ವಿಜಯಪುರದಲ್ಲಿ ಮಳೆಗಾಗಿ ಗ್ರಾಮಸ್ಥರಿಂದ ಭಜನೆ: ನಿರಂತರ ಶಿವಧ್ಯಾನ

By Govindaraj S  |  First Published Jul 3, 2022, 9:26 AM IST

• ಉತ್ತರ ಕರ್ನಾಟಕದಲ್ಲಿ ಮಳೆರಾಯನ ಮುನಿಸು
• ಹಗಲು-ರಾತ್ರಿ 24 ಗಂಟೆಗಳ ಕಾಲ ನಿರಂತರ ಶಿವಧ್ಯಾನ
• 5 ದಿನಗಳ ಕಾಲ ಭಜನೆ ಮಾಡಿದ್ರೆ ಮಳೆಯಾಗೋ ನಂಬಿಕೆ


ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ (ಜು.03): ಜೂನ್‌ ತಿಂಗಳು ಕಳೆದರು ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯ ದರ್ಶನವೇ ಆಗಿಲ್ಲ. ಅದ್ರಲ್ಲು ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಆಗಮನವೇ ಆಗಿಲ್ಲ. ಹೀಗಾಗಿ ಬಿತ್ತನೆ ಮಾಡಲು ಕಾಯುತ್ತಿರುವ ರೈತರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಇತ್ತ ಮಳೆ ಆಗಮನಕ್ಕಾಗಿ ತರಹೇವಾರಿ ರೀತಿಯಲ್ಲಿ ಆಚರಣೆಗಳಲ್ಲಿ ತೊಡಗಿದ್ದಾರೆ.

Tap to resize

Latest Videos

ಮಳೆಗಾಗಿ ನಿರಂತರ ಭಜನೆ: ಇಷ್ಟೊತ್ತಿಗಾಗಲೇ ಮಳೆಯಾಗಬೇಕಿತ್ತು. ಆದ್ರೆ ಜೂನ್‌ ತಿಂಗಳು ಕಳೆದು ಹೋದರು ಮಳೆ ಬರ್ತಿಲ್ಲ. ಹೀಗಾಗಿ ಹೇಗಾದರು ಮಾಡಿ ಮಳೆರಾಯನ ವಲಿಸಿಕೊಳ್ಳಲು ಬಸವನಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ಜನರು ವಿಶೇಷ ಭಜನೆ ಮಾಡಿದ್ದಾರೆ. ಅದು ಕೂಡ ನಿರಂತರ ಭಜನೆ. 5 ದಿನಗಳ ಕಾಲ ನಿರಂತರವಾಗಿ ಹಗಲು ರಾತ್ರಿ ಎನ್ನದೆ ಭಜನೆ ಮಾಡಿದ್ದಾರೆ. ವರುಣನ ಕೃಪೆಗಾಗಿ ಗ್ರಾಮದ ಪವಾಡ ಬಸವೇಶ್ವರ ದೇವರ ದೇಗುಲದಲ್ಲಿ ಐದು ದಿನಗಳವರೆಗೆ ನಿರಂತರ 24 ಘಂಟೆಗಳ ಕಾಲ ಸರದಿ ರೀತಿಯಲ್ಲಿ ಗ್ರಾಮಸ್ಥರು ಸಪ್ತ ಭಜನೆ ಮಾಡಿದ್ದಾರೆ.

Vijayapura; ಬ್ಯಾಂಕ್‌ ಒಡೆಯಲಿಲ್ಲ, ದರೋಡೆ ಮಾಡಲಿಲ್ಲ ಆದ್ರೂ ಬ್ಯಾಂಕ್‌ ಲೂಟಿ!

ಭಜನೆ ಮಾಡಿದ್ರೆ ಮಳೆಯಾಗೋ ನಂಬಿಕೆ: ಇನ್ನು ಮಳೆಗಾಗಿ ದೇವರ ಬಳಿಯಲ್ಲಿ ನಾನಾ ರೀತಿಯಲ್ಲಿ ಪಾರ್ಥನೆ ಮಾಡಲಾಗುತ್ತೆ. ಆದ್ರೆ ನರಸಲಗಿ ಗ್ರಾಮದಲ್ಲಿ ಮಳೆಯಾಗದೇ ಇದ್ರೆ ಈ ದೇಗುಲದಲ್ಲಿ ನಿರಂತರವಾಗಿ ಭಜನೆ ಮಾಡ್ತಾರೆ. 5 ದಿನಗಳ ಕಾಲ ಹೀಗೆ ಸತತವಾಗಿ ಭಜನೆ ಮಾಡಿದ್ರೆ ಮಳೆ ಪಕ್ಕಾ ಎನ್ನುವ ನಂಬಿಕೆ ಇದೆ. 5 ದಿನಗಳ ಕಾಲ ನಿರಂತರವಾಗಿ ಹಗಲು-ರಾತ್ರಿ ಬಿಡದೆ ಭಜನೆ ಮಾಡುವ ಪದ್ದತಿ ಹಿಂದಿನಿಂದಲು ಬಂದಿದ್ದು. ಹೀಗೆ ಮಾಡಿದ್ರೆ ಮಳೆ ಬರದೆ ಇದ್ದಾಗ ಮಳೆ ಆಗಮನವಾಗುವ ಗಾಢ ನಂಬಿಕೆ ಇದೆ.

5 ಜನರಿಂದ ಶಿವನ ನಾಮಸ್ಮರಣೆ: 5 ದಿನಗಳ ಕಾಲ, 5 ಜನರಿಂದ ಶಿವನ ಭಜನೆ ಮಾಡುವ ಪದ್ದತಿ ಇದೆ. ಅದೆ ರೀತಿ ಭಜನೆಗೆ ಬರೋರು ಮಡಿಯುಟ್ಟು ಬರಬೇಕು. ಕೇಸರಿ ಲುಂಗಿ, ಅಂಗವಸ್ತ್ರ ಧರಿಸಿ ಬರೋರು ಧ್ಯಾನ ಭಜನೆಯನ್ನ ಮಾಡುತ್ತಾರೆ. ಹೀಗೆ ಭಜನೆಯಲ್ಲಿ ಸಂಪೂರ್ಣವಾಗಿ ಶಿವಧ್ಯಾನ ನಡೆಸಲಾಗುತ್ತೆ. ಶಿವನ ಭಜನೆಗಳಿಗೆ ಇಲ್ಲಿ ಆಧ್ಯತೆ ಇರುತ್ತೆ. ಶಿವಶಿವನೆಂದರೇ ಭಯವಿಲ್ಲ ಎನ್ನುವಂತೆ, ಶಿವನಾಮಸ್ಮರಣೆಯಿಂದ ಮಳೆಯಾಗುತ್ತೆ ಅನ್ನೋ ನಂಬಿಕೆ ಇದೆ.

ಮಳೆಗಾಗಿ ಸರತಿಯಂತೆ ಶಿವ ನಾಮಸ್ಮರಣೆ: ಮಳೆಗಾಗಿ ನರಸಲಗಿಯ ಇಡೀ ಗ್ರಾಮಸ್ಥರು ನಿರಂತರವಾಗಿ ಭಜನೆ ಮಾಡಿದ್ದಾರೆ. ಹಗಲು ರಾತ್ರಿ ಸೇರಿ ದಿನದ 24 ಗಂಟೆಗಳ ಕಾಲವು ಶಿವ ಸಪ್ತ ಭಜನೆ ನಡೆಯುವುದರಿಂದ ಸರತಿ ಸಾಲಿನಂತೆ ಗ್ರಾಮದ ಜನರು ಸಪ್ತ ಭಜನೆಯಲ್ಲಿ ಪಾಲ್ಗೊಂಡಿದ್ದಾರೆ. 5 ದಿನಗಳ ಕಾಲ ನಡೆಯುವ ಈ ಮಳೆಗಾಗಿ ಭಜನೆ ಇಂದು ಕೊನೆಯ ದಿನ ವಿಶೇಷ ಪೂಜೆಯ ಮೂಲಕ ಮುಗಿದಿದೆ.

Vijayapura; ದುಬೈನಲ್ಲಿ ಕೆಲಸ ಮಾಡಬೇಕು ಅನ್ನೋರು ಎಚ್ಚರ...ಎಚ್ಚರ..!

ಭಜನೆ ಬಳಿಕ ಮಳೆಗಾಗಿ ನಿರೀಕ್ಷೆ: ಮಳೆರಾಯನನ್ನ ಒಲಿಸಿಕೊಳ್ಳಲು ನಡೆಯುವ 5 ದಿನಗಳ ಸಪ್ತ ಶಿವ ಭಜನೆ ಇಂದು ಸಮಾಪ್ತಿಯಾಗಿದೆ. ಹೀಗಾಗಿ ಈಗ ಮುಂಗಾರು ಮಳೆಗಾಗಿ ನಿರೀಕ್ಷೆ ಶುರುವಾಗಿದೆ. ರೈತರು ಬಿತ್ತನೆ ಮಾಡಿದ್ದು, ಬೆಳೆ ನಾಟಿಯನ್ನು ಕಾಣದೆ ಕಂಗಾಲಾಗಿರುವ ರೈತರು ಭಜನೆ ಬಳಿಕವಾದ್ರು ಮಳೆಯಾಗುತ್ತಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ವರುಣನ ಕೃಪೆಗಾಗಿ ನರಸಲಗಿ ಗ್ರಾಮದಲ್ಲಿ ಸಪ್ತ ಭಜನೆ ಹಮ್ಮಿಕೊಳ್ಳಲಾಯಿತು ಎಂದು ಗ್ರಾಮದ ಹಿರಿಯ ಮುಖಂಡರಾದ ಶಾಂತಗೌಡ ಹೊಸಳ್ಳಿ ಹಾಗೂ ಹಣಮಂತ ಹಾಲಿಹಾಳ ಭಜನೆ ಬಳಿಕ ಮಳೆರಾಯ ಧರೆಗಿಳಿಯುತ್ತಾನೆ ಎಂದಿದ್ದಾರೆ.

click me!