Vijayapura: ಮಳೆಗಾಗಿ ಗೋರಿಯಲ್ಲಿರೋ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು!

By Govindaraj S  |  First Published Jul 10, 2022, 10:28 AM IST

ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆಯಾಗ್ತಿದೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಮುಂಗಾರು ಆರಂಭವಾಗಿ ತಿಂಗಳುಗಳೆ ಕಳೆದರೂ ಈವರೆಗೆ ವರುಣಾಗಮನವಾಗಿಲ್ಲ. 


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜು.10): ರಾಜ್ಯದ ಹಲವೆಡೆ ಧಾರಾಕಾರವಾಗಿ ಮಳೆಯಾಗ್ತಿದೆ. ಕೆಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಮುಂದುವರೆದಿದೆ. ಮುಂಗಾರು ಆರಂಭವಾಗಿ ತಿಂಗಳುಗಳೆ ಕಳೆದರೂ ಈವರೆಗೆ ವರುಣಾಗಮನವಾಗಿಲ್ಲ. ಹೀಗಾಗಿ ಕಂಗಾಲಾಗಿರೋ ರೈತರು ಮಳೆಗಾಗಿ ವಿಚಿತ್ರ ಆಚರಣೆಗಳನ್ನ ಕೈಗೊಂಡಿದ್ದಾರೆ.

Latest Videos

undefined

ಮಳೆಗಾಗಿ ವಿಚಿತ್ರ ಆಚರಣೆಯಲ್ಲಿ ತೊಡಗಿದ ಜನ: ಮಳೆಗಾಗಿ ವಿಚಿತ್ರ ರೀತಿಯಲ್ಲಿ ಆಚರಣೆಗಳು ನಡೆಯುತ್ವೆ. ಮಳೆಗಾಗಿ ಕತ್ತೆ, ಕಪ್ಪೆಗಳಿಗೆ ಮದುವೆ ಮಾಡೋದು, ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಹೆಣ್ಣು ಮಕ್ಕಳೊಂದಿಗೆ ಮದುವೆ ಮಾಡೋ ಪದ್ದತಿ ಈ ಭಾಗದಲ್ಲಿ ರೂಢಿಯಲ್ಲಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಗೋರಿಯಲ್ಲಿರೋ ಶವದ ಬಾಯಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸಲಾಗಿದೆ. ಇಂಥಹ ವಿಚಿತ್ರ ಆಚರಣೆ ನಡೆದಿರೋದು ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.

ವಿಜಯಪುರ, ಬಾಗಲಕೋಟೆಯಲ್ಲಿ ಭೂಕಂಪನ ಅನುಭವ: ಆತಂಕದಲ್ಲಿ ಜನತೆ

ಗೋರಿಯಲ್ಲಿನ ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು: ಮಳೆ ಇಲ್ಲದೆ ಕಂಗೆಟ್ಟಿರೋ ಕಲಕೇರಿ ಗ್ರಾಮಸ್ಥರು ಇಂಥ ವಿಚಿತ್ರ ಆಚರಣೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಟ್ಯಾಂಕರ್‌ ಮೂಲಕ ಗ್ರಾಮದ ಸ್ಮಶಾನಕ್ಕೆ ತೆರಳಿದ ಯುವಕರು, ಗ್ರಾಮದ ಮುಖಂಡರು ಗೋರಿಯೊಂದರ ಮೇಲೆ ಹಾರಿಯಿಂದ ರಂದ್ರ ಕೊರೆದಿದ್ದಾರೆ. ಬಳಿಕ ಅದ್ರಲ್ಲಿ ಟ್ಯಾಂಕರ್‌ನ ಪೈಪ್‌ ಮೂಲಕ ನೀರು ಹಾಕಿದ್ದಾರೆ. ಪೈಪ್‌ ಮೂಲಕ ಹಾಕುವ ನೀರು ಶವ ಬಾಯಿ ತಲುಪುತ್ತಂತೆ. ಗೋರಿಯಲ್ಲಿರೋ ಶವದ ಬಾಯಿಗೆ ಹೀಗೆ ನೀರು ಹಾಕಿದ್ರೆ ಮಳೆಯಾಗುತ್ತೆ ಎನ್ನುವ ಗಾಢ ನಂಬಿಕೆ ಇದೆ.

ಚರ್ಚೆಗೆ ಗ್ರಾಸವಾದ ಶವದ ಬಾಯಿಗೆ ನೀರು ಹಾಕಿದ ಘಟನೆ: ಗ್ರಾಮದಲ್ಲಿ ಸ್ವಾಮೀಜಿಯೊಬ್ಬರು ಸ್ಮಶಾನದಲ್ಲಿ ಹೂತಿರುವ ಶವದ ಬಾಯಿಗೆ ನೀರು ಹಾಕಿದ್ರೆ ಮಳೆಯಾಗುತ್ತೆ ಎನ್ನುವ ಬಗ್ಗೆ ಹೇಳಿದ್ದಂತೆ. ಹೀಗಾಗಿ ಕಳೆದ 2 ತಿಂಗಳಿನಿಂದ ಮಳೆಯಾಗದೆ ಇರೋದ್ರಿಂದ ಗ್ರಾಮದ ಯುವಕರು ಈ ವಿಚಿತ್ರ ಆಚರಣೆ ಮಾಡಿದ್ದಾರೆ. ಹೀಗೆ ಮಾಡಿದ್ರೆ ನಿಜಕ್ಕು ಮಳೆಯಾಗುತ್ತಾ ಅಂತಾ ಗ್ರಾಮಸ್ಥರೊಬ್ಬರನ್ನ ಕೇಳಿದಾಗ, ಸ್ವಾಮೀಜಿಗಳು ಹೇಳಿದ್ದಾರೆ ನಾವು ಮಾಡಿದ್ದೇವೆ. ಇದು ನಮ್ಮ ನಂಬಿಕೆ ಎಂದಿದ್ದಾರೆ. ಗೋರಿಯಲ್ಲಿರೋ ಶವದ ಬಾಯಿಗೆ ಹೀಗೆ ನೀರು ಹಾಕಿರೋದು ಸಾಕಷ್ಟು ಚರ್ಚೆಗು ಕಾರಣವಾಗಿದೆ. ಹೀಗೆ ಮಾಡಿದ್ರೆ ಮಳೆಯಾಗುತ್ತಾ? ಹೇಗೆ? ಎನ್ನುವ ಚರ್ಚೆಗಳು ಸಹ ಶುರುವಾಗಿವೆ.

ಗೋರಿಗೆ ನೀರು ಹಾಕಿದ್ಮೇಲೆ ಶುರುವಾಯ್ತಂತೆ ಜಿಟಿಜಿಟಿ ಮಳೆ: ಇದನ್ನ ವಿಚಿತ್ರ ಅನ್ನಬೇಕೋ ಮೂಢನಂಬಿಕೆ ಇಲ್ಲಾ ಕಾಕತಾಳೀಯ ಅನ್ಬೇಕೊ ಗೊತ್ತಿಲ್ಲ. ನಿನ್ನೆಯಷ್ಟೇ ಕಲಕೇರಿ ಹಾಗು ಬಿಂಜಲಬಾವಿ ಗ್ರಾಮಗಳಲ್ಲಿ ಯುವಕರು ಗೋರಿಯಲ್ಲಿರೋ ಶವಗಳಿಗೆ ಟ್ಯಾಂಕರ್‌ ಮೂಲಕ ನೀರು ಹಾಕಿದ್ದಾರೆ. ಹೀಗೆ ಮಾಡಿದ ಬಳಿಕ ಜಿಟಿಜಿಟಿ ಮಳೆಯಾಗ್ತಿದೆ ಎನ್ತಿದ್ದಾರೆ ಗ್ರಾಮಸ್ಥರು. ಇದು ಕಾಕತಾಳೀಯವಾ? ಹೇಗೆ ಅನ್ನೋದೆ ಈಗಿರುವ ಪ್ರಶ್ನೆಯಾಗಿದೆ.  

ವಿಜಯಪುರ: ಗ್ರಾಮೀಣ ಭಾಗದಲ್ಲಿ ಬಂದ್‌ ಆಯ್ತಾ ಬಿಸಿಯೂಟ..?

ಮಳೆಗಾಗಿ ಪ್ರಾರ್ಥನೆ ಇಡ್ತಿರೋ ರೈತ ಸಮುದಾಯ: ಮುಂಗಾರು ಶುರುವಾಗಿ ತಿಂಗಳುಗಳೇ ಕಳೆದ್ರು ವಿಜಯಪುರ ಜಿಲ್ಲೆಯಲ್ಲಿ ಮಳೆಯ ಆಗಮನವಾಗಿಲ್ಲ. ಕರಾವಳಿ, ಮಲೆನಾಡು ಸೇರಿ ಹಲವೆಡೆ ಧಾರಾಕರ ಮಳೆಯಾಗ್ತಿದೆ. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ವಾಡಿಕೆಗಿಂತಲು ಬಹಳ ಕಡಿಮೆ ಮಳೆಯಾಗಿದೆ. ಕೆಲವೆಡೆಯಂತು ಈವರೆಗೆ ಮಳೆಯೆ ಆಗಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕೇಔಲ ಶೇಕಡಾ 20ರಷ್ಟು ಮಾತ್ರ ಬಿತ್ತನೆಯಾಗಿದೆ. ಹಲವೆಡೆ ಬಿತ್ತನೆಗೆಂದು ಭೂಮಿಯೇ ಸಿದ್ಧಗೊಂಡಿಲ್ಲ. ಹೀಗಾಗಿ ಅನ್ನದಾತ ಕಂಗಾಲಾಗಿದ್ದಾನೆ.

click me!