ವೃಶ್ಚಿಕ ಸಂಕ್ರಾಂತಿಯ ದಿನದಂದು ಸೂರ್ಯದೇವನು ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಈ ದಿನದಂದು ಸೂರ್ಯನನ್ನು ಪೂಜಿಸುವುದು ಅತ್ಯಂತ ಮಂಗಳಕರವಾಗಿದೆ.
ಪ್ರತಿ ತಿಂಗಳು ಗ್ರಹಗಳ ರಾಜನಾದ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಪಂಚಾಂಗದ ಪ್ರಕಾರ ಒಂದು ವರ್ಷದಲ್ಲಿ 12 ಸಂಕ್ರಾಂತಿಗಳನ್ನು ಆಚರಿಸಲಾಗುತ್ತದೆ. ಈಗ ಕಾರ್ತಿಕ ಮಾಸ ನಡೆಯುತ್ತಿದೆ. ನವೆಂಬರ್ 16, 2022ರಂದು, ಸೂರ್ಯನು ತುಲಾ ರಾಶಿಯಿಂದ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ, ಇದನ್ನು ವೃಶ್ಚಿಕ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಸೂರ್ಯನು 15 ಡಿಸೆಂಬರ್ 2022ರವರೆಗೆ ವೃಶ್ಚಿಕ ರಾಶಿಯಲ್ಲಿ ಇರುತ್ತಾನೆ. ಸೂರ್ಯನನ್ನು ಆರಾಧಿಸಲು ಈ ದಿನವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಈ ಬಾರಿಯ ವೃಶ್ಚಿಕ ಸಂಕ್ರಾಂತಿಯಂದು ಅತ್ಯಂತ ಶುಭ ಕಾಕತಾಳೀಯಗಳು ಸಂಭವಿಸುತ್ತಿವೆ. ಈ ದಿನದಂದು ಕಾಲ ಭೈರವ ಜಯಂತಿಯನ್ನು ಸಹ ಆಚರಿಸಲಾಗುತ್ತದೆ. ವೃಶ್ಚಿಕ ಸಂಕ್ರಾಂತಿ(Vrishchik Sankranti )ಯ ಶುಭ ಸಮಯ ಮತ್ತು ಮಹತ್ವವನ್ನು ತಿಳಿಯೋಣ.
ವೃಶ್ಚಿಕ ಸಂಕ್ರಾಂತಿ 2022 ಮುಹೂರ್ತ
ಸೂರ್ಯ ರಾಶಿ ಬದಲಾವಣೆ - ರಾತ್ರಿ 07.29 (ತುಲಾ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶದ ಸಮಯ)
ವೃಶ್ಚಿಕ ಸಂಕ್ರಾಂತಿ ಶುಭ ಮುಹೂರ್ತ - ಮಧ್ಯಾಹ್ನ 12ರಿಂದ ರಾತ್ರಿ 11ರವರೆಗೆ
ವೃಶ್ಚಿಕ ಸಂಕ್ರಾಂತಿ ಮಹಾ ಪುಣ್ಯ ಕಾಲ - ಮಧ್ಯಾಹ್ನ 03:48 - ಸಂಜೆ 05:36
ಅವಧಿ - 01 ಗಂಟೆ 48 ನಿಮಿಷಗಳು
ವೃಶ್ಚಿಕ ಸಂಕ್ರಾಂತಿ ಫಲ
ಕಾರಮಿಕ ವರ್ಗದವರಿಗೆ ಮತ್ತು ದಿನಗೂಲಿ ಕೆಲಸದಲ್ಲಿ ತೊಡಗಿರುವವರಿಗೆ ಒಳ್ಳೆಯ ಫಲ ತರಲಿದೆ.
ಸರಕುಗಳ ಬೆಲೆ ದುಬಾರಿಯಾಗಲಿದೆ.
ಜನರಿಗೆ ಉತ್ತಮ ಆರೋಗ್ಯ, ರಾಷ್ಟ್ರಗಳ ನಡುವೆ ಬಾಂಧವ್ಯ ಮತ್ತು ಧಾನ್ಯ ದಾಸ್ತಾನು ಹೆಚ್ಚಳ
ಈ ರಾಶಿಗಳಿಗೆ ಮಾತೇ ಮಾಣಿಕ್ಯ, ಮಾತೇ ಮನೆದೇವ್ರು!
ವೃಶ್ಚಿಕ ಸಂಕ್ರಾಂತಿ ಮಹತ್ವ(Significance)
ವೃಶ್ಚಿಕ ಸಂಕ್ರಾಂತಿಯಂದು ಸೂರ್ಯನಿಗೆ ನೀರನ್ನು ಅರ್ಪಿಸುವುದರ ಜೊತೆಗೆ, ಶ್ರಾದ್ಧ ಮತ್ತು ಪಿತೃ ತರ್ಪಣವನ್ನು ಮಾಡುವುದು ಉತ್ತಮವೆಂದು ಪರಿಗಣಿಸಲಾಗಿದೆ. ದೇವಿ ಪುರಾಣದ ಪ್ರಕಾರ, ಈ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ ದಾನ ಮಾಡಿದರೆ, ಎಲ್ಲ ಪಾಪಗಳು ಮುಗಿದು ಗಂಭೀರ ಕಾಯಿಲೆಗಳು ದೂರವಾಗುತ್ತವೆ. ಮತ್ತೊಂದೆಡೆ, ಸೂರ್ಯನ ಆರಾಧನೆಯಿಂದ, ನೀವು ಶಕ್ತಿ, ತೇಜಸ್ಸು, ಕೀರ್ತಿ, ಖ್ಯಾತಿಯನ್ನು ಪಡೆಯುತ್ತೀರಿ. ಈ ದಿನ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ನೀರು, ಕೆಂಪು ಚಂದನ, ಕೆಂಪು ಹೂವುಗಳು, ಕುಂಕುಮವನ್ನು ಅರ್ಪಿಸಿ. ಸೂರ್ಯ ಚಾಲೀಸವನ್ನೂ ಪಠಿಸಿ. ಇದು ಎಲ್ಲ ದೋಷಗಳನ್ನು ನಿವಾರಿಸುತ್ತದೆ.
ವೃಶ್ಚಿಕ ಸಂಕ್ರಾಂತಿಯಂದು ಸೂರ್ಯಾರಾಧನೆ
ಜ್ಯೋತಿಷಿಗಳ ಪ್ರಕಾರ, ವೃಶ್ಚಿಕ ಸಂಕ್ರಾಂತಿಯಂದು ಸೂರ್ಯನನ್ನು ಪೂಜಿಸುವುದು ಇತರ ಸಂಕ್ರಾಂತಿಯಂತೆ ಪ್ರಯೋಜನಕಾರಿಯಾಗಿದೆ. ಈ ದಿನ ಸೂರ್ಯೋದಯಕ್ಕೆ ಮುಂಚೆಯೇ ಎದ್ದು ಸ್ನಾನ ಮಾಡಿ ತಾಮ್ರದ ಪಾತ್ರೆಯಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಅದರಲ್ಲಿ ಕೆಂಪು ಚಂದನವನ್ನು ಸುರಿದು ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಅರಿಶಿನ, ಕುಂಕುಮ, ಅಕ್ಕಿ ಮಿಶ್ರಿತ ನೀರು ನೀಡಬೇಕು. ಸೂರ್ಯನಿಗೆ ದೀಪವನ್ನು ಹಚ್ಚುವಾಗ, ಕೆಂಪು ಚಂದನವನ್ನು ತುಪ್ಪದೊಂದಿಗೆ ಬೆರೆಸಬೇಕು.
ಪೂಜೆಯಲ್ಲಿ ಕೆಂಪು ಹೂವುಗಳನ್ನು ಬಳಸಬೇಕು. ಪೂಜೆಯಲ್ಲಿ ಬೆಲ್ಲದ ಪಾಯಸವನ್ನು ಅರ್ಪಿಸುವುದರ ಜೊತೆಗೆ, 'ಓಂ ದಿನಕರಾಯ ನಮಃ' ಅಥವಾ ಇತರ ಮಂತ್ರಗಳನ್ನು ಪಠಿಸಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಕ್ರಾಂತಿಯ ಸಮಯದಲ್ಲಿ ಸೂರ್ಯ ದೇವರನ್ನು ಪೂಜಿಸುವುದರಿಂದ ಸೂರ್ಯ ದೋಷ ಮತ್ತು ಪಿತೃ ದೋಷಗಳು ದೂರವಾಗುತ್ತವೆ.
ಈ ದಿಕ್ಕಲ್ಲಿ ಓಡುಕುದುರೆ ಪೇಂಟಿಂಗ್ ಹಾಕಿದ್ರೆ ಹೆಸರು, ಖ್ಯಾತಿ, ಗೌರವ ಅರಸಿ ಬರುವುದು!
ಶ್ರಾದ್ಧ, ತರ್ಪಣ, ದಾನ ಮಾಡುವುದು ಮಂಗಳಕರ
ಸಂಕ್ರಾಂತಿಯ ಅವಧಿಯನ್ನು ದಾನ, ಶ್ರಾದ್ಧ ಮತ್ತು ಪಿತೃ ತರ್ಪಣಕ್ಕೆ ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ. ವೃಶ್ಚಿಕ ಸಂಕ್ರಾಂತಿಯ ದಿನದಂದು ಒಬ್ಬ ವ್ಯಕ್ತಿಯು ತೀರ್ಥಯಾತ್ರೆಗೆ ಹೋಗಿ ಪೂರ್ವಜರಿಗೆ ಶ್ರಾದ್ಧ ಮತ್ತು ತರ್ಪಣವನ್ನು ಮಾಡುವ ಸಂಪ್ರದಾಯವಿದೆ. ದೇವಿ ಪುರಾಣದ ಪ್ರಕಾರ, ಸಂಕ್ರಾಂತಿಯಂದು ಪವಿತ್ರ ಸ್ನಾನ ಮಾಡದ ವ್ಯಕ್ತಿಯು ಏಳು ಜನ್ಮಗಳವರೆಗೆ ಅನಾರೋಗ್ಯ ಮತ್ತು ಬಡವನಾಗಿರುತ್ತಾನೆ. ಈ ದಿನದಂದು ಬಡವರಿಗೆ ಆಹಾರ, ಬಟ್ಟೆ ಮತ್ತು ಹಸು ಇತ್ಯಾದಿಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.