನ್ನು ಕಾಳಿ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಬೇಕು. ಅಲ್ಲಿ ಕಾಳಿ ದೇವಿಯ ಪಾದಗಳ ಮೇಲಿಟ್ಟು ಬೇಡಿಕೊಂಡರೆ, ಕೆಲಸಕ್ಕೆ ಆಗುವ ತೊಡಕುಗಳು ನಿವಾರಣೆಯಾಗುತ್ತವೆ ಎಂಬುದಾಗಿ ಹೇಳಲಾಗುತ್ತದೆ. ಪ್ರತಿ ನಿತ್ಯ ಮುಂಜಾನೆ ಪಕ್ಷಿಗಳಿಗೆ ಏಳು ಬಗೆಯ ಧಾನ್ಯಗಳನ್ನು ನೀಡಿದರೆ ಕೆಲಸ ಬೇಗ ಸಿಗುತ್ತದೆ ಎಂಬ ನಂಬಿಕೆ ಇದೆ. ಪ್ರತಿ ಸೋಮವಾರ ಶಿವಲಿಂಗಕ್ಕೆ ಜಲವನ್ನು ಮತ್ತು ಅಕ್ಷತೆಯನ್ನು ಅರ್ಪಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ.

ಪವನ ಪುತ್ರ ಹನುಮನನ್ನು ಆರಾಧಿಸಬೇಕು
ಕೆಲಸ ಸಿಗದೇ ಇದ್ದರೆ, ಕೆಲಸದಲ್ಲಿ ತೊಂದರೆ ಆಗುತ್ತಿದ್ದರೆ, ಕಾರ್ಯ ಸ್ಥಳದಲ್ಲಿ ಸಮಸ್ಯೆ ಉಂಟಾಗಿದ್ದರೆ ಮನೆಯಲ್ಲಿ ಹನುಮಂತನು ಹಾರುತ್ತಿರುವ ಭಂಗಿಯ ಫೋಟೋವನ್ನು ಇಡಬೇಕು. ಹನುಮಂತನನ್ನು ಪ್ರತಿ ನಿತ್ಯ ಪೂಜಿಸಬೇಕು ಮತ್ತು ಪ್ರತಿ ಮಂಗಳವಾರ ಹನುಮಂತನಿಗೆ ಸಂಬಂಧಿಸಿದ ಸ್ತ್ರೋತ್ರಗಳನ್ನು ಪಠಿಸಬೇಕು. ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಮನೋವಾಂಛಿತ ಫಲಗಳು ಸಿದ್ಧಿಸುತ್ತವೆ.

Tap to resize

Latest Videos

undefined

ಇದನ್ನು ಓದಿ: ಇದನ್ನು ಓದಿ: ನೀವು ಡಿಸೆಂಬರ್‌ನಲ್ಲಿ ಹುಟ್ಟಿದವರಾ? ಈ ಗುಣ ನಿಮ್ಮದಾಗಿರುತ್ತೆ! 

ಇದರಿಂದ ಕೆಲಸಕ್ಕೆ ಆಗುವ ತೊಂದರೆಗಳು ನಿವಾರಣೆಯಾಗುತ್ತವೆ. ಅಷ್ಟೇ ಅಲ್ಲದೇ ಒಂದು ನಿಂಬೆ ಹಣ್ಣಿನಲ್ಲಿ ನಾಲ್ಕು ಲವಂಗವನ್ನಿಡಬೇಕು ನಂತರ 108 ಬಾರಿ “ಓಂ ಶ್ರೀ ಹನುಮತೇ ನಮಃ” ಎಂಬ ಮಂತ್ರವನ್ನು ಜಪಿಸಬೇಕು. ನಿಂಬೆ ಹಣ್ಣನ್ನು ಬ್ಯಾಗ್ ಅಥವಾ ಪರ್ಸ್‌ನಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತದೆಂದು ಹೇಳಲಾಗುತ್ತದೆ.

ಸಂದರ್ಶನಕ್ಕೆ ಹೋಗುವ ಮುಂಚೆ ಹೀಗೆ ಮಾಡಿ
ಪ್ರತಿ ನಿತ್ಯ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಉತ್ತಮ. ಅದರಲ್ಲು ಸಂದರ್ಶನಕ್ಕೆ ಹೋಗುವ ದಿನ ಹನುಮಾನ್ ಚಾಲೀಸಾ ಪಠಿಸಿ ಮನೆಯಿಂದ ಹೊರಡುವುದರಿಂದ ಉದ್ದೇಶ ಸಫಲವಾಗುತ್ತದೆ. ಸ್ನಾನ ಮಾಡುವ ನೀರಿಗೆ ಸ್ವಲ್ಪ ಅರಿಶಿಣವನ್ನು ಹಾಕಬೇಕು. ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆಂದು ಹೇಳಲಾಗುತ್ತದೆ. 

ಇದನ್ನು ಓದಿ: ಈ ಫೋಟೋ ಮನೆಯಲ್ಲಿಟ್ಟರೆ ಕೆಡುಕು ಖಚಿತ, ನಿಮ್ಮ ಮನೆಯಲಿದ್ಯಾ? 

ಇಷ್ಟದೇವರ ಸ್ಮರಣೆ
ಮನೆಯ ಕುಲದೇವರು ಅಥವಾ ಇಷ್ಟ ದೇವರನ್ನು ಪೂಜಿಸಿ ಆರಾಧಿಸುವುದರಿಂದ  ಕೆಲಸದಲ್ಲಿ ಯಶಸ್ಸು ಲಭಿಸುತ್ತದೆ. ಅಷ್ಟೇ ಅಲ್ಲದೇ ದೇವರ ಮುಂದೆ ಹನ್ನೊಂದು ಅಗರಬತ್ತಿಯನ್ನು ಮತ್ತು ದೀಪವನ್ನು ಬೆಳಗುವುದರಿಂದ  ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಮನೆಯಿಂದ ಕೆಲಸಕ್ಕೆ ಹೊರಡುವ ಮುನ್ನ ಎಡಗಾಲನ್ನಿಟ್ಟು ಹೊರ ದಾಟಬೇಕು. ಉತ್ತಮ ಕಾರ್ಯಗಳಿಗೆ ಹೊರಗಡೆ ಹೋಗುವ ಮುನ್ನ ಸಿಹಿಯನ್ನಾಗಲಿ ಅಥವಾ ಮೊಸರು –ಸಕ್ಕರೆಯನ್ನಾಗಲಿ ತಿನ್ನಬೇಕು. ಇದರಿಂದ ಯಶಸ್ಸು ಲಭಿಸುವುದು ಖಚಿತವಾಗಿರುತ್ತದೆ.

click me!