ನವೆಂಬರ್, ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು..

By Suvarna NewsFirst Published Oct 30, 2022, 1:51 PM IST
Highlights

ಈ ವರ್ಷ ಕಳೆಯಲು ಇನ್ನು ಎರಡೇ ತಿಂಗಳಿವೆ.. ಇದುವರೆಗೂ ಚಾತುರ್ಮಾಸ ಕಾರಣದಿಂದ ವಿವಾಹಾದಿ ಶುಭ ಸಮಾರಂಭಗಳಿಗೆ ಶುಭ ಮುಹೂರ್ತವಿರಲಿಲ್ಲ. ಇದೀಗ ದೇವುತಾನಿ ಏಕಾದಶಿಯಿಂದ ಚಾತುರ್ಮಾಸ ಮುಗಿಯುತ್ತಿದೆ.. ನವೆಂಬರ್, ಡಿಸೆಂಬರ್‌ನಲ್ಲಿ ವಿವಾಹಕ್ಕೆ ಶುಭ ಮುಹೂರ್ತಗಳು ಇಲ್ಲಿವೆ..

ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯಗಳಿಗೆ ಶುಭ ಮುಹೂರ್ತವನ್ನು ಅನುಸರಿಸಲಾಗುತ್ತದೆ. ಗ್ರಹಗಳು ಮತ್ತು ನಕ್ಷತ್ರಪುಂಜಗಳ ಸಂಯೋಜನೆಯಿಂದ ಮಂಗಳಕರ ಯೋಗವು ರೂಪುಗೊಂಡಾಗ ಮಾತ್ರ ಮದುವೆ, ಚೌಲ, ಉಪನಯನ, ನಿಶ್ಚಿತಾರ್ಥ ಮುಂತಾದ ಶುಭ ಸಮಾರಂಭ ಮತ್ತು ಗ್ರಹ ಪ್ರವೇಶದಂತಹ ಮಂಗಳ ಕೆಲಸಗಳನ್ನು ಮಾಡಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಮಾಡುವ ಶುಭ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ ಎಂಬ ನಂಬಿಕೆ ಇದೆ.

ಕಳೆದ ನಾಲ್ಕು ತಿಂಗಳಿಂದ ವಿಷ್ಣುವು ಯೋಗನಿದ್ರೆಯಲ್ಲಿದ್ದಾನೆ. ಈ ಚಾತುರ್ಮಾಸ ಅವಧಿಯಲ್ಲಿ ಹೆಚ್ಚಾಗಿ ಎಲ್ಲೆಡೆ ವ್ರತ, ಪೂಜೆಗಳು ನಡೆಯುತ್ತವೆ. ಆದರೆ ಈ ಸಮಯವನ್ನು ವಿವಾಹ, ಉಪನಯನ ಇತ್ಯಾದಿ ಶುಭ ಕಾರ್ಯಗಳಿಗೆ ಉತ್ತಮ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಇದೀಗ ದೇವುತಾನಿ ಏಕಾದಶಿಯ ದಿನ ವಿಷ್ಣುವು ಯೋಗನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಚಾತುರ್ಮಾಸ ಮುಗಿಯುತ್ತದೆ. ಅಂದಿನಿಂದ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. 

ದೇವುತಾನಿ ಏಕಾದಶಿ(Devutani Ekadashi)
ಕಾರ್ತಿಕ ಮಾಸ ನಡೆಯುತ್ತಿದೆ. ಭಗವಾನ್ ವಿಷ್ಣುವು ನಾಲ್ಕು ತಿಂಗಳ ನಂತರ ಕಾರ್ತಿಕ ಮಾಸದ ಏಕಾದಶಿಯ ದಿನದಂದು ಯೋಗ ನಿದ್ರೆಯಿಂದ ಎಚ್ಚರಗೊಳ್ಳುತ್ತಾನೆ. ಮದುವೆ ಸೇರಿದಂತೆ ಎಲ್ಲಾ ಶುಭ ಕಾರ್ಯಗಳ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಕಾರ್ತಿಕ ಮಾಸ(Karthika Maas)ದ ಏಕಾದಶಿಯನ್ನು ದೇವುತಾನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ವರ್ಷದ ದೇವುತ್ಥನಿ ಏಕಾದಶಿ ಶುಕ್ರವಾರ, ನವೆಂಬರ್ 04ರಂದು. ತುಳಸಿ ವಿವಾಹವನ್ನು ದೇವುತಾನಿ ಏಕಾದಶಿಯ ಮರುದಿನ ಆಚರಿಸಲಾಗುತ್ತದೆ. ಈ ವರ್ಷ ತುಳಸಿ ವಿವಾಹವು ನವೆಂಬರ್ 05 ರ ಶನಿವಾರದಂದು. ಸಾಮಾನ್ಯವಾಗಿ ದೇವುತಣಿ ಏಕಾದಶಿಯಂದು ಮದುವೆಗೆ ಶುಭ ಮುಹೂರ್ತ(Shubh Muhurat)ವಿರುತ್ತದೆ. ಆದರೆ ಈ ವರ್ಷ ಈ ದಿನ ಸೂರ್ಯನು ವೃಶ್ಚಿಕ ರಾಶಿಯಲ್ಲಿ ಉಳಿಯುವುದಿಲ್ಲ. ಆದುದರಿಂದ ದೇವುತಾನಿ ಏಕಾದಶಿಯ ದಿನ ಮದುವೆ ಇರುವುದಿಲ್ಲ.
ಜ್ಯೋತಿಷ್ಯದ ತಜ್ಞರ ಪ್ರಕಾರ, ನವೆಂರ್ ಹಾಗೂ ಡಿಸೆಂಬರ್‌ನಲ್ಲಿ ಮದುವೆಗೆ ಮಂಗಳಕರ ಸಮಯ ಮತ್ತು ದಿನಾಂಕವನ್ನು ತಿಳಿಯೋಣ..

Karthika 2022: ತುಳಸಿ ಕಟ್ಟೆ ಎದುರು ಕುಣಿಯುತ್ತಾ ಗಾನ ಪ್ರಿಯ ಕೃಷ್ಣನನ್ನು ಭಜಿಸೋ ಭಕ್ತರು

ವಿವಾಹ ಮುಹೂರ್ತ ನವೆಂಬರ್ 2022
21 ನವೆಂಬರ್ 2022, ಸೋಮವಾರ
24 ನವೆಂಬರ್ 2022, ಗುರುವಾರ
25 ನವೆಂಬರ್ 2022, ಶುಕ್ರವಾರ
27 ನವೆಂಬರ್ 2022, ಭಾನುವಾರ

ಮದುವೆ ಮುಹೂರ್ತ ಡಿಸೆಂಬರ್ 2022
2 ಡಿಸೆಂಬರ್ 2022, ಶುಕ್ರವಾರ
7 ಡಿಸೆಂಬರ್ 2022, ಬುಧವಾರ
8 ಡಿಸೆಂಬರ್ 2022, ಗುರುವಾರ
9 ಡಿಸೆಂಬರ್ 2022, ಶುಕ್ರವಾರ
14 ಡಿಸೆಂಬರ್ 2022, ಬುಧವಾರ

ವಾರ ಭವಿಷ್ಯ: ಈ ರಾಶಿಗೆ ಅಲ್ಪ ಕೆಲಸಕ್ಕೆ ಸಿಗಲಿದೆ ಅಪಾರ ಹಣ

ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವುತಾನಿ, ಪ್ರಬೋಧನಿ ಅಥವಾ ದೇವೋತ್ಥಾನ ಏಕಾದಶಿ ಎಂದು ಕರೆಯಲಾಗುತ್ತದೆ. ಆಷಾಢ ಶುಕ್ಲ ಪಕ್ಷದ ಈ ಏಕಾದಶಿಯ ಮೊದಲು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ. ಈ ದಿನದಿಂದ ಭಗವಾನ್ ವಿಷ್ಣುವು ಮುಂದಿನ ನಾಲ್ಕು ತಿಂಗಳವರೆಗೆ ಯೋಗ ನಿದ್ರೆಗೆ ಹೋಗುತ್ತಾನೆ. ನಂತರ ಕಾರ್ತಿಕ ಶುಕ್ಲ ಪಕ್ಷದ ಏಕಾದಶಿಯ ದಿನದಂದು ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಭಗವಾನ್ ವಿಷ್ಣು ಎಲ್ಲಿಯವರೆಗೆ ನಿದ್ರಿಸುತ್ತಾನೋ ಅಲ್ಲಿಯವರೆಗೆ ಮದುವೆಯಂತಹ ಶುಭ ಕಾರ್ಯಗಳು ನಡೆಯುವುದಿಲ್ಲ. ಅದೇ ಸಮಯದಲ್ಲಿ, ದೇವುತನಿ ಏಕಾದಶಿಯ ದಿನದಂದು ಭಗವಾನ್ ವಿಷ್ಣುವು ಎಚ್ಚರಗೊಂಡಾಗ, ಮದುವೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!